ತುಂಬಾ ಬಿಸಿಯಾಗಿರೋ ನೀರು ಕುಡಿತೀರಾ? ಕಿಡ್ನಿ ಸ್ಟೋನ್ ಆಗಬಹುದು ಹುಷಾರ್ !

First Published | Feb 16, 2024, 5:04 PM IST

ಕಡಿಮೆ ಮಾತ್ರವಲ್ಲ, ಹೆಚ್ಚು ಬಿಸಿನೀರು ಕುಡಿಯುವುದು ಸಹ ಅಪಾಯಕಾರಿ, ಹೌದು ನೀವು ಹೆಚ್ಚು ಬಿಸಿ ನೀರು ಕುಡಿದ್ರೆ, ಮೂತ್ರಪಿಂಡಗಳಲ್ಲಿ ದಪ್ಪ ಕಲ್ಲುಗಳು ರೂಪುಗೊಳ್ಳುತ್ತವೆ ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಇನ್ನೊಮ್ಮೆ ಬಿಸಿನೀರು ಕುಡಿಯುವಾಗ ಯೋಚಿಸಿ… 

ಚಳಿಗಾಲದಲ್ಲಿ, ಹೆಚ್ಚು ಬಾಯಾರಿಕೆ ಆಗೋದೆ ಇಲ್ಲ, ಇದರಿಂದಾಗಿ ನಾವು ನೀರಿನ ಕುಡಿಯೋದನ್ನೆ ಕಡಿಮೆ ಮಾಡುತ್ತೇವೆ. ಆದರೆ ಇದರಿಂದಾಗಿ ಎಷ್ಟೊಂದು ಸಮಸ್ಯೆ ಅನುಭವಿಸಬೇಕಾಗಿ ಬರುತ್ತೆ ಗೊತ್ತ?, ನೀರಿನ ಕೊರತೆಯಿಂದಾಗಿ ನಮ್ಮ ದೇಹವು ಕ್ರಮೇಣ ನಿರ್ಜಲೀಕರಣಗೊಳ್ಳಲು (dehydration)ಪ್ರಾರಂಭಿಸುತ್ತದೆ, ಇದು ಮೂತ್ರಪಿಂಡದ ಕಾಯಿಲೆಯಿಂದ ಮೆದುಳಿನವರೆಗೂ ಪರಿಣಾಮ ಬೀರುತ್ತದೆ.

ನೀರು ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಗತ್ಯವಾದ ಒಂದು ಅಂಶವಾಗಿದೆ. ನೀರು ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಕಡಿಮೆ ನೀರು ಇದ್ದರೆ, ಮೂತ್ರವು ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ, ಇದರಿಂದಾಗಿ ಮೂತ್ರಪಿಂಡಗಳು ದೇಹದಿಂದ ವಿಷವನ್ನು ಸರಿಯಾಗಿ ತೆಗೆದುಹಾಕಲು ಸಾಧ್ಯವಾಗೋದಿಲ್ಲ.  ಮೂತ್ರಪಿಂಡವು ನಮ್ಮ ದೇಹದಿಂದ ವಿಷ ಮತ್ತು ರಕ್ತವನ್ನು ಫಿಲ್ಟರ್ ಮಾಡುತ್ತೆ. ಹಾಗಾಗಿ ಮೂತ್ರಪಿಂಡಗಳನ್ನು ಆರೋಗ್ಯವಾಗಿಡೋದು ನಮ್ಮ ಆದ್ಯ ಕರ್ತವ್ಯವಾಗಿದೆ. 

Latest Videos


ನೀರು ಕುಡಿಯದಿರುವುದರಿಂದ ಕಿಡ್ನಿ ಸ್ಟೋನ್: ನೀವು ದೀರ್ಘಕಾಲದವರೆಗೆ ಕಡಿಮೆ ನೀರು ಕುಡಿಯುತ್ತಿದ್ದರೆ, ಮೂತ್ರಪಿಂಡಗಳು ಹೆಚ್ಚು ಶ್ರಮಿಸಬೇಕಾಗುತ್ತದೆ, ಇದು ಕಿಡ್ನಿ (kidney) ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ನೀರು ಕುಡಿಯೋದು ಕಡಿಮೆ ಮಾಡಿದ್ರೆ, ಕ್ಯಾಲ್ಸಿಯಂ ಮೂತ್ರಪಿಂಡಗಳಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ, ಇದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳು (kidney stone) ರೂಪುಗೊಳ್ಳುತ್ತೆ. ಈ ಕಲ್ಲುಗಳಿಂದಾಗಿ, ಹೊಟ್ಟೆ, ಮೂತ್ರಪಿಂಡಗಳ ಬದಿಯಲ್ಲಿ ನೋವು ಕಾಣಿಸಿಕೊಳ್ಳುತ್ತೆ. 
 

ಕಲ್ಲುಗಳನ್ನು ತೆಗೆದುಹಾಕಲು ಪರಿಹಾರ: ಮೂತ್ರಪಿಂಡದಲ್ಲಿ ಈಗಾಗಲೇ ಸಣ್ಣ ಗಾತ್ರದ ಕಲ್ಲುಗಳನ್ನು ಹೊಂದಿರುವ ಜನರಿಗೆ ಹೆಚ್ಚು ನೀರು ಕುಡಿಯಲು ಸಲಹೆ ನೀಡಲಾಗುತ್ತದೆ, ಇದರಿಂದ ಆ ಕಲ್ಲುಗಳ ಬೆಳವಣಿಗೆಯನ್ನು ನಿಯಂತ್ರಿಸಬಹುದು ಮತ್ತು ಮೂತ್ರದ ಹರಿವಿನೊಂದಿಗೆ ಸಣ್ಣ ಕಲ್ಲುಗಳು ಹೊರಬರುತ್ತವೆ. ಆದರೆ, ಕೆಲವು ಮೂತ್ರಪಿಂಡದ ಕಾಯಿಲೆಗಳಲ್ಲಿ, ಕಡಿಮೆ ನೀರು ಕುಡಿಯಲು ಸಲಹೆ ನೀಡಲಾಗುತ್ತದೆ. ದೇಹದಲ್ಲಿ ನೀರಿನ ಕೊರತೆಯಿಂದಾಗಿ, ನಿಮ್ಮ ರಕ್ತದೊತ್ತಡವೂ (blood pressure) ಕಡಿಮೆಯಾಗಬಹುದು.

ನೀರು ಕುಡಿಯದೇ ಇರೋದು: ದಿನಕ್ಕೆ ಕನಿಷ್ಠ 2-3 ಲೀಟರ್ ನೀರು ಕುಡಿಯಿರಿ. ಮೂತ್ರಪಿಂಡದ ಕಾರ್ಯವನ್ನು (kidney function) ಸರಿಯಾಗಿಡಲು ನೀವು ಹಾಲು, ಎಳನೀರು, ಜ್ಯೂಸ್ ಮತ್ತು ಹಣ್ಣುಗಳನ್ನು ಸಹ ಸೇವಿಸಬಹುದು. ಈ ಆಹಾರಗಳು ನಿಮ್ಮನ್ನು ಹೈಡ್ರೇಟ್ ಮಾಡಲು ಸಹ ಸಹಾಯ ಮಾಡುತ್ತವೆ.

ಬಿಸಿನೀರು ಕುಡಿಯುವುದನ್ನು ತಪ್ಪಿಸಿ: ದೇಹದ 55-65 ಪ್ರತಿಶತದಷ್ಟು ನೀರು ಎಂದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಕುಡಿಯುವ ನೀರು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಗಿಡುತ್ತದೆ ಆದರೆ, ಬಿಸಿ ನೀರು (hot water)ಕುಡಿದರೆ ವಿರುದ್ಧ ಪರಿಣಾಮ ಬೀರುತ್ತೆ. ನೀವು ಹೆಚ್ಚು ಬಿಸಿ ನೀರನ್ನು ಸೇವಿಸಿದರೆ ನಿರ್ಜಲೀಕರಣ ಉಂಟಾಗುವ ಸಾಧ್ಯತೆ ಇದೆ, ಇದರಿಂದ ಮತ್ತೆ ಕಿಡ್ನಿ ಸ್ಟೋನ್ ಉಂಟಾಗಬಹುದು. 

ಮೂತ್ರಪಿಂಡಗಳ ಮೇಲೆ ಒತ್ತಡ ಬೀರುತ್ತೆ; ದೇಹದಿಂದ ವಿಷವನ್ನು ತೆಗೆದುಹಾಕಲು ಮೂತ್ರಪಿಂಡವು ಕೆಲಸ ಮಾಡುತ್ತದೆ. ಆದರೆ, ಬಿಸಿ ನೀರಿನಿಂದ ನಿರ್ಜಲೀಕರಣ ಸಂಭವಿಸಿದಾಗ, ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಮೂತ್ರಪಿಂಡಗಳ ಮೇಲಿನ ಒತ್ತಡವನ್ನು (stress on kidney) ಹೆಚ್ಚಿಸುತ್ತದೆ ಮತ್ತು ದೇಹದ ಇತರ ಭಾಗಗಳ ಮೇಲೂ ಅದರ ಪರಿಣಾಮ ಹೆಚ್ಚಾಗುತ್ತದೆ. ಆದ್ದರಿಂದ, ಹೆಚ್ಚಿನ ಪ್ರಮಾಣದ ಬಿಸಿ ನೀರು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಹಾಗಾಗಿ ಹೆಚ್ಚು ಬಿಸಿ ನೀರು ಕುಡಿಯುವ ತಪ್ಪು ಸಹ ಮಾಡಬೇಡಿ.

click me!