ಮಾಯಾನಗರಿ ಎಂದೇ ದುಬೈ ಪ್ರಸಿದ್ಧಿ ಪಡೆದಿದೆ. ಅಲ್ಲಿ ಏನಿಲ್ಲ ಹೇಳಿ? ಎಲ್ಲ ಅದ್ಭುತಗಳನ್ನು ನೋಡಲು ಅಲ್ಲಿ ಅವಕಾಶವಿದೆ. ಇದ್ರಲ್ಲಿ ಆಳವಾದ ಈಜುಕೊಳ ಕೂಡ ಸೇರಿದೆ.
ವಿಶ್ವ (World)ದಲ್ಲಿ ಸಾಕಷ್ಟು ಅದ್ಭುತ ಜಾಗಗಳಿವೆ. ಒಂದಿಷ್ಟು ಪ್ರಕೃತಿ ನಿರ್ಮಿತವಾದ್ರೆ ಮತ್ತೊಂದಿಷ್ಟು ಮಾನವ ನಿರ್ಮಿತ. ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡ ಮತ್ತು ವಿಶ್ವದ ಅತಿದೊಡ್ಡ ಮಾಲ್ ಗೆ ಹೆಸರುವಾಸಿಯಾಗಿರುವ ದುಬೈ (Dubai)ನಲ್ಲಿ ಮತ್ತೊಂದು ಕಣ್ತುಂಬಿಕೊಳ್ಳುವ ಸ್ಥಳವಿದೆ. ಅದೇ ಆಳವಾದ ಈಜುಕೊಳ (Swimming Pool). ದುಬೈ ಸಮೀಪದ ನಾದ್ ಅಲ್ ಶೆಬಾ ಪ್ರದೇಶದಲ್ಲಿ ಈ ಆಳವಾದ ಈಜುಕೊಳವಿದೆ. ಅದರ ಆಳ 60.02 ಮೀಟರ್ ಇದೆ. 1 ಕೋಟಿ 40 ಲಕ್ಷ ಲೀಟರ್ ನೀರು ತುಂಬಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ಜುಲೈ 28, 2021ರಂದು ಈ ಈಜುಕೊಳವನ್ನು ಉದ್ಘಾಟನೆ ಮಾಡಲಾಗಿದೆ. ಇದ್ರ ವಿಶೇಷತೆ ಅಂದ್ರೆ ಸುಂಕನ್ ಸಿಟಿ. ಇದು ಅಪಾರ್ಟ್ಮೆಂಟ್, ಗ್ಯಾರೇಜ್ ಮತ್ತು ಆರ್ಕೇಡ್ ಅನ್ನು ಹೊಂದಿದೆ. ಪೂಲ್ ಉಚಿತ ಡೈವರ್‌ಗಳು, ಸ್ಕೂಬಾ ಡೈವರ್‌ಗಳು ಮತ್ತು ಸ್ನಾರ್ಕಲರ್‌ಗಳನ್ನು ಸಮಾನವಾಗಿ ಆಕರ್ಷಿಸುತ್ತದೆ. ವಿವಿಧ ವಯಸ್ಸಿನ ಮತ್ತು ಅನುಭವದ ಹಂತಗಳಿಗೆ ಇದನ್ನು ಪ್ರೋಗ್ರಾಮಿಂಗ್ ಮಾಡಲಾಗಿದೆ. ಪ್ರಮಾಣೀಕೃತ ಡೈವರ್‌ಗಳು ಪೂಲ್‌ನ ಆಳಕ್ಕೆ ಮಾರ್ಗದರ್ಶಿ ಡೈವ್‌ಗಳಿಗೆ ಸೈನ್ ಅಪ್ ಮಾಡಬಹುದು. ಇಲ್ಲಿ ಅಗತ್ಯ ಉಪಕರಣಗಳನ್ನು ಒದಗಿಸಲಾಗುತ್ತದೆಯಾದ್ದರಿಂದ ನೀವು ಡೈವಿಂಗ್ ಗೇರ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಸ್ಕೂಬಾ ಡೈವರ್‌ಗಳಿಗಾಗಿ ಹಲವು ರೀತಿಯ ಕೋರ್ಸ್‌ಗಳು ಇಲ್ಲಿ ಲಭ್ಯವಿದೆ. ಈ ಈಜುಕೊಳದ ನೀರಿನೊಳಗೆ ಫಿಲ್ಮ್ ಸ್ಟುಡಿಯೊ ಕೂಡ ಇದೆ. ಇದು ಎಡಿಟಿಂಗ್ ರೂಮ್ ಮತ್ತು ವಿಡಿಯೋ ವಾಲ್ ಅನ್ನು ಹೊಂದಿದೆ. 56 ಅಂಡರ್ ವಾಟರ್ ಕ್ಯಾಮೆರಾಗಳ ಜೊತೆಗೆ 164 ಲೈಟ್‌ಗಳನ್ನು ಅಳವಡಿಸಲಾಗಿದೆ.
ರೈಲುಗಳಲ್ಲಿ ಸೀಟು ಹಂಚಿಕೆ ಹೇಗೆ ನಡೆಯುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ
ಡೀಪ್ ಡೈವ್ ದುಬೈ ಗಿನ್ನೆಸ್ ವಿಶ್ವ ದಾಖಲೆ ಸೇರಿದೆ. ವಿಶ್ವದ ಆಳವಾದ ಈ ಈಜುಕೊಳ ಎಂಜಿನಿಯರಿಂಗ್ ಮತ್ತು ವಿನ್ಯಾಸದ ಗಮನಾರ್ಹ ಸಾಧನೆಯಾಗಿದೆ. 1500 ಚದರ ಮೀಟರ್‌ಗಳಲ್ಲಿ ಹರಡಿರುವ ಈ ಸೌಲಭ್ಯವನ್ನು ದೈತ್ಯ ಸಿಂಪಿ ಆಕಾರದಲ್ಲಿ ನಿರ್ಮಿಸಲಾಗಿದೆ. ಇದು ಯುಎಇಯ ಪರ್ಲ್ ಡೈವಿಂಗ್ ಪರಂಪರೆಗೆ ಅನುಗುಣವಾಗಿದೆ. ಈ ಈಜುಕೊಳದಲ್ಲಿ ಸಭೆಗಳು, ಕಾರ್ಯಕ್ರಮಗಳು ಮತ್ತು ಸಮ್ಮೇಳನಗಳನ್ನು ಸಹ ಆಯೋಜಿಸಬಹುದು. ಈ ಕೊಳದಲ್ಲಿ ಡೈವ್ ಶಾಪ್ ಮತ್ತು ಗಿಫ್ಟ್ ಶಾಪ್ ಕೂಡ ಇದೆ.
ಡೀಪ್ ಡೈವ್ ದುಬೈನ ನಿರ್ಮಾಣಕ್ಕೆ ಸರಿಸುಮಾರು 10.6 ಮಿಲಿಯನ್ ಯುಎಸ್ ಡಾಲರ್ ವೆಚ್ಚ ಮಾಡಲಾಗಿದೆ. ಪ್ರಸಿದ್ಧ ನಿರ್ಮಾಣ ಮತ್ತು ಅಭಿವೃದ್ಧಿ ಕಂಪನಿ ಸೌದಿ ಬಿನ್ಲಾಡಿನ್ ಗ್ರೂಪ್ ಇದನ್ನು ನಿರ್ಮಾಣ ಮಾಡಿದೆ. ಡೀಪ್ ಡೈವ್ ದುಬೈ ನಿರ್ದೇಶಕ ಜರೋಡ್ ಜಬ್ಲೋನ್ಸ್ಕಿ ಸ್ವತಃ ವಿಶ್ವ ದಾಖಲೆ ಹೊಂದಿರುವ ಡೈವರ್ ಆಗಿದ್ದಾರೆ. ಜಗತ್ತಿನಲ್ಲಿ ಸ್ಕೂಬಾ ಡೈವಿಂಗ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಜಬ್ಲೋನ್ಸ್ಕಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಾಸಾ ಅಭಿವೃದ್ಧಿಪಡಿಸಿದ ಫಿಲ್ಟರ್ ತಂತ್ರಜ್ಞಾನ ಮತ್ತು ನೇರಳಾತೀತ ವಿಕಿರಣದೊಂದಿಗೆ ಪ್ರತಿ ಆರು ಗಂಟೆಗಳಿಗೊಮ್ಮೆ ಕೊಳದ ಶುದ್ಧ ನೀರನ್ನು ಫಿಲ್ಟರ್ ಮಾಡಲಾಗುತ್ತದೆ.
ರೀಲ್ಸ್ ಮಾಡಿ ಲಕ್ಷ ಗಳಿಸುವ ಅವಕಾಶ ! ಎಲ್ಲಿ? ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ
ಡೈವರ್ ಗಳಿಗೆ ಇಲ್ಲಿ ನೀರಿನೊಳಗೆ ಹೋಗುವ ಅವಕಾಶ ಸಿಕ್ಕರೆ, ಡೈವರ್ ಅಲ್ಲದವರು, ಕಿಟಕಿ ಮೂಲಕ ವೀಕ್ಷಣೆ ಮಾಡಬಹುದು. ಡೈವರ್ ಗಳನ್ನು ಹುರಿದುಂಬಿಸಬಹುದು. ಇಡೀ ಸೆಷನ್ ಗೆ ಸುಮಾರು ಎರಡು ಗಂಟೆಗಳವರೆಗೆ ಇರುತ್ತದೆ. ನೀವು ಇದನ್ನು ಪ್ರವೇಶಿಸುವ ಮೊದಲು ಕೆಲ ದಾಖಲೆಗಳನ್ನು ನೀಡಬೇಕು. ಅದರಲ್ಲಿ ನಿಮ್ಮ ಫೋಟೋ ಇರುವ ದಾಖಲೆ ಪತ್ರ, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಪ್ರತಿ ನೀಡಬೇಕು. ನೀರಿನ ಭಯವಿಲ್ಲದ, ಈಜು ಬರುವ ವ್ಯಕ್ತಿಗೆ ಟಿಕೆಟ್ ಲಭ್ಯವಿದೆ. ಹತ್ತು ವರ್ಷ ಮೇಲ್ಪಟ್ಟವರಿಗೆ ಅವಕಾಶವಿದ್ರೂ 18 ವರ್ಷದೊಳಗಿನ ಮಕ್ಕಳಿಗೆ ಪಾಲಕರ ಒಪ್ಪಿಗೆ ಅಗತ್ಯ.