ಹಮ್ಮರ್, ಲ್ಯಾಂಬೋರ್ಗಿನಿ ಸೇರಿ ಕಿಚ್ಚ ಸುದೀಪ್ ಬಳಿ ಇರುವ ಐಷಾರಾಮಿ ಕಾರುಗಳೆಷ್ಟು?

By Chethan Kumar  |  First Published Nov 20, 2024, 3:55 PM IST

ಸಿನಿಮಾ, ಬಿಗ್‌ಬಾಸ್ ನಿರೂಪಣೆ, ಸಿಸಿಎಲ್ ಕ್ರಿಕೆಟ್ ಸೇರಿದಂತೆ ಹಲವು ವೇದಿಕೆಗಳಲ್ಲಿ ತೊಡಗಿಸಿಕಂಡಿರುವ ಕಿಚ್ಚ ಸುದೀಪ್ ಬಳಿ ಎಷ್ಟು ಕಾರಿದೆ? ಕಿಚ್ಚ ಸುದೀಪ್ ಲೈಫ್‌ಸ್ಟೈಲ್ ಹೇಗಿದೆ? 


ಬೆಂಗಳೂರು(ನ.20) ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ‌್‌ಗೆ ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಫ್ಯಾನ್ ಫಾಲೋವಿಂಗ್ ಇದ್ದಾರೆ. ತೆಲುಗು ಹಾಗೂ ಬಾಲಿವುಡ್‌ನಲ್ಲಿ ಕಿಚ್ಚ ಅಭಿಮಾನಿಗಳ ಸಂಖ್ಯೆ ಹೆಚ್ಚೇ ಇದೆ. ಅಭಿನಯ ಚಕ್ರವರ್ತಿ ಬಿರುದು ಪಡೆದಿರುವ ನಟ ಸುದೀಪ್. ಸಿನಿಮಾದಲ್ಲಿ ಕಿಚ್ಚನ ಡೈಲಾಗ್, ಸ್ಟೈಲ್ ಒಂದೆಡೆಯಾದರೆ ತೆರೆ ಹಿಂದೆಯೂ ಸುದೀಪ್ ಮಾತು ಖಡಕ್.ಎಲ್ಲಿ ತಮಾಷೆ ಮಾಡಬೇಕು, ಎಲ್ಲಿ ಎಚ್ಚರಿಸಬೇಕು, ಎಲ್ಲಿ ಖಡಕ್ ಮಾತಿನ ಮೂಲಕ ತಿವಿಯಬೇಕು ಎಲ್ಲವೂ ಸುದೀಪ್‌ಗೆ ಕರಗತ. ಸೂಪರ್ ಹಿಟ್ ಸಿನಿಮಾ, ಬಿಗ್‌ಬೂಸ್ ನಿರೂಪಣೆ ಸೇರಿದಂತೆ ಹಲವು ಮೂಲಗಳಿಂದ ಕಿಚ್ಚ ಸುದೀಪ್ ಕೋಟಿ ಕೋಟಿ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.  ಇದರ ಜೊತೆಗೆ ಕಿಚ್ಚ ಸುದೀಪ್‌ಗೆ ಕಾರುಗಳ ಮೇಲೆ ಪ್ರೀತಿ ಹೆಚ್ಚು. ಹೀಗಾಗಿ ಸುದೀಪ್ ಗ್ಯಾರೇಜ್‌ನಲ್ಲಿ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಐಷಾರಾಮಿ ಕಾರುಗಳಿವೆ.

ಕರ್ನಾಟಕದಲ್ಲಿ ಹಮ್ಮರ್ ಕಾರು ಬೆರೆಳಣಿಕೆ. ಈ ಪೈಕಿ ಕಿಚ್ಚ ಸುದೀಪ್ ಬಳಿ ಹಮ್ಮರ್ ಹೆಚ್3 ಕಾರಿದೆ. ಹಮ್ಮರ್ ಕಾರಿನ ಬೆಲೆ ಕೋಟಿ ರೂ, ಆದರೆ ಈ ಕಾರನ್ನು ಆಮದು ಮಾಡಿಕೊಳ್ಳಬೇಕಾದ ಕಾರಣ ತೆರಿಗೆ ದುಪ್ಪಟ್ಟು. ಹೀಗಾಗಿ ಇದರ ಆನ್‌ರೋಡ್ ಬೆಲೆ ಬಲು ದುಬಾರಿಯಾಗಲಿದೆ. ಇದರ ನಿರ್ವಹಣೆ ಕೂಡ ಅಷ್ಟೇ ದುಬಾರಿ. 3.20 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಅವೆಂಟಡೋರ್ ಕಾರಿನ ಮಾಲೀಕರಾಗಿದ್ದಾರೆ. 

Tap to resize

Latest Videos

undefined

ಶತ್ರುವಿನ ಗುಟ್ಟು ಬಾಯ್ಬಿಟ್ಟ ಕಿಚ್ಚ ಸುದೀಪ್, ಈಗ ಅದು ಜಗತ್ತಿನೆಲ್ಲೆಡೆ ಟಾಂ ಟಾಂ ಆಗ್ತಿದೆ!

ವೋಲ್ವೋ ಎಕ್ಸ್‌ಸಿ 90, 2 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ವೋಗ್, 55 ಲಕ್ಷ ರೂಪಾಯಿ ಮೌಲ್ಯದ ಫೋರ್ಡ್ ಎಂಡೆವರ್, 1.5 ಕೋಟಿ ರೂಪಾಯಿ ಮೌಲ್ಯದ ಜಾಗ್ವಾರ್ ಎಕ್ಸ್‌ಎಲ್, 1.30 ಕೋಟಿ ರೂಪಾಯಿ ಬೆಲೆಯ ಟೊಯೋಟಾ ವೆಲ್‌ಫೈರ್, 75 ಲಕ್ಷ ರೂಪಾಯಿ ಮೌಲ್ಯದ ಜೀಪ್ ಕಂಪಾಸ್, 1 ಕೋಟಿ ರೂಪಾಯಿ ಮೌಲ್ಯದ BMW M3, 70 ಲಕ್ಷ ರೂಪಾಯಿ ಮೌಲ್ಯದ ಇನ್ನೋವ ಕ್ರೈಸ್ಟಾ, 58 ಲಕ್ಷ ರೂಪಾಯಿ ಮೌಲ್ಯದ ಮಿನಿ ಕೂಪರ್, 75 ಲಕ್ಷ ರೂಪಾಯಿ ಮೌಲ್ಯದ ಜೀಪ್ ರ್ಯಾಂಗ್ಲರ್, 1.75 ಕೋಟಿ ರೂಪಾಯಿ ಮೌಲ್ಯದ ಮರ್ಸಿಡೀಸ್ ಬೆಂಜ್ ಎಸ್ ಕ್ಲಾಸ್ ಕಾರುಳು ಕಿಚ್ಚ ಸುದೀಪ್ ಬಳಿ ಇದೆ.

ಜೆಪಿನಗರದಲ್ಲಿರುವ ಕಿಚ್ಚ ಸುದೀಪ್ ಮನೆ ಸುಮಾರು 25 ಕೋಟಿಗೂ ಅಧಿಕ ಮೌಲ್ಯ ಹೊಂದಿದೆ. ಮುಂಬೈ, ಹೈದರಾಬಾದ್ ಸೇರಿದಂತೆ ಬೇರೆ ಬೇರೆ ನಗರಗಳಲ್ಲೂ ಸುದೀಪ್ ಮನೆ ಹಾಗೂ ನಿವೇಷನ ಹೊಂದಿದ್ದಾರೆ. ಕಿಚ್ಚ ಸುದೀಪ್ ಒಟ್ಟು ಆಸ್ತಿ ಮೌಲ್ಯ ಸುಮಾರು 150 ಕೋಟಿ ರೂಪಾಯಿ. ವರದಿಗಳ ಪ್ರಕಾರ ಪ್ರತಿ ಸಿನಿಮಾಗೆ 20 ರಿಂದ 25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. 

ಕಿಚ್ಚ ಸುದೀಪ್ ಕೋಟಿ ಕೋಟಿ ಆಸ್ತಿ ಹೊಂದಿದ್ದಾರೆ ನಿಜ. ಆದರೆ ಅಷ್ಟೇ ಹಂಬಲ್ ವ್ಯಕ್ತಿ. ಕೋಟಿ ಆಸ್ತಿ ಒಡೆಯ ಅನ್ನೋ ಹಮ್ಮು ಬಿಮ್ಮು ಸುದೀಪ್‌ಗೆ ಇಲ್ಲ. ಅಭಿಮಾನಿಗಳ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಸುದೀಪ್ ಇತ್ತೀಚೆಗೆ ರೋಲ್ಸ್ ರಾಯ್ಸ್ ಹಾಗೂ ಇನ್ನೋವಾಗೆ ಹೋಲಿಕೆ ಮಾಡಿದಾಗ ನಾನು ಇನ್ನೋವಾ ಆಗೇ ಇರ್ತೀನಿ ಎಂದಿದ್ದರು.
 

click me!