May 1, 2024, 3:35 PM IST
ಅಜ್ಜ ದೇವೇಗೌಡರು ಕಟ್ಟಿದ್ದ ಸಚ್ಚಾರಿತ್ರ್ಯದ ಸಾಮ್ರಾಜ್ಯಕ್ಕೆ ವಾರಸುದಾರನಾಗಿ ನೇಮಕ ಮಾಡಿದ ಮೊಮ್ಮಗ ಪ್ರಜ್ವಲ್‌ನೇ ಕಳಂಕ ಮೆತ್ತಿದ್ದಾನೆ. ಅಶ್ಲೀಲ ವೀಡಿಯೊಗಳ ಆರೋಪ ಕೇಳಿ ಬಂದಿರೋದು ಮೊಮ್ಮಗನ ಮೇಲೆ, ನೋವು ತಿನ್ನುತ್ತಿರುವುದು 92ರ ವಯೋವೃದ್ಧ ಅಜ್ಜ. ಪ್ರಜ್ವಲ್ ಪ್ರಕರಣದಲ್ಲಿ ರೇವಣ್ಣ ಕುಟುಂಬದ ವಿರುದ್ಧವೇ ದಳಪತಿ ಕುಮಾರಸ್ವಾಮಿ ರೊಚ್ಚಿಗೆದ್ದು ಅಬ್ಬರಿಸಿದ್ದಾರೆ. ಒಗ್ಗಟ್ಟಾಗಿದ್ದ ದೇವೇಗೌಡರ ಕುಟುಂಬ ಪ್ರಜ್ವಲ್ ಜ್ವಾಲೆಗೆ ಹೇಗೆ ಇಬ್ಭಾಗವಾಗಿದೆ.
ಪ್ರಜ್ವಲ್ ರೇವಣ್ಣನ ಅಶ್ಲೀಲ ವೀಡಿಯೊ ಪ್ರಕರಣದಲ್ಲಿ ದೇವೇಗೌಡರ ಕುಟುಂಬ ಇಬ್ಭಾಗವಾಗಿದೆ. ಇದ್ರ ಜೊತೆಗೆ ಮಿತ್ರರೂ ದೂರವಾಗಿದ್ದಾರೆ. ಇನ್ನು ಮೈತ್ರಿ ಪಕ್ಷ ಬಿಜೆಪಿಯಂತೂ ಪ್ರಕರಣದಿಂದ ಮಾರುದ್ದ ದೂರ ನಿಂತು ಬಿಟ್ಟಿದೆ. ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವ್ರೇ ಪ್ರಜ್ವಲ್ ಪ್ರಕರಣವನ್ನು ಖಂಡಿಸಿದ್ದಾರೆ. ಪ್ರಜ್ವಲ್ ಜ್ವಾಲೆಗೆ ದೇವೇಗೌಡರ ಕುಟುಂಬದೊಳಗೆ ದೊಡ್ಡ ಜ್ವಾಲಾಮುಖಿಯೇ ಸ್ಫೋಟಗೊಂಡಿದೆ. ದಳಪತಿ ಕುಮಾರಸ್ವಾಮಿ ನೇರವಾಗಿ ರೇವಣ್ಣ ಕುಟುಂಬದ ವಿರುದ್ಧವೇ ಅಬ್ಬರಿಸಿದ್ದಾರೆ. ಕುಟುಂಬ ಇಬ್ಭಾಗವಾಗಿರೋ ಜಪ ಒಂದ್ಕಡೆಯಾದ್ರೆ, ಮಿತ್ರರೂ ದೂರವಾಗಿದ್ದಾರೆ. ಆಪ್ತರಂತೂ ಮತ್ತಷ್ಟು ದೂರ. ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವ್ರೇ ಪ್ರಜ್ವಲ್ ಪ್ರಕರಣದ ಬಗ್ಗೆ ಕಿಡಿ ಕಾರಿದ್ದು, ಪ್ರಕರಣದಿಂದ ಬಿಜೆಪಿ ಮಾರುದ್ದ ದೂರ ನಿಂತು ಬಿಟ್ಟಿದೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್; ಮೋದಿ ಮೌನಕ್ಕೆ ರಾಹುಲ್‌ಗಾಂಧಿ ಸಿಡಿಮಿಡಿ
ಪ್ರಜ್ವಲ್ ರೇವಣ್ಣ ಸದ್ಯ ಜೆಡಿಎಸ್'ನಿಂದ ಸಸ್ಪೆಂಡ್ ಆಗಿದ್ದಾರೆ. ಇದು ಟ್ರೈಲರ್ ಅಷ್ಟೇ, ಅಸಲಿ ಸಿನಿಮಾ ಇನ್ನೂ ಬಾಕಿಯಿದೆ ಅಂದಿದ್ದೇಕೆ ದಳಪತಿ ಕುಮಾರಸ್ವಾಮಿ..? ಸಂಸದ ಪ್ರಜ್ವಲ್ ರೇವಣ್ಣ ದೇವೇಗೌಡರ ಕುಟುಂಬಕ್ಕೆ ಬಳಿದಿರೋದು ಬರೀ ಮಸಿಯಲ್ಲ, ಅಳಿಸಲಾಗದ ಕಳಂಕ. ಈ ಪ್ರಮಾದಕ್ಕೆ ಮೊದಲ ತಲೆದಂಡವಾಗಿದೆ. ಪ್ರಜ್ವಲ್ ರೇವಣ್ಣನನ್ನು ಜೆಡಿಎಸ್'ನಿಂದ ಸಸ್ಪೆಂಡ್ ಮಾಡಲಾಗಿದೆ. ಇದಿಷ್ಟೇ ಅಲ್ಲ, ಅಣ್ಣನ ಮಗನಿಗೆ ಉಚ್ಚಾಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ ದಳಪತಿ ಕುಮಾರಸ್ವಾಮಿ. ಮೊಮ್ಮಗ ಪ್ರಜ್ವಲ್ ರೇವಣ್ಣನೇ ಹಾಸನದಲ್ಲಿ ನನ್ನ ರಾಜಕೀಯ ಉತ್ತರಾಧಿಕಾರಿ ಅಂತ 2019ರಲ್ಲಿ ಹೇಳಿದ್ರು ದೇವೇಗೌಡ್ರು. ಆದ್ರೆ ಅದೇ ಮೊಮ್ಮಗನೀಗ ಅಜ್ಜ ಕಟ್ಟಿದ್ದ ಸಚ್ಚಾರಿತ್ರ್ಯದ ಸಾಮ್ರಾಜ್ಯಕ್ಕೇ ಕಳಂಕ ಮೆತ್ತಿರೋದು ದೇವೇಗೌಡರ ದೌರ್ಭಾಗ್ಯ.