ಕ್ರಿಕೆಟಿಗ ರೋಹಿತ್ ಶರ್ಮಾ ಪತ್ನಿ ರಿತಿಕಾ ಶರ್ಮಾ ಎರಡನೇ ಬಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಭಿಮಾನಿಗಳಿಗೆ ಅಚ್ಚರಿಯನ್ನು ನೀಡಿತ್ತು. ಏಕೆಂದರೆ ಇದಕ್ಕೂ ಮೊದಲು, ಈ ಜೋಡಿ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ರೋಹಿತ್ ತನ್ನ ಪ್ರೆಗ್ನೆನ್ಸಿ ಸುದ್ದಿಯನ್ನು ಮರೆಮಾಚಿದ ಏಕೈಕ ಸೆಲೆಬ್ರಿಟಿ ಅಲ್ಲ. ಈ ಹಿಂದೆ, ಅನೇಕ ಬಾಲಿವುಡ್, ಟಿವಿ ಮತ್ತು ಕ್ರಿಕೆಟಿಗರ ಪತ್ನಿಯರು ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು (pregnancy news) ಕೊನೆಯವರೆಗೂ ರಹಸ್ಯವಾಗಿಟ್ಟಿದ್ದರು. ಯಾವ ಸೆಲೆಬ್ರಿಟಿಗಳು ಗರ್ಭಧಾರಣೆಯ ಸುದ್ದಿಯನ್ನು ಸೀಕ್ರೆಟ್ ಆಗಿಟ್ಟಿದ್ದರು ನೋಡೋಣ.