ಬ್ರಾ, ಸೀಟ್ ಬೆಲ್ಟ್ ಧರಿಸಿದಾಗ ಎದೆ ನೋವು ಬರುತ್ತಾ? ಹೀಗಾದ್ರೆ ಇಗ್ನೋರ್ ಮಾಡಲೇ ಬೇಡಿ!

First Published | Dec 15, 2023, 5:24 PM IST

ಒಬ್ಬ ಮಹಿಳೆಗೆ ಕಳೆದ 6 ತಿಂಗಳಿನಿಂದ ಎದೆ ನೋವು ಕಾಡುತ್ತಿತ್ತಂತೆ, ಇದರೊಂದಿಗೆ ಹೃದಯ ಬಡಿತವೂ ಹೆಚ್ಚಾಗುತ್ತಿತ್ತು. ಇದು ಹೃದಯಾಘಾತದ ಲಕ್ಷಣ ಇರಬಹುದೇ? ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯೇ ಎಂದು ಭಯಪಟ್ಟು ವೈದ್ಯರ ಬಳಿ ಎಷ್ಟು ಸಲ ಹೋದರೂ ಗೊತ್ತಾಗಲೇ ಇಲ್ಲ. ಕೊನೆಗೆ ಗೊತ್ತಾಗಿದ್ದು ಏನು ಗೊತ್ತ?
 

ನಿಮಗೆ ಎದೆ ನೋವು ಬಂದಾಗ, ಹೃದಯಾಘಾತ (heart attack), ಗ್ಯಾಸ್ ಅಥವಾ ನಿಮ್ಮ ತಲೆಯಲ್ಲಿ ಏನೇನೋ ಯೋಚನೆಗಳು ಬಂದು ಹೋಗುತ್ತವೆ. ಆದರೆ ಇದರ ಹಿಂದಿನ ಒಂದು ಕಾರಣದ ಬಗ್ಗೆ ನಿಮಗೆ ತಿಳಿದಿಲ್ಲ, ಅದು ನಿಮ್ಮ ಸ್ಥಿತಿಯನ್ನು ಇನ್ನಷ್ಟು ಕೆಟ್ಟದಾಗಿಸುತ್ತೆ. ಕೆಲವು ಅಜ್ಞಾತ ಕಾರಣದಿಂದಾಗಿ, ಎದೆಯಲ್ಲಿ ತೀವ್ರ ನೋವು ಉಂಟಾಗುತ್ತದೆ ಮತ್ತು ರೋಗಿಯು ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸುತ್ತಾನೆ.

ಡೈಲಿ ಮೇಲ್ ಆನ್ಲೈನ್ ವರದಿ ಪ್ರಕಾರ, ಮೇರಿ ಗೋಲ್ಡ್ ಎಂಬ ಮಹಿಳೆಯೊಬ್ಬರು 6 ತಿಂಗಳಿನಿಂದ ಪದೇ ಪದೇ ಎದೆ ನೋವನ್ನು ಅನುಭವಿಸುತ್ತಿದ್ದರು. ಸಾಂದರ್ಭಿಕ ನೋವು ಕ್ರಮೇಣ ತೀವ್ರವಾಯಿತು. ಇಸಿಜಿ (ECG) ಮಾಡಿದಾಗ, ಅವರ ರಕ್ತನಾಳಗಳಲ್ಲಿ ಯಾವುದೇ ತಡೆ ಕಂಡುಬಂದಿಲ್ಲ. ಆದರೆ ಸಮಸ್ಯೆಗೆ ಯಾವುದೇ ಪರಿಹಾರ ಸಿಗದಿದ್ದಾಗ, ಮಹಿಳೆ ಇನ್ನೊಬ್ಬ ವೈದ್ಯರಿಗೆ ತೋರಿಸಿದರು.

Latest Videos


ಕೋಸ್ಟೊಕಾಂಡ್ರಿಟಿಸ್ ಪತ್ತೆ...
ಮತ್ತೊಬ್ಬ ವ್ಯದ್ಯರು ಆಕೆಯನ್ನು ಪರೀಕ್ಷಿಸಿ, ಎದೆಯ ಭಾಗದಲ್ಲಿ ಸೂಕ್ಷ್ಮವಾಗಿ ಗಮನಿಸಿದರು. ವೈದ್ಯರು ಎದೆಯ ನಾಲ್ಕನೇ ಪಕ್ಕೆಲುಬನ್ನು ಒತ್ತಿದ ತಕ್ಷಣ, ಮಹಿಳೆ ನೋವಿನಿಂದ ಕಿರುಚಿಕೊಂಡಳು. ಅದರ ನಂತರ ವೈದ್ಯರು ಅವರಿಗೆ ಕೋಸ್ಟೊಕಾಂಡ್ರಿಟಿಸ್ (Costochondritis) ಕಾಯಿಲೆ ಇದೆ ಎಂದು ಹೇಳಿದರು. ಹೊರಭಾಗದಲ್ಲಿ ಎದೆಯಲ್ಲಿ ತೀಕ್ಷ್ಣವಾದ ನೋವು ಇದೆ ಎಂದು ತಿಳಿದು ಬಂತು.

ಕೋಸ್ಟೊಕಾಂಡ್ರಿಟಿಸ್ ಕಾಯಿಲೆ ಎಂದರೇನು?
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (National LIbrary of Medicine) ಪ್ರಕಾರ ಕೋಸ್ಟೊಕಾಂಡ್ರಿಟಿಸ್ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದಾದ ಒಂದು ಕಾಯಿಲೆ. ಇದರಲ್ಲಿ, ಸ್ತನ ಮೂಳೆ (ಸ್ಟೆರ್ನಮ್) ಮತ್ತು ಪಕ್ಕೆಲುಬುಗಳನ್ನು ಸಂಪರ್ಕಿಸುವ ಕೋಸ್ಟಲ್ ಕಾರ್ಟಿಲೆಜ್ ಉರಿಯೂತಕ್ಕೆ ಒಳಗಾಗುತ್ತದೆ. ಇದರ ನೋವು ಸೌಮ್ಯದಿಂದ ತೀಕ್ಷ್ಣದವರೆಗೆ ಇರಬಹುದು, ಅದನ್ನು ಸಹಿಸಲಾಗುವುದಿಲ್ಲ.
 

ರೋಗಲಕ್ಷಣಗಳು ಹೀಗಿವೆ
ಬ್ರಾ ಅಥವಾ ಸೀಟ್ ಬೆಲ್ಟ್ (seatbelt) ಧರಿಸುವಂತಹ ಎದೆ ಮೇಲೆ ಒತ್ತಡ ಹೆಚ್ಚಾದಾಗ ನೋವು
ಮೇಲಿನ ಮತ್ತು ಮಧ್ಯದ ಪಕ್ಕೆಲುಬುಗಳ ನಡುವೆ ನೋವು
ಮಲಗಿದಾಗ ಹೆಚ್ಚಿದ ನೋವು
ಕೆಮ್ಮು (Cough) ಅಥವಾ ಆಳವಾದ ಉಸಿರಾಟದ ಮಾಡಿದರೆ ನೋವು
ದೈಹಿಕ ಕೆಲಸ (Physical Work) ಮಾಡಿದಾಗ ಹೆಚ್ಚಿದ ನೋವು

ಎದೆ ನೋವಿಗೆ ಕಾರಣಗಳು
ಅಪಘಾತ ಅಥವಾ ಬೀಳುವಿಕೆಯಿಂದಾಗಿ ಎದೆಗೆ ಗಾಯ
ಭಾರ ಎತ್ತುವುದು ಅಥವಾ ಭಾರವಾದ ಕೆಲಸ ಮಾಡುವುದರಿಂದ
ವೈರಸ್ ಅಥವಾ ಟಿಬಿಯಂತಹ ಉಸಿರಾಟದ ಸೋಂಕು (breathing infection)
ದೀರ್ಘ ಕೆಮ್ಮು
ದೀರ್ಘಕಾಲೀನ ಅಲರ್ಜಿಗಳು

ಚಿಕಿತ್ಸೆಯು ಈ ರೀತಿ ನಡೆಯುತ್ತದೆ
ಕೋಸ್ಟೊಕಾಂಡ್ರಿಟಿಸ್ ಸಂದರ್ಭದಲ್ಲಿ, ರೋಗಿಗೆ ಮೊದಲು ವಿಶ್ರಾಂತಿ, ದೈಹಿಕ ಚಿಕಿತ್ಸೆ ನೀಡಲು ಸಲಹೆ ನೀಡಲಾಗುತ್ತದೆ. ನೋವನ್ನು ಕಡಿಮೆ ಮಾಡಲು ಚುಚ್ಚುಮದ್ದುಗಳು, ವಿದ್ಯುತ್ ಪ್ರವಾಹ ಅಥವಾ ಎನ್ಎಸ್ಎಐಡಿಗಳೊಂದಿಗೆ ನರ ಪ್ರಚೋದನೆಯನ್ನು ಶಿಫಾರಸು ಮಾಡಲಾಗುತ್ತದೆ.

click me!