Asianet Suvarna News Asianet Suvarna News

ಕಣ್ಣುಗಳು ಟೇಕನ್‌ ಫಾರ್‌ ಗ್ರಾಂಟೆಡ್‌ ಅಲ್ಲ, ಕಾಳಜಿಯಿಂದ ನೋಡ್ಕೊಳಿ

ಪ್ರಾಪಂಚಿಕ ವ್ಯವಹಾರಕ್ಕೆ ಕಣ್ಣುಗಳ ದೃಷ್ಟಿ ಇದ್ದಾಗಿನ ವಿಶ್ವಾಸವೇ ಬೇರೆ. ಹೀಗಾಗಿ, ಅವುಗಳನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಕಣ್ಣುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಸಾಧ್ಯ.
 

Follow these tips to good eyesight and eye health
Author
First Published Oct 13, 2022, 6:05 PM IST

ಕಣ್ಣುಗಳನ್ನು ಎಂದಿಗೂ ಟೇಕನ್‌ ಫಾರ್‌ ಗ್ರಾಂಟೆಡ್‌ ಥರ ಟ್ರೀಟ್‌ ಮಾಡಬಾರದು. ಕಣ್ಣುಗಳಿಗೆ ಸುಸ್ತಾಗುತ್ತಿದ್ದರೂ ಮೊಬೈಲ್‌ ಸ್ಕ್ರೀನ್‌ ನೋಡುತ್ತ ಮೈಮರೆಯುವುದು ಇದರ ಒಂದು ಸ್ವರೂಪ. ಒಂದೊಮ್ಮೆ ಕಣ್ಣುಗಳ ಸಮಸ್ಯೆ ಗಂಭೀರ ರೂಪಕ್ಕೆ ತಿರುಗಿದರೆ ಸಮಸ್ಯೆ ಕಾಡುವುದು ನಿಮ್ಮನ್ನೇ ಎನ್ನುವುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಹೀಗಾಗಿ, ಕಣ್ಣುಗಳ ಸುರಕ್ಷತೆಗೆ ಸಾಕಷ್ಟು ಆದ್ಯತೆ ನೀಡಲೇ ಬೇಕು. ಇಂದಿನ ದಿನದಲ್ಲಿ ಚಿಕ್ಕಪುಟ್ಟ ಮಕ್ಕಳಿಗೂ ಕಣ್ಣುಗಳ ಸಮಸ್ಯೆ ಹೆಚ್ಚುತ್ತಿದೆ. ದಿನವಿಡೀ ಲ್ಯಾಪ್‌ ಟಾಪ್‌, ಕಂಪ್ಯೂಟರ್‌ ವೀಕ್ಷಣೆ ಮಾಡುವವರಲ್ಲಿ ವಿಧವಿಧವಾದ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಹೀಗಿರುವಾಗ ಕಣ್ಣುಗಳ ಆರೋಗ್ಯ ರಕ್ಷಣೆಗೆ ಸಾಕಷ್ಟು ಗಮನ ಹರಿವುದು ಮುಖ್ಯ. ನಾವು ಸೇವಿಸುವ ಆಹಾರದಿಂದ ಹಿಡಿದು, ಕೆಲವು ದುರಭ್ಯಾಸಗಳನ್ನು ಬಿಡುವವರೆಗೆ ಕಾಳಜಿ ವಹಿಸಬೇಕಾಗುತ್ತದೆ. ಮೊಟ್ಟಮೊದಲು ತೆಗೆದುಕೊಳ್ಳಬೇಕಾದ ಕಾಳಜಿ ಎಂದರೆ ಸೂಕ್ತವಾದ ಆಹಾರ ಸೇವನೆ ಮಾಡುವುದು. ಕೆಲವು ಆಹಾರಗಳು ವಯಸ್ಸಾದಂತೆ ಕಣ್ಣುಗಳ ಕಂಡುಬರುವ ಕಣ್ಣುಗಳ ಸಮಸ್ಯೆಗಳನ್ನು ದೂರವಿರಿಸಲು ಸಹಕಾರಿ. ಇವುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್‌ ಗೆ ಪ್ರಥಮ ಸ್ಥಾನವಿದೆ. ಜತೆಗೆ, ಲ್ಯೂಟೇನ್‌, ಝಿಂಕ್‌ ಮತ್ತು ವಿಟಮಿನ್‌ ಸಿ ಹಾಗೂ ವಿಟಮಿನ್‌ ಇ ಇರುವ ಆಹಾರಗಳನ್ನು ತೆಗೆದುಕೊಳ್ಳಬೇಕು. 

•    ಯಾವ ಆಹಾರ (Food)?
ಒಮೆಗಾ-3 ಫ್ಯಾಟಿ ಆಸಿಡ್‌ (Omega 3 Fatty Acid) ಹಾಗೂ ವಿಟಮಿನ್‌ ಸಿ (Vitamin C) ಮತ್ತು ಇ ಅಂಶಗಳಿರುವ ಆಹಾರ ಸೇವನೆ ಮಾಡುವುದರಿಂದ ವಯಸ್ಸಾದಂತೆ ಸಾಮಾನ್ಯವಾಗಿ ಕಂಡುಬರುವ ಮ್ಯಾಕ್ಯುಲರ್‌, ಡಿಜನರೇಷನ್‌ (Degeneration) ಹಾಗೂ ಕ್ಯಾಟರಾಕ್ಟ್‌ (Cataract) ಸಮಸ್ಯೆಗಳು ಉಂಟಾಗುವುದಿಲ್ಲ. ಬಸಳೆ (Spinach) ಸೇರಿದಂತೆ ಹಸಿರು ಸೊಪ್ಪುಗಳು (Green Leaves), ಸಾಲ್ಮನ್‌, ಟ್ಯೂನಾ (Tuna) ಹಾಗೂ ಇತರೆ ತೈಲದಂಶವಿರುವ ಮೀನು (Fish), ಮೊಟ್ಟೆ (Egg), ಬೀಜಗಳು (Nuts), ಬೀನ್ಸ್‌ (Beans), ಪ್ರೊಟೀನ್‌ ಭರಿತ ಆಹಾರ, ಕಿತ್ತಳೆ ಮತ್ತು ಸಿಟ್ರಸ್‌ (Citrus) ಜಾತಿಗೆ ಸೇರಿದ ಹಣ್ಣುಗಳು, ಒಯೆಸ್ಟರ್‌ ಮತ್ತು ಪೋರ್ಕ್‌ ಕೂಡ ಕಣ್ಣುಗಳ ಆರೋಗ್ಯಕ್ಕೆ ಉತ್ತಮ. ಇವುಗಳಿಂದ ಟೈಪ್-2 ಮಧುಮೇಹವೂ ನಿಯಂತ್ರಣದಲ್ಲಿ ಇರುವುದರಿಂದ ಕಣ್ಣುಗಳಿಗೆ (Eyes) ಹಾನಿ ಉಂಟಾಗುವುದಿಲ್ಲ.

ಕಣ್ಣಿನ ದೃಷ್ಟಿ ಮಂದ ಆಗ್ತಿದ್ಯಾ ? ಡೈಲೀ ಮಾಡೋ ಇಂಥಾ ತಪ್ಪೇ ಕಾರಣವಾಗಿರ್ಬೋದು

•    ಧೂಮಪಾನ ಬಿಟ್ಟುಬಿಡಿ (Quit Smoking)
ಬಹಳ ಬೇಗ ಕ್ಯಾಟರಾಕ್ಟ್‌ ಸಮಸ್ಯೆ ಬರಲು ಧೂಮಪಾನ ಕಾರಣವಾಗುತ್ತದೆ. ಧೂಮಪಾನದಿಂದ ಆಪ್ಟಿಕ್‌ (Optic) ನರಗಳಿಗೆ ಹಾನಿಯುಂಟಾಗಿ ಸಮಸ್ಯೆ ಹೆಚ್ಚುತ್ತದೆ. ಧೂಮಪಾನ ಬಿಡಲು ವೈದ್ಯರ ಸಲಹೆ ಪಡೆದುಕೊಳ್ಳಿ. ಅವರ ಮಾರ್ಗದರ್ಶನದಲ್ಲೇ ಬಿಡಲು ಯತ್ನಿಸಿ, ಆಗ ಸುಲಭವಾಗುತ್ತದೆ. ಹಾಗೂ ಬಿಟ್ಟ ಬಳಿಕ ಉಂಟಾಗುವ ವಿವಿಧ ಸಮಸ್ಯೆಗಳನ್ನು ನಿಭಾಯಿಸುವುದಕ್ಕೆ ಅನುಕೂಲವಾಗುತ್ತದೆ.

•    ಸೂಕ್ತ ಸನ್‌ ಗ್ಲಾಸ್‌ (Sunglasses)
ಸೂರ್ಯನ ಅಲ್ಟ್ರಾವೈಯೊಲೆಟ್‌ (Ultra Violet) ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ಅಗತ್ಯ. ಇದಕ್ಕಾಗಿ ಸೂಕ್ತ ರೀತಿಯ ಸನ್‌ ಗ್ಲಾಸ್‌ ಗಳನ್ನು ಬಳಸಬೇಕು. ಇದರಿಂದ ಕ್ಯಾಟರಾಕ್ಟ್‌ ಸೇರಿದಂತೆ ವಿವಿಧ ಸಮಸ್ಯೆಗಳನ್ನು ದೂರವಿರಿಸಲು ಸಾಧ್ಯವಾಗುತ್ತದೆ. ಶೇ.99 ಅಥವಾ ಶೇ.100ರಷ್ಟು ರಕ್ಷಣೆ ನೀಡುವ ಗ್ಲಾಸ್‌ ಗಳನ್ನು ಬಳಕೆ ಮಾಡಿ. ಒಂದೊಮ್ಮೆ ನೀವು ಕಾಂಟ್ಯಾಕ್ಟ್‌ ಲೆನ್ಸ್‌ ಬಳಕೆ ಮಾಡುತ್ತಿದ್ದರೂ ಅವುಗಳಲ್ಲಿ ಯುವಿ ರಕ್ಷಣೆ ನೀಡುವ ಲೆನ್ಸ್‌ ಲಭ್ಯ.

ಕಣ್ಣು ಕುಣಿಯೋದು ಶುಭ ಅಂತ ಬಿಡ್ಬೇಡಿ, ಅನಾರೋಗ್ಯವೂ ಆಗಿರಬಹುದು!

•    ರಕ್ಷಣಾತ್ಮಕ ವಿಧಾನ ಅನುಸರಿಸಿ
ವಾಯುಮಾಲಿನ್ಯದಿಂದ (Air Pollution) ಕಣ್ಣುಗಳಿಗೂ ಹಾನಿಯಾಗುತ್ತದೆ. ಅಂತಹ ಸಮಯದಲ್ಲಿ ಸೂಕ್ತವಾದ ರಕ್ಷಣೆ ವಿಧಾನ ಪಾಲನೆ ಮಾಡಿ. ಸೂಕ್ತ ಗ್ಲಾಸ್‌ ಅಥವಾ ಗಾಗಲ್‌ ಗಳನ್ನು ಹಾಕಿಕೊಳ್ಳಿ. ವಿವಿಧ ರೀತಿಯ ಕ್ರೀಡೆಗಳನ್ನು (Sports) ಆಡುವ ಸಮಯದಲ್ಲೂ ಕಣ್ಣುಗಳ ರಕ್ಷಣೆಗೆ ಗಮನ ನೀಡಿ.

•    ಕಂಪ್ಯೂಟರ್‌ ಸ್ಕ್ರೀನ್‌ (Computer Screen) ನಿಂದ ದೂರ ನೋಡಿ
ಕಂಪ್ಯೂಟರ್‌ ನಲ್ಲಿ ಕೆಲಸ ಮಾಡುವಾಗ ಒಂದೇ ರೀತಿ ದಿಟ್ಟಿಸಿ ನೋಡುತ್ತಿರುತ್ತೇವೆ. ಮಧ್ಯೆ ಮಧ್ಯೆ ದೂರಕ್ಕೆ ದೃಷ್ಟಿ ಹಾಯಿಸಿ. ದೀರ್ಘಕಾಲ ಸ್ಕ್ರೀನ್‌ ನೋಡುತ್ತಿದ್ದರೆ ಕಣ್ಣುಗಳಿಗೆ ಸುಸ್ತಾಗುತ್ತದೆ. ದೃಷ್ಟಿ ಮಂಜಾಗುತ್ತದೆ. ದೂರದವರೆಗೆ ನೋಡಲು ಸಾಧ್ಯವಾಗುವುದಿಲ್ಲ. ಕಣ್ಣುಗಳು ಶುಷ್ಕವಾಗುತ್ತವೆ. ತಲೆನೋವು, ಕುತ್ತಿಗೆ, ಬೆನ್ನು, ಭುಜಗಳ ನೋವು ಉಂಟಾಗುತ್ತದೆ.

•    ನಿಯಮಿತ ತಪಾಸಣೆ (Regular Checkup)
ಕಣ್ಣುಗಳು ಚೆನ್ನಾಗಿದ್ದಂತೆ ಕಂಡರೂ ಗ್ಲುಕೋಮಾ(Glaucoma)ದಂತಹ ಸಮಸ್ಯೆಗಳು ಅರಿವಿಗೆ ಬಾರದೆ ಉಂಟಾಗಬಹುದು. ಹೀಗಾಗಿ, ನಿಯಮಿತ ತಪಾಸಣೆ ಮಾಡಿಸಿಕೊಳ್ಳಿ. 
 

Follow Us:
Download App:
  • android
  • ios