ಮಂಗನ ಮೇಲೆ ಲಸಿಕೆ ಫೇಲ್, ಮಾನವರ ಕತೆ ಏನು? ಆಕ್ಸ್ ಫರ್ಡ್ ಫಲಿತಾಂಶ

First Published May 23, 2020, 4:27 PM IST

ನವದೆಹಲಿ(ಮೇ 23) ಕೊರೋನಾಕ್ಕೆ ಲಸಿಕೆ ಕಂಡುಹಿಡಿಯುವ ಕೆಲಸ ಚಾಲ್ತಿಯಲ್ಲೇ ಇದೆ. ಚೀನಾ, ಅಮೆರಿಕ, ಇಂಗ್ಲೆಂಡ್ ಸಹ ತಮ್ಮದೇ ಆದ ಕೆಲಸ ಮಾಡುತ್ತಿವೆ. ಇಂಗ್ಲೆಂಡಿನ ಆಕ್ಸ್ ಫರ್ಡ್ ವಿವಿ ಯಾವ ರೀತಿ ಸಂಶೋಧನೆ ಮಾಡುತ್ತಿದೆ ಎಂಬುದನ್ನು ನಿಮ್ಮ ಮುಂದೆ ಇಡುತ್ತದ್ದೇವೆ. 

ಪ್ರಪಂಚವನ್ನೇ ಕಾಡುತ್ತಿರುವ ಮಹಾಮಾರಿ ಕೊರೋಲಾಕ್ಕೆ ಲಸಿಕೆ ಕಂಡುಹಿಡಿಯುವ ಮಹತ್ ಕಾರ್ಯ ಚಾಲ್ತಿಯಲ್ಲೇ ಇದೆ. ಮಾನವನ ಮೇಲೆ ಯಾವಾಗ ಪ್ರಯೋಗ ಎಂಬ ಪ್ರಶ್ನೆಗಳು ಕೇಳು ಬಂದಿವೆ.
undefined
ಆಕ್ಸ್ ಫರ್ಡ್ ವಿವಿ ಮಹತ್ವದ ಹೆಜ್ಜೆಯೊಂದನ್ನು ಇರಿಸಿರುವುದು ವರದಿಯಾಗಿದೆ. ಮಂಗಗಳ ಮೇಲೆ ಪ್ರಯೋಗ ಮಾಡಿದ್ದ ಲಸಿಕೆ ವಿಫಲವಾಗಿದ್ದು ಸುದ್ದಿಯಾಗಿತ್ತು. ಈಗ ಮಾನವನ ಮೇಲೆ ಪ್ರಯೋಗ ಮಾಡಿದ್ದು ಯಾವ ಹಂತದಲ್ಲಿದೆ ಎಂಬ ವಿವರ ನೀಡುತ್ತವೆ. ವಯಸ್ಕರು ಮತ್ತು ಮಕ್ಕಳು ಸೇರಿದಂತೆ ಯುಕೆಯ 10260 ಜನ ಸ್ವಯಂಸೇವಕರನ್ನು ಒಳಗೊಂಡಂತೆ ಪ್ರಯೋಗ ಮಾಡಲಾಗಿದೆ.
undefined
ಟ್ರಾಯಲ್ ಹೇಗಿದೆ? ಏಪ್ರಿಲ್ ನಲ್ಲಿಯೇ ಒಂದು ಸಾವಿರ ಜನರನ್ನು ಗುರುತಿಸಿ ಪ್ರಯೋಗ ಮಾಡಲಾಗಿತ್ತು. ಮೊದಲ ಹಂತದ ಪ್ರಯೋಗದ ಫಲಿತಾಂಶ ಸಿಕ್ಕಿದ್ದು ಫಾಲೋ ಅಪ್ ನಲ್ಲಿದೆ. ಎರಡನೇ ಮತ್ತು ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
undefined
ಎರಡನೇ ಹಂತದ ಪ್ರಯೋಗದಲ್ಲಿ ಗುಂಪುಗಳನ್ನು ಮಾಡಿಕೊಳ್ಳಲಾಗಿದೆ. ವಯೋವೃದ್ಧರು ಮತ್ತು ಮಕ್ಕಳನ್ನು ಇಲ್ಲಿ ಟಾರ್ಗೆಟ್ ಮಾಡಿಕೊಳ್ಳಲಾಗಿದೆ. 5 ರಿಂದ 12 ವರ್ಷದ ಮಕ್ಕಳು ಮತ್ತು 56 ರಿಂದ69 ವರ್ಷದ ವೃದ್ಧರು ಮತ್ತು 70 ವರ್ಷದ ಮೇಲಿನವರನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ.
undefined
ಮೂರನೇ ಹಂತದಲ್ಲಿ ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚಳವಾಗಿದೆ? ಲಸಿಕೆ ಯಾವ ಪರಿಣಾಮ ಬೀರಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 18 ವರ್ಷ ಮೇಲ್ಪಟ್ಟವರ ಮೇಲೆ ಲಸಿಕೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಇಲ್ಲಿ ಲೆಕ್ಕ ಹಾಕಲಾಗುತ್ತದೆ .
undefined
ChAdOx1 nCoV-19 ಅಥವಾ MenACWY ಎಂಬ ಲಸಿಕೆ ಪ್ರಯೋಗ ಮಾಡಲಾಗಿದೆ. ಗುಂಪೊಂದನ್ನು ಗುರುತಿಸಿಕೊಂಡು ಪ್ರಯೋಗ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ.
undefined
ಇದಕ್ಕೆ ಸಂಬಂಧಿಸಿದ ವರದಿಗಳ ವಿಮರ್ಶೆ ನಡೆಯುತ್ತಲೆ ಇದೆ. ಗುಂಪುಗಳನ್ನು ಮಾಡಿಕೊಂಡೇ ಲಸಿಕೆ ಪ್ರಯೋಗ ಮಾಡಲಾಗಿದ್ದು ಅವರ ಮೇಲಿನ ವರ್ದಿ ಆಧಾರದಲ್ಲಿಯೇ ಸ್ಪಷ್ಟ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಆಕ್ಸ್ ಫರ್ಡ್ ಲಸಿಕೆ ವಿಭಾಗದ ಆಂಡ್ರ್ಯೂ ಪೋಲಾರ್ಡ್ ತಿಳಿಸಿದ್ದಾರೆ.
undefined
click me!