ನಿನ್ನ ಕಥೆ ಹೊರಗೆ ಬಂದಿದೆ... ಜೈಲಿನಲ್ಲಿ ನೋಡ್ಕೋತೀನಿ... ದೀಪಾವಳಿ ಗಿಫ್ಟ್​ ಹೆಸರಲ್ಲಿ ತಮನ್ನಾಗೆ ಕೈಕೋಳ!

By Suchethana D  |  First Published Nov 16, 2024, 5:30 PM IST

ದೀಪಾವಳಿ ಗಿಫ್ಟ್​ ಎಂದು ನಟಿ ತಮನ್ನಾ ಭಾಟಿಯಾ ಮತ್ತು ಅವಿನಾಶ್​ ತಿವಾರಿ ಅವರಿಗೆ ಕೈಕೋಳ ಗಿಫ್ಟ್​ ಕೊಡಲಾಗಿದೆ. ನಟರು ಹೇಳಿದ್ದೇನು? 
 


ದೀಪಾವಳಿ ಸಡಗರ ಮುಗಿದಿದೆ. ಆದರೆ ಇದೀಗ ಬಾಲಿವುಡ್​ ನಟರಾದ ತಮನ್ನಾ ಭಾಟಿಯಾ ಮತ್ತು ಅವಿನಾಶ್​ ತಿವಾರಿ ಅವರ ದೀಪಾವಳಿ ಉಡುಗೊರೆ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಏಕೆಂದರೆ, ದೀಪಾವಳಿ ಸಂದರ್ಭದಲ್ಲಿ ಇವರಿಗೆ ನೀಡಿರುವ ಹಲವಾರು ಉಡುಗೊರೆಗಳಲ್ಲಿ ಕೈಕೋಳವನ್ನು ಕೂಡ ಯಾರೋ ಕಿಡಿಗೇಡಿಗಳು ನೀಡಿದ್ದಾರೆ. ತಮಗೆ ಸಿಕ್ಕಿರುವ ಉಡುಗೊರೆಗಳನ್ನು ಒಂದೊಂದಾಗಿ ತೋರಿಸಿದ ತಮನ್ನಾ ಮತ್ತು ಅವಿನಾಶ್​ ಅವರಿಗೆ ಶಾಕ್​ ಕೊಟ್ಟಿದ್ದು ಕೈಕೋಳ. ಉಡುಗೊರೆ ಬಾಕ್ಸ್​ನಲ್ಲಿದ್ದ ಈ ಉಡುಗೊರೆ ನೋಡಿ ನಟಿ ಸಕತ್​ ಗರಂ ಆಗಿದ್ದಾರೆ. ಇದು ತಮಾಷೆ  ಮಾಡುವ ವಿಷಯವಲ್ಲ ಎಂದು ಕಿಡಿ ಕಾರಿದ್ದಾರೆ. ವಿಚಿತ್ರ ಎಂದರೆ ಅದರಲ್ಲಿ ನಿನ್ನ ಕಥೆ ಹೊರಗೆ ಬಂದಿದೆ... ಜೈಲಿನಲ್ಲಿ ನೋಡ್ಕೋತೀನಿ... ಎಂಬ ಸಂದೇಶವನ್ನೂ ಇಡಲಾಗಿದ್ದು, ಇದೇನು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಇನ್ನು, ನಟಿ ತಮನ್ನಾ ಭಾಟಿಯಾ (Tamannaah Bhatia) ಬಗ್ಗೆ ಹೇಳುವುದಾದರೆ, ಇವರು ಹಾಗೂ ವಿಜಯ್ ವರ್ಮಾ ಅವರು  ಪ್ರೀತಿಸುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಡೇಟಿಂಗ್​ ಮಾಡಿದ ಮಾತ್ರಕ್ಕೆ ನಟ ನಟಿಯರು ಅವರನ್ನೇ ಮದ್ವೆಯಾಗುತ್ತಾರೆಂದೇನೂ ಇಲ್ಲ. ಆದರೆ ಈ ಜೋಡಿ ಮಾತ್ರ ವಿವಾಹ ಬಂಧನಕ್ಕೆ ಶೀಘ್ರದಲ್ಲಿಯೇ ಒಳಗಾಗಲಿದೆ ಎನ್ನುವ ಸುದ್ದಿ ಮೊದಲಿನಿಂದಲೂ ಇದೆ. ವಿಜಯ್​ ವರ್ಮಾ ಅವರಿಗೂ 38 ವರ್ಷ ವಯಸ್ಸಾಗಿದ್ದು, ಇಬ್ಬರಿಗೂ ಇದಾಗಲೇ ಮದುವೆಯ ವಯಸ್ಸು ಮೀರಿರುವ ಕಾರಣ, ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 1989ರಲ್ಲಿ ಹುಟ್ಟಿರೋ ನಟಿಗೆ ಈಗ 34 ವರ್ಷ ವಯಸ್ಸು.  ನಟ ವಿಜಯ್ ವರ್ಮಾ ಜೊತೆ ಡೇಟಿಂಗ್​ ಮಾಡುತ್ತಿದ್ದರೂ ಮದುವೆಯ ಬಗ್ಗೆ ಏನೂ ಹೇಳಿರಲಿಲ್ಲ. ಇದೀಗ ನಟಿಯ ಮನೆಯಲ್ಲಿ ಸಕತ್​ ಒತ್ತಡ ಬರುತ್ತಿದೆ ಎಂದು ವರದಿಯಾಗಿದೆ. ವಯಸ್ಸಾಗುತ್ತಿರುವ ಕಾರಣ ಹಾಗೂ ಇದಾಗಲೇ ಹಲವಾರು ಬಾಲಿವುಡ್​ ನಟಿಯರು ಮದುವೆ, ಮಕ್ಕಳು ಎಂದೆಲ್ಲಾ ಬಿಜಿಯಾಗಿರುವ ತಮ್ಮ ಮಗಳಿನ್ನೂ ಮದುವೆಯಾಗಿಲ್ಲ ಎನ್ನುವ ಚಿಂತೆ ತಮನ್ನಾ ಪಾಲಕರಿಗೆ ಕಾಡುತ್ತಿದೆಯಂತೆ. ಇದಕ್ಕಾಗಿಯೇ ನಟಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. 

Tap to resize

Latest Videos

undefined

30ರ ಯುವಕನ ಜತೆ 49ರ ನಟಿ ಅಮಿಷಾ ಪಟೇಲ್​ ಲವ್ವಿಡವ್ವಿ: ಉದ್ಯಮಿ ಕಮೆಂಟ್​ ನೋಡಿ ಫ್ಯಾನ್ಸ್ ಶಾಕ್​! ​

ಕೊನೆಗೂ ಇಬ್ಬರೂ  ಕಳೆದ ಜೂನ್‌ನಲ್ಲಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದರು.  2023ರ ಹೊಸ ವರ್ಷಾಚರಣೆ ವೇಳೆ ಈ ಜೋಡಿ  'ಲಿಪ್ ಲಾಕ್' ಮಾಡಿಕೊಂಡು ಸುದ್ದಿಯಾಗಿತ್ತು.  'ಲಸ್ಟ್ ಸ್ಟೋರೀಸ್' ಚಿತ್ರದ ಬಳಿಕ ತಮನ್ನಾ ವಿಜಯ್ ಇನ್ನಷ್ಟು ಹತ್ತಿರವಾಗಿದ್ದಾರೆ. ಅದಾದ ಮೇಲೆ ಇವರಿಗೆ ಹೋದಲ್ಲಿ ಬಂದಲ್ಲಿ ಮದ್ವೆ ಸುದ್ದಿಯನ್ನೇ ಕೇಳಲಾಗಿತ್ತು.  'ಜಾನೇ ಜಾನ್' ಚಿತ್ರದಲ್ಲಿ ಕರೀನಾ ವಿಜಯ್ ಒಟ್ಟಿಗೇ ಕೆಲಸ ಮಾಡಿದ್ದಾರೆ. ಆ ವೇಳೆ ಕರೀನಾ ಕಪೂರ್ ತಮ್ಮ ಇಡೀ ಫ್ಯಾಮಿಲಿ ಜತೆ ಬಂದಿದ್ದರು. ಆಗ ವಿಜಯ್​ ಅವರು,  ತಮಗೂ ಮಕ್ಕಳು ಬೇಕು, ಫ್ಯಾಮಿಲಿ ಮಾಡಿಕೊಳ್ಳಬೇಕು ಎಂದು ಮಾತನಾಡಿದ್ದರು. ಆಗ ಕರೀನಾ 'ನೀವು ಸರಿಯಾದ ರೂಟ್‌ನಲ್ಲಿ ಇದ್ದೀರಿ ಎನಿಸುತ್ತಿದೆ. ನೀವು ನನ್ನಿಂದ ಪ್ರೇರಣೆ ಪಡೆದಿರುವುದು ಒಳ್ಳೆಯದು. ಆದಷ್ಟು ಬೇಗ ನಿಮ್ಮ ಆಸೆ ಕೈಗೂಡಲಿ' ಎಂದಿದ್ದರು. ಒಟ್ಟಿನಲ್ಲಿ ಈ ಜೋಡಿ ಯಾವಾಗ ಹಸೆ ಮಣೆ ಏರುವುದು ಎಂದು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದು, ಇದೀಗ ತಮ್ಮ ಸಂಬಂಧದ ಕುರಿತು ವಿಜಯ್​ ವರ್ಮಾ ಓಪನ್​ ಆಗಿ ಮಾತನಾಡಿದ್ದಾರೆ. 

  ತಮನ್ನಾ ಕುರಿತು ಓಪನ್​ ಆಗಿ ಮಾತನಾಡಿರುವ ವಿಜಯ್ ವರ್ಮಾ, "ನಾನು 2005 ರಲ್ಲಿ ಹೈದರಾಬಾದ್ ತೊರೆದು ಮುಂಬೈಗೆ ಬಂದಿದ್ದೆ.  ಮತ್ತು ಅದೇ ವರ್ಷ ಅವಳು ಮುಂಬೈನಿಂದ  ಹೈದರಾಬಾದ್‌ಗೆ ಬಂದಳು. ಅವಳು ಹೈದರಾಬಾದ್‌ನಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಂಡ ಮುಂಬೈ ಹುಡುಗಿ ಮತ್ತು ನಾನು ಹೈದರಾಬಾದ್​ನಲ್ಲಿ ಸ್ಥಾಪಿತಗೊಂಡಿರುವ  ಹುಡುಗ. ಅವಳು ನಿರರ್ಗಳವಾಗಿ ತಮಿಳು ಮತ್ತು ತೆಲುಗು ಮಾತನಾಡುತ್ತಾಳೆ, ಆದ್ದರಿಂದ ನಮ್ಮ ಸಂಬಂಧವು ತುಂಬಾ ಆಸಕ್ತಿದಾಯಕವಾಗಿದೆ ಎಂದಿದ್ದಾರೆ ವಿಜಯ್​ ವರ್ಮಾ. ತಮ್ಮ ಸಂಬಂಧದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಅವರು,  "ನಮ್ಮ ಸಂಬಂಧವು ಲಸ್ಟ್ ಸ್ಟೋರಿಗಳ ನಂತರ ಪ್ರಾರಂಭವಾಯಿತು, ಮೊದಲು, ನಾವು ಸಹ ನಟರಾಗಿ, ತುಂಬಾ ಚಿತ್ರಗಳಲ್ಲಿ ನಟಿಸಿದ್ದೇವೆ,  ಭೇಟಿಯಾಗಿದ್ದೆವು. ಆದರೆ ಲಸ್ಟ್​ ಸ್ಟೋರೀಸ್​ -2 ಬಳಿಕ ಪ್ರೀತಿ ಗಾಢವಾಯಿತು. ತಮನ್ನಾ ಜೊತೆ ನನಗೆ ತುಂಬಾ ಮಜಾ ಬರುತ್ತದೆ. ಆಕೆಯ ಜೊತೆ ಇರುವುದು ರೋಚಕ ಎಂದಿದ್ದಾರೆ ನಟ. 

ಶಾರುಖ್​ ಖಾನ್​ ಹಣವೇ ಕೊಡದಿದ್ರೂ ಬೀದಿ ವ್ಯಾಪಾರಿಗಳು ಮಾಲಾಮಾಲ್​- ಇದು ನಟನ ಕಮಾಲ್​!

click me!