ಪ್ಲಾನಿಂಗ್ ಇಲ್ಲದೇ ಸರ್ಕಾರಿ ಕಟ್ಟಡ, ಶಾಲೆ ನಿರ್ಮಾಣ; ಸರ್ಕಾರದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಿಡಿಶಾಪ!

By Suvarna News  |  First Published Nov 26, 2024, 7:28 PM IST

ಸರ್ಕಾರಿ ಕಚೇರಿಗಳನ್ನೂ ನಿರ್ಮಿಸುವ ವೇಳೆ ಅಧಿಕಾರಿಗಳು ಪ್ಲ್ಯಾನ್ ಮಾಡ್ತಿಲ್ಲವೆಂಬ ಆರೋಪ ಕೇಳಿಬಂದಿದೆ. ಮೂಲಭೂತ ಸೌಕರ್ಯಗಳು ಸಿಗದ ಕಡೆ ಬಿಲ್ಡಿಂಗ್ ನಿರ್ಮಿಸುತ್ತಿದ್ದಾರೆ. ಇದು ಮೂಲಭೂತ ಸೌಕರ್ಯದ ಕೊರತೆಯಿಂದ ಉದ್ಘಾಟನೆ ಆಗ್ತಿಲ್ಲ. ಇದಕ್ಕೆ ತಾಜಾ ನಿದರ್ಶನ ಅಂದ್ರೆ ಜಿಲ್ಲಾ ಮೆಡಿಕಲ್ ಡ್ರಗ್ ಹೌಸ್.


ವರದಿ - ಪುಟ್ಟರಾಜು. ಆರ್. ಸಿ.  ಏಷಿಯಾನೆಟ್  ಸುವರ್ಣ  ನ್ಯೂಸ್ 

ಚಾಮರಾಜನಗರ (ನ.26) - ಸರ್ಕಾರಿ ಕಚೇರಿಗಳನ್ನೂ ನಿರ್ಮಿಸುವ ವೇಳೆ ಅಧಿಕಾರಿಗಳು ಪ್ಲ್ಯಾನ್ ಮಾಡ್ತಿಲ್ಲವೆಂಬ ಆರೋಪ ಕೇಳಿಬಂದಿದೆ. ಮೂಲಭೂತ ಸೌಕರ್ಯಗಳು ಸಿಗದ ಕಡೆ ಬಿಲ್ಡಿಂಗ್ ನಿರ್ಮಿಸುತ್ತಿದ್ದಾರೆ. ಇದು ಮೂಲಭೂತ ಸೌಕರ್ಯದ ಕೊರತೆಯಿಂದ ಉದ್ಘಾಟನೆ ಆಗ್ತಿಲ್ಲ. ಇದಕ್ಕೆ ತಾಜಾ ನಿದರ್ಶನ ಅಂದ್ರೆ ಜಿಲ್ಲಾ ಮೆಡಿಕಲ್ ಡ್ರಗ್ ಹೌಸ್.

Tap to resize

Latest Videos

 ಹೌದು ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಹೀಗೆ ಸರ್ಕಾರಿ ಕಚೇರಿ ನಿರ್ಮಿಸುವ ವೇಳೆ ಅಧಿಕಾರಿಗಳು ಮೂಲಭೂತ ಸೌಕರ್ಯ ಕೊರತೆಯಿರುವ ಕಡೆಯೇ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಚಾಮರಾಜನಗರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೋವಿಡ್ ವೇಳೆ ರೋಗಿಗಳಿಗೆ ಔಷಧಿ ತರಲೂ ಮೈಸೂರು ಜಿಲ್ಲೆಯನ್ನು ಅವಲಂಬಿಸಿತ್ತು. ಇದನ್ನು ಮನಗಂಡ ಅಧಿಕಾರಿಗಳು ಚಾಮರಾಜನಗರದಲ್ಲೇ ಮೆಡಿಸನ್ ಸ್ಟಾಕ್ ಮಾಡುವ ನಿಟ್ಟಿನಲ್ಲಿ ಚಾಮರಾಜನಗರ ಗಾಳೀಪುರ ಸಮೀಪದ ಕರಿವರದರಾಜನ ಬೆಟ್ಟದ ಸಮೀಪ ಕೋಟ್ಯಂತರ ರೂಪಾಯಿ  ವೆಚ್ಚ  ಮಾಡಿ ಡ್ರಗ್ ಹೌಸ್ ನಿರ್ಮಿಸಿ ಒಂದೂವರೆ ವರ್ಷ ಕಳೆದಿದೆ.ಆದರೆ ಕಟ್ಟಡ ಉದ್ಘಾಟನೆ ಆಗಿಲ್ಲ. ಇದಕ್ಕೆ ಕಾರಣವೆಂದರೆ ಈ ಕಟ್ಟಡಕ್ಕೆ ತೆರಳಲು ರಸ್ತೆ ವ್ಯವಸ್ಥೆಯಿಲ್ಲ. ಇದರಿಂದ ಅಧಿಕಾರಿಗಳು ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡ್ತಿದ್ದಾರೆ. ಆದ್ರೆ ಇನ್ನೂ ಕೂಡ ರಸ್ತೆ ಮಾತ್ರ ನಿರ್ಮಾಣವಾಗಿಲ್ಲ. ರಸ್ತೆ  ನಿರ್ಮಾಣದ  ಬಳಿಕ  ಕಟ್ಟಡ  ಉದ್ಘಾಟನೆಗೆ  ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಆದ್ರೆ ಅಲ್ಲಿಯವರೆಗೂ ಮೈಸೂರಿನಿಂದ ಮೆಡಿಸಿನ್ ಸ್ಟಾಕ್ ಮಾಡಿಕೊಂಡು ಔಷಧಿ ತರಬೇಕಿದೆ.

ಇದೊಂದೇ  ಕಟ್ಟಡದ  ಕಥೆಯಲ್ಲ. ಚಾಮರಾಜನಗರದಿಂದ ಆದರ್ಶ ಶಾಲೆಗೆ ಕೇವಲ ಎರಡು  ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಬಿಡಲಾಗಿದ್ದು ಒಂದೊಂದು ಬಸ್ ನಲ್ಲಿ 150 ಕ್ಕು ಹೆಚ್ಚು ಮಕ್ಕಳು ಪಯಣಿಸುತ್ತಾರೆ. ಸರಿಯಾದ ಸಂಪರ್ಕ ರಸ್ತೆಯೇ ಇಲ್ಲದೆ ಚಾಮರಾಜನಗರದ ಹೊರ ವಲಯದಲ್ಲಿ  ಸರ್ಕಾರ ಆದರ್ಶ ವಿದ್ಯಾಲಯ ನಿರ್ಮಿಸಲಾಗಿದ್ದು ಸದ್ಯ 380 ಕ್ಕು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ಕಿಲೋ ಮೀಟರ್ ಉದ್ದಕ್ಕೂ ನರಕಮಯವಾಗಿರುವ ಕಚ್ಚಾ ರಸ್ತೆಯಲ್ಲಿ ಸ್ವಲ್ಪ ಮೈಮರೆತರು ಬಸ್ ಉರುಳಿ ಬೀಳುವ ಸಾಧ್ಯತೆ ಹೆಚ್ಚು. 

ಜನಪ್ರತಿನಿಧಿಗಳು, ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗು ಚಾಮರಾಜನಗರ  ಹೊರಭಾಗದಲ್ಲಿ  ಪ್ರಾದೇಶಿಕ   ಸಾರಿಗೆ ಕಚೇರಿ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ಆದ್ರೆ ಇಲ್ಲಿಯವರೆಗೂ ಕೂಡ ಡಾಂಬರೀಕರಣ ಮಾತ್ರ ಕನಸಾಗಿದೆ. ಪ್ರತಿದಿನ ನೂರಾರು ಜನರು ಆರ್.ಟಿ.ಓ. ಕಛೇರಿಗೆ ಮಣ್ಣಿನ ರಸ್ತೆಯಲ್ಲಿ ಹಳ್ಳ ಕೊಳ್ಳಗಳ ನಡುವೆ ಮಕ್ಕಳು ಸಂಚಾರ ಮಾಡಬೇಕಿದೆ. ಸಾಕಷ್ಟು ವರ್ಷಗಳಿಂದ ರಸ್ತೆ ಡಾಂಬರೀಕರಣ ಮಾಡಿ ಸಮರ್ಪಕವಾಗಿ ರಸ್ತೆ ನಿರ್ಮಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದರು ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗ್ತಿಲ್ಲ ಅಂತಿದ್ದಾರೆ.

ಒಟ್ನಲ್ಲಿ ಸರ್ಕಾರ ಕಟ್ಟಡಗಳ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡ್ತಿದೆ. ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸ್ಥಳಗಳಲ್ಲಿ ಕಚೇರಿ ನಿರ್ಮಿಸದೆ ಇರುವುದರಿಂದ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಲೆಗೆ ಸಂತಸದಿಂದ ಹೋಗಬೇಕಾದ ಮಕ್ಕಳು ಕೂಡ ಭಯದಿಂದಲೇ ಶಾಲೆಯತ್ತ ಮುಖ ಮಾಡ್ತಿದ್ದಾರೆ.ಪೋಷಕರು ಕೂಡ ಆತಂಕದಿಂದಲೇ ಶಾಲೆಗೆ ಕಳುಹಿಸ್ತಿದ್ದಾರೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಕಣ್ಣೀದ್ದು ಕುರುಡಾಗಿದ್ದಾರೆ. ಇನ್ನಾದ್ರೂ ಎಚ್ಚೆತ್ತು ಮಕ್ಕಳಿಗೆ ಅಗತ್ಯವಾದ ಬಸ್,ರಸ್ತೆ ವ್ಯವಸ್ಥೆ ಮಾಡ್ತಾರಾ ಅನ್ನೋದ್ನ ಕಾದುನೋಡಬೇಕಾಗಿದೆ.

click me!