ಸುಸ್ತು, ವೀಕ್ನೆಸ್ಸ್ ಕಾಡ್ತಿದ್ಯಾ? ಚಿಂತೆ ಬಿಟ್ಟು ಈ ವಿಟಮಿನ್ ಸೇವಿಸಿ

First Published Sep 13, 2022, 1:06 PM IST

ವಿಟಮಿನ್ಸ್ ಮತ್ತು ಮಿನರಲ್ಸ್ ನಮ್ಮ ದೇಹಕ್ಕೆ ಬಹಳ ಕಡಿಮೆ ಪ್ರಮಾಣದಲ್ಲಿ ಅಗತ್ಯವಾಗಿದ್ದರೂ, ನಮ್ಮ ದೇಹ ಸರಿಯಾಗಿ ಕೆಲಸ ಮಾಡಲು ಅವು ಬಹಳ ಮುಖ್ಯ. ಅವು ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತೆ. ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಕೆ, ಕ್ಯಾಲ್ಸಿಯಂ, ಕಬ್ಬಿಣ, ಸತು, ಸೆಲೆನಿಯಂ ಮತ್ತು ಕ್ರೋಮಿಯಂ ಕೆಲವು ಅತ್ಯಗತ್ಯ ವಿಟಮಿನ್ಸ್ ಮತ್ತು ಮಿನರಲ್ಸ್‌ಗಳಲ್ಲಿ ಸೇರಿವೆ. ಆದರೆ, ಬದಲಾಗುತ್ತಿರುವ ಜೀವನಶೈಲಿ (Lifestyle) ಮತ್ತು ಆಹಾರ ಪದ್ಧತಿಯಿಂದಾಗಿ (Food System), ಹೆಚ್ಚಿನ ಜನರು ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಲು ಸಾಧ್ಯವಾಗೋದಿಲ್ಲ.

ಭಾರತದಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆ ಪ್ರಕರಣಗಳು ತುಂಬಾ ಹೆಚ್ಚುತ್ತಿವೆ. ನಗರಗಳಲ್ಲಿ ವಾಸಿಸುವ ಅನೇಕ ಆರೋಗ್ಯವಂತ ಭಾರತೀಯರು ವಿಟಮಿನ್ (Vitamin) ಕೊರತೆ ಸಮಸ್ಯೆ ಎದುರಿಸುತ್ತಿದ್ದಾರೆ ಮತ್ತು ವಿಟಮಿನ್ ಬಿ 12 ಮತ್ತು ವಿಟಮಿನ್ ಡಿ ಕೊರತೆ ಮತ್ತು ರಕ್ತಹೀನತೆಯ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಅಧ್ಯಯನಗಳು ತಿಳಿಸಿವೆ.

ಜಿಂಕ್ (Zinc)  ಮತ್ತು ಸೆಲೆನಿಯಂ ಸಹ ಅತ್ಯಗತ್ಯವಾದ ಟ್ರೇಸ್ ಖನಿಜಗಳಾಗಿವೆ. ಅನೇಕ ಜನರು ತಮ್ಮ ದೇಹದಲ್ಲಿ, ವಿಶೇಷವಾಗಿ ಸಸ್ಯಾಹಾರಿಗಳು ಅವುಗಳನ್ನು ಹೊಂದಿರೋದಿಲ್ಲ. ಚೆನ್ನಾಗಿ ಕೆಲಸ ಮಾಡಲು, ದೇಹದಲ್ಲಿ ಅಗತ್ಯ ಮಟ್ಟದ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರೋದು ಅತ್ಯಗತ್ಯ ಮತ್ತು ವಯಸ್ಸು ಹೆಚ್ಚಾದಂತೆ, ಅವುಗಳ ಪ್ರಮಾಣವು ಜೀವನದ ಪ್ರತಿಯೊಂದು ಹಂತದಲ್ಲೂ ಅಗತ್ಯ.

ವಿಟಮಿನ್ಸ್ ಮತ್ತು ಮಿನರಲ್ಸ್ (Minerals) ಯಾರಿಗೆ ಬೇಕು?

ವಿಟಮಿನ್ಸ್ ಮತ್ತು ಮಿನರಲ್ಸ್‌ಗಳ ಕೊರತೆಯಿಂದ ಹೆಚ್ಚಿನ ಅಪಾಯದಲ್ಲಿರುವ ಜನರಲ್ಲಿ ಗರ್ಭಿಣಿಯರು, ವಯಸ್ಸಾದವರು ಮತ್ತು ದೀರ್ಘ ಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರು ಸೇರಿದ್ದಾರೆ. ಉದಾಹರಣೆಗೆ, ಮಧುಮೇಹ ಹೊಂದಿರುವ ಜನರು ವಿಟಮಿನ್ ಬಿ 12, ಸೆಲೆನಿಯಂ ಮತ್ತು ಕ್ರೋಮಿಯಂ ಪೂರಕಗಳಿಂದ ಪ್ರಯೋಜನ ಪಡೆಯುತ್ತಾರೆ. ಆದ್ದರಿಂದ, ಪೌಷ್ಠಿಕಾಂಶದ ಪ್ರಯೋಜನಗಳಿಗಾಗಿ ಸೂಕ್ತವಾದ ಮಲ್ಟಿವಿಟಮಿನ್ ಸಪ್ಲಿಮೆಂಟ್ಸ್ ತೆಗೆದುಕೊಳ್ಳೋದು ಅಗತ್ಯ.

ರಕ್ತ(Blood) ಮತ್ತು ಶಕ್ತಿಯನ್ನು ಹೆಚ್ಚಿಸಲು ಅಗತ್ಯವಿರುವ ಪೋಷಕಾಂಶಗಳು

ನರ್ವಸ್ ಸಿಸ್ಟಮ್ಮನ್ನು ಆರೋಗ್ಯಕರವಾಗಿಡಲು ಮತ್ತು ದೇಹವನ್ನು ಶಕ್ತಿಯುತವಾಗಿಡಲು, ಸೂಕ್ಷ್ಮ ಪೋಷಕಾಂಶಗಳ ಗರಿಷ್ಠ ಮಟ್ಟ ಕಾಪಾಡಿಕೊಳ್ಳೋದು ಬಹಳ ಮುಖ್ಯ. ವಿಟಮಿನ್ ಬಿ 9 (ಫೋಲಿಕ್ ಆಸಿಡ್), ವಿಟಮಿನ್ ಬಿ 12 (ಕೊಬಾಲಮೈನ್) ಮತ್ತು ವಿಟಮಿನ್ ಬಿ 6 (ಪಿರಿಡಾಕ್ಸಿನ್) ನಂತಹ ಬಿ ಗುಂಪಿನ ವಿಟಮಿನ್ಸ್ ಆಹಾರದಿಂದ ಶಕ್ತಿ ಬಿಡುಗಡೆ ಮಾಡಲು, ಆರೋಗ್ಯಕರ ಕೆಂಪು ರಕ್ತ ಕಣಗಳ ರಚನೆಗೆ, ಚರ್ಮ ಮತ್ತು ನರ್ವಸ್ ಸಿಸ್ಟಮ್ಮನ್ನು ಆರೋಗ್ಯಕರವಾಗಿಡಲು ಅತ್ಯಗತ್ಯ.

ಇಮ್ಮ್ಯೂನಿಟಿ ಸಿಸ್ಟಮ್ ನ(Immunity system) ಶಕ್ತಿ  ಹೆಚ್ಚಿಸಲು ವಿಟಮಿನ್ಸ್ ಅತ್ಯಗತ್ಯ

ಕೆಲವು ವಿಟಮಿನ್ಸ್ ಮತ್ತು ಮಿನರಲ್ಸ್ ನಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ರಕ್ಷಿಸುತ್ತವೆ. ಯಾವುದೇ ವಿಟಮಿನ್ ಕೊರತೆಯಿಂದಾಗಿ, ನಮ್ಮ ಇಮ್ಮ್ಯೂನ್ ಸಿಸ್ಟಮ್ ದುರ್ಬಲವಾಗಬಹುದು, ಇದರಿಂದ ನಮ್ಮ ದೇಹವು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತೆ ಮತ್ತು ಆ ಸಮಯದಲ್ಲಿ ಸೋಂಕಿಗೆ (Infection) ಸುಲಭವಾಗಿ ಬಲಿಯಾಗಬಹುದು.

ಪೋಷಕಾಂಶದ ಕೊರತೆಯ ಅಡ್ಡಪರಿಣಾಮಗಳು

ಸೂಕ್ಷ್ಮ ಪೋಷಕಾಂಶಗಳ ಕೊರತೆಯು ಹಸಿವಿನ ಕೊರತೆ, ಆಲಸ್ಯ, ಡೈಜೆಸ್ಟಿವ್ ಸಿಸ್ಟಮ್ ಫಂಕ್ಷನಿಂಗ್, ಮನಸ್ಥಿತಿಯ ಏರಿಳಿತಗಳು, ಏಕಾಗ್ರತೆಯ ಕೊರತೆ, ಕೂದಲು ಉದುರುವಿಕೆ(Hair fall), ದೇಹ ಮರಗಟ್ಟುವಿಕೆ ಮತ್ತು ದೇಹದಲ್ಲಿ ದೀರ್ಘಕಾಲದ ನೋವು ಅಥವಾ ಬಿಗಿತದಂತಹ ಅನೇಕ ಕೆಟ್ಟ ರೋಗಲಕ್ಷಣಗಳಿಗೆ ಕಾರಣವಾಗಬಹುದು. 

ಈ ಸ್ಪಷ್ಟ ರೋಗಲಕ್ಷಣಗಳ ಹೊರತಾಗಿ, ವಿಟಮಿನ್ಸ್ ಮತ್ತು ಮಿನರಲ್ಸ್ (Vitamins and minerals) ಕೊರತೆಯಿಂದಾಗಿ, ದೇಹದಲ್ಲಿ ದೈಹಿಕ ಶಕ್ತಿಯ ಮಟ್ಟ, ಮಾನಸಿಕ ಮಟ್ಟದಲ್ಲಿ ಸ್ಪಷ್ಟತೆಯ ಕೊರತೆ ಮತ್ತು ಪ್ರೊಡಕ್ಟಿವಿಟಿ ಕೊರತೆಯಂತಹ ಅಷ್ಟು ಸುಲಭವಾಗಿ ಗೋಚರಿಸದ ಅನೇಕ ಬದಲಾವಣೆಗಳು ಸಹ ಕಂಡು ಬರುತ್ತವೆ. ಅವುಗಳ ಬಗ್ಗೆ ಎಚ್ಚರದಿಂದಿರಬೇಕು.

ಮಲ್ಟಿವಿಟಮಿನ್ಸ್(Multi vitamins) ಆರೋಗ್ಯಕ್ಕೆ ಪ್ರಯೋಜನಕಾರಿ

ಈ ಕೊರತೆಯನ್ನು ಹೆಚ್ಚು ಕಾಲ ನಿರ್ಲಕ್ಷಿಸಿದಷ್ಟೂ, ಅದರ ರೋಗಲಕ್ಷಣಗಳು ಹೆಚ್ಚು ತೀವ್ರವಾಗುತ್ತವೆ. ವೈದ್ಯರನ್ನು ಸಂಪರ್ಕಿಸಿದ ನಂತರ ಮಲ್ಟಿವಿಟಮಿನ್ ಕೋರ್ಸ್ ಪ್ರಾರಂಭಿಸೋದು ಉತ್ತಮ. ಮಲ್ಟಿವಿಟಮಿನ್ ಸಪ್ಪ್ಲೆಮೆಂಟ್ಸ್  ಹೆಚ್ಚಾಗಿ ಔಷಧಿಯಾಗಿ ಲಭ್ಯವಿರುತ್ತವೆ, ಇದನ್ನು ನಾವು ಸುಲಭವಾಗಿ ನಮ್ಮ ದೈನಂದಿನ ಜೀವನದ ಒಂದು ಭಾಗವನ್ನಾಗಿ  ಮಾಡಬಹುದು.

ಇದನ್ನು ನೆನಪಿನಲ್ಲಿಡಿ

ಹೆಚ್ಚಿನ ಸಪ್ಪ್ಲೆಮೆಂಟ್ಸ್ (Supplements)ಆರೋಗ್ಯಕ್ಕೆ ಅಪಾಯಕಾರಿಯಲ್ಲದಿದ್ದರೂ, ಅವುಗಳನ್ನು ಸರಿಯಾಗಿ ಸೇವಿಸದಿರೋದು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ ವೈದ್ಯರನ್ನು ಸಂಪರ್ಕಿಸುವ ಮೂಲಕ ಅದರ ಅಪಾಯವನ್ನು ನೀವು ಅರ್ಥಮಾಡಿಕೊಳ್ಳಿ ಮತ್ತು ನಿಮ್ಮ ವಯಸ್ಸು ಮತ್ತು ಅಗತ್ಯಗಳ ಆಧಾರದ ಮೇಲೆ ಅತ್ಯುತ್ತಮ ಸಪ್ಪ್ಲೆಮೆಂಟ್ಸ್  ಆಯ್ಕೆ ಮಾಡಿ.

click me!