
ಬೆಂಗಳೂರು (ನ.15): ದುಷ್ಕರ್ಮಿಯೋರ್ವ ದೇವಸ್ಠಾನಕ್ಕೆ ನುಗ್ಗಿ ಲಕ್ಷ್ಮೀ ಭುವನೇಶ್ವರಿ ದೇವಿ ವಿಗ್ರಹ ವಿರೂಪಗೊಳಿಸಿ ವಿಕೃತಿ ಮೆರೆದ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ದೇಗುಲಕ್ಕೆ ನುಗ್ಗಿರುವ ದುಷ್ಕರ್ಮಿ. ಟಿಶರ್ಟ್‌ನಿಂದ ಮುಖ ಮುಚ್ಚಿಕೊಂಡು ದೇವಸ್ಥಾನದೊಳಕ್ಕೆ ನುಗ್ಗಿ ಕಲ್ಲಿನಿಂದ ದೇವಿಯ ಮೂರ್ತಿ ವಿರೂಪಗೊಳಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶ್ರದ್ಧಾಳನ್ನು 35 ತುಂಡು ಮಾಡಿದ್ದ ಅಫ್ತಾಬ್, ಬಿಷ್ಣೋಯಿ ಗ್ಯಾಂಗ್ ಹಿಟ್‌ಲಿಸ್ಟಲ್ಲಿ!
ಘಟನೆ ಮಾಹಿತಿ ತಿಳಿದು ಸ್ಥಳೀಯರು, ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರ ವಿಗ್ರಹ ವಿರೂಪಗೊಳಿಸಿದ ದುಷ್ಕರ್ಮಿಗಳ ಬಂಧನಕ್ಕೆ ಹಿಂದೂ ಸಂಘಟನೆಗಳು ಆಗ್ರಹಿಸಿದ್ದು, ಘಟನೆ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾದ ಭಕ್ತರು.
ಮನೆಮುಂದೆ ಕ್ಯಾಬ್ ನಿಲ್ಲಿಸಿದ್ದನ್ನ ಪ್ರಶ್ನಿಸಿದ್ದಕ್ಕೆ ಹಿರಿಯ ವಕೀಲನಿಗೆ ಚಾಕು ಇರಿತ!
ಮನೆ ಮುಂದೆ ಕ್ಯಾಬ್ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಜಗಳ ತೆಗೆದು ಹಿರಿಯ ವಕೀಲರೊಬ್ಬರಿಗೆ ಚಾಕು ಇರಿದ ಆರೋಪದ ಮೇರೆಗೆ ಕ್ಯಾಬ್ ಚಾಲಕನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ನಾಗರಬಾವಿ 9ನೇ ಹಂತದ ನಿವಾಸಿ ವಿ.ದಳಪತಿ (70) ಅವರು ಖಾಸಗಿ ಆಸ್ಪತ್ಪೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೃತ್ಯ ಎಸಗಿ ಪರಾರಿಯಾಗಿದ್ದ ನಾಗರಬಾವಿ 2ನೇ ಹಂತದ ನಿವಾಸಿ ರಾಘವೇಂದ್ರನನ್ನು ಬಂಧಿಸಿ ಗುರುವಾರ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
ಅಪ್ರಾಪ್ತ ಪತ್ನಿ ಒಪ್ಪಿಗೆ ಮೇಲೆ ಸಂಬಂಧ ಬೆಳೆಸಿದ್ರೂ ಅದು ಬಲಾತ್ಕಾರ, ಕೋರ್ಟ್ ಮಹತ್ವದ ತೀರ್ಪು
ಹಿರಿಯ ವಕೀಲ ದಳಪತಿ ಅವರ ಮನೆ ಮುಂದೆ ಬುಧವಾರ ಮಧ್ಯಾಹ್ನ ರಾಘವೇಂದ್ರ ಕ್ಯಾಬ್ ನಿಲ್ಲಿಸಿದ್ದ. ಆಗ ಕ್ಯಾಬ್ ತೆಗೆಯುವಂತೆ ಚಾಲಕನಿಗೆ ದಳಪತಿ ಅವರ ಸೊಸೆ ಹೇಳಿದ್ದಾರೆ. ಇದಕ್ಕೆ ಆಕ್ಷೇಪಿಸಿ ವಕೀಲರ ಕುಟುಂಬದವರ ಜತೆ ಆತ ಮಾತಿನ ಚಕಮಕಿ ನಡೆಸಿದ್ದಾನೆ. ಅದೇ ವೇಳೆ ನ್ಯಾಯಾಲಯದ ಕಲಾಪ ಮುಗಿಸಿಕೊಂಡು ಮಧ್ಯಾಹ್ನ 2 ಗಂಟೆಗೆ ಮನೆಗೆ ಮರಳಿದ ದಳಪತಿ ಅವರು, ತಮ್ಮ ಮನೆ ಮುಂದೆ ಕ್ಯಾಬ್ ಚಾಲಕ ಜತೆ ಕುಟುಂಬದವರು ಜಗಳವಾಡುತ್ತಿದ್ದನ್ನು ನೋಡಿ ಮಧ್ಯ ಪ್ರವೇಶಿಸಿದ್ದಾರೆ. ಈ ಹಂತದಲ್ಲಿ ವಕೀಲರ ವಿರುದ್ಧವೇ ತಿರುಗಿ ಬಿದ್ದ ರಾಘವೇಂದ್ರ, ಏಕಾಏಕಿ ಚಾಕುವಿನಿಂದ ದಳಪತಿ ಅವರಿಗೆ ಇರಿದು ಪರಾರಿಯಾಗಿದ್ದಾನೆ. ಕೂಡಲೇ ವಕೀಲರನ್ನು ಅವರ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ