ರಾಮೇಶ್ವರಂ ಕೆಫೆಯು ಪ್ರತಿದಿನ ರಾಷ್ಟ್ರಗೀತೆಯೊಂದಿಗೆ ಕೆಲಸ ಆರಂಭಿಸುವುದನ್ನು ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದ್ದು, ಕೆಲವರು ಶ್ಲಾಘಿಸಿದರೆ ಇನ್ನು ಕೆಲವರು ಟೀಕಿಸಿದ್ದಾರೆ.
ತುಪ್ಪದಲ್ಲೇ ಮುಳುಗೇಳುವ ಇಡ್ಲಿ, ದೋಸೆಗಳನ್ನು ಮಾಡೋದ್ರಲ್ಲಿ ಫೇಮಸ್ ಆಗಿರುವ ರಾಮೇಶ್ವರಂ ಕೆಫೆ, ಈ ವರ್ಷದ ಮಾರ್ಚ್‌ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಇಂದು ರಾಮೇಶ್ವರಂ ಕೆಫೆ ಎಲ್ಲರ ಮನೆಮಾತಾಗಿದೆ. ಇದರ ನಡುವೆ ರಾಮೇಶ್ವರಂ ಕೆಫೆ ಸೋಶಿಯಲ್ ಮೀಡಿಯಾದಲ್ಲಿ ಕೆಫೆ ಕುರಿತಾದ ವಿವರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತದೆ. ಒಂದು ದಿನದ ಹಿಂದೆ ತನ್ನ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ರೀಲ್ಸ್ ಹಂಚಿಕೊಂಡಿರುವ ರಾಮೇಶ್ವರಂ ಕೆಫೆ, ತನ್ನ ದಿನನಿತ್ಯದ ಕೆಲಸ ಆರಂಭ ಹೇಗಾಗುತ್ತದೆ ಅನ್ನೋದನ್ನ ತಿಳಿಸಿದೆ. 'ರಾಷ್ಟ್ರೀಯ ಗೀತೆ ರಾಮೇಶ್ವರಂ ಕೆಫೆಯಲ್ಲಿ ಪ್ರತಿದಿನದ ಸಂಪ್ರದಾಯವಾಗಿದೆ.ಎಲ್ಲಾ ಉದ್ಯೋಗಿಗಳು ತಮ್ಮ ಕೆಲಸವನ್ನು ಪ್ರಾರಂಭಿಸುವ ಮೊದಲು ರಾಷ್ಟ್ರಗೀತೆಗಾಗಿ ಒಟ್ಟುಗೂಡುತ್ತಾರೆ' ಎಂದು ವಿಡಿಯೋವನ್ನು ಪೋಸ್ಟ್ ಮಾಡಿದೆ. ಬೆಳಗ್ಗೆ 5 ಗಂಟೆಗೆ ರಾಮೇಶ್ವರಂ ಕೆಫೆ ಎದುರು ಎಲ್ಲರೂ ನಿಂತು ರಾಷ್ಟ್ರಗೀತೆ ಹಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ವಿಡಿಯೋ ಹಿನ್ನಲೆಯಲ್ಲಿ ವಂದೇ ಮಾತರಂ ಗೀತೆಯನ್ನು ಹಾಕಿದೆ.
ಇದಕ್ಕೆ ಕೆಲವು ಪರ ವಿರೋಧದ ಕಾಮೆಂಟ್‌ಗಳೂ ಬಂದಿವೆ.'ದೇಶದಲ್ಲಿ ಉತ್ತಮ ನಿರ್ವಹಣಾ ಅಭ್ಯಾಸಗಳಿಗಾಗಿ ನೀವು ಕೆಲವು ಬಲವಾದ ಅಡಿಪಾಯಗಳನ್ನು ಮತ್ತು ಉದಾಹರಣೆಗಳನ್ನು ಸ್ಥಾಪಿಸುತ್ತಿದ್ದೀರಿ...ಭವಿಷ್ಯದ ಜಗತ್ತು ನಿಮ್ಮಿಂದ ಕಲಿಯುತ್ತದೆ.. ಶೀಘ್ರದಲ್ಲೇ ಇದೊಂದು ದೊಡ್ಡ ಕೇಸ್ ಸ್ಟಡಿ ಆಗಲಿದೆ.. ಅಭಿನಂದನೆಗಳು ದಿವ್ಯಾ' ಎಂದು ಬರೆದಿದ್ದಾರೆ.
undefined
'ಎಂದಿನಿಂದ ವಂದೇಮಾತರಂ ದೇಶದ ರಾಷ್ಟ್ರಗೀತೆಯಾಯಿತು' ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. 'ಕೆಲಸದ ಸ್ಥಳದಲ್ಲಿ ಇದು ಬಲವಂತವೇ? ಅವರು ಅದನ್ನು ಮಾಡಲು ಉತ್ಸುಕರಾಗಿ ಕಾಣುತ್ತಾರೆಯೇ? ಸುಮ್ಮನೆ ನಿಮ್ಮನ್ನು ಕೇಳಿಕೊಳ್ಳಿ' ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.
ಸುಮ್ಮನೆ ಇದು ಓವರ್ ಆಕ್ಟಿಂಗ್ ರೀತಿ ಕಾಣುತ್ತದೆ. ಅತಿಯಾದ ಬೆಲೆಯಲ್ಲಿ ದೋಸೆ ಮಾರೋಕೆ ನೀವು ಫೇಮಸ್. ರಾಷ್ಟ್ರಗೀತೆ ಹಾಡಿ ಕೆಲಸ ಆರಂಭ ಮಾಡೋದ್ರಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ. ರಾಷ್ಟ್ರಪ್ರೇಮದ ಕಾರಣಕ್ಕಾಗಿ ರಾಮೇಶ್ವರಂ ಕೆಫೆಯ ಮಾಲೀಕರು ಸುದ್ದಿಯಲ್ಲಿರುತ್ತಾರೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ನೆನಪಿಗೆ ಅವರ ಹುಟ್ಟೂರಾದ ರಾಮೇಶ್ವರಂ ಹೆಸರನ್ನೇ ತಮ್ಮ ಕೆಫೆಗೆ ಮಾಲೀಕರು ಇರಿಸಿದ್ದಾರೆ. ಇದು ಅವರು ರಾಷ್ಟ್ರಭಕ್ತಿಯ ಇನ್ನೊಂದು ಉದಾಹರಣೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.
'ಇದು ಶ್ರೇಷ್ಠ ಸಾಧನೆ. ಆದರೆ, ನಿಮ್ಮ ಕೆಫೆಯ ಆಹಾರ ಸಾಮಾನ್ಯರಿಗೂ ಕೈಗೆಟುಕುವಂತೆ ಮಾಡಿ. ಲಾಭ ಮಾಡೋದು ಒಂದೇ ನಿಮ್ಮ ಉದ್ದೇಶವಾಗಿರಬಾರದು' ಎಂದು ಯೂಸರ್ ಒಬ್ಬರು ಬರೆದಿದ್ದಾರೆ. 'ವಾಹ್... ಇದು ಅದ್ಭುತವಾಗಿದೆ... ನಿಜವಾಗಲೂ.. ನಮ್ಮ ದೇಶವನ್ನು ಗೌರವಿಸುವ ಮೂಲಕ ದಿನವನ್ನು ಪ್ರಾರಂಭಿಸುವುದು ನಿಜವಾಗಿಯೂ ಅದ್ಭುತವಾಗಿದೆ..' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ವಾರಕ್ಕೆ ಎಷ್ಟು ಬಿಯರ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು?
ಬೆಂಗಳೂರಿನ ಅತ್ಯಂತ ಓವರ್‌ರೇಟೆಡ್ ದರ್ಶನಿ ಏನಾದರೂ ಇದ್ದರೆ, ಅದು ನಿಮ್ಮದೆ. ಆದರೆ, ನಿಮ್ಮ ಈ ಕೆಲಸವನ್ನು ನಾನು ಖಂಡಿತವಾಗಿಯೂ ಮೆಚ್ಚುತ್ತೇನೆ ಎಂದು ಕಾಮೆಂಟ್ ಮಾಡಲಾಗಿದೆ.'ನೀವು ಇಲ್ಲಿನ ಸ್ಥಳೀಯ ಜನರಿಗೆ ಏಕೆ ಉದ್ಯೋಗ ನೀಡುತ್ತಿಲ್ಲ ಮತ್ತು ವೆಚ್ಚವನ್ನು ಕಡಿತಗೊಳಿಸಲು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಲು ಇತರ ರಾಜ್ಯಗಳಿಂದ ಅಗ್ಗದ ಕಾರ್ಮಿಕರನ್ನು ಯಾಕೆ ಆಮದು ಮಾಡಿಕೊಳ್ಳುತ್ತೀರಿ' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಸೈನಿಕನ ಸಿನಿಮಾ 'ಅಮರನ್' ಪ್ರದರ್ಶನದ ವೇಳೆ ಥಿಯೇಟರ್‌ನಲ್ಲಿ ಪೆಟ್ರೋಲ್ ಬಾಂಬ್ ದಾಳಿ!