ಕಳಪೆ ಪಡೆದು ವೀಕ್ಷಕರ ತಲೆಗೆ ಹುಳ ಬಿಟ್ಟ ರಜತ್ ಕಿಶನ್. ಬಾಸ್ ಬಾಸ್ ಅಂತಿದ್ರೆ ಜನ ಕಲ್ಪನೆ ಮಾಡಿಕೊಳ್ಳುತ್ತಿರುವುದೇ ಮತ್ತೊಂದು...............
ಬಿಗ್ ಬಾಸ್ ಸೀಸನ್ 11ರ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಎಂಟ್ರಿ ಕೊಟ್ಟ ವಾರವೇ ಕಳಪೆ ಪ್ರದರ್ಶನ ಪಡೆದು ಜೈಲು ಸೇರಿದ್ದರು. ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಜೋರಾಗಿ ಕಿರುಚಾಡಿ ಮುಖ ಬಯಲು ಮಾಡುತ್ತೀನಿ, ಇನ್ನು ಮುಂದೆ ಆಟ ಶುರು ಮಾಡುತ್ತೀನಿ, ಇಲ್ಲಿಂದ ಎಲ್ಲರನ್ನು ಎದುರು ಹಾಕಿಕೊಳ್ಳುತ್ತೀನಿ ಎಂದಿದ್ದ ವ್ಯಕ್ತಿ ಈಗ ಕಳಪೆ ಪಡೆದಿರುವುದು ಆಶ್ಚರ್ಯ. 50 ದಿನಗಳ ಪೂರೈಸಿದ ಮೇಲೆ ಬಿಬಿ ಮನೆಗೆ ಕಾಲಿಟ್ಟಿರುವುದು ಒಂದು ರೀತಿ ಪ್ಲಸ್ ಮತ್ತೊಂದು ರೀತಿಯಲ್ಲಿ ಮೈನಸ್ ಆಗಲಿದೆ. ಶೋಭಾ ಜೊತೆ ಪಾರ್ಟನರ್ ಆಗ್ತಾರೆ ಅಂದುಕೊಂಡ್ರೆ ಸಿಂಗಲ್ ಸಿಂಹ ರೀತಿ ಫೈಟ್ ಮಾಡಲು ರೆಡಿಯಾಗಿದ್ದಾರೆ.
ಈ ವಾರ ನಡೆದ ಬಾಲ್ ಟಾಸ್ಕ್‌ನಲ್ಲಿ ರಜತ್ ಕಿಶನ್ ಮತ್ತು ಗೋಲ್ಡ್ ಸುರೇಶ್ ನಡುವೆ ಜಗಳ ಶುರುವಾಗುತ್ತದ, ಸಣ್ಣ ವಿಚಾರಕ್ಕೆ ಜಗಳ ಶುರುವಾದರೂ ರಜತ್ ಬಳಸಿದ ಬೀಪ್ ಪದಗಳಿಂದ ಇನ್ನಿತರ ಸ್ಪರ್ಧಿಗಳು ಶಾಕ್ ಆಗುತ್ತಾರೆ. ರಜತ್ ಹೇಳಿದ ಬೀಪ್ ಪದಗಳನ್ನು ಕೇಳಿ ನಾನು ಮನೆಯಿಂದ ಹೊರ ಹೋಗುತ್ತೀನಿ ಎಂದು ಸುರೇಶ್ ಜಗಳ ಮಾಡುತ್ತಾರೆ. ಈ ಯಾವ ಹಂತಕ್ಕೆ ಹೋಗುತ್ತದೆ ಅಂದ್ರೆ ವಾರದ ಕೊನೆಯಲ್ಲಿ ಉತ್ತಮ ಮತ್ತು ಕಳಪೆ ಕೊಡುವ ಸಮಯದಲ್ಲಿ ಇದೇ ಬೀಪ್ ಪದಗಳನ್ನು ಹಿಡಿದು ಪ್ರತಿಯೊಬ್ಬರು ರಜತ್‌ಗೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸುತ್ತಾರೆ.
ಅಬ್ಬಬ್ಬಾ! ಈ ಗಯ್ಯಾಳಿ ಮಾತಿಗೆ ಮಾತು ಕೊಡೋಕೆ ಆಗುತ್ತಾ...ಶೋಭಾ ಶೆಟ್ಟಿ ಸಿಕ್ಕಾಪಟ್ಟೆ ಟ್ರೋಲ್
ಜೈಲು ಸೇರಿದ ರಜತ್ 'ನಾನು ನಿಜ ಹೇಳುತ್ತೀನಿ ನಾನು ಕರೆಕ್ಟ್ ಆಗಿ ನಮ್ಮ ಬಾಸ್‌ನ ಆಯ್ಕೆ ಮಾಡಿಕೊಂಡಿದ್ದೀನಿ. ಅಂದರೆ ಎಷ್ಟೇ ಛೀಮಾರಿ ಹಾಕಿದ್ರೂ ಎಷ್ಟೇ ಹೇಳಿದ್ರೂ ಕಮ್ ಬ್ಯಾಕ್ ಮಾಡ್ತಾರೆ ಅಲ್ವಾ ಅದಕ್ಕೆ ನಾನು ಅವರ ಶಿಷ್ಯ. ನಂಗೆ ಜಸ್ಟ್ ಕಳಪೆ ಬಂದಿದೆ. ನಾನು ಕಮ್ ಬ್ಯಾಕ್ ಮಾಡುತ್ತೀನಿ' ಎಂದು ಪದೇ ಪದೇ ಹೇಳುತ್ತಾರೆ. ಇಲ್ಲಿ ಬಾಸ್ ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಂಡಾಗ 'ನಮ್ಮ ಬಾಸ್ ಚೈತ್ರಾ ಕುಂದಾಪುರ ಅವರೇ ನನ್ನ ಟ್ರೂ ಇನ್ಸ್‌ಪಿರೇಷನ್.ನಮ್ಮ ಬಾಸ್ ಬಗ್ಗೆ ಅಪಾರವಾದ ಗೌರವ ಇದೆ ಅವರು ಹಾಕಿದ ಹೆಜ್ಜೆಯನ್ನು ನಾನು ಹಿಂಬಾಲಿಸುತ್ತೀನಿ. ಬಾಸ್ ಐದು ನಿಮಿಷ ನೋಡಿಲ್ಲ ಅಂದ್ರೆ ಮನಸ್ಸೇ ತಡೆಯುವುದಿಲ್ಲ. ನಮ್ಮ ಬಾಸ್ ಕರೆಯಬೇಕು...ಬಾಸ್ ಇಲ್ಲದೆ ನನ್ನ ಜೀವನವೇ ಇಲ್ಲ' ಎಂದು ರಜತ್ ಹೇಳುತ್ತಾರೆ.
ಹೆಂಡ್ತಿ ಪಕ್ಕದ್ದಲೇ ಇದ್ರೂ ಮಿಡಲ್ ಫಿಂಗರ್ ತೋರಿಸಿದ ಬಿಗ್ ಬಾಸ್ ರಜತ್; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್!
ಜನರಿಗೆ ಕನ್ಫ್ಯೂಷನ್:
ರಜತ್ ಕಿಶನ್ ಇಲ್ಲಿ ಪದೇ ಪದೇ ಬಾಸ್ ಅನ್ನೋ ಪದ ಬಳಸುತ್ತಿರುವುದು ನಟ ದರ್ಶನ್‌ಗೆ ಎಂದು ವೀಕ್ಷಕರಿಗೆ ಸ್ಪಷ್ಟವಾಗಿ ತಿಳಿಯುತ್ತಿದೆ. ಏಕೆಂದರೆ ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ರಜತ್ ದರ್ಶನ್ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದರು. ಆಗ ಕೂಡ ನಮ್ಮ ಬಾಸ್ ಏನು ತಪ್ಪು ಮಾಡಿಲ್ಲ ನಮ್ಮ ಬಾಸ್ ಸರಿಯಾಗಿದ್ದಾರೆ ಹಾಗೆ ಹೀಗೆ ಎಂದು ಜೋರ್ ಸೌಂಡ್ ಮಾಡಿದ್ದರು. ನೆಟ್ಟಿಗರ ಪ್ರಕಾರ ರಜತ್ ಬಿಗ್ ಬಾಸ್ ಆಫರ್ ಪಡೆದಿರುವುದೇ ದರ್ಶನ್ ವಿಡಿಯೋ ಕಾಂಟ್ರವರ್ಸಿಯಿಂದ ಎನ್ನುತ್ತಾರೆ.ಇನ್ನು ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ನಿಮಯಗಳು ಇದೆ ಗೊತ್ತಿಲ್ಲ ಹೀಗಾಗಿ ಬಾಸ್ ಬಗ್ಗೆ ಮಾತನಾಡಿ ಸೇಫ್ ಆಗಲು ಚೈತ್ರಾ ಕುಂದಾಪುರ ಹೆಸರು ಬಳಸುತ್ತಿದ್ದಾರೆ ಎನ್ನಲಾಗಿದೆ.