ಹೊಟ್ಟೆ ನೋವು ಓವರಿಯನ್ ಸಿಸ್ಟ್ ಲಕ್ಷಣ…. ಮಹಿಳೆಯರೇ ಹುಷಾರು!

First Published Apr 15, 2024, 4:09 PM IST

ಸಮಯಕ್ಕೆ ಸರಿಯಾಗಿ ಸಿಸ್ಟ್ ಪತ್ತೆಯಾದರೆ, ಅದರ ಚಿಕಿತ್ಸೆ ಸುಲಭ. ಶಸ್ತ್ರಚಿಕಿತ್ಸೆ ಅಪಾಯವನ್ನು ತಪ್ಪಿಸಲು, ಎಲ್ಲಾ ಮಹಿಳೆಯರು ಅಂಡಾಶಯದ ಸಿಸ್ಟ್ ಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಹೊಂದಿರಬೇಕು.
 

ಅಂಡಾಶಯ ಸಿಸ್ಟ್ (Ovarian cysts) ಸಮಸ್ಯೆ ಅನೇಕ ಮಹಿಳೆಯರಲ್ಲಿ ಕಾಮನ್. ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ. ಅಂಡಾಶಯದ ಸಿಸ್ಟ್ ಬಗ್ಗೆ ಮಹಿಳೆಯರು ಆಗಾಗ್ಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅದೇ ಸಮಯದಲ್ಲಿ, ಅನೇಕ ಮಹಿಳೆಯರು ಅಂಡಾಶಯ ಸಿಸ್ಟ್ ಮತ್ತು ಪಿಸಿಒಡಿ ಒಂದೇ ಸಮಸ್ಯೆ ಎಂದು ಭಾವಿಸುತ್ತಾರೆ. ಎಲ್ಲಾ ಮಹಿಳೆಯರೂ ಅಂಡಾಶಯದ ಸಿಸ್ಟ್ ಬಗ್ಗೆ ಅಗತ್ಯ ಮಾಹಿತಿ ಹೊಂದಿರಬೇಕು. ಇಲ್ಲದಿದ್ದರೆ, ನಂತರ ಅದು ಗಂಭೀರ ಸಮಸ್ಯೆಯ ರೂಪವನ್ನು ತೆಗೆದುಕೊಳ್ಳಬಹುದು. ಸಮಯಕ್ಕೆ ಸರಿಯಾಗಿ ಸಿಸ್ಟ್ ಪತ್ತೆಯಾದರೆ, ಅದರ ಚಿಕಿತ್ಸೆ ಸುಲಭವಾಗುತ್ತದೆ. ಇದು ದೀರ್ಘವಾದಷ್ಟೂ, ಚಿಕಿತ್ಸೆಯು ಹೆಚ್ಚು ಕಷ್ಟಕರವಾಗುತ್ತದೆ.

ಅಂಡಾಶಯದ ಸಿಸ್ಟಲ್ಲಿ ಎರಡು ವಿಧ
ಫಿಸಿಕಲ್ ಸಿಸ್ಟ್ 

ಫಿಸಿಕಲ್ ಸಿಸ್ಟ್ (physical cyst) ತುಂಬಾ ಸಾಮಾನ್ಯ. ಅದು ಸ್ವತಃ ಅಭಿವೃದ್ಧಿ ಹೊಂದುತ್ತದೆ ಮತ್ತು ಕಾಲಾನಂತರದಲ್ಲಿ ತಾನಾಗಿಯೇ ಕಣ್ಮರೆಯಾಗುತ್ತದೆ. ಫಿಸಿಕಲ್ ಸಿಸ್ಟ್ ಆ್ಯಕ್ಟಿವ್ ಸಿಸ್ಟ್ ಎಂದೂ ಕರೆಯಲಾಗುತ್ತದೆ, ಅವು ಪ್ರತಿ ಚಕ್ರದಲ್ಲಿ ಬರುತ್ತವೆ ಮತ್ತು ತಾವಾಗಿಯೇ ಕಣ್ಮರೆಯಾಗುತ್ತವೆ.

ಫೋಲಿಕ್ಯುಲರ್ ಸಿಸ್ಟ್ (follicular cyst)
ನಿಮ್ಮ ಅಂಡಾಶಯಗಳು ಪ್ರತಿ ತಿಂಗಳು ಫೋಲಿಕಲ್ಸ್ ಎಂದು ಕರೆಯಲ್ಪಡುವ ಸಣ್ಣ ಸಿಸ್ಟ್ ಬೆಳೆಸುತ್ತವೆ, ಈ ಫೋಲಿಕ್ಯುಲರ್ ಗಳಲ್ಲಿ ಒಂದನ್ನು ಪ್ರಬಲ ಫೋಲಿಕಲ್ಸ್ ಎಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ನಿಮ್ಮ ಅಂಡಾಣುಗಳು ಈ ಪ್ರಬಲ ಫೋಲಿಕಲ್ಸ್ ನಿಂದ ಸ್ಫೋಟಗೊಳ್ಳುತ್ತವೆ ಮತ್ತು ನಿಮ್ಮ ಋತುಚಕ್ರವು ಪ್ರಾರಂಭವಾಗುತ್ತದೆ. ನಿಮ್ಮ ಫೋಲಿಕಲ್ಸ್ ತಮ್ಮ ಅಂಡಾಣುಗಳನ್ನು ಬಿಡುಗಡೆ ಮಾಡದಿದ್ದಾಗ ಮತ್ತು ಬೆಳೆಯುವುದನ್ನು ಮುಂದುವರಿಸಿದಾಗ, ಅವು ಫೋಲಿಕಲ್ಸ್ ಸಿಸ್ಟ್ ಗಳಾಗಿ ಮಾರ್ಪಡುತ್ತವೆ. ಇದು ಆಗದೇ ಇದ್ದರೆ, ಪಿರಿಯಡ್ಸ್ ಮುಗಿದ ಮೆಲೆ ಫೋಲಿಕಲ್ಸ್ ಕಡಿಮೆಯಾಗುತ್ತದೆ.

ಕಾರ್ಪಸ್ ಲಿಥಿಯಂ ಸಿಸ್ಟ್ (corpus luteum cyst )
ಕಾರ್ಪಸ್ ಲಿಥಿಯಂ ಸಿಸ್ಟ್ ನಿಮ್ಮ ಋತುಚಕ್ರದಲ್ಲಿ ರೂಪುಗೊಳ್ಳುತ್ತವೆ. ಸಾಮಾನ್ಯವಾಗಿ ಅವು ಅಲ್ಟ್ರಾಸೌಂಡ್‌ನಲ್ಲಿ ಕಂಡುಬರುತ್ತವೆ. ಫೋಲಿಕಲ್ಸ್ ತಮ್ಮ ಅಂಡಾಣುಗಳನ್ನು ಬಿಡುಗಡೆ ಮಾಡಿದಾಗ ಕುಗ್ಗುತ್ತವೆ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಬಿಡುಗಡೆ ಮಾಡಲು ಪ್ರಾರಂಭಿಸುತ್ತವೆ. ಇವು ಗರ್ಭಧಾರಣೆಗೆ ಅಗತ್ಯ ಹಾರ್ಮೋನುಗಳು. ಆದರೆ ಅನೇಕ ಬಾರಿ ಅಂಡಾಣು ಹೊರಬರುವ ಸ್ಥಳದಿಂದ ಈ ಫೋಲಿಕಲ್ಸ್ ತೆರೆಯುವಾಗ, ಅವು ನಿರ್ಬಂಧಿಸಲ್ಪಡುತ್ತವೆ ಮತ್ತು ಅವುಗಳೊಳಗೆ ದ್ರವ ಸಂಗ್ರಹವಾಗಲು ಪ್ರಾರಂಭಿಸುತ್ತದೆ, ಇದು ಮತ್ತಷ್ಟು ಸಿಸ್ಟ್ ಗೆ ಕಾರಣವಾಗುತ್ತದೆ.

ಪೈಥಲಾಜಿಕಲ್ ಸಿಸ್ಟ್
ಪೈಥಲಾಜಿಕಲ್ ಸಿಸ್ಟ್ ಗಳು ಸಾಮಾನ್ಯವಲ್ಲ ಮತ್ತು ಇದಕ್ಕೆ ವೈದ್ಯಕೀಯ ಆರೈಕೆಯ ಅಗತ್ಯವಿದೆ.

ಡರ್ಮಾಯ್ಡ್ ಸಿಸ್ಟ್ 
ಈ ಸಿಸ್ಟ್‌ನಲ್ಲಿ, ಕೂದಲು, ಚರ್ಮ, ಕಾರ್ಟಿಲೆಜ್ ಕೊಬ್ಬು ಮತ್ತು ಹಲ್ಲುಗಳಂತಹ ಅಂಗಾಂಶಗಳು ಕಂಡುಬರುತ್ತವೆ. ಈ ರೀತಿಯ ಸಿಸ್ಟ್ ಅಂಡಾಶಯಗಳಲ್ಲಿ ಸಂತಾನೋತ್ಪತ್ತಿ ಕೋಶಗಳ ರಚನೆಯಿಂದ ಉಂಟಾಗುತ್ತದೆ, ಇದನ್ನು ಕೀಟಾಣು ಕೋಶಗಳು ಎಂದೂ ಕರೆಯಲಾಗುತ್ತದೆ. ಈ ರೀತಿಯ ಸಿಸ್ಟ್ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆ (Surgery) ಮಾಡಬೇಕಾಗುತ್ತದೆ. ಇದಕ್ಕೆ ವೈದ್ಯಕೀಯ ಚಿಕಿತ್ಸೆ ಅಗತ್ಯ. 

ಸಿಸ್ಟಡೆನೋಮಾ
ಅಂಡಾಶಯದ ಮೇಲ್ಮೈಯಲ್ಲಿರುವ ಜೀವಕೋಶಗಳಿಂದ ಈ ರೀತಿಯ ಸಿಸ್ಟ್ ಬೆಳೆಯುತ್ತವೆ, ಅವು ನೀರಿನಿಂದ ತುಂಬಿರುತ್ತವೆ ಮತ್ತು ಕೆಲವೊಮ್ಮೆ ಅವು ಲೋಳೆಯಂತಹ ವಸ್ತುಗಳನ್ನು ಸಹ ಹೊಂದಿರುತ್ತವೆ. ಇದು ನಿಮ್ಮ ಅಂಡಾಶಯದ ಸುತ್ತಲೂ ಹರಡಬಹುದು ಮತ್ತು ಗಂಭೀರ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಈ ರೀತಿಯ ಸಿಸ್ಟ್ ಸಾಕಷ್ಟು ದೊಡ್ಡದಾಗಿರಲೂಬಹುದು, ಅವುಗಳ ತೂಕ 3 ರಿಂದ 4 ಲೀಟರ್‌ಗಳವರೆಗೆ ತಲುಪಬಹುದು. ಸಿಸ್ಟಡೆನೋಮಾ ಗಾತ್ರದಲ್ಲಿ ಚಿಕ್ಕದಾಗಿದ್ದರೆ, ಅದನ್ನು ನಿಯಮಿತ ವೈದ್ಯಕೀಯ ಆರೈಕೆಯೊಂದಿಗೆ ಚಿಕಿತ್ಸೆ ಮಾಡಬಹುದು. ಆದರೆ ಅದರ ಗಾತ್ರವು ದೊಡ್ಡದಾಗಿದ್ದರೆ, ಅದಕ್ಕೆ ಹೆಚ್ಚಿನ ಕಾಳಜಿ ಅಗತ್ಯವಿದೆ.
 

ಎಂಡೊಮೆಟ್ರಿಯೋಮಾ
ಎಂಡೊಮೆಟ್ರಿಯಲ್ ಕೋಶಗಳು ಗರ್ಭಾಶಯದ ಹೊರಗಿನ ಮತ್ತು ಒಳ ಮೇಲ್ಮೈಗಳಲ್ಲಿರುತ್ತವೆ, ಮತ್ತು ಋತುಚಕ್ರದ ಕೊನೆಯಲ್ಲಿ ಅವುಗಳಿಂದ ರಕ್ತಸ್ರಾವವಾಗುತ್ತವೆ. ಅನೇಕ ಬಾರಿ ಈ ರೀತಿಯ ರಕ್ತಸ್ರಾವ ಒಟ್ಟಿಗೆ ಸಂಗ್ರಹವಾಗುತ್ತದೆ ಮತ್ತು ರಕ್ತ ತುಂಬಿದ ಸಿಸ್ಟ್‌ಗೆ ಕಾರಣವಾಗುತ್ತದೆ. ಇದು ಅತ್ಯಂತ ನೋವಿನಿಂದ (painful cyst) ಕೂಡಿರುತ್ತದೆ. ಈ ಪರಿಸ್ಥಿತಿಯಲ್ಲಿ, ಮಹಿಳೆಯರಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.

ಅಂಡಾಶಯದ ಸಿಸ್ಟ್ ನ ರೋಗಲಕ್ಷಣಗಳ ಬಗ್ಗೆ ಗಮನ ಹರಿಸುವುದು ಮುಖ್ಯ
ಅಂಡಾಶಯದ ಸಿಸ್ಟ್ ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳೊಂದಿಗೆ ಬರುವುದಿಲ್ಲ. ಅವು ತಾವಾಗಿಯೇ ಬೆಳೆದು, ದೊಡ್ಡದಾಗಿದ್ದರೆ, ಅನೇಕ ರೋಗಲಕ್ಷಣಗಳನ್ನು ಕಾಣಬಹುದು.

ಮಂದ ಮತ್ತು ತೀಕ್ಷ್ಣ ಪೆಲ್ವಿಕ್ ನೋವು (pelvic pain) (ಇವು ಕೆಳ ಬೆನ್ನು ಮತ್ತು ತೊಡೆಗಳಲ್ಲಿ ನೋವನ್ನು ಉಂಟುಮಾಡಬಹುದು)
ಹೊಟ್ಟೆಯಲ್ಲಿ ಒತ್ತಡ ಮತ್ತು ಭಾರದ ಅನುಭವ
ಹೊಟ್ಟೆಯಲ್ಲಿ ಹಠಾತ್ ತೀವ್ರ ನೋವು
ಅಂಡಾಶಯ ಟ್ವಿಸ್ಟ್ ಆದಾಗ ಹೊಟ್ಟೆ ನೋವು, ವಾಂತಿಯ ಅನುಭವ
ಸಿಸ್ಟ್ನ ಒತ್ತಡದಿಂದಾಗಿ, ಕೆಲವು ಮಹಿಳೆಯರಿಗೆ ಮೂತ್ರಕೋಶ ಮತ್ತು ಕರುಳನ್ನು ಸಂಪೂರ್ಣವಾಗಿ ಖಾಲಿ ಮಾಡಲು ತೊಂದರೆಯಾಗುತ್ತದೆ
ಆಗಾಗ್ಗೆ ಮೂತ್ರ ವಿಸರ್ಜಿಸುವುದು
ಮುಟ್ಟಿನ ಸಮಯದಲ್ಲಿ ಹೆಚ್ಚು ನೋವನ್ನು ಅನುಭವಿಸುವುದು
ಏನನ್ನೂ ತಿನ್ನದೆ ಆಗಾಗ್ಗೆ ಹೊಟ್ಟೆ ಉಬ್ಬರಿಸುವ ಅನುಭವ

ಅಂಡಾಶಯದ ಸಿಸ್ಟ್ ಸಂದರ್ಭದಲ್ಲಿ ಯಾವಾಗ ಚಿಕಿತ್ಸೆ ಅಗತ್ಯ?
ತಜ್ಞರ ಪ್ರಕಾರ, ಕೇವಲ 5 ರಿಂದ 10% ಮಹಿಳೆಯರಿಗೆ ಮಾತ್ರ ಅಂಡಾಶಯದ ಸಿಸ್ಟ್ ತೆಗೆಯಲು ಶಸ್ತ್ರಚಿಕಿತ್ಸೆ ಅಗತ್ಯವಿದೆ. ಋತುಬಂಧದ ನಂತರವೂ ಸಿಸ್ಟ್ ನಿಮ್ಮನ್ನು ಕಾಡುತ್ತಿರುವಾಗ ಶಸ್ತ್ರಚಿಕಿತ್ಸೆ ಬೇಕು. ಎಲ್ಲ ಋತುಚಕ್ರಗಳ ನಂತರವೂ ಇದು ಕೊನೆಗೊಳ್ಳುವುದಿಲ್ಲ.ನಿಮ್ಮ ಸಿಸ್ಟ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದರೆ ಮತ್ತು ಅದರ ಆಕಾರ, ಸ್ಥಳ ಇತ್ಯಾದಿಗಳು ಅಲ್ಟ್ರಾಸೌಂಡ್‌ನಲ್ಲಿ (ultrasound) ಸೂಕ್ತವಲ್ಲದಿದ್ದರೆ, ವೈದ್ಯರು ಶಸ್ತ್ರಚಿಕಿತ್ಸೆ ಶಿಫಾರಸು ಮಾಡುತ್ತಾರೆ. ಇದಲ್ಲದೆ, ನೀವು ಅತಿಯಾದ ನೋವು ಮತ್ತು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದರೆ, ಇದರಿಂದಗಿ ನಿಮ್ಮ ನಿಯಮಿತ ದಿನಚರಿ ಮೇಲೆ ಪರಿಣಾಮ ಬೀರುತ್ತಿದ್ದರೆ, ಈ ಪರಿಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆಯೂ ಅಗತ್ಯವಾಗಬಹುದು.

ಅಂಡಾಶಯದ ಸಿಸ್ಟ್ ತಡೆಯೋದು ಹೇಗೆ?
ಅಂಡಾಶಯದ ಸಿಸ್ಟ್ ತಡೆಯಲು ಯಾವುದೇ ಮಾರ್ಗವಿಲ್ಲ, ನಿಮ್ಮ ಅಂಡಾಶಯಗಳು ಮತ್ತು ಅದರಲ್ಲಿ ರೂಪುಗೊಂಡ ಸಿಸ್ಟ್ ಆಕಾರ, ಗಾತ್ರ ಮತ್ತು ಪ್ರಮಾಣವನ್ನು ನಿಯಮಿತ ಪೆಲ್ವಿಕ್ ಟೆಸ್ಟ್ ಅಡಿಯಲ್ಲಿ ತಿಳಿದುಕೊಳ್ಳಬಹುದು. ಇದರೊಂದಿಗೆ, ಅವುಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚಬಹುದು ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ನಿಮಗೆ ಅನಿಯಮಿತ ಋತುಚಕ್ರ (irregular periods) ಅಥವಾ ನೋವಿನ ಪಿರಿಯಡ್ಸ್, ಭಾರಿ ರಕ್ತಸ್ರಾವ, ಲಘು ರಕ್ತಸ್ರಾವ ಮುಂತಾದ ರೋಗಲಕ್ಷಣಗಳು ಕಂಡು ಬಂದರೆ ಅದನ್ನು ನಿರ್ಲಕ್ಷಿಸಬೇಡಿ. ಈ ಬಗ್ಗೆ ನಿಮ್ಮ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ, ಏಕೆಂದರೆ ಈ ಎಲ್ಲಾ ರೋಗಲಕ್ಷಣಗಳು ಅಂಡಾಶಯದ ಸಿಸ್ಟ್ ಸೂಚಿಸುತ್ತವೆ.

ಅಂಡಾಶಯದ ಸಿಸ್ಟ್ ಹೊಂದಿದ್ದರೆ ಇವುಗಳನ್ನು ಟ್ರೈ ಮಾಡಿ
ಹಾಟ್ ಕಂಪ್ರೆಸ್

ಹೊಟ್ಟೆ ಮೇಲಿನ ಹಾಟ್ ವಾಟರ್ ಬ್ಯಾಗ್ ಇಡೋದರಿಂದ ಸಿಸ್ಟ್ ಅನ್ನು ಕುಗ್ಗಿಸುತ್ತದೆ. ಇದಲ್ಲದೆ, ಅದರಲ್ಲಿರುವ ದ್ರವ ತೆಳುವಾಗುತ್ತದೆ ಮತ್ತು ವೇಗವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ದ್ರವ ಸಮತೋಲನವನ್ನು ಕಾಪಾಡಿಕೊಳ್ಳುವುದು ಸೋಂಕಿನ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

ಮಸಾಜ್
ನೋವಿನಿಂದಾಗಿ, ಸುತ್ತಮುತ್ತಲಿನ ಸ್ನಾಯುಗಳಿಗೂ ನೋವು ಹರಡುತ್ತದೆ. ಇದರಿಂದ ನೀವು ತೊಂದರೆಯನ್ನು ಎದುರಿಸಬೇಕಾಗಬಹುದು. ಕೆಳ ಬೆನ್ನು, ಹೊಟ್ಟೆ ಮತ್ತು ತೊಡೆಗಳನ್ನು ಮಸಾಜ್ ಮಾಡುವುದರಿಂದ ನೋವನ್ನು ಕಡಿಮೆ ಮಾಡಬಹುದು. 

ವ್ಯಾಯಾಮ ಮತ್ತು ಸ್ಟ್ರೆಚಿಂಗ್
ವ್ಯಾಯಾಮ ಮತ್ತು ಸ್ಟ್ರೆಚಿಂಗ್ ಅಂಡಾಶಯದ ಸಿಸ್ಟ್ಗಗೆ ಸಂಬಂಧಿಸಿದ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಮಹಿಳೆಗೆ ಸಿಸ್ಟ್ ಗಳಿದ್ದರೆ ತೀವ್ರ ವ್ಯಾಯಾಮವನ್ನು ತಪ್ಪಿಸಬೇಕು. ಯೋಗ, ಸ್ಟ್ರೆಚಿಂಗ್ ನಂತಹ ಸರಳ ದೈಹಿಕ ಚಟುವಟಿಕೆಗಳನ್ನು ಮಾಡುವುದು ಉತ್ತಮ.  

ಆಹಾರ ಬದಲಾವಣೆ
ಅಂಡಾಶಯದ ಸಿಸ್ಟ್‌ನಿಂದ ಬಳಲುತ್ತಿರುವ ಮಹಿಳೆಯರು ಅತಿಯಾದ ಸಕ್ಕರೆ ಸೇವಿಸಬಾರದು. ನೈಸರ್ಗಿಕ ಮತ್ತು ಆರೋಗ್ಯಕರ ಆಹಾರಗ ಸೇವಿಸಿ ಮತ್ತು ಸಕ್ಕರೆ, ಲವಣಗಳು, ಸಂಸ್ಕರಿಸಿದ  ಆಹಾರಗಳಂತಹ ಆಹಾರಗಳನ್ನು ತಪ್ಪಿಸಿ.

click me!