ಪುರುಷರೇ, ಹಾಸಿಗೆಯಲ್ಲಿ ಹುಷಾರ್!‌ ಹೆಣ್ಣಿನಲ್ಲಿ ಈ ಗುಣ ಪುರುಷನಿಗಿಂತ 6 ಪಟ್ಟು ಹೆಚ್ಚಂತೆ!

By Bhavani Bhat  |  First Published Nov 26, 2024, 7:55 PM IST

ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಪುರುಷರಿಗಿಂತ ಕೆಲವು ವಿಷಯಗಳಲ್ಲಿ ಬಲಿಷ್ಠರು. ಆಹಾರ ಸೇವನೆ, ನಾಚಿಕೆ, ಧೈರ್ಯ, ಕಾಮ, ರೂಪ-ಯೌವನ, ಮಧುರವಾದ ಮಾತು, ದಯೆ ಮತ್ತು ಸಹಾನುಭೂತಿ ಹಾಗೂ ಬುದ್ಧಿವಂತಿಕೆಯಲ್ಲಿ ಮಹಿಳೆಯರು ಪುರುಷರಿಗಿಂತ ಹಲವು ಪಟ್ಟು ಬಲಿಷ್ಠರು.


ಆಚಾರ್ಯ ಚಾಣಕ್ಯ ತನ್ನ ಅರ್ಥಶಾಸ್ತ್ರದಲ್ಲಿ ಹೇಳಿರದ ವಿಷಯಗಳೇ ಇಲ್ಲ ಎನ್ನಬಹುದು. ಅದರಲ್ಲೂ ಗಂಡು- ಹೆಣ್ಣಿನ ಗುಣಗಳ ಬಗ್ಗೆ ಮತ್ತು ಹೆಣ್ಣು ಗಂಡಿನೊಡನೆ, ಗಂಡು ಹೆಣ್ಣಿನೊಡನೆ ಹೇಗೆ ವರ್ತಿಸುತ್ತಾರೆ ಎಂಬ ಬಗ್ಗೆ ಹಲವು ವಿಚಾರಗಳನ್ನು ಮುಕ್ತವಾಗಿ ಹೇಳಿದ್ದಾನೆ. ಇಂದು ಅವುಗಳಲ್ಲಿ ಹಲವು ವುಚಾರಗಳು ಪ್ರಸ್ತುತವಲ್ಲ ಎಂದು ಭಾವಿಸಬಹುದಾಗದ್ದರೂ, ಮತ್ತಷ್ಟು ವಿಷಯಗಳು ಈಗಲೂ ಪ್ರಸ್ತುತವಾಗಿಯೇ ಇವೆ.  
 
ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂಬುದು ಸಾಮಾನ್ಯ ನಂಬಿಕೆ. ಆದರೆ ಇದು ನಿಜವಲ್ಲ. ಪುರುಷರಿಗಿಂತ ಮಹಿಳೆಯರು ಕೆಲವೊಂದು ವಿಚಾರಗಳಲ್ಲಿ ಅತ್ಯಂತ ಬಲಿಷ್ಠರಾಗಿರುತ್ತಾರೆ ಮತ್ತು ಸಮರ್ಥರಾಗಿರುತ್ತಾರೆ. ಪುರುಷರಿಗೆ ಮಹಿಳೆಯರನ್ನು ಈ 5 ವಿಚಾರಗಳಲ್ಲಿ ಸೋಲಿಸಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಚಾಣಕ್ಯ. ಆ 5 ವಿಚಾರಗಳು ಯಾವುದು ನೋಡಿ.

ಚಾಣಕ್ಯ ನೀತಿಯಲ್ಲಿ ಮಹಿಳೆಯರು ಬಗೆಗಿನ ಸೂತ್ರ ಹೀಗಿದೆ: "'ಸ್ತ್ರೀಣಾಂ ದ್ವಿಗುಣ ಆಹಾರೋ, ಲಜ್ಜಾ, ಚಾಪಿ ಚತುರ್ಗುಣ| ಸಾಹಸಂ ಷಡ್ಗುಣಂ ಚೈವ ಕಾಮಶ್ಚಾಷ್ಟಗುಣಃ ಸ್ಮೃತಃ||"

Tap to resize

Latest Videos

ಇದರ ಅರ್ಥ ಹೀಗಿದೆ- ಮಹಿಳೆಯರಲ್ಲಿ ಆಹಾರ ಎಂದರೆ ಹಸಿವು ಪುರುಷರಿಗಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ. ನಾಚಿಕೆ ಎನ್ನುವಂತಹದ್ದು ಪುರುಷರಿಗಿಂತ ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ. ಧೈರ್ಯವು ಪುರುಷನಿಗಿಂತ ಆರು ಪಟ್ಟು ಹೆಚ್ಚಾಗಿರುತ್ತದೆ. ಆದ್ದರಿಂದಲೇ ಮಹಿಳೆಯರನ್ನು ಶಕ್ತಿ ಸ್ವರೂಪಿಯೆಂದೂ ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ಮಹಿಳೆಯರಲ್ಲಿ ಲೈಂಗಿಕ ಬಯಕೆಯು ಪುರುಷರಿಗಿಂತ ಎಂಟು ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ. ಅಂದರೆ ಹಾಸಿಗೆಯಲ್ಲಿ ಹೆಣ್ಣನ್ನು ಮಣಿಸಲು ಪುರುಷನಿಗೆ ಎಂದೂ ಸಾಧ್ಯವಿಲ್ಲ. 

ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯು ಈ 8 ವಿಚಾರಗಳಲ್ಲಿ ಪುರುಷರಿಗಿಂತ ಹೆಚ್ಚು ಸಮರ್ಥಳು- ಆಹಾರ ಸೇವನೆ, ನಾಚಿಕೆ, ಧೈರ್ಯ, ಕಾಮ, ರೂಪ ಮತ್ತು ಯೌವನ, ಮಧುರವಾದ ಮಾತು, ದಯೆ ಮತ್ತು ಸಹಾನುಭೂತಿ, ಬುದ್ಧಿವಂತಿಕೆ. 

''ಬಹುವೀರ್ಯಬಲಂ ರಾಜ್ಯೋ ಬ್ರಾಹ್ಮಣೋ ಬ್ರಹ್ಮವಿದ್ ಬಲಿ| ರೂಪ-ಯೌವನ-ಮಾಧುರ್ಯಂ ಸ್ತ್ರೀಣಾಂ ಬಲಮನುತ್ತಮಂ||'' ಎಂದೂ ಚಾಣಕ್ಯ ಹೇಳುತ್ತಾನೆ.  ಅಂದರೆ   ರಾಜರ ಬಲವೆಂದರೆ ಸ್ನಾಯು ಶಕ್ತಿ ಅಂದರೆ ದೈಹಿಕ ಶಕ್ತಿ, ಆಯುಧಗಳು ಮತ್ತು ಅವರ ಸೈನ್ಯ. ಬ್ರಾಹ್ಮಣನ ಶಕ್ತಿ ಅಂದರೆ ಜ್ಞಾನ ಮತ್ತು ಬ್ರಹ್ಮವಿದ್ಯೆ. ಆದರೆ ಸ್ತ್ರೀಯರ ಶಕ್ತಿಯೆಂದರೆ ಮಧುರವಾದ ಮಾತು, ರೂಪ, ನಮ್ರತೆ ಮತ್ತು ಯೌವನ. 

ಅರ್ಥಶಾಸ್ತ್ರದ ಅಧ್ಯಾಯ 14ರಲ್ಲಿ (ಶ್ಲೋಕ ನಂ.11) ಚಾಣಕ್ಯ ಬರೆಯುತ್ತಾನೆ: "ನಾವು ಯಾವಾಗಲೂ ಬೆಂಕಿ, ನೀರು, ಮಹಿಳೆಯರು, ಮೂರ್ಖ ಜನರು, ಸರ್ಪಗಳು ಮತ್ತು ರಾಜಮನೆತನದ ಸದಸ್ಯರೊಂದಿಗೆ ಜಾಗರೂಕತೆಯಿಂದ ವ್ಯವಹರಿಸಬೇಕು; ಏಕೆಂದರೆ ಅವರು ಸಂದರ್ಭ ಬಂದಾಗ, ತಕ್ಷಣವೇ ನಮ್ಮ ಸಾವಿಗೆ ಕಾರಣವಾಗಬಹುದು." ಅಂದರೆ ಹೆಣ್ಣನ್ನು ಕಡೆಗಣಿಸಿ ವ್ಯವಹರಿಸಬಾರದು, ಯಾವಾಗಲೂ ಆಕೆಯೊಂದಿಗೆ ಜಾಗರೂಕತೆಯಿಂದ, ಪ್ರೇಮದಿಂದ ನಡೆದುಕೊಳ್ಳಬೇಕು ಎಂದು ಅರ್ಥ ಮಾಡಿಕೊಳ್ಳಬಹುದು. 

ಸಂಗಾತಿಗೆ ಮೋಸ ಮಾಡುವುದು ಅಪರಾಧವಲ್ಲ, ಹೊಸ ಕಾನೂನಿಗೆ ಗವರ್ನರ್ ಸಹಿ!

ಚಾಣಕ್ಯ ಹೇಳುವ ಇನ್ನೊಂದು ಮಾತು: "ತಮ್ಮ ಹೆಂಡತಿ ಅಥವಾ ಗೆಳತಿಯನ್ನು ಯಾವಾಗಲೂ ಗೌರವದಿಂದ ಕಾಣುವ ವ್ಯಕ್ತಿಯ ಸಂಬಂಧವು ತುಂಬಾ ಗಟ್ಟಿಯಾಗಿರುತ್ತದೆ. ಅಂತಹ ವ್ಯಕ್ತಿಯು ಸ್ವತಃ ಗೌರವವನ್ನು ಪಡೆಯುತ್ತಾನೆ ಮತ್ತು ಅವನ ಲೈಂಗಿಕ ಜೀವನವು ಯಾವಾಗಲೂ ಸಂತೋಷದಿಂದ ಕೂಡಿರುತ್ತದೆ. ಉತ್ತಮ ಲೈಂಗಿಕ ಶಕ್ತಿ ಹೊಂದಿದ ಪುರುಷ ಅಥವಾ ಸ್ತ್ರೀಯ ಚಿತ್ತವನ್ನು ಸೆಳೆಯಲು ಅನ್ಯರು ಪ್ರಯತ್ನಪಡುತ್ತಿರುತ್ತಾರೆ. ಆದರೆ ಅದನ್ನು ಕಾಲ ಕಸದಂತೆಯೇ ಕಾಣಬೇಕು. ಜಗತ್ತಿನಲ್ಲಿ ಲೈಂಗಿಕ ಸುಖವುಳ್ಳ ಉತ್ತಮ ದಾಂಪತ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ."

ಸಂಗಾತಿಯಲ್ಲಿ ಈ ಗುಣಗಳಿದ್ರೆ ಹುಷಾರಾಗಿರಿ… ಇಲ್ಲಾಂದ್ರೆ ಜೀವನ ಸೈಕೋ ಜಯಂತ್ ಮದ್ವೆಯಾದ ಚಿನ್ನುಮರಿಯಂತಾಗುತ್ತೆ!
 

click me!