ಆಲ್ಕಲೈನ್ ನೀರಲ್ಲಿ ಕಿಡ್ನಿ ಕಲ್ಲಾಗಲ್ಲ ಅಂತಾರಲ್ಲ, ಅದು ನಿಜವಾಗಲೂ ಸತ್ಯವೇ?
ಕುಡಿಯುವ ನೀರು ಶುದ್ಧವಾಗಿರಬೇಕು ಜತೆಗೆ, ಆಲ್ಕಲೈನ್ ಆಗಿರಬೇಕು ಎನ್ನುವ ಮಾತನ್ನು ಇತ್ತೀಚಿನ ದಿನಗಳಲ್ಲಿ ಕೇಳುತ್ತಿದ್ದೇವೆ. ಆದರೆ, ಆಲ್ಕಲೈನ್ ನೀರಿನಲ್ಲಿ ಕಿಡ್ನಿಯ ಕಲ್ಲುಗಳನ್ನು ತಡೆಯುವಷ್ಟು ಪ್ರಮಾಣದ ಪಿಎಚ್ ಮಟ್ಟವಿಲ್ಲ ಎಂದು ಹೊಸ ಅಧ್ಯಯನವೊಂದು ಹೇಳುತ್ತಿದೆ.
ಕುಡಿಯುವ ನೀರಿನ ಬಗ್ಗೆ ಸಾಕಷ್ಟು ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಕುಡಿಯುವ ನೀರು ಬರೀ ಶುದ್ಧವಾಗಿದ್ದರಷ್ಟೇ ಸಾಲದು, ಅದು ಕೆಲ ರೀತಿಯ ಮಿನರಲ್ಸ್ ನಿಂದ ಕೂಡಿರಬೇಕು, ಆಲ್ಕಲೈನ್ ನೀರಾಗಿರಬೇಕು ಅಂದರೆ, ಅದರಲ್ಲಿ ಪಿಎಚ್ ಮಟ್ಟ ಹೆಚ್ಚಿರಬೇಕು, ಆಗ ಮಾತ್ರ ಆರೋಗ್ಯಕ್ಕೆ ಅನುಕೂಲ ಎನ್ನುವ ಮಾತು ಕೇಳಿಬರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸಾಮಾನ್ಯ ಜನ ಕೂಡ ಇಂತಹ ಅಧ್ಯಯನಗಳಿಗೆ ತೆರೆದ ಕಿವಿಯಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಲ್ಕಲೈನ್ ನೀರಿನ ಗುಣಮಟ್ಟದ ಕುರಿತು ಸಾಕಷ್ಟು ಅಧ್ಯಯನಗಳು ನಡೆದವು. ಆಲ್ಕಲೈನ್ ನೀರಿನಲ್ಲಿ ಸಾಮಾನ್ಯ ನೀರಿಗಿಂತ ಸ್ವಲ್ಪ ಹೆಚ್ಚು ಪಿಎಚ್ ಮಟ್ಟ ಇರುತ್ತದೆ. ಸಾಮಾನ್ಯ ನೀರಿನಲ್ಲಿ ಸರಿಸುಮಾರು ೭.೫ ಪಿಎಚ್ ಮಟ್ಟವಿದ್ದರೆ ಆಲ್ಕಲೈನ್ ನೀರಿನಲ್ಲಿ ೧೦ರವರೆಗೂ ಇರುತ್ತದೆ. ಪಿಎಚ್ ಮಟ್ಟ ಹೆಚ್ಚಾಗಿರುವ ನೀರು ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಡೆಯುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಆಲ್ಕಲೈನ್ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಈಗ ಹೊಸ ಅಧ್ಯಯನವೊಂದು ಇದರಲ್ಲಿರುವ ಪಿಎಚ್ ಮಟ್ಟ ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಡೆಯುವಷ್ಟಿಲ್ಲ ಎಂದು ಹೇಳುತ್ತಿದೆ.
ಆಲ್ಕಲೈನ್ ನೀರು (Alkaline Water) ದೇಹವನ್ನು (Body) ನಿರ್ಜಲೀಕರಣಗೊಳಿಸಲು ಬಿಡುವುದಿಲ್ಲ. ಇದು ಹಲವು ರೀತಿಯ ಯೂರಿನರಿ ಸ್ಟೋನ್ (ಯೂರಿಕ್ ಆಸಿಡ್, ಸಿಸ್ಟೈನ್) (Urinary Stone) ಆಗುವುದನ್ನು ತಡೆಗಟ್ಟುತ್ತದೆ. ಈ ಹಿಂದೆ ಒಮ್ಮೆ ಕಿಡ್ನಿಯಲ್ಲಿ ಹರಳುಗಳಾದ ಇತಿಹಾಸ ಹೊಂದಿದವರಿಗಂತೂ ಇದು ಹೆಚ್ಚು ಅನುಕೂಲಕರ ಎನ್ನಲಾಗಿತ್ತು. ಆದರೆ, ಇದೀಗ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಧ್ಯಯನವೊಂದು (Study) ಕಿಡ್ನಿ ಕಲ್ಲುಗಳಾಗುವ ಸಮಸ್ಯೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದು, ಅದರಲ್ಲಿ ಆಲ್ಕಲೈನ್ ನೀರಿನಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂದು ಹೇಳಿದೆ.
ಪುರುಷರು ಹಾಗೂ ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಿಸುತ್ತೆ ಈ ಕೆಂಪು ಹಣ್ಣು
ಅಧ್ಯಯನ ತಂಡದ ಮುಖ್ಯಸ್ಥ ರೋಶನ್ ಎಂ. ಪಟೇಲ್, ಆಲ್ಕಲೈನ್ ನೀರಿನಲ್ಲಿ ಅತ್ಯಲ್ಪ ಪ್ರಮಾಣದ ಪಿಎಚ್ (PH) ಮಟ್ಟವಿರುತ್ತದೆ. ಸಾಮಾನ್ಯ ನೀರಿಗಿಂತ ಆಲ್ಕಲೈನ್ ನೀರು ಹೆಚ್ಚು ಪಿಎಚ್ ಮಟ್ಟ ಹೊಂದಿದರೂ ಸಹ ಹರಳುಗಳು ಸೃಷ್ಟಿಯಾಗುವುದನ್ನು ತಡೆಯುವಷ್ಟು ಪ್ರಮಾಣ ಹೊಂದಿಲ್ಲ ಎಂದು ಹೇಳಿದ್ದಾರೆ. ಜರ್ನಲ್ ಆಫ್ ಯುರಾಲಜಿಯಲ್ಲಿ ಈ ಅಧ್ಯಯನ ಪ್ರಬಂಧ ವರದಿಯಾಗಿದೆ.
ಅಧಿಕ ಪಿಎಚ್ ಮಟ್ಟವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಡಾ.ಪಟೇಲ್ ತಂಡ ಹಲವು ಆಲ್ಕಲೈನ್ ನೀರಿನ ಬಾಟಲಿಗಳನ್ನು ಸಹ ಪರೀಕ್ಷೆ ನಡೆಸಿತ್ತು. ಹಾಗೆಯೇ, ಯೂರಿನರಿ ಪಿಎಚ್ ಮಟ್ಟ ಹೆಚ್ಚಿಸುವ ಪರ್ಯಾಯ (Alternative) ವಿಧಾನಗಳ ಕುರಿತಾಗಿಯೂ ಪರಿಶೀಲನೆ ಮಾಡಿತ್ತು. ಈ ಪೈಕಿ, ಅಡುಗೆ ಸೋಡಾ ಅತ್ಯುತ್ತಮ ವಿಧಾನವಾಗಿ ಗುರುತಿಸಿಕೊಂಡಿದೆ. ಅಡುಗೆ ಸೋಡಾವನ್ನು ನೀರಿಗೆ ಸೇರಿಸಿಕೊಂಡು ಕುಡಿಯುವುದು ಹೆಚ್ಚು ಪರಿಣಾಮಕಾರಿ ಹಾಗೂ ಕಡಿಮೆ ವೆಚ್ಚದ ವಿಧಾನವೂ ಆಗಿದೆ ಎಂದು ಹೇಳಲಾಗಿದೆ.
ಕುಡಿಯೋಕೆ ಯಾವ ನೀರು?
ಹಾಗಿದ್ದರೆ ಯಾವ ನೀರು ಕುಡಿಯಲು ಉತ್ತಮ ಎನ್ನುವ ಪ್ರಶ್ನೆ ಮತ್ತೆ ಎಲ್ಲರೆದುರು ಧುತ್ತೆಂದು ನಿಲ್ಲುತ್ತದೆ. ಯೋಚನೆ ಬೇಡ. ನಿಮ್ಮಲ್ಲಿ ಬಾವಿಯಿದೆಯೇ? ಬಾವಿಯ ನೀರನ್ನು ನಿಸ್ಸಂಶಯದಿಂದ ಕುಡಿಯಿರಿ. ಗ್ರಾಮಗಳಲ್ಲಿರುವ ತೆರೆದ ಬಾವಿಯ (Well) ನೀರು ಕುಡಿಯಲು ಉತ್ತಮ, ಆದರೆ ಬಾವಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅಷ್ಟೇ. ಒಂದೊಮ್ಮೆ ನೀವು ಬೋರ್ ನೀರನ್ನು ಬಳಕೆ ಮಾಡುತ್ತೀರಿ ಎಂದಾದರೆ ಅದನ್ನು ಬಿಸಿಲಿಗೆ (Sunlight) ಇಟ್ಟು ಬಳಸಬೇಕು. ಇದರಿಂದ ನೀರು ಪಂಚಮಹಾಭೂತ ತತ್ವವನ್ನು ಒಳಗೊಳ್ಳುತ್ತದೆ.
ಜಂಕ್ ಫುಡ್ ಬರ್ಗರ್ ತಿನ್ಬೇಡಿ ಅಂತಾರೆ, ಆದರೆ ಇವನು ಬರ್ಗರ್ ತಿಂದು, ವರ್ಲ್ಡ್ ರೆಕಾರ್ಡ್ ಮಾಡಿದ್ದಾನೆ!
ಅಷ್ಟಕ್ಕೂ ಆಲ್ಕಲೈನ್ ನೀರಿನಿಂದ ಹಾನಿಯಂತೂ ಇಲ್ಲ
ಸಾಮಾನ್ಯ ನೀರಿಗಿಂತ ಸ್ವಲ್ಪ ಹೆಚ್ಚು ಪ್ರಮಾಣದ ಪಿಎಚ್ ಮಟ್ಟ ಹೊಂದಿರುವುದರಿಂದ ಆಲ್ಕಲೈನ್ ನೀರು ಅತ್ಯುತ್ತಮ ನೀರೆನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದೇ ನೀರನ್ನಾದರೂ ಆಲ್ಕಲೈನ್ ಮಾಡಿಕೊಳ್ಳಬಹುದು. ಬಾವಿ ಅಥವಾ ಬೋರ್, ಫಿಲ್ಟರ್ (Filter) ನೀರನ್ನು ಸಹ ಆಲ್ಕಲೈನ್ ಮಾಡಿಕೊಂಡು ಸೇವಿಸುವುದು ಉತ್ತ,ಮ. ನೀರಿಗೆ ಸ್ವಲ್ಪ ಜೀರಿಗೆ, ಲಾವಂಚದ ಬೇರು, ಭಸ್ಮ, ತೆಂಗಿನಕಾಯಿ ಚೂರನ್ನು ಸೇರಿಸಿದಾಗ ಆ ನೀರು ಆಲ್ಕಲೈನ್ ಆಗುತ್ತದೆ. ಬೆಳ್ಳಿ, ತಾಮ್ರದ ಪಾತ್ರೆಯಲ್ಲಿ ನೀರನ್ನಿಟ್ಟರೂ ಅದು ಆಲ್ಕಲೈನ್ ಆಗುತ್ತದೆ.