ಡೆಂಗ್ಯೂ : ಈ ರೋಗಲಕ್ಷಣ ಕಾಣಿಸಿಕೊಂಡ್ರೆ ಎಚ್ಚರ

First Published | Sep 13, 2021, 6:04 PM IST

ಮಳೆಗಾಲದಲ್ಲಿ ಅತಿಯಾಗಿ ಕಾಡುವ ಸೊಳ್ಳೆಗಳಿಂದ ಬರುವಂತಹ ಕೆಲವೊಂದು ಅಪಾಯಕಾರಿ ಜ್ವರಗಳಲ್ಲಿ ಡೆಂಗ್ಯೂ ಕೂಡ ಒಂದು. ಈ ಜ್ವರ ಕಾಣಿಸಿಕೊಂಡರೆ ಕೂಡಲೇ ಔಷಧಿ ಪಡೆದುಕೊಳ್ಳುವುದು ಅಗತ್ಯ. ಇದಕ್ಕೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ಮಾರಣಾಂತಿಕವಾಗಬಲ್ಲದು. ಪ್ರತಿ ವರ್ಷವೂ ನಮ್ಮ ದೇಶದಲ್ಲಿ ಡೆಂಗ್ಯೂ ಜ್ವರದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುವರು.
 

ಸೆಪ್ಟೆಂಬರ್ ಆರಂಭವಾಗುತ್ತಿದ್ದಂತೆಯೇ ಡೆಂಗ್ಯೂ ಹರಡುವುದನ್ನು ಗಮನಿಸಲಾಗುತ್ತಿದೆ. ನಗರ ಪ್ರದೇಶಗಳ ಹೆಚ್ಚಿನ ಸಂಖ್ಯೆಯ ಡೆಂಗ್ಯೂ ರೋಗಿಗಳು ಕಾಣಿಸಿಕೊಳ್ಳುತ್ತಾರೆ. ಪರಿಸ್ಥಿತಿ ಏನೆಂದರೆ, ಅನೇಕ ನಗರಗಳಲ್ಲಿ, ಆಸ್ಪತ್ರೆಗಳಲ್ಲಿ ಡೆಂಗ್ಯೂ ರೋಗಿಗಳಿಗೆ ಸ್ಥಳ ಉಳಿದಿಲ್ಲ. ಅನೇಕ ಪ್ರದೇಶಗಳಲ್ಲಿ, ಡೆಂಗ್ಯೂ ರೋಗಿಗಳು ಪ್ರತಿ ಮನೆಯಲ್ಲೂ ಇದ್ದಾರೆ. ಆದುದರಿಂದ ಕೂಡಲೇ ಎಚ್ಚೆತ್ತುಕೊಳ್ಳುವುದು ಮುಖ್ಯ. 

ಮಳೆಗಾಲದಲ್ಲಿ ಅತಿಯಾಗಿ ಕಾಡುವ ಅರೋಗ್ಯ ಸಮಸ್ಯೆ ಡೆಂಗ್ಯೂ. ರೋಗಿಗಳಿಗೆ ತೀವ್ರ ತಲೆನೋವು, ಸ್ನಾಯುಗಳು, ಕೀಲು ನೋವು ಸಹ ಜನರನ್ನು ಕಾಡಬಹುದು. ತೀವ್ರ ಜ್ವರ, ದೇಹದಲ್ಲಿ ಚಳಿ, ಅತಿಯಾದ ಬೆವರು, ನಿಶ್ಯಕ್ತಿ, ಆಯಾಸ, ಹಸಿವಾಗದಿರುವುದು, ಒಸಡುಗಳಲ್ಲಿ ರಕ್ತಸ್ರಾವ ಮತ್ತು ವಾಂತಿ ಕೂಡ ಡೆಂಗ್ಯೂನ ಸಂಕೇತ ಇಂತಹ ಲಕ್ಷಣ ಕಂಡು ಬಂದ ತಕ್ಷಣ ವೈದ್ಯರ ಸಲಹೆ ಪಡೆಯುವುದನ್ನು ಮರೆಯಬೇಡಿ. 

Latest Videos


ಡೆಂಗ್ಯೂ ಜ್ವರ ಎಂದರೇನು? 
ಡೆಂಗ್ಯೂ ಜ್ವರವು ವೈರಸ್‌ನಿಂದ ಉಂಟಾಗುವ ಸೋಂಕು. ಸಮಯಕ್ಕೆ ಸರಿಯಾಗಿ ಡೆಂಗ್ಯೂ ಚಿಕಿತ್ಸೆ ಮಾಡುವುದು ಬಹಳ ಮುಖ್ಯ. ಸೊಳ್ಳೆಗಳು ಡೆಂಗ್ಯೂ ವೈರಸ್ ಅನ್ನು ಹರಡುತ್ತವೆ. ಡೆಂಗ್ಯೂ ಜ್ವರವನ್ನು 'ಮೂಳೆ ಮುರಿಯುವ ಜ್ವರ' ಎಂದೂ ಕರೆಯಲಾಗುತ್ತದೆ. 

ಇದು ತಮ್ಮ ಮೂಳೆಗಳು ಮುರಿದಂತೆ ಡೆಂಗ್ಯೂನಿಂದ ಬಳಲುತ್ತಿರುವ ಜನರಿಗೆ ತೀವ್ರ ನೋವನ್ನು ಉಂಟುಮಾಡಬಹುದು. ಡೆಂಗ್ಯೂ ಜ್ವರದ ಕೆಲವು ಲಕ್ಷಣಗಳಲ್ಲಿ ಜ್ವರ, ತಲೆನೋವು, ಚರ್ಮದ ಮೇಲೆ ಸಿಡುಬು, ದದ್ದು ಮತ್ತು ಸ್ನಾಯು ಮತ್ತು ಕೀಲು ನೋವು ಸೇರಿವೆ. 

ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
ಡೆಂಗ್ಯೂ ಜ್ವರವನ್ನು ತಪ್ಪಿಸಲು, ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು, ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಬಿಡಬಾರದು. ಯಾರಿಗಾದರೂ ಡೆಂಗ್ಯೂ ಜ್ವರ ಕಾಣಿಸಿಕೊಂಡರೆ, ಅವರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಈ ಸಂದರ್ಭದಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಮನೆಮದ್ದುಗಳನ್ನು ಅವಲಂಬಿಸಬೇಡಿ. ಯಾಕೆಂದರೆ ರೋಗ ಉಲ್ಬಣಗೊಂಡರೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. 

ಡೆಂಗ್ಯೂ ಸೊಳ್ಳೆಯಿಂದ ಹರಡುವ ವೈರಲ್ ರೋಗವಾಗಿದೆ. ಈಡಿಸ್ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಉಂಟಾಗುತ್ತದೆ. ಈ ಸೊಳ್ಳೆಗಳು ಶುದ್ಧ ನೀರಿನಲ್ಲಿ ಹೆಚ್ಚು ಅಭಿವೃದ್ಧಿ ಹೊಂದುತ್ತವೆ ಮತ್ತು ಬೆಳಿಗ್ಗೆ ಹೆಚ್ಚಿನ ಜನರನ್ನು ಕಚ್ಚುತ್ತವೆ. ಆರೋಗ್ಯ ತಜ್ಞರ ಪ್ರಕಾರ, ಈಡ್ಸ್ ಸೊಳ್ಳೆ ಕಚ್ಚಿದ ಸುಮಾರು 3 ರಿಂದ 5 ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 

ಡೆಂಗ್ಯೂನ ಲಕ್ಷಣಗಳು 
ರೋಗಿಗಳಿಗೆ ತೀವ್ರ ತಲೆನೋವು, ಸ್ನಾಯು ನೋವು ಮತ್ತು ಕೀಲು ನೋವು ಇರಬಹುದು. ಇದರ ಜೊತೆಗೆ ತೀವ್ರ ಜ್ವರ, ದೇಹದಲ್ಲಿ ಚಳಿ, ಅತಿಯಾದ ಬೆವರು, ನಿಶ್ಯಕ್ತಿ, ಆಯಾಸ, ಹಸಿವಾಗದಿರುವುದು, ಒಸಡುಗಳಲ್ಲಿ ರಕ್ತಸ್ರಾವ ಮತ್ತು ವಾಂತಿ ಕೂಡ ಡೆಂಗ್ಯೂನ ಸಂಕೇತವಾಗಬಹುದು.

ಕೆಲವರು ಕಣ್ಣುಗಳ ಬಳಿ ನೋವು, ಗ್ರಂಥಿಗಳಲ್ಲಿ ಊತ, ಕೆಂಪು ದದ್ದುಗಳನ್ನು ಸಹ ಕಾಣಿಸಿಕೊಳ್ಳುತ್ತದೆ. ಡೆಂಗ್ಯೂ ರಕ್ತದಲ್ಲಿ ಪ್ಲೇಟ್ ಲೆಟ್ಸ್ ಕೊರತೆಯನ್ನು ಉಂಟುಮಾಡುತ್ತದೆ. ಇದರಿಂದ ಉಸಿರಾಟದ ತೊಂದರೆ, ನರ ದೌರ್ಬಲ್ಯ, ವಾಂತಿ, ಮೂತ್ರದಲ್ಲಿ ರಕ್ತಸ್ರಾವ ಮತ್ತು ಕಿಬ್ಬೊಟ್ಟೆ ನೋವು ಸಹ ಉಂಟಾಗಬಹುದು.

ಡೆಂಗ್ಯೂ ತಡೆಗಟ್ಟುವುದು ಹೇಗೆ?
ಡೆಂಗ್ಯೂ ಅಪಾಯವನ್ನು ಕಡಿಮೆ ಮಾಡಲು ನೀರನ್ನು ಸಂಗ್ರಹಿಸಲು ಬಿಡಬೇಡಿ, ಕೂಲರ್ ಮತ್ತು ಬಕೆಟ್‌ಗಳಲ್ಲಿ ನೀರನ್ನು ಸಂಗ್ರಹಿಸಬೇಡಿ. ಖಾಲಿ ಪಾತ್ರೆಯಲ್ಲಿ ನೀರನ್ನು ಇಡಬೇಡಿ. ಇಡೀ ದೇಹವನ್ನು ಆವರಿಸುವ ಬಟ್ಟೆಗಳನ್ನು ಧರಿಸಿ. ರಾತ್ರಿ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಿ. ಡೆಂಗ್ಯೂ ರೋಗದ ಲಕ್ಷಣಗಳೆಂದರೆ ದೇಹ ನೋವು, ತೀವ್ರ ಜ್ವರ, ತಲೆ ತಿರುಗುವಿಕೆ, ವಾಂತಿ, ದೌರ್ಬಲ್ಯ ಇತ್ಯಾದಿ. ಯಾರಾದರೂ ಈ ರೋಗಲಕ್ಷಣಗಳನ್ನು ಗಮನಿಸಿದರೆ,  ವೈದ್ಯರನ್ನು ಸಂಪರ್ಕಿಸಿ. 

ಡೆಂಗ್ಯೂನಿಂದ ಬಳಲುತ್ತಿರುವ ವ್ಯಕ್ತಿಯನ್ನು ಸೊಳ್ಳೆ ಕಚ್ಚಿದ ನಂತರ ಅದೇ ಸೊಳ್ಳೆ ಬೇರೊಬ್ಬರನ್ನು ಕಚ್ಚಿದರೆ, ಡೆಂಗ್ಯೂ ಉಂಟಾಗುವ ಸಾಧ್ಯತೆ ಇರಬಹುದು. ಆದ್ದರಿಂದ ಡೆಂಗ್ಯೂ ಪೀಡಿತರು ಕೂಡ ಪೂರ್ಣ ಬಟ್ಟೆ ಧರಿಸಿ, ಅದು ಹರಡದಂತೆ ತಡೆಯಬೇಕು. ಮನೆಗಳಲ್ಲಿ ಹಗಲು ಹೊತ್ತು ಸಹ ಸೊಳ್ಳೆ ಬಾರದಂತೆ ತಡೆಯಲು ಸೊಳ್ಳೆ ಬತ್ತಿ ಬಳಸಬಹುದು, ಅಥವಾ ಮನೆಯ ಕಿಟಕಿಗಳಿಗೆ ಮೆಶ್‌ಗಳನ್ನು ಹಾಕಬಹುದು. ಇದರಿಂದ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಕಡಿಮೆ. 

click me!