ಕೋವಿಡ್‌ ವರದಿ ಪ್ರಕಟಿಸಿದ್ದ ಚೀನಾ ವಿಜ್ಞಾನಿ ಲ್ಯಾಬ್‌ನಿಂದಲೇ ಔಟ್‌

By Kannadaprabha NewsFirst Published May 1, 2024, 11:52 AM IST
Highlights

ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ, 4 ವರ್ಷದ ಹಿಂದೆ ಕೋವಿಡ್ -19 ವೈರಸ್‌ನ ಜೀನೋಮಿಕ್ ಅನುಕ್ರಮವನ್ನು ಪ್ರಕಟಿಸಿದ್ದ ಚೀನಾದ ಮೊದಲ ವೈರಾಣು ವಿಜ್ಞಾನಿ ಜಾಂಗ್ ಯೋಂಗ್‌ಜೆನ್‌ರನ್ನು, ಚೀನಾ ಸರ್ಕಾರವು ಶಾಂಘೈ ಲ್ಯಾಬ್‌ಗೆ ಬೀಗ ಹಾಕಿ ಹೊರಗಟ್ಟಿದೆ. 

ಶಾಂಘೈ: ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ, 4 ವರ್ಷದ ಹಿಂದೆ ಕೋವಿಡ್ -19 ವೈರಸ್‌ನ ಜೀನೋಮಿಕ್ ಅನುಕ್ರಮವನ್ನು ಪ್ರಕಟಿಸಿದ್ದ ಚೀನಾದ ಮೊದಲ ವೈರಾಣು ವಿಜ್ಞಾನಿ ಜಾಂಗ್ ಯೋಂಗ್‌ಜೆನ್‌ರನ್ನು, ಚೀನಾ ಸರ್ಕಾರವು ಶಾಂಘೈ ಲ್ಯಾಬ್‌ಗೆ ಬೀಗ ಹಾಕಿ ಹೊರಗಟ್ಟಿದೆ. 

ಇದರ ಬೆನ್ನಲ್ಲೇ ಈ ಕ್ರಮ ಖಂಡಿಸಿ ಅವರು ಪ್ರತಿಭಟನೆ ಆರಂಭಿಸಿದ್ದಾರೆ.2020ರ ಜನವರಿಯಲ್ಲಿ ಸರ್ಕಾರದ ಅನುಮೋದನೆಯಿಲ್ಲದೆ ಕೋವಿಡ್-19 ಕುರಿತು ವೈಜ್ಞಾನಿಕ ಸಂಶೋಧನೆಗಳನ್ನು ಜಾಂಗ್ ಪ್ರಕಟಿಸಿದ್ದರು. ಇದಾದ ನಂತರ ಅವರು ಹಾಗೂ ಅವರ ತಂಡದ ವಿರುದ್ಧ ಚೀನಾ ಸರ್ಕಾರ ಹಲವು ಶಿಸ್ತುಕ್ರಮ ಕೈಗೊಂಡಿತ್ತು. 

Breaking: ಕೋವಿಶೀಲ್ಡ್‌ ಲಸಿಕೆಯಿಂದ ಅಡ್ಡಪರಿಣಾಮ ಒಪ್ಪಿಕೊಂಡ ಆಸ್ಟ್ರಾಜೆನಿಕಾ ಕಂಪನಿ!

ಇದರ ಬೆನ್ನಲ್ಲೇ ಈಗ ಲ್ಯಾಬ್‌ನಿಂದ ಹೊರ ಹಾಕಲಾಗಿದೆ.‘ಆದರೆ ನವೀಕರಣಕ್ಕಾಗಿ ಲ್ಯಾಬ್‌ ಮುಚ್ಚಲಾಗಿದೆ. ಜಾಂಗ್‌ಗೆ ಬೇರೆ ಲ್ಯಾಬ್‌ ನೀಡಲಾಗಿದೆ’ ಎಂದು ಚೀನಾ ಸರ್ಕಾರ ಹೇಳಿದೆ. ಇದನ್ನು ತಳ್ಳಿಹಾಕಿರುವ ಜಾಂಗ್‌, ‘ನೋಟಿಸ್‌ ನೀಡದೇ ಏಕಾಏಕಿ ನಮ್ಮನ್ನು ಹೊರಹಾಕಲಾಗಿದೆ. ನನಗೆ ನೀಡಿರುವ ಹೊಸ ಪ್ರಯೋಗಾಲಯವು ತಂಡದ ಅಗತ್ಯ ಸುರಕ್ಷತಾ ಮಾನದಂಡ ಪೂರೈಸಿಲ್ಲ. ಹೀಗಾಗಿ ನಾನು ಪ್ರತಿಭಟನೆ ಆರಂಭಿಸಿದ್ದೇನೆ. ಸತ್ಯಕ್ಕಾಗಿ ಹೋರಾಡುವೆ’ ಎಂದು ಜಾಂಗ್ ಹೇಳಿದರು.

click me!