ಓರಲ್ ಕ್ಯಾವಿಟಿ ಕ್ಯಾನ್ಸರ್… ರೋಗಲಕ್ಷಣಗಳ ಬಗ್ಗೆ ತಿಳಿಯಿರಿ

First Published | Oct 21, 2022, 4:17 PM IST

ಬಾಯಿಯ ಕ್ಯಾನ್ಸರ್ ಅಥವಾ  ಓರಲ್ ಕ್ಯಾವಿಟಿ ಕ್ಯಾನ್ಸರ್ ಒಂದು ರೀತಿಯ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಆಗಿದೆ. ಈ ಕ್ಯಾನ್ಸರ್ ಓರೋಫಾರಿಂಜಿಯಲ್ ಕ್ಯಾನ್ಸರ್ ನ ಅಡಿಯಲ್ಲಿ ಬರುತ್ತೆ. ಬಾಯಿಯ ಕ್ಯಾನ್ಸರ್ ಯಾರಿಗಾದರೂ ಸಂಭವಿಸಬಹುದು, ಆದರೆ ಅದರ ರೋಗಲಕ್ಷಣಗಳು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅತಿಯಾದ ಧೂಮಪಾನ ಮತ್ತು ತಂಬಾಕು ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತೆ. ಈ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಬಾಯಿ ಅಥವಾ ಗಂಟಲಿನಲ್ಲಿ ಯಾವುದೇ ರೀತಿಯ ಗಾಯವು ಬೆಳೆಯಲು ಇದು ಸಹಾಯ ಮಾಡುತ್ತೆ. ಬಾಯಿಯ ಕ್ಯಾನ್ಸರ್(mouth cancer) ಹೆಚ್ಚಾಗಿ ಕೆನ್ನೆ ಮತ್ತು ಒಸಡುಗಳಲ್ಲಿ ಕಂಡುಬರುತ್ತೆ. ಕೆಲವೊಮ್ಮೆ ಅದರ ರೋಗಲಕ್ಷಣಗಳನ್ನು ಗುರುತಿಸೋದು ತುಂಬಾ ಕಷ್ಟ. ಹೆಚ್ಚಿನ ಸಂದರ್ಭಗಳಲ್ಲಿ, ಇದನ್ನು ಕೊನೆಯ ಹಂತದಲ್ಲಿ ಪತ್ತೆಹಚ್ಚಲಾಗುತ್ತೆ, ಹಾಗಾಗಿ ಚಿಕಿತ್ಸೆ ನೀಡಲು ಸಾಧ್ಯವಾಗೋದಿಲ್ಲ. ಓರಲ್ ಕ್ಯಾವಿಟಿಕ್ ಯಾನ್ಸರ್ ನ ಆರಂಭಿಕ ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.
 

ಓರಲ್ ಕ್ಯಾವಿಟಿ ಕ್ಯಾನ್ಸರ್(Oral cavity cancer) ಎಂದರೇನು? 
ಬಾಯಿ ಅಥವಾ ಗಂಟಲಿನಲ್ಲಿ ಬಿಳಿ ಸಣ್ಣ ಗುಳ್ಳೆ ಅಥವಾ ಗಾಯಗಳನ್ನು ನಿರ್ಲಕ್ಷಿಸೋದು ಕೆಲವೊಮ್ಮೆ ದೊಡ್ಡ ಸಮಸ್ಯೆ ಉಂಟುಮಾಡಬಹುದು. ಓರಲ್ ಕ್ಯಾವಿಟಿ ಕ್ಯಾನ್ಸರ್ ಅಂತಹ ಸಣ್ಣ ಗುಳ್ಳೆಗಳಿಂದ ಪ್ರಾರಂಭವಾಗುತ್ತೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

Latest Videos


ಬಾಯಿಯಲ್ಲಿ ಗುಳ್ಳೆಗಳು ಕೆಲವೊಮ್ಮೆ ಕ್ಯಾನ್ಸರ್ ನ ರೂಪವನ್ನು ತೆಗೆದುಕೊಳ್ಳುತ್ತವೆ. ಹೊಟ್ಟೆಯ ಅಸ್ವಸ್ಥತೆ, ಸರಿಯಾಗಿ ಬಾಯಿ ಸ್ವಚ್ಛಗೊಳಿಸದೇ ಇರೋದು, ದುರ್ಬಲ ರೋಗನಿರೋಧಕ ಶಕ್ತಿ(Immunity power) ಮತ್ತು ತಂಬಾಕು ಮತ್ತು ವೀಳ್ಯದೆಲೆಯ ಅತಿಯಾದ ಸೇವನೆಯು ಬಾಯಿ ಹುಣ್ಣುಗಳಿಗೆ ಕಾರಣವಾಗಬಹುದು. ಗುಳ್ಳೆಗಳು ದೀರ್ಘಕಾಲದವರೆಗೆ ವಾಸಿಯಾಗದಿದ್ದರೆ, ಅವು ಕ್ಯಾನ್ಸರ್ ಆಗಿ ಬದಲಾಗಬಹುದು.

ಓರಲ್ ಕ್ಯಾವಿಟಿ ಕ್ಯಾನ್ಸರ್ ನ ಲಕ್ಷಣಗಳು
- ಬಾಯಿಯಲ್ಲಿ ನೋವು ಮತ್ತು ರಕ್ತಸ್ರಾವ (bleeding) 
- ಬಾಯಿಯ ಯಾವುದೇ ಭಾಗದಲ್ಲಿ ಮರಗಟ್ಟುವಿಕೆ
- ಒಸಡು ಅಥವಾ ಕೆನ್ನೆಗಳ ಮೇಲೆ ಯಾವುದೇ ರೀತಿಯ ಗಡ್ಡೆ
-ಗಂಟಲು ಕೆರತ
- ಹಲ್ಲುಗಳನ್ನು ಸಡಿಲಗೊಳಿಸೋದು
- ಬಾಯಿ ಅಥವಾ ನಾಲಿಗೆಯ ಮೇಲೆ ಕೆಂಪು ಮತ್ತು ಬಿಳಿ ಕಲೆಗಳು

- ನಾಲಿಗೆಯನ್ನು ಚಲಿಸಲು ಆಗದಿರೋದು ಮತ್ತು ಅಗಿಯಲು ಕಷ್ಟಪಡೋದು
- ಅಗಿಯುವಾಗ ಅಥವಾ ನುಂಗುವಾಗ ಚಡಪಡಿಕೆ
- ಬಾಯಿಯಲ್ಲಿ ಗುಳ್ಳೆಗಳು
- ಕಿವಿಯಲ್ಲಿ ನೋವು
- ಬಾಯಿಯಿಂದ ವಾಸನೆ(Bad smell)

ಓರಲ್ ಕ್ಯಾವಿಟಿ ಕ್ಯಾನ್ಸರ್ ಗೆ ಕಾರಣಗಳು
ಧೂಮಪಾನ(Smoking)
- ಅತಿಯಾದ ತಂಬಾಕು ಸೇವನೆ
- ಆಲ್ಕೋಹಾಲ್ ಸೇವನೆ
– ಆನುವಂಶಿಕ ಕಾರಣಗಳು
- ಬಾಯಿ ಅಥವಾ ಗಂಟಲಿನಲ್ಲಿ ಗುಳ್ಳೆಗಳು ಅಥವಾ ಗಾಯಗಳು
- ಬಾಯಿಯಲ್ಲಿ ಒಂದು ರೀತಿಯ ಗಡ್ಡೆ

ಓರಲ್ ಕ್ಯಾವಿಟಿ ಕ್ಯಾನ್ಸರ್ ನಿಂದ ನಿಮ್ಮನ್ನು ದೂರವಿಡೋದು ಹೇಗೆ?
- ದೇಹವನ್ನು ಯಾವಾಗಲೂ ಆಕ್ಟಿವ್  ಆಗಿರಿಸಿಕೊಳ್ಳಿ 
- ಮದ್ಯಪಾನದಿಂದ (Drinks)ದೂರವಿರಿ
- ವೀಳ್ಯದೆಲೆ ಅಥವಾ ಸಿಗರೇಟ್ನಿಂದ ದೂರವಿರಿ
- ತಂಬಾಕು ಸೇವನೆಯನ್ನು ನಿಲ್ಲಿಸಿ
- ಬಾಯಿಯ ನೈರ್ಮಲ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ

click me!