ನಂದೇನಿದ್ರೂ ಸಿನಿಮಾದಲ್ಲಿ ತೋರಿಸ್ತೀನಿ ಸೆಟ್ಟಲ್ಲಲ್ಲ! ಕೋಳಿ ಜಗಳದಲ್ಲಿ ಈ ಮಾತು ಹೇಳಿದ್ಯಾರು?

By Shriram Bhat  |  First Published Nov 15, 2024, 10:19 PM IST

ತಮಿಳುನಾಡಿನಿಂದ ಹಿಂದಿ ಚಿತ್ರರಂಗಕ್ಕೆ ಹಾರಿದ್ದ ಶ್ರೀದೇವಿ ಅವರಿಗೆ ಅಷ್ಟು ಬೇಗ ಹಿಂದಿ ಭಾಷೆಯನ್ನು ಕಲಿಯಲು ಸಾಧ್ಯವಾಗಲಿಲ್ಲ. ಕಾರಣ, ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದ ನಟಿ ಶ್ರೀದೇವಿಗೆ ಶಾಲಾ ಶಿಕ್ಷಣದ ಗಂಧಗಾಳಿಯೇ ಇರಲಿಲ್ಲ. ಆದರೆ ನಟಿ ಜಯಪ್ರದಾ ಡಿಗ್ರಿ ಮುಗಿಸಿ.. 


ನಟಿ ಶ್ರೀದೇವಿ (Sridevi) ಹಾಗೂ ಜಯಪ್ರದಾ (Jayaprada) ಆಗಿನ್ನೂ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಕಾಲ. ತಮಿಳುನಾಡಿನಿಂದ ಹಿಂದಿ ಚಿತ್ರರಂಗಕ್ಕೆ ಹಾರಿದ್ದ ಶ್ರೀದೇವಿ ಅವರಿಗೆ ಅಷ್ಟು ಬೇಗ ಹಿಂದಿ ಭಾಷೆಯನ್ನು ಕಲಿಯಲು ಸಾಧ್ಯವಾಗಲಿಲ್ಲ. ಕಾರಣ, ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದ ನಟಿ ಶ್ರೀದೇವಿಗೆ ಶಾಲಾ ಶಿಕ್ಷಣದ ಗಂಧಗಾಳಿಯೇ ಇರಲಿಲ್ಲ. ಹೀಗಾಗಿ ಅಕ್ಷರಜ್ಞಾನ ಇಲ್ಲದ ಶ್ರೀದೇವಿಗೆ ಹೊಸ ಭಾಷೆ ಕಲಿಯುವುದು ಅಷ್ಟು ಸುಲಭವೇ? 

ಆದ ನಟಿ ಜಯಪ್ರದಾ ಹಾಗಲ್ಲ. ಅವರು ಕೂಡ ಬಾಲಿವುಡ್‌ಗೆ ವಲಸೆ ಹೋಗಿದ್ದರೂ ಕೂಡ ಅವರು ಮಾಸ್ಟರ್‌ ಡಿಗ್ರಿ ಓದಿರುವವರು. ಹೀಗಾಗಿ ಹಿಂದಿ ಹಾಗೂ ಇಂಗ್ಲಿಷ್ ಭಾಷಾ ಜ್ಞಾನ ಅವರಿಗೆ ಅದಾಗಲೇ  ಇತ್ತು. ಉತ್ತರ ಭಾರತದ ಹಿಂದಿಯನ್ನೂ ಬೇಗ ಕಲಿತ ನಟಿ ಜಯಪ್ರದಾ ಅಲ್ಲಿನವರ ಜೊತೆ ನಿರರ್ಗಳವಾಗಿ ಹಿಂದಿ ಮಾತನಾಡುತ್ತಿದ್ದರು. ಆದರೆ, ಶ್ರೀದೇವಿಗೆ ಅತೀ ಅಗತ್ಯವಿರುವ ಕೆಲವೇ ಕೆಲವು ಮಾತುಗಳನ್ನಾಡಲು ಅಷ್ಟೇ ಸಾಧ್ಯವಿತ್ತು. 

Tap to resize

Latest Videos

undefined

ಎಲ್ಲ ಗಂಡಸರ ಕಥೆ ಏನು ಅಂತ ರವೀನಾಗೆ ಹೇಳಿದ್ರು ಶ್ರೀದೇವಿ; ಜಗತ್ತೇ ಗಪ್‌ಚುಪ್‌ ಆಗಿತ್ತು!

ಆದರೆ, ಸೌಂದರ್ಯ, ನಟನೆ ಹಾಗೂ ಸಿನಿಗ್ರಾಫ್‌ನಲ್ಲಿ ನಟಿ ಶ್ರೀದೇವಿ ಜಯಪ್ರದಾಗಿಂತ ಮೇಲಿದ್ದರು. ಹೀಗಾಗಿ ಸಹಜವಾಗಿ ನಟಿ ಶ್ರೀದೇವಿ ಮೇಲೆ ಕೋಪಗೊಂಡಿದ್ದ ನಟಿ ಜಯಪ್ರದಾ ಅವರು ಕಾಲುಕೆರೆದು ಸೆಟ್‌ನಲ್ಲಿ ಶ್ರೀದೇವಿ ಜೊತೆ ಜಗಳಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಸುಖಾಸುಮ್ಮನೇ ಶ್ರೀದೇವಿ ಕುಳಿತಲ್ಲಿಗೆ ಹೋಗಿ ಅವರನ್ನು ಮಾತಿಗೆ ಎಳೆಯುವುದು, ಅವರಿಗೆ ಹಿಂದಿ, ಇಂಗ್ಲಿಷ್ ಭಾಷೆಗಳು ಸರಿಯಾಗಿ ಬರುವುದಿಲ್ಲ ಎಂದು ಗೊತ್ತಿದ್ದೂ ಅವರ ಜೊತೆ ಹರಟುವುದು ಹೀಗೆಲ್ಲ ಮಾಡುತ್ತಿದ್ದರಂತೆ. 

ಜಯಪ್ರದಾ ಅದೆಷ್ಟೇ ಮಾತನ್ನಾಡಿಸಿದರೂ ಕಾಡಿಸಿದರೂ ಶ್ರೀದೇವಿ 'ಹೂಂ, ಹಾಂ ಎಂದಷ್ಟೇ ಉತ್ತರಿಸಿ ಸೈಲೆಂಟ್ ಆಗುತ್ತಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಜಯಪ್ರದಾ ಅವರು ಶ್ರೀದೇವಿಗೆ ಅಹಂಕಾರ, ಯಾರ ಜೊತೆಯೂ ಶೂಟಿಂಗ್ ಸ್ಥಳದಲ್ಲಿ ಮಾತನಾಡುವುದಿಲ್ಲ ಎಂದು ಸುಳ್ಳು ಗಾಸಿಪ್ ಹಬ್ಬಿಸುತ್ತಿದ್ದರು. ಆದರೆ ಶ್ರೀದೇವಿಗೆ ಭಾಷೆ ಸಮಸ್ಯೆ ಇರೋದ್ರಿಂದ ಅದಕ್ಕೂ ಏನೂ ಮಾತನಾಡದೇ ಶ್ರೀದೇವಿ ನಕ್ಕು ಸುಮ್ಮನಾಗುತ್ತಿದ್ದರಂತೆ. ಆದರೆ ಕಾಲ ಕಳೆದಂತೆ ನಟಿ ಜಯಪ್ರದಾ ಅದನ್ನೆಲ್ಲಾ ಮತ್ತಷ್ಟು ಜಾಸ್ತಿ ಮಾಡತೊಡಗಿದರು.

ಶಂಕರ್‌ ನಾಗ್ ಸಾವಿನ ಬಗ್ಗೆ ಇಂದಿಗೂ ಸಂಶಯ ಯಾಕೆ? ಅಲ್ಲಿ ಉತ್ತರ ಸಿಗದ ಪ್ರಶ್ನೆಗಳು ಇವೆಯಲ್ಲ! 

ಅದೊಂದು ದಿನ ಶ್ರೀದೇವಿ ಜಯಪ್ರದಾ ಕಾಲೆಳೆತಕ್ಕೆ ಕೌಂಟರ್ ಕೊಡಲು ರೆಡಿಯಾಗಿಯೇ ಬಂದಿದ್ದರು. ಎಂದಿನಂತೆ ಜಯಪ್ರದಾ ಕಾಡಿಸಲು ಸಿದ್ಧರಾಗಿ 'ನಿಮಗೆ ಮಾತನಾಡಲು ಯಾಕೆ ಕಷ್ಟ' ಎನ್ನುತ್ತಿದ್ದಂತೆ ಶ್ರೀದೇವಿ ಸಹನೆ ಕಟ್ಟೆ ಒಡೆದರೂ ಮುಖದಲ್ಲಿ ತೋರಿಸಿಕೊಳ್ಳದೇ 'ನಂದೇನಿದ್ರೂ ಸಿನಿಮಾದಲ್ಲಿ ತೋರಿಸ್ತೀನಿ ಸೆಟ್ಟಲ್ಲಲ್ಲ' ಅಂತ ತಮಗೆ ಬರುತ್ತಿದ್ದ ಹರುಕುಮುರುಕು ಹಿಂದಯಲ್ಲೇ ಜಯಪ್ರದಾಗೆ ಕೌಂಟರ್ ಕೊಟ್ಟ ಶ್ರೀದೇವಿ ಬೇರೆಲ್ಲೋ ನೋಡುತ್ತಾ ಕುಳಿತುಬಿಟ್ಟರಂತೆ. 

ಅಂದಿನಿಂದ ಜಯಪ್ರದಾ ಮಾತಿನ ಕಾಟವೇನೋ ಶ್ರೀದೇವಿಗೆ ತಪ್ಪಿತು. ಆದರೆ, ತಾವೇ ಬೇಕಂತಲೇ ಅವಮಾನ ಮಾಡಿಸಿಕೊಂಡು ಮಂಗಳಾರತಿ ಎತ್ತಿಸಿಕೊಂಡಿದ್ದರೂ ಜಯಪ್ರದಾಗೆ ಶ್ರೀದೇವಿ ಮೇಲೆ ಕೋಪ ಮತ್ತಷ್ಟು ಜಾಸ್ತಿಯಾಗಿತ್ತು. ಹೀಗಾಗಿ ಅವರನ್ನು ಮಾತನಾಡಿಸದೇ ಬೇರೆಯವರ ಬಳಿ ನಟಿ ಶ್ರೀದೇವಿಗೆ ಭಯಂಕರ ಕೊಬ್ಬು. ಅಕ್ಕಪಕ್ಕ ಇರೋರ ಹತ್ರ ಮಾತಾಡೋದಕ್ಕೆ ಏನು ಪ್ರಾಬ್ಲಂ ಎಂದು ಹೇಳೀ ಶ್ರೀದೇವಿ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರಂತೆ. 

ಒಂದೇ ತಕ್ಕಡಿಯಲ್ಲಿ ತಾಯಿ & ಪತ್ನಿ ತೂಗಿದ ಶಿವರಾಜ್‌ಕುಮಾರ್; ಇಲ್ನೋಡಿ ನೆಟ್ಟಿಗರು ಏನಂತಿದಾರೆ?

ಆದರೆ, ಆಗಿನ್ನೂ ಇಬ್ಬರಿಗೂ ವಯಸ್ಸು ಆಗಿರಲಿಲ್ಲ. ಅವರಬ್ಬರದು ಕೋಳಿ ಜಗಳ ಎಂದು ಬೇರೆಯವರು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ. ಹೀಗಾಗಿ ಬಳಿಕ ಶ್ರೀ-ಜಯಾ ಇಬ್ಬರೂ ತಮ್ಮತಮ್ಮ ಕೆಲಸದಲ್ಲಿ ಬ್ಯುಸಿಯಾದರು. ಬಾಲಿವುಡ್ ಕೂಡ ಅದನ್ನೇ ಮರೆತೇ ಬಿಟ್ಟಿತು. ನಟಿ ಶ್ರೀದೇವಿ ಸಾವಿನ ಬಳಿಕ ನಟಿ ಜಯಪ್ರದಾ ಕೂಡ ಅವೆಲ್ಲವನ್ನೂ ಮರೆತಿರಬಹುದು. ಆದರೆ, ಬಾಲಿವುಡ್ ಅಂಗಳದಲ್ಲಿ ಅವೆಲ್ಲವೂ ಹಬ್ಬಿದ್ದು, ಇದೀಗ ಸೋಷಿಯಲ್ ಮೀಡಿಯಾ ಮೂಲಕ ಜಗತ್ತಿಗೆಲ್ಲ ಹರಡುತ್ತಿದೆ. 

click me!