ನಿಮಗೂ ಸ್ಲೀಪ್ ಅಪ್ನಿಯಾ ಇದೆಯಾ? ಭಾರತದಲ್ಲಿ 10 ಕೋಟಿ ಮಂದಿಯಲ್ಲಿದೆ ಈ ಸಮಸ್ಯೆ!

Published : Oct 09, 2023, 03:52 PM IST

ಏಮ್ಸ್ ತಜ್ಞ ವೈದ್ಯರ ತಂಡದ ಅಧ್ಯಯನ ವರದಿ ಬಹಿರಂಗವಾಗಿದೆ. ಈ ವರದಿ ಪ್ರಕಾರ ಭಾರತದಲ್ಲಿ ಬರೋಬ್ಬರಿ 10 ಕೋಟಿ ಮಂದಿ ಸ್ಲೀಪ್ ಅಪ್ನಿಯಾ ಸಮಸ್ಯೆ ಎದುರಿಸುತ್ತಿದ್ದಾರೆ. ಮೇಲ್ನೋಟಕ್ಕೆ ಸಾಮಾನ್ಯ ಸಮಸ್ಯೆಯಂತೆ ಕಂಡರೂ ಇದರ ಗಂಭೀರತೆ ಅರ್ಥವಾದರೆ ಎಚ್ಚರವಹಿಸುವುದು ಖಚಿತ. ಏನಿದು ಸ್ಲೀಪ್ ಅಪ್ನಿಯಾ? 

PREV
18
ನಿಮಗೂ ಸ್ಲೀಪ್ ಅಪ್ನಿಯಾ ಇದೆಯಾ? ಭಾರತದಲ್ಲಿ 10 ಕೋಟಿ ಮಂದಿಯಲ್ಲಿದೆ ಈ ಸಮಸ್ಯೆ!

ಅಬ್‌ಸ್ಟ್ರಕ್ಟೀವ್ ಸ್ಲೀಪ್ ಅಪ್ನಿಯಾ. ಸರಳವಾಗಿ ಹೇಳಬೇಕು ಅಂದರೆ ಬಾಯಿಬಿಟ್ಟು ಮಲಗುವುದು. ಇದೊಂದು ಸಮಸ್ಯೆಯೇ? ಅನ್ನೋ ಪ್ರಶ್ನೆ ಕಾಡುವುದು ಸಹಜ. ಹೌದು, ಇದು ಗಂಭೀರ ಖಾಯಿಲೆ. ಇದರ ಪರಿಣಾಮ ಕೂಡ ಅಷ್ಟೇ ಗಂಭೀರ.

28

ಭಾರತದಲ್ಲಿ ಬರೋಬ್ಬರಿ 100 ಮಿಲಿಯನ್ ಮಂದಿಗೆ ಸ್ಲೀಪ್ ಅಪ್ನಿಯಾ ಸಮಸ್ಯೆ ಇದೆ ಎಂದು  ಏಮ್ಸ್ ವೈದ್ಯರ ಅಧ್ಯಯನ ವರದಿ ಹೇಳುತ್ತಿದೆ. ಹಲವರಿಗೆ ಇದೇ ಸಮಸ್ಯೆ ಮಾರಣಾಂತಿಕವಾಗಬಹುದು.

38

ಮಲಗುವಾಗ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ದೇಹಕ್ಕೆ ಸಿಗದಿರುವುದು, ಶುದ್ಧ ಆಮ್ಲಜನಕದ ಕೊರತೆ, ಮೂಗಿನ ಮೂಲಕ ಉಸಿರಾಟದ ಸಮಸ್ಸೆ ಎದರಾಗುವ ಕಾರಣ ಸಹಜವಾಗಿ ಬಾಯಿಬಿಟ್ಟು(ಸ್ಲೀಪ್ ಅಪ್ನಿಯಾ) ಮಲಗುತ್ತಾರೆ.
 

48

ಮಗುವಾಗ ಗಂಟಲು, ಗಂಟಲು ನಾಳ, ನಾಲಗೆ ಸೇರಿದಂತೆ ಹಲವು ಅಂಗಾಂಗಗಳು ವಿಶ್ರಾಂತಿಗೆ ಜಾರಲಿದೆ. ಈ ವೇಳೆ ಗಂಟಲು ನಾಳದಲ್ಲಿನ ಮಸಲ್ ಸಡಿಲಗೊಳ್ಳಲಿದೆ. ಇದರಿಂದ ಉಸಿರಾಟದ ಗಾಳಿ ಶ್ವಾಸಕೋಶ ಸೇರುವ ನಾಳ ಮತ್ತಷ್ಟು ಚಿಕ್ಕದಾಗಲಿದೆ. ಹೀಗಾಗಿ ಮೂಗಿನ ಮೂಲಕ ಉಸಿರಾಟ ಕಷ್ಟವಾಗಲಿದೆ. 

58

ಸ್ಲೀಪ್ ಅಪ್ನಿಯಾ ಸಮಸ್ಯೆಯಿಂದ ಪೂರ್ಣ ಪ್ರಮಾಣದ ನಿದ್ದೆಯಾಗುವುದಿಲ್ಲ. ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ನಿದ್ದೆ ಮಾಡಿದರೂ ನಿದ್ದೆ ಬಿಟ್ಟಿರುವುದಿಲ್ಲ. ಇದರಿಂದ ಹೃದಯ ಸಂಬಂಧ ಸಮಸ್ಯೆ, ಡಯಾಬಿಟಿಸ್ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿದೆ. ಇಷ್ಟೇ ಅಲ್ಲ ಸ್ಲೀಪ್ ಅಪ್ನಿಯಾ ಸಮಸ್ಯೆಯಿಂದ ದೇಹದಲ್ಲಿ ಆಮ್ಲಜನ ಕೊರತೆ ಎದುರಾಗಿ ಮಾರಣಾಂತಿಕವಾಗಬಹುದು.

68

ಭಾರತದ ಶೇಕಡಾ 11 ರಷ್ಟು ವಯಸ್ಕರು ಸ್ಲೀಪ್ ಅಪ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಪುರುಷರ ಪ್ರಮಾಣ ಶೇಕಡಾ 13 ಹಾಗೂ ಮಹಿಳೆಯರ ಪ್ರಮಾಣ ಶೇಕಡಾ 5.

78

ಭಾರತದಲ್ಲಿ 15 ರಿಂದ 64 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಟ್ಟು 104 ಮಿಲಿಯನ್ ಭಾರತೀಯರಲ್ಲಿ ಈ ಸಮಸ್ಯೆ ಇದೆ. ಈ ಪೈಕಿ 47 ಮಿಲಿಯನ್ ಮಂದಿಗೆ ಸ್ಲೀಪ್ ಅಪ್ನಿಯಾದಿಂದ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ.

88

ಈ ಸಮಸ್ಯೆಗೆ ಮುಖ್ಯ ಕಾರಣ ಇಂದಿನ ಲೈಫ್‌ಸ್ಟೈಲ್. ವ್ಯಾಯಾಮ, ಆಹಾರ, ನಿದ್ದೆ, ನೀರು ಸೇವನೆ, ಕೆಮಿಕಲ್‌ಯುಕ್ತ ಆಹಾರ ಪದಾರ್ಥ ಸೇವನೆ, ಹೆಚ್ಚಿನ ಒತ್ತಡ, ಆತಂಕ, ಚಿಂತೆ  ಸೇರಿದಂತೆ ಕೆಟ್ಟ ಜೀವನಕ್ರಮಗಳಿಂದ ಸ್ಲೀಪ್ ಅಪ್ನಿಯಾ ಕಾಡಲಿದೆ. ಇನ್ನು ದೀರ್ಘಕಾಲದ ಶೀತ, ಮೂಗು ಕಟ್ಟುವಿಕೆ ಸಮಸ್ಯೆಗಳಿದ್ದವರಿಗೂ ಸ್ಲೀಪ್ ಅಪ್ನಿಯಾ ಸಮಸ್ಯೆ ಸುಲಭವಾಗಿ ಕಾಡಲಿದೆ.
 

Read more Photos on
click me!

Recommended Stories