ಗ್ಯಾಸ್ಟ್ರಿಕ್​ ಸಮಸ್ಯೆಯೆ? ಮಾತ್ರೆ ಬೇಡ... ಕಷಾಯ ಮಾಡಿ ತೋರಿಸಿದ್ದಾರೆ ಖ್ಯಾತ ವೈದ್ಯ ಡಾ.ಕಿಶೋರ್...

By Suvarna News  |  First Published May 1, 2024, 3:50 PM IST

ಬಹಳ ಜನರನ್ನು ಕಾಡುತ್ತಿರುವ ಗ್ಯಾಸ್ಟ್ರಿಕ್​ ಸಮಸ್ಯೆಗೆ ಮನೆಯಲ್ಲಿಯೇ ಸುಲಭದಲ್ಲಿ ಕಷಾಯ ಮಾಡಿಕೊಳ್ಳಬಹುದಾದ ವಿಧಾನವನ್ನು ಹೇಳಿದ್ದಾರೆ ವೈದ್ಯರಾಗಿರುವ ಡಾ.ಸಿ.ಎ ಕಿಶೋರ್​.
 


ಗ್ಯಾಸ್ಟ್ರಿಕ್​ ಸಮಸ್ಯೆಯಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳು ಹಲವಾರು. ಈ ಸಮಸ್ಯೆ ತೀವ್ರವಾದಲ್ಲಿ ಇದು ಹಲವು ಅನಾರೋಗ್ಯಕ್ಕೆ ದಾರಿ ಮಾಡಿಕೊಡುವುದು ಉಂಟು. ತಿಂದ ಆಹಾರ ಜೀರ್ಣವಾಗದೇ ಇರುವ ಕಾರಣ, ಭವಿಷ್ಯದಲ್ಲಿ ದೇಹದ ಮೇಲೆ ಹಲವು ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಇದೇ ಕಾರಣಕ್ಕೆ ಗ್ಯಾಸ್ಟ್ರಿಕ್ ಎನ್ನುವುದು ಸಾಮಾನ್ಯ ಆರೋಗ್ಯ ಸಮಸ್ಯೆ ಅಲ್ಲವೇ ಅಲ್ಲ! ಪದೇ ಪದೇ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ, ಮುಂದಿನ ದಿನಗಳಲ್ಲಿ ಹೃದಯಕ್ಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿಸುತ್ತದೆ! ಹೀಗಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತುಂಬಾ ಹಗುರವಾಗಿ ಕಾಣಲೇಬಾರದು.

ಈ ಸಮಸ್ಯೆ ಕಂಡುಬಂದ ತಕ್ಷಣ ಇದಕ್ಕಾಗಿಯೇ ಇರುವ ಕೆಲವು ಮಾತ್ರೆಗಳನ್ನು ತಿಂದು ಆ ಕ್ಷಣದಲ್ಲಿ ಸಮಾಧಾನ ಪಟ್ಟುಕೊಳ್ಳುವುದು ಉಂಟು. ಇಂದಿನ ಆಹಾರ ಪದ್ಧತಿ, ಜಂಕ್​ ಫುಡ್​, ಟೆನ್ಷನ್​ ಜೀವನ ಇವೆಲ್ಲವುಗಳಿಂದಲೂ ಈ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಇದು ಅತಿಯಾದ ಸಮಸ್ಯೆಯನ್ನು ತಂದೊಡ್ಡದೇ ಇರಬಹುದು, ಆದರೆ ಹಲವರಲ್ಲಿ ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಗ್ಯಾಸ್ಟ್ರಿಕ್​ ಸಮಸ್ಯೆ ಹೆಚ್ಚಾಗಿರುವ ಕಾರಣದಿಂದಲೇ ಬಗೆ ಬಗೆ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಸೆಲೆಬ್ರಿಟಿಗಳೂ ಕಾಣಿಸಿಕೊಂಡು ಹಾದಿ ತಪ್ಪಿಸುತ್ತಾರೆ. ಅವರೇನೋ ಲಕ್ಷ, ಕೋಟಿ ದುಡ್ಡು ಪಡೆದು ಇಂಥ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬಹುದು, ಆದರೆ ಅದನ್ನೇ ನಂಬಿ ಪ್ರತಿನಿತ್ಯವೂ ಅಥವಾ ಸಮಸ್ಯೆ ತಲೆದೋರಿದಾಗಲೆಲ್ಲಾ ಅದೇ ಮಾತ್ರೆಗಳನ್ನೋ ಅಥವಾ ಜಾಹೀರಾತುಗಳಲ್ಲಿ ತೋರಿಸುವ ಪದಾರ್ಥಗಳನ್ನೋ ಸೇವನೆ ಮಾಡಿದರೆ ಮುಂದೊಂದು ದಿನ ಇದು ಬದುಕನ್ನು ನರಕಕ್ಕೆ ನೂಕುವುದು ಗ್ಯಾರೆಂಟಿ.

Tap to resize

Latest Videos

undefined

ಆರೋಗ್ಯಕರ ನೆಲ್ಲಿಕಾಯಿ ಜ್ಯೂಸ್​ ಮಾಡೋ ಸರಿ ವಿಧಾನ ಯಾವುದು? ಡಾ. ಪದ್ಮಿನಿ ಪ್ರಸಾದ್ ಮಾಡಿ ತೋರಿಸಿದ್ದಾರೆ ನೋಡಿ...

ಹಾಗಿದ್ದರೆ ಮನೆಯಲ್ಲಿಯೇ ಸುಲಭದಲ್ಲಿ ಗ್ಯಾಸ್ಟ್ರಿಕ್​ ಸಮಸ್ಯೆ ಪರಿಹಾರ ಆಗುವಂಥ ಔಷಧಗಳನ್ನು ಮಾಡಿಕೊಳ್ಳಲು ಸಾಧ್ಯನಾ? ಹೌದು. ಇದಕ್ಕಾಗಿ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸವಿರುಚಿ ಕಾರ್ಯಕ್ರಮದಲ್ಲಿ ಆಹಾರ ತಜ್ಞರಾಗಿರುವ ಡಾ. ಸಿ.ಎಕಿಶೋರ್​ ಈ ಬಗ್ಗೆ ಸುಲಭದಲ್ಲಿ ಮನೆಯಲ್ಲಿಯೇ ಮಾಡುವ ಕಷಾಯದ ಮಾಹಿತಿ ನೀಡಿದ್ದಾರೆ. ಕಷಾಯ ವಿಥ್​ ಕಿಶೋರ್​ ಎಂದೇ ಫೇಮಸ್​ ಆಗಿರುವ ವೈದ್ಯ ಕಿಶೋರ್​ ಅವರು, ಕಷಾಯ ಮಾಡುವ ವಿಧಾನ ಹೇಳಿದ್ದಾರೆ. ಇದಕ್ಕೆ ಬೇಕಾಗಿರುವುದು ಇಷ್ಟೇ. ಒಂದೂವರೆ ತುಪ್ಪ, ಕಾಲು ಸ್ಪೂನ್​ ಓಂ ಕಾಳು, ಕಾಲು ಸ್ಪೂನ್​ ಧನಿಯಾ, ಕಾಲು ಸ್ಪೂನ್​ ಜೀರಿಗೆ, 100 ಎಂ.ಎಲ್​ ನೀರು. ಇವಿಷ್ಟೇ ಇದ್ದರೆ ಪ್ರತಿದಿನ ಮನೆಯಲ್ಲಿಯೇ ಕಷಾಯ ತಯಾರಿಸಿ ಕುಡಿಯಬಹುದು. ಎಷ್ಟು ವರ್ಷ ಬೇಕಿದ್ದರೂ ಇದರ ಸೇವನೆ ಮಾಡಬಹುದು. ಇದು ಆರೋಗ್ಯಕರ ಪಾನೀಯ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮವಿಲ್ಲದೇ ಗ್ಯಾಸ್ಟ್ರಿಕ್​ ಸಮಸ್ಯೆಯನ್ನು ಹೊಡೆದೋಡಿಸಬಹುದು. 

ಮಾಡುವ ವಿಧಾನ: ಒಂದೂವರೆ ಚಮಚ ತುಪ್ಪವನ್ನು ಮಂದಾಗ್ನಿಯಲ್ಲಿ ಉರಿಯಲ್ಲಿ ಇಡಬೇಕು. ಅದಕ್ಕೆ ಓಂ ಕಾಳು, ಧನಿಯಾ ಹಾಗೂ ಜೀರಿಗೆಯನ್ನು ಹಾಕಿ ಫ್ರೈ ಮಾಡಬೇಕು. ಇದಕ್ಕೆ ಸ್ವಲ್ಪ ನೀರನ್ನು ಹಾಕಿ ನಾಲ್ಕು ನಿಮಿಷ ಕುದಿಸಬೇಕು. 100 ಎಂ.ಎಲ್​ನಷ್ಟು ನೀರು ಹಾಕಿದರೆ ಸಾಕಾಗುತ್ತದೆ. ಮಾಡಬೇಕಿರುವುದು ಇಷ್ಟೇ.  ಪ್ರತಿನಿತ್ಯವೂ ಇದನ್ನು ತೆಗೆದುಕೊಂಡರೆ ಏನೂ ಸಮಸ್ಯೆ ಇಲ್ಲ ಎನ್ನುವುದು ತಜ್ಞರ ಅಭಿಮತ.  ಇದನ್ನು ಸೋಸಿಯಾದರೂ ಕುಡಿಯಬಹುದು, ಹಾಗೆನೂ ಕುಡಿಯಬಹುದು. ಸೋಸದೇ ಕುಡಿದರೆ ಪ್ರಯೋಜನ ಸಾಕಷ್ಟಿದೆ ಎಂದಿದ್ದಾರೆ ವೈದ್ಯರು. ಇಷ್ಟು ಸುಲಭದಲ್ಲಿ ಸಮಸ್ಯೆ ಹೋಗಲಾಡಿಸಬಹುದು ಎಂದರೆ ಮನೆಯಲ್ಲಿಯೇ ಮಾಡಬಹುದು ಅಲ್ಲವೆ? 

ಹೊಟ್ಟೆ ಬೊಜ್ಜು ಕರಗಿಸೋದು ಇಷ್ಟು ಸುಲಭನಾ? ಡಯಟೀಷಿಯನ್​ ಕುಸುಮಾ ಈಸಿ ಟಿಪ್ಸ್​

ಇನ್ನು ಡಾ.ಸಿ.ಎ ಕಿಶೋರ್​ ಅವರು, ಮಕ್ಕಳಿಗೆ ಒಳ್ಳೆಯ ಫುಡ್​ ಎಂದರೆ ಯಾವುದು ಎಂಬ ಬಗ್ಗೆ ಈ ಕೆಳಗಿನ ವಿಡಿಯೋದಲ್ಲಿ ಮಾತನಾಡಿದ್ದಾರೆ ನೋಡಿ... 


click me!