ಫಿಟ್ ಆಗಿರೋಕೆ ಯಾರು ತಾನೇ ಇಷ್ಟಪಡಲ್ಲ ಹೇಳಿ. ಆದ್ರೆ ಬೆಳಗ್ಗೆದ್ದು ಜಿಮ್‌ಗೆ ಹೋಗಿ ವರ್ಕೌಟ್ ಮಾಡೋದು ಅಂದ್ರೆ ಸೋಮಾರಿತನ. ಆದ್ರೆ ಜಿಮ್‌ಗೆ ಹೋಗದೆ, ಎಕ್ಸರ್‌ಸೈಸ್ ಮಾಡ್ದೆ ಫಿಟ್ ಮತ್ತು ಹೆಲ್ದೀಯಾಗಿರಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ? ಅದ್ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಬದಲಾಗಿರುವ ಜೀವನಶೈಲಿ, ಆಹಾರಕ್ರಮದಿಂದ ಹಲವು ಕಾಯಿಲೆಗಳು ಜನರನ್ನು ಕಾಡುತ್ತಿವೆ. ಇಂಥಾ ಸಂದರ್ಭದಲ್ಲಿ ಆರೋಗ್ಯವಾಗಿರಲು ಜಿಮ್‌ಗೆ ಹೋಗಿ ಫಿಟ್ ಆಗಿರುವುದು ಮುಖ್ಯ. ಆದ್ರೆ ಬೆಳಗ್ಗೆದ್ದು ಜಿಮ್‌ಗೆ ಹೋಗಿ ವರ್ಕೌಟ್ ಮಾಡೋದು ಅಂದ್ರೆ ಹಲವರಿಗೆ ಸೋಮಾರಿತನ. ಆದ್ರೆ ಜಿಮ್‌ಗೆ ಹೋಗದೆ, ಎಕ್ಸರ್‌ಸೈಸ್ ಮಾಡ್ದೆ ಫಿಟ್ ಮತ್ತು ಹೆಲ್ದೀಯಾಗಿರಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ? ಅದ್ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಸಾಧ್ಯವಾದಷ್ಟೂ ನಡೆಯಿರಿ
ಜಿಮ್‌ಗೆ ಹೋಗಲು ನಿಮಗೆ ಹೆಚ್ಚು ಆಸಕ್ತಿಯಿಲ್ಲವಾದರೆ ನೀವು ಹೆಚ್ಚೆಚ್ಚು ನಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬಹುದು. ಫಿಟ್ ಆಗಿರಲು ಜನರು ದಿನಕ್ಕೆ ಕನಿಷ್ಠ 10,000 ಹೆಜ್ಜೆಗಳನ್ನು ನಡೆಯಬೇಕು ಎಂದು ಅಧ್ಯಯನಗಳು ತೋರಿಸಿವೆ. ಮಾಹಿತಿ ಪ್ರಕಾರ ಹಾರ್ವರ್ಡ್ T.H. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ವಾರಕ್ಕೆ ಮೂರು ಗಂಟೆಗಳ ನಡಿಗೆಯು ಒಟ್ಟಾರೆ ದೇಹದ ತೂಕ, ಬಾಡಿ ಮಾಸ್ ಇಂಡೆಕ್ಸ್ (BMI) ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರು ಮತ್ತು ಮಹಿಳೆಯರ ಸೊಂಟದ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
undefined
ವೈಟ್ ಲಾಸ್ ಮಾಡ್ಕೊಳ್ಳೋಕೆ ದಿನಕ್ಕೆ ಎಷ್ಟು ಲೋಟ ನೀರು ಕುಡೀಬೇಕು?
ಡ್ಯಾನ್ಸ್ ಮಾಡಿ
ಮ್ಯೂಸಿಕ್ ಹಾಕಿ, ಸುತ್ತಲೂ ಯಾರೂ ಇಲ್ಲವೆನ್ನುವಂತೆ ಮನದುಂಬಿ ಡ್ಯಾನ್ಸ್ ಮಾಡಿ. ಇದು ತೂಕವನ್ನು ಕಳೆದುಕೊಳ್ಳಲು ಮತ್ತು ಫಿಟ್ ಆಗಿರಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. 50 ನಿಮಿಷಗಳ ನೃತ್ಯವು 500 ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಹೀಗಾಗಿ ಇದು ತೂಕವನ್ನು ಕಳೆದುಕೊಳ್ಳಲು ಉತ್ತಮ ಮಾರ್ಗವಾಗಿದೆ. ಆದರೆ ನೃತ್ಯವು ಉತ್ತಮ ಮೂಡ್ ಬಸ್ಟರ್ ಆಗಿದೆ. ಇದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮೆಟ್ಟಿಲುಗಳನ್ನು ಹತ್ತಿ ಇಳಿಯಿರಿ
ಅನುಕೂಲಗಳು ಹೆಚ್ಚಾದಂತೆ ಮನುಷ್ಯ ಮತ್ತಷ್ಟು ಸೋಮಾರಿಯಾಗುತ್ತಿದ್ದಾನೆ. ಐದಾರು ಮೆಟ್ಟಿಲು ನಡೆಯಲೂ ಸಹ ಉದಾಸೀನವಾಗಿ ಎಲಿವೇಟರ್ ಹತ್ತಿ ಬಿಡುತ್ತಾರೆ. ಆದರೆ ಹೀಗೆ ಮಾಡದಿರಿ. ಎಲಿವೇಟರ್ ಬದಲಿಗೆ ಮೆಟ್ಟಿಲುಗಳನ್ನು ಬಳಸಿ. ಫಿಟ್‌ನೆಸ್ ಮಟ್ಟವನ್ನು ಸುಧಾರಿಸಲು ಇದು ಉತ್ತಮ ಮಾರ್ಗವಾಗಿದೆ. ಮೆಟ್ಟಿಲುಗಳನ್ನು ಹತ್ತುವುದು ಹೃದಯವನ್ನು ಪಂಪ್ ಮಾಡುತ್ತದೆ, ಹೃದ್ರೋಗ, ಸ್ಥೂಲಕಾಯತೆ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೂಳೆಗಳನ್ನು ಬಲಪಡಿಸಲು ಮತ್ತು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.
ತಿನ್ನದೇ ಇರೋದ್ರಿಂದ ತೂಕ ಕಡಿಮೆಯಾಗಲ್ಲ..ವೈಟ್ ಲಾಸ್ ಬಗ್ಗೆ ನಿಮ್ಗೆ ಗೊತ್ತಿರದ ವಿಚಾರಗಳಿವು
ಆಟದಲ್ಲಿ ತೊಡಗಿಸಿಕೊಳ್ಳಿ
ಕ್ರೀಡೆಯಲ್ಲಿ ತೊಡಗಿಕೊಳ್ಳುವುದು ಸುಲಭವಾಗಿ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಈಜು, ಟೆನ್ನಿಸ್, ಸ್ಕ್ವಾಷ್, ಮತ್ತು ಬ್ಯಾಡ್ಮಿಂಟನ್ ಆಟಗಳಲ್ಲಿ ತೊಡಗಿಸಿಕೊಳ್ಳಬಹುದು. ಈ ಕ್ರೀಡೆಗಳನ್ನು ನಿಯಮಿತವಾಗಿ ಆಡುವುದರಿಂದ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸ್ಕಿಪ್ಪಿಂಗ್ ಮಾಡಿ
ತೂಕವನ್ನು ಕಳೆದುಕೊಳ್ಳಲು ಹಲವಾರು ಮಾರ್ಗಗಳಿವೆ. ಹಗ್ಗವನ್ನು ಸ್ಕಿಪ್ಪಿಂಗ್ ಮಾಡುವುದು ಇದರಲ್ಲಿ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. ದಿನಕ್ಕೆ 30 ನಿಮಿಷದಿಂದ ಒಂದು ಗಂಟೆಯವರೆಗೆ ಸ್ಕಿಪ್ಪಿಂಗ್ ಮಾಡಿದರೆ ಸುಮಾರು 200-300 ಕ್ಯಾಲೊರಿಗಳನ್ನು ಕಳೆದುಕೊಳ್ಳಬಹುದು. ಫಿಟ್‌ನೆಸ್ ದಿನಚರಿಯಲ್ಲಿ ಜಂಪ್-ರೋಪಿಂಗ್ ಅನ್ನು ಸೇರಿಸುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಮನೆಯಲ್ಲಿ ವ್ಯಾಯಾಮ ಮಾಡಿ
ಫಿಟ್ ಆಗಿರಲು ಜಿಮ್‌ಗೆ ಹೋಗಿಯೇ ವ್ಯಾಯಾಮ ಮಾಡಬೇಕೆಂದಿಲ್ಲ. ಎಲ್ಲಿ ವ್ಯಾಯಾಮ ಮಾಡಿದರೂ ನಾವು ಫಿಟ್ ಆಗಿರಬಹುದು. ಆದ್ದರಿಂದ, ಜಿಮ್‌ಗೆ ಹೋಗುವುದು ತುಂಬಾ ಕಷ್ಟದ ಕೆಲಸ ಎಂದು ನೀವು ಭಾವಿಸಿದರೆ, ಮನೆಯಲ್ಲಿಯೇ ವರ್ಕೌಟ್ ಮಾಡಿ. ಹಲವಾರು ಫಿಟ್‌ನೆಸ್ ತರಬೇತುದಾರರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಮನೆಯಲ್ಲಿಯೇ ವರ್ಕೌಟ್‌ಗಳನ್ನು ಹಂಚಿಕೊಳ್ಳುತ್ತಾರೆ.
ಸಮರ ಕಲೆಯನ್ನು ಕಲಿಯಿರಿ
ಕಿಕ್‌ಬಾಕ್ಸಿಂಗ್, ಮಿಶ್ರ ಮಾರ್ಷಲ್ ಆರ್ಟ್, ಕಳರಿಪ್ಪಾಯಟ್ಟು ಮತ್ತು ಹೆಚ್ಚಿನವುಗಳಂತಹ ಸಾಕಷ್ಟು ಸಮರ ಕಲೆಯ ಪ್ರಕಾರಗಳು ಲಭ್ಯವಿದೆ. ಇದರಲ್ಲಿ ಯಾವುದನ್ನಾದರೂ ನೀವು ಆಯ್ಕೆ ಮಾಡಿಕೊಳ್ಳಬಹುದು. ಇದು ನಿಮ್ಮ ದೇಹದ ಶಕ್ತಿಯನ್ನು ಸುಧಾರಿಸಲು ಮತ್ತು ನಿಮ್ಮನ್ನು ಫಿಟ್ ಆಗಿರಿಸಲು ಸಹಾಯ ಮಾಡುತ್ತದೆ.