ಮಗನಿಗೆ 2 ತಿಂಗಳು ತುಂಬಿದ ಸಂಭ್ರಮದಲ್ಲಿ ಸ್ಪೆಷಲ್ ಫೋಟೊ ಹಂಚಿಕೊಂಡ ಕವಿತಾ ಗೌಡ - ಚಂದನ್

First Published | Nov 25, 2024, 10:57 AM IST

ಕವಿತಾ ಗೌಡ ಮತ್ತು ಚಂದನ್ ಕುಮಾರ್ ತಮ್ಮ ಮಗನ ಜೊತೆ ಸ್ಪೆಷಲ್ ಫೋಟೊ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಕನ್ನಡ ಕಿರುತೆರೆಯ ಮುದ್ದಿನ ಜೋಡಿಗಳಾದ ಹಾಗೂ ಇತ್ತೀಚೆಗೆ ತಂದೆ -ತಾಯಿಯಾಗಿರುವ ಸಂಭ್ರಮದಲ್ಲಿರುವ ಕವಿತಾ ಗೌಡ (Kavitha Gowda) ಮತ್ತು ಚಂದನ್ ಕುಮಾರ್ ತಮ್ಮ ಮುದ್ದು ಮಗನ ಜೊತೆ ಮತ್ತೊಂದು ಫೋಟೊ ಶೂಟ್ ಮಾಡಿಸಿದ್ದಾರೆ. 
 

ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿನ ಮುಖ ರಿವೀಲ್ ಮಾಡುವ ಮೂಲಕ ಹಾಗೂ ಮಗುವಿನ ಫೋಟೊ ಶೂಟ್ ಮಾಡಿಸುವ ಮೂಲಕ ಸುದ್ದಿಯಾಗಿದ್ದ ಈ ಜೋಡಿ, ಇದೀಗ ಮಗನಿಗೆ ಎರಡು ತಿಂಗಳು ತುಂಬಿದ ಸಂಭ್ರಮದಲ್ಲಿ ವಿಶೇಷ ಫೋಟೊ ಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದಾರೆ. 
 

Tap to resize

ಕೆಲ ದಿನಗಳ ಹಿಂದೆ ಕವಿತಾ ಗೌಡ ಮಗನನ್ನು ಕೈಯಲ್ಲಿ ಮುಖದ ಹತ್ತಿರ ಮಗುವಿನ ಮುಖವನ್ನಿಟ್ಟಿರುವ ಮುದ್ದಾದ ಫೋಟೊವೊಂದನ್ನು ಹಂಚಿಕೊಂಡು. ಮಗನಿಗೆ ಹ್ಯಾಪಿ 2 ತಿಂಗಳು ಮೈ ಲಿಟಲ್ ಸನ್ ಶೈನ್ ಎಂದು ಪೋಸ್ಟ್ ಹಾಕಿದ್ದರು. ಫೋಟೊ ಶೂಟ್ ಮಾಡಿಸಿದ್ದು, ಮಗು ಹುಟ್ಟಿದ್ದ ಕೆಲವೇ ದಿನಗಳಲ್ಲಂತೆ. 
 

ಅಷ್ಟೇ ಅಲ್ಲ ಕವಿತಾ ಫೋಟೊ ಜೊತೆಗೆ ನಾನು ನಿನ್ನನ್ನು ತಬ್ಬಿಕೊಂಡಾಗ, ನಿನಗಿಂತ ಜಾಸ್ತಿ ನನಗೆ ಆ ಅಪ್ಪುಗೆ ಹೆಚ್ಚು ಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಶುದ್ಧ ಪ್ರೀತಿಯು ತುಂಬಾನೆ ಸಿಹಿಯಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ. 
 

ಇದೀಗ ಮತ್ತೆ ತನ್ನ ಗಂಡ ಚಂದನ್ (Chandan Kumar) ಹಾಗೂ ಮಗುವಿನ  ಜೊತೆಗಿನ ಮುದ್ದಾದ ಫೋಟೊ ಶೂಟ್ ಗಳ ಒಂದಷ್ಟು ಫೋಟೊಗಳನ್ನು ಜೊತೆಯಾಗಿಸಿ, ವಿಡೀಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಕವಿತ ಗೌಡ, ನನ್ನ ಅತಿ ದೊಡ್ಡ ಅಡ್ವೆಂಚರ್ ಎಂದು ಬರೆದುಕೊಂಡಿದ್ದಾರೆ. 
 

ಈ ಫೋಟೊಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮುದ್ದಾದ ಫ್ಯಾಮಿಲಿ ಫೋಟೊ, ಮಗು ತುಂಬಾನೆ ಮುದ್ದಾಗಿದೆ. ನಿಮ್ಮ ಸಂಸಾರ ಯಾವಾಗ್ಲೂ ಖುಷಿಯಾಗಿರಲಿ ಎಂದೆಲ್ಲಾ ಅಭಿಮಾನಿಗಳು ಹಾರೈಸಿದ್ದಾರೆ. ಇದಕ್ಕೆ ಚಂದನ್ ಕುಮಾರ್ ಇದು ಮಗುವಿಗೆ ಕೇವಲ ಒಂದು ವಾರ ಆಗಿರುವಾಗ ತೆಗೆಸಿದಂತಹ ಫೋಟೊ ಎಂದು ಹೇಳಿದ್ದಾರೆ. 
 

ಕವಿತಾ ಗೌಡ ಮತ್ತು ಚಂದನ್ ಇಬ್ಬರೂ ಕಿರುತೆರೆ ನಟರಾಗಿದ್ದರು, ಕಳೆದ ಕೆಲವು ಸಮಯದಿಂದ ಇಬ್ಬರೂ ಕೂಡ ನಟನೆಯಿಂದ ದೂರ ಉಳಿದು, ತಮ್ಮ ಹೊಟೇಲ್ ಹಾಗೂ ಉಳಿದ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾರೆ. ಈ ಜೋಡಿ ಸೆಪ್ಟೆಂಬರ್ ತಿಂಗಳಲ್ಲಿ ಮಗು ಜನಿಸಿತ್ತು. ಸದ್ಯ ಈ ಜೋಡಿ, ಅಮ್ಮ-ಅಪ್ಪನ ಜವಾಭ್ದಾರಿಯಲ್ಲಿ ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ. 

Latest Videos

click me!