ವಿಚಿತ್ರ ಹೇರ್‌ಸ್ಟೈಲ್‌ನಲ್ಲಿ ಹಾಟ್ ಫೋಸ್ ಕೊಟ್ಟ ಮಲಯಾಳಿ ಬೆಡಗಿ, ಮಾಡರ್ನ್‌ ಜನರೇಷನ್‌ ಶಕೀಲಾ ಎಂದ ಫ್ಯಾನ್ಸ್‌!

First Published | Jan 20, 2024, 11:35 AM IST

ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್‌ ಲುಕ್‌ನಿಂದಲೇ ಆಗಾಗ ವೈರಲ್‌ ಆಗುತ್ತಿರುತ್ತಾರೆ. ಹೀಗೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳೋ ನಟಿಯಲ್ಲೊಬ್ಬರು ಹನಿ ರೋಸ್‌. ಸದ್ಯ ಆರೆಂಜ್‌ ಡ್ರೆಸ್‌ನಲ್ಲಿ ವಿಚಿತ್ರ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸ್ಕೊಂಡು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್‌ ಲುಕ್‌ನಿಂದಲೇ ಆಗಾಗ ವೈರಲ್‌ ಆಗುತ್ತಿರುತ್ತಾರೆ. ಹೀಗೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳೋ ನಟಿಯಲ್ಲೊಬ್ಬರು ಹನಿ ರೋಸ್‌. ಸದ್ಯ ಆರೆಂಜ್‌ ಡ್ರೆಸ್‌ನಲ್ಲಿ ವಿಚಿತ್ರ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸ್ಕೊಂಡು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಟೈಟ್‌ಫಿಟ್‌, ಸ್ಲಿಟ್‌ ಡ್ರೆಸ್ ಹಾಕಿರೋ ಹನಿ ರೋಸ್‌ ಮಾದಕವಾಗಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಆದರೆ ಓವರ್‌ ಮೇಕಪ್‌, ಡಾರ್ಕ್‌ ಬ್ರೌನ್‌ ಹೇರ್‌ ಕಲರ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

Latest Videos


ಹನಿರೋಸ್‌ನ ಹೊಸ ಲುಕ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಮಲಯಾಳಂ ಚಿತ್ರರಂಗದ ರಾಖಿ ಸಾವಂತ್‌, ನ್ಯೂ ಜನರೇಷನ್‌ನ ಶಕೀಲಾ ಎಂದೆಲ್ಲಾ ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಕೆಲವೊಬ್ಬರು ಹಾಟ್, ಬ್ಯೂಟಿಫುಲ್, ಬಾಂಬ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ಎಲ್ಲಾ ಸರಿಯಾಗಿದೆ. ಹೇರ್‌ಸ್ಟೈಲ್ ಎಲ್ಲವನ್ನೂ ಹಾಳು ಮಾಡಿತು ಎಂದು ಕಮೆಂಟ್‌ನಲ್ಲಿ ಹೇಳಿದ್ದಾರೆ.

2005ರಲ್ಲಿ 14ನೇ ವಯಸ್ಸಿಗೆ ಹನಿರೋಸ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ರು. ವಿನಯನ್ ನಿರ್ದೇಶನದ 'ಬಾಯ್ ಫ್ರೆಂಡ್' ಸಿನಿಮಾದ ಮೂಲಕ ಸಿನಿಮಾ ಕೆರಿಯರ್‌ ಆರಂಭಿಸಿದರು. ಆ ನಂತರ ಹಲವು ಮಲಯಾಳಂ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. 

ತೆಲುಗಿನಲ್ಲಿ ಎರಡು ಚಿತ್ರಗಳನ್ನು ಮಾಡಿದ್ದಾರೆ. ಮುತ್ಯಾಲ ಸುಬ್ಬಯ್ಯನವರ 50ನೇ ಚಿತ್ರ ಟೆಂಪಲ್ ನಲ್ಲಿ ಹನಿ ರೋಸ್ ನಟಿಸಿದ್ದಾರೆ. ಅದರ ನಂತರ ಹನಿರೋಸ್  ಸಾಕ್ಷಿಗಾ ಎಂಬ ತೆಲುಗು ಚಿತ್ರದಲ್ಲಿ ನಟಿಸಿದರು. ಈವರೆಗೆ ಮಲಯಾಳಂ, ತಮಿಳು ಸೇರಿ ಸುಮಾರು 30 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಭಿಮಾನಿಗಳ ನೆಚ್ಚಿನ ನಟಿಯಾಗಿದ್ದಾರೆ.

ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹನಿರೋಸ್ ಭಾರಿ ಜನಪ್ರಿಯತೆ ಪಡೆದರು. ಈ ಸಿನಿಮಾ ಮೊದಲ ದಿನ 29 ಕೋಟಿ ಶೇರ್ ಪಡೆದು, ಒಟ್ಟಾರೆ 50 ಕೋಟಿಗೂ ಹೆಚ್ಚು ಗಳಿಕೆಕಂಡಿತ್ತು. ನಟನೆಗೆ ಸ್ಕೋಪ್ ಇರುವ ಪಾತ್ರಗಳ ಜೊತೆಗೆ ಗ್ಲಾಮರ್ ಪಾತ್ರಗಳೂ ಕೂಡ ಹುಡುಕಿಕೊಂಡು ಬರ್ತಿದೆ. 

ನಟಿ ಹನಿ ರೋಸ್ ಅವರು ಕನ್ನಡ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಅಜಂತ ಹಾಗೂ ನಂಜನಗೂಡು ನಂಜುಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. 
ನಟನೆಯನ್ನು  ಹೊರತುಪಡಿಸಿ ಹನಿ ರೋಸ್,  ಜಾಹೀರಾತು, ಮಾಲ್‌ ಶೋ ರೂಂಗಳ ಉದ್ಘಾಟನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

click me!