ಬಾಯಲ್ಲೇ ಉಸಿರಾಡಿದರೆ ಕಾಡೋ ಅನಾರೋಗ್ಯ ಒಂದೆರಡಲ್ಲ, ಪರಿಹಾರವೇನು ಈ ಸಮಸ್ಯೆಗೆ?

First Published Jan 15, 2024, 6:50 PM IST

ನೀವು ಮಲಗಿದಾಗ ಮೂಗಿನ ಬದಲು ಬಾಯಿಯ ಮೂಲಕ ಉಸಿರಾಡುತ್ತೀರಾ? ನಿಮಗೆ ಗೊತ್ತಾ ಈ ಕಾರಣದಿಂದಾಗಿ ನಿಮಗೆ ಅನೇಕ ಸಮಸ್ಯೆಗಳು ಉಂಟಾಗಬಹುದು.
 

ಕೆಲವರು ಮಲಗುವಾಗ ಬಾಯಿಯ ಮೂಲಕ ಉಸಿರಾಡುತ್ತಾರೆ. ನೀವು ಮಲಗುವಾಗ ಬಾಯಿ ಮೂಲಕ ಉಸಿರಾಡುತ್ತೀರಾ? ಹಾಗಿದ್ರೆ ತುಂಬಾನೆ ಜೋಪಾನ, ಯಾಕಂದ್ರೆ, ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಮೂಗಿನ ಬದಲು ಬಾಯಿ ಮೂಲಕ ಉಸಿರಾಡಿದರೆ, ಈ ಕಾರಣದಿಂದಾಗಿ ನಿಮಗೆ ಅನೇಕ ಸಮಸ್ಯೆಗಳು ಉಂಟಾಗಬಹುದು ಅನ್ನೋದು ತಿಳಿದು ಬಂದಿದೆ. ಹಾಗಿದ್ರೆ ಬಾಯಿಯ ಮೂಲಕ ಉಸಿರಾಡುವುದರಿಂದ (mouth breathing) ಉಂಟಾಗುವ ಹಾನಿ ಏನು ಎಂದು ತಿಳಿಯಿರಿ. 
 

ಜೀವಂತವಾಗಿರಲು ಉಸಿರಾಟ (breathing) ಅತ್ಯಗತ್ಯ. ಏಕೆಂದರೆ ಎಲ್ಲಿಯವರೆಗೆ ಉಸಿರು ಮುಂದುವರಿಯುತ್ತದೆಯೋ ಅಲ್ಲಿಯವರೆಗೆ ನಿಮ್ಮ ಜೀವನವು ಮುಂದುವರಿಯುತ್ತದೆ. ಆದರೆ ಉಸಿರಾಟದ ವಿಧಾನವು ನಿಮ್ಮ ಆರೋಗ್ಯವು ಉತ್ತಮವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಹೇಳುತ್ತದೆ ಎಂದು ನಿಮಗೆ ತಿಳಿದಿದೆಯೇ? ಶ್ವಾಸಕೋಶಕ್ಕೆ ಗಾಳಿ ಸರಿಯಾಗಿ ಪ್ರವೇಶಿಸಲು ಎರಡು ಮಾರ್ಗಗಳಿವೆ, ಒಂದು ಮೂಗಿನ ಮೂಲಕ ಮತ್ತು ಇನ್ನೊಂದು ಬಾಯಿಯ ಮೂಲಕ. ಹೆಚ್ಚಿನ ಜನರು ಮೂಗಿನ ಮೂಲಕ ಉಸಿರಾಡುತ್ತಾರೆ, ಆದರೆ ಕೆಲವರು ಬಾಯಿಯ ಮೂಲಕ ಉಸಿರಾಡುತ್ತಾರೆ.

Latest Videos


ಕೆಲವರು ರಾತ್ರಿ ಮಲಗುವಾಗ ಬಾಯಿ ಮೂಲಕ ಉಸಿರಾಡುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಬಾಯಿಯ ಮೂಲಕ ಉಸಿರಾಡುವುದರಿಂದ ಅನೇಕ ರೋಗಗಳು ಬರುವ ಸಾಧ್ಯತೆ ಕೂಡ ಹೆಚ್ಚಿದೆ. ಬಾಯಿಯ ಮೂಲಕ ಉಸಿರಾಡುವಾಗ ನೀವು ಯಾವ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ತಿಳಿಯೋಣ. ಅಲ್ಲದೆ, ಇದು ಆರೋಗ್ಯಕ್ಕೆ ಏಕೆ ಹಾನಿಕಾರಕ ಎಂದು ನಿಮಗೆ ತಿಳಿಯುತ್ತದೆ. 

ಬಾಯಿಯ ಮೂಲಕ ಉಸಿರಾಡೋದಕ್ಕೆ ಕಾರಣಗಳು ಯಾವುವು?
ಸ್ಲೀಪ್ ಅಪ್ನಿಯಾ
ಮೂಗು ಕಟ್ಟಿರುವುದು
ವಿಸ್ತರಿಸಿದ ಟಾನ್ಸಿಲ್ಸ್
ಮೂಗಿನ ಪಾಲಿಪ್ಸ್
ಒತ್ತಡ ಮತ್ತು ಉದ್ವೇಗ (Stress and Anxiety)
ಬ್ರೈನ್ ಫಾಗ್ (brain fog)
ಅತಿಯಾದ ದಣಿವು (Over Tiredness)

ಬಾಯಿ ಮೂಲಕ ಉಸಿರಾಡುವುದನ್ನು ಏಕೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ?
ನಾವು ಮೂಗಿನ ಬದಲು ಬಾಯಿಯ ಮೂಲಕ ಉಸಿರಾಡಿದಾಗ, ಗಾಳಿಯು ಫಿಲ್ಟರ್ (air filter) ಮಾಡದೆ ನೇರವಾಗಿ ನಮ್ಮೊಳಗೆ ಹೋಗುತ್ತದೆ. ಇದು ಅತಿಯಾದ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು. 

ಬಾಯಿ ಮೂಲಕ ಉಸಿರಾಡುವುದರಿಂದ ರಕ್ತದಲ್ಲಿನ ಆಮ್ಲಜನಕ (Oxygen) ಮತ್ತು ಇಂಗಾಲದ ಡೈಆಕ್ಸೈಡ್ (Carbon DiOxide) ನಿಂದಾಗಿ ಸಮತೋಲನ ಹಾಳಾಗುತ್ತದೆ. ಇದರಿಂದಾಗಿ ರಕ್ತದಲ್ಲಿನ ಪಿಎಚ್ ಮಟ್ಟವು ಕ್ಷೀಣಿಸಲು ಪ್ರಾರಂಭಿಸುತ್ತದೆ. 

ಮೂಗಿನಂತೆ ಬಾಯಿಯಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲ. ಶೀತ, ಕೆಮ್ಮು ಮತ್ತು ಉಸಿರಾಟದ ಕಾಯಿಲೆಗಳು ಮೂಗಿನ ಮೂಲಕ ಉಸಿರಾಡುವ ಮೂಲಕ ಬೇಗನೆ ಗುಣವಾಗುತ್ತವೆ.  ಇನ್ನು ವ್ಯಾಯಾಮದ ಸಮಯದಲ್ಲಿ ನೀವು ಬಾಯಿಯ ಮೂಲಕ ಉಸಿರಾಡಿದರೆ, ತೂಕ ಇಳಿಸಿಕೊಳ್ಳಲು (weight loss) ಕಷ್ಟವಾಗಬಹುದು. ಪ್ರಾಣಾಯಾಮದಂಥ ಉಸಿರಾಟದ ವ್ಯಾಯಾಮ ಹಾಗೂ ರಾತ್ರಿ ಮಲಗುವಾಗಿ ಬಾಯಿ ಓಪನ್ ಆಗದಂತೆ ಮೆಡಿಕಲ್ ಸ್ಟ್ರಿಪ್ ಹಾಕ್ಕೊಂಡು ಮಲಗಿದರೆ ಒಳ್ಳೇದು. 

click me!