ಗ್ರೀನ್ ಲೆಹಂಗಾ ಧರಿಸಿ ಫೋಸ್‌ ಕೊಟ್ಟು ನಾನು ಹಾಟ್ ಚಾಕೊಲೇಟ್ ಎಂದ ಭೂಮಿ ಶೆಟ್ಟಿ!

First Published Mar 5, 2024, 11:57 AM IST

ಬಿಗ್ ಬಾಸ್‌ ಸ್ಪರ್ಧಿ ಭೂಮಿ ಶೆಟ್ಟಿ. ಹಾಗೂ ಕಿನ್ನರಿ ಸೀರಿಯಲ್ ಮೂಲಕ ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ಭೂಮಿ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್‌ ಆಗಿರ್ತಾರೆ. ಇತ್ತೀಚಿಗೆ ಗ್ರೀನ್ ಕಲರ್ ಲೆಹಂಗಾದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪೋಟೋಸ್ ಇಲ್ಲಿವೆ.

ಬಿಗ್ ಬಾಸ್‌ ಸ್ಪರ್ಧಿ ಹಾಗೂ ಕಿನ್ನರಿ ಸೀರಿಯಲ್ ಮೂಲಕ ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ಭೂಮಿ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್‌ ಆಗಿರ್ತಾರೆ. ಮಾಡರ್ನ್ ಹಾಗೂ ಟ್ರೆಡಿಶನಲ್ ಲುಕ್‌ನಲ್ಲಿ ತಮ್ಮ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡ್ತಿರ್ತಾರೆ.

ಇತ್ತೀಚಿಗೆ ಗ್ರೀನ್ ಕಲರ್ ಲೆಹಂಗಾದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಗ್ರ್ಯಾಂಡ್ ಲೆಹಂಗಾ, ಜುಮುಕಿ ತೊಟ್ಟು ಫೋಟೋಗಳಿಗೆ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ. ಭೂಮಿಯ ಕ್ಯೂಟ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲೈಕ್ಸ್‌, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಸ್ ಶೇರ್ ಮಾಡಿರೋ ಭೂಮಿ ಶೆಟ್ಟಿ, ಇದಕ್ಕೆ 'ಹಾಟ್‌ ಚಾಕೊಲೇಟ್‌' ಎಂದು ಶೀರ್ಷಿಕೆ ನೀಡಿದ್ದಾರೆ. ನೆಟ್ಟಿಗರು, ಲುಕ್ಕಿಂಗ್ ಪ್ರೆಟ್ಟಿ, ಲವ್ಲೀ ಲುಕ್ಕಿಂಗ್‌, ಕ್ರಶ್‌, ಬ್ಯೂಟಿಫುಲ್‌ ಎಂದೆಲ್ಲಾ ಹೊಗಳಿದ್ದಾರೆ.

ಮತ್ತೆ ಕೆಲವು ಅಭಿಮಾನಿಗಳು, 'ಚೆಲುವಿನಲ್ಲಿ ಸಾಟಿಯಿಲ್ಲದ ದೇವಿ', 'ಮೆಲ್ಲಗೆ ನಗುತ....ಮನದಲಿ ಕುಳಿತೆ' ಎಂದೆಲ್ಲಾ ಹಾಡಿನ ಮೂಲಕ ಹೊಗಳಿದ್ದಾರೆ. ಮತ್ತೆ ಹಲವು ಫ್ಯಾನ್ಸ್‌, 'ನೆಕ್ಸ್ಟ್ ಯಾವ ಮೂವಿ ಮಾಡುತ್ತಿದ್ದೀರಾ ನೀವು' ಎಂದು ಪ್ರಶ್ನಿಸಿದ್ದಾರೆ.

ಬಿಗ್ ಬಾಸ್ ಬಳಿಕ ಕನ್ನಡ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ನಟಿ ಭೂಮಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಮಾತ್ರ ತುಂಬಾನೆ ಆಕ್ಟಿವ್ ಆಗಿರ್ತಾರೆ. ತಮ್ಮ ಹೊಸ ಹೊಸ ಫೋಟೋ ಶೂಟ್ ಮೂಲಕ ಸುದ್ದಿ ಮಾಡ್ತಿರ್ತಾರೆ.

ಕಿನ್ನರಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಲೋಕ ಪ್ರವೇಶಿಸಿದ ಭೂಮಿ ಶೆಟ್ಟಿ ಕಿನ್ನರಿಯಾಗಿ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರು. ಇದಾದ ನಂತರ ಅವರು ತಮಿಳು, ತೆಲುಗು ಸೀರಿಯಲ್ ಗಳಲ್ಲೂ ಸಹ ನಟಿಸಲು ಆರಂಭಿಸಿದರು. 

ಬಿಗ್ ಬಾಸ್ ಬಂದ ಮೇಲೆ. ಆಕೆಯ ರಿಯಲ್ ಲೈಫ್, ಮುಗ್ಧತೆ, ಆಟ ಎಲ್ಲವೂ ಸೇರಿ ಭೂಮಿ ಶೆಟ್ಟಿಯನ್ನು ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಮಾಡಿದ್ದಂತೂ ನಿಜ. 
ಸದ್ಯಕ್ಕೆ ಭೂಮಿ ಶೆಟ್ಟಿ ಸಿನಿಮಾ ರಂಗದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. 

ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲೂ ಸಹ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ಒಟ್ಟಲ್ಲಿ ಭೂಮಿ ಕಿರುತೆರೆಯ ಜೊತೆಗೆ ಹಿರಿತೆರೆಯ ಫೇವರಿಟ್ ನಟಿ ಕೂಡ ಆಗಿದ್ದಾರೆ. 

click me!