25 ವರ್ಷಗಳಿಂದ ಸಕ್ಕರೆ ದೂರ, ಮದ್ಯ-ಸಿಗರೆಟ್​ ಮುಟ್ಟೇ ಇಲ್ಲ; ಮಾಂಸಾಹಾರಕ್ಕೆ ಜಾಗವೇ ಇಲ್ಲ!

By Suvarna News  |  First Published May 1, 2024, 6:10 PM IST

ಬಾಲಿವುಡ್​ ನಟ ಜಾನ್​ ಅಬ್ರಹಾಂ 51ನೇ ವಯಸ್ಸಿನಲ್ಲಿಯೂ ಫಿಟ್​ ಆಗಿರುವ ರಹಸ್ಯ ಇದೀಗ ಬಯಲುಗೊಂಡಿದೆ. ಅವರ ದಿನಚರಿ ಕೇಳಿ ಫ್ಯಾನ್ಸ್​ ಶಾಕ್​ ಆಗಿದ್ದಾರೆ. 
 


ಸಿನಿ ಕ್ಷೇತ್ರ ಎಂದರೆ ಅಲ್ಲಿ ನಟಿಯರು ಮಾತ್ರವಲ್ಲದೇ, ನಟರೂ ಫಿಟ್​ನೆಸ್​ ಕಾಯ್ದುಕೊಳ್ಳುವುದು ಅನಿವಾರ್ಯವೇ. ಸ್ವಲ್ಪವೇ ಹೆಚ್ಚೂ ಕಡಿಮೆ ಆದರೂ ಸಿನಿಮಾಗಳಲ್ಲಿ ಚಾನ್ಸೇ ಸಿಗದಷ್ಟು ಅವರ ಬಾಳು ಆಗಿ ಹೋಗುತ್ತದೆ. ಇದೇ ಕಾರಣಕ್ಕೆ ಜಿಮ್​, ವರ್ಕ್​ಔಟ್​, ಡಯೆಟ್​, ಅದೂ ಇದೂ ಅಂತೆಲ್ಲಾ  ಸೆಲೆಬ್ರಿಟಿಗಳು ನಾನಾ ಕಸರತ್ತು ಮಾಡುತ್ತಾರೆ,  ಆಹಾರದ ವಿಷಯದಲ್ಲಿ ಹಲವು ತ್ಯಾಗ ಮಾಡುತ್ತಾರೆ. ಅಂಥದ್ದೇ ಒಬ್ಬ ತಾರೆ ಜಾನ್​  ಜಾನ್ ಅಬ್ರಹಾಂ (Johan Abraham). ಹೌದು. ಜಾನ್​ ಅವರು 51ನೇ ವಯಸ್ಸಿನಲ್ಲಿಯೂ ಫಿಟ್​ ಆ್ಯಂಡ್​ ಫೈನ್​ ಆಗಿರುವುದಕ್ಕೆ ಕಾರಣ, ಅವರ ಸ್ಟ್ರಿಕ್ಟ್​ ಡಯೆಟ್​ ಅಂತೆ. ಅಂದಹಾಗೆ ನಟ  25 ವರ್ಷಗಳಿಂದ ಸಿಹಿಯನ್ನೇ ತಿಂದಿಲ್ಲವಂತೆ!
 
ಜಾನ್ ಅಬ್ರಹಾಂ ಅವರು ಸಂಪೂರ್ಣವಾಗಿ ಸಿಹಿಯಿಂದ ದೂರ ಇದ್ದಾರೆ. ಈ ಬಗ್ಗೆ ಬ್ರಿಟನ್-ಪಾಕಿಸ್ತಾನ  ನಟ ಅಲಿ ಖಾನ್ ತಿಳಿಸಿದ್ದಾರೆ. ಬ್ರಿಟಿಷ್-ಪಾಕಿಸ್ತಾನಿ ನಟ ಅಲಿ ಖಾನ್ ಅವರು ಜಾನ್ ಅಬ್ರಹಾಂ ಅವರೊಂದಿಗೆ ಕೆಲಸ ಮಾಡಿದ್ದನ್ನು ಇತ್ತೀಚೆಗೆ ನೆನಪಿಸಿಕೊಂಡರು.  ಜಾನ್ ಒಬ್ಬ ಸನ್ಯಾಸಿಯಂತೆ ಬದುಕುತ್ತಾರೆ. ಅದು ಚಲನಚಿತ್ರೋದ್ಯಮದಲ್ಲಿ ಅವರ ನಿರಂತರ ಯಶಸ್ಸಿನ ರಹಸ್ಯವಾಗಿದೆ ಎಂದಿದ್ದಾರೆ ಅಲಿ ಖಾನ್​. ಜೋಯಾ ಅಖ್ತರ್ ನಿರ್ದೇಶನದ ‘ಲಕ್ ಬೈ ಚಾನ್ಸ್’ ಸಿನಿಮಾದಲ್ಲಿ ಅಲಿ ಖಾನ್ ನಟಿಸಿದ್ದರು. ಈ ಚಿತ್ರದಲ್ಲಿ ಜಾನ್ ಅಬ್ರಹಾಂ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ‘ತೆಹ್ರಾನ್’ ಸಿನಿಮಾದಲ್ಲಿ ಜಾನ್ ಜೊತೆ ಕೆಲಸ ಮಾಡೋ ಅವಕಾಶ ಆ್ಯಲಿಗೆ ಸಿಕ್ಕಿದೆ. ಅವರು ಜಾನ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಜಿಮ್ಮೂ ಇಲ್ಲ, ಡಯೆಟೂ ಇಲ್ಲ, ಕ್ರೀಂ-ಶ್ಯಾಂಪೂ ಗೊತ್ತೇ ಇರ್ಲಿಲ್ಲ... ಆದ್ರೂ 59ನೇ ವಯಸ್ಸಲ್ಲೂ ಸ್ಮಾರ್ಟ್-ಫಿಟ್​ ಹೇಗೆ?

Tap to resize

Latest Videos

ಜಾನ್ ಅಬ್ರಹಾಂ ಅವರ ಶಿಸ್ತನ್ನು ನೋಡಿ ಬ್ರಿಟಿಷ್ ತಾವು ದಂಗಾಗಿರುವುದಾಗಿ ಅಲಿ ಹೇಳಿದ್ದಾರೆ.  ಡಾನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಜಾನ್‌ಗೆ ನಿಜವಾಗಿಯೂ ಪ್ರತಿಭೆ ಇದೆಯೇ ಅಥವಾ ಇಷ್ಟು ವರ್ಷಗಳ ಕಾಲ ಅವರು ತನ್ನ ಮೈಕಟ್ಟುಹೇಗೆ ಕಾಪಾಡಿಕೊಂಡು ಬಂದಿದ್ದಾರೆ ಎಂದು ಅಲಿಯನ್ನು ಕೇಳಲಾಯಿತು.  ನಿಮ್ಮಲ್ಲಿ ಟ್ಯಾಲೆಂಟ್ ಇಲ್ಲ ಎಂದರೆ ಚಿತ್ರರಂಗದಲ್ಲಿ ಹೆಚ್ಚು ವರ್ಷ ಬದುಕೋಕೆ ಆಗಲ್ಲ. ಜಾನ್ ಅವರು ಈ ವಯಸ್ಸಲ್ಲೂ ಶರ್ಟ್ ತೆಗೆದು ಪೋಸ್ ಕೊಡುತ್ತಾರೆ ಎಂದರೆ ಅದಕ್ಕೆ ಕಾರಣ ಕಳೆದ 25 ವರ್ಷಗಳಲ್ಲಿ ಅವರು ಸಿಹಿಯನ್ನೇ ಟೇಸ್ಟ್ ಮಾಡಿಲ್ಲ ಎಂದಿದ್ದಾರೆ.
 
ಅಬ್ರಹಾಂ ಕುರಿತು ಇನ್ನೂ ಕೆಲವು ಇಂಟರೆಸ್ಟಿಂಗ್​ ವಿಷಯ ಹೇಳೀರುವ ಅವರು, ಸಕ್ಕರೆ ಮಾತ್ರವಲ್ಲದೇ ಖಾನ್​ ಅವರು,  ಆಲ್ಕೋಹಾಲ್ ರುಚಿಯನ್ನೂ ನೋಡಿಲ್ಲ.  ಅವರು ಎಂದಿಗೂ ಧೂಮಪಾನ ಮಾಡಿಲ್ಲ, ಮಾತ್ರವಲ್ಲದೇ ಅವರು ಸಂಪೂರ್ಣ ಸಸ್ಯಾಹಾರಿ.  ಅವರು ಮಾಂಸ ಸೇವನೆ ಮಾಡುವುದೇ ಇಲ್ಲ ಎಂದಿದ್ದಾರೆ.   ಇನ್ನು ಅಬ್ರಹಾಂ ಪ್ರಕಾರ ಜೀವನದಲ್ಲಿ ಉತ್ತಮ ಆಹಾರ, ಉತ್ತಮ ವ್ಯಾಯಾಮ ಮತ್ತು ಉತ್ತಮ ನಿದ್ರೆ ಬೇಕು.. ಅವುಗಳಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೂ ಟ್ರೈಪಾಡ್ ಬೀಳುತ್ತದೆ. ಅವರು ದಿನನಿತ್ಯ ಬೆಳಿಗ್ಗೆ 4:30 ಕ್ಕೆ ಏಳುತ್ತಾರೆ.  27 ವರ್ಷಗಳಿಂದ ಇದೇ ದಿನಚರಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. . 

53ರ ವಯಸ್ಸಿನಲ್ಲೂ ಗಂಡಿಗಾಗಿ ಕಾಯುತ್ತಿರೋ 'ದುರಂತ ನಾಯಕಿ' ಮನಿಷಾ ಕೊಯಿರಾಲಾ!

click me!