ಮನೆಗೆ ಬಂದ ಮಗ ಧರ್ಮ ಕೀರ್ತಿರಾಜ್‌ಗೆ ಶಹಬ್ಬಾಸ್‌ಗಿರಿ ನೀಡಿದ ಕೀರ್ತಿರಾಜ್

Published : Nov 25, 2024, 10:51 AM IST
ಮನೆಗೆ ಬಂದ ಮಗ ಧರ್ಮ ಕೀರ್ತಿರಾಜ್‌ಗೆ  ಶಹಬ್ಬಾಸ್‌ಗಿರಿ ನೀಡಿದ ಕೀರ್ತಿರಾಜ್

ಸಾರಾಂಶ

ಈ ವಾರ  ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಬರ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಸ್ಯಾಂಡಲ್‌ ವುಡ್‌ ನಟ ಧರ್ಮ ಕೀರ್ತಿರಾಜ್ ಹೊರ ಬಂದಿದ್ದಾರೆ. ಮನೆಗೆ ಬಂದ ಮಗನಿಗೆ ತಂದೆ ಹಾಗೂ ಹಿರಿಯ ನಟ ಕೀರ್ತಿರಾಜ್ ಹೇಳಿದ್ದೇನು?   

ಬಿಗ್ ಬಾಸ್ (Bigg Boss) ಮನೆಯಿಂದ ಧರ್ಮ ಕೀರ್ತಿರಾಜ್ (Dharma Keerthiraj) ಹೊರ ನಡೆದಿದ್ದಾರೆ. ಬಿಗ್ ಬಾಸ್ 11ರ ಎಂಟನೇ ವಾರದ ಎಲಿಮಿನೇಷನ್ನಲ್ಲಿ ಕಡಿಮೆ ವೋಟಿನಿಂದಾಗಿ ಧರ್ಮ ಕೀರ್ತಿರಾಜ್ ಅರ್ಧಕ್ಕೆ ಮನೆ ಬಿಡಬೇಕಾಯ್ತು. ಧರ್ಮ ಕೀರ್ತಿರಾಜ್, ವೋಟು ಪಡೆದಿಲ್ಲ ಅಂದ್ರೂ ಜನರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಅವರು ಗೆದ್ದಿದ್ದಾರೆ. 50ಕ್ಕಿಂತ ಹೆಚ್ಚು ದಿನ ಮನೆಯಲ್ಲಿದ್ದಿದ್ದು ಇದಕ್ಕೆ ಸ್ಪಷ್ಟ ನಿದರ್ಶನ. ಧರ್ಮ ಕೀರ್ತಿರಾಜ್ ಬಿಗ್ ಬಾಸ್ ನಿಂದ ಮನೆಗೆ ಬರ್ತಿದ್ದಂತೆ ಕುಟುಂಬಸ್ಥರಿಂದ ಪ್ರೀತಿಯ ಸ್ವಾಗತ ಸಿಕ್ಕಿದೆ. ಧರ್ಮ ಕೀರ್ತಿರಾಜ್ ತಂದೆ ಹಾಗೂ ಸ್ಯಾಂಡಲ್ವುಡ್ (Sandalwood) ಹಿರಿಯ ನಟ ಕೀರ್ತಿರಾಜ್ (Keerthiraj) ಮಗನ ಆಟ, ಸ್ವಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗನಿಗೆ ಶಹಬ್ಬಾಸ್ಗಿರಿ ನೀಡಿದ್ದಾರೆ. 

ಇನ್ಸ್ಟಾಗ್ರಾಮ್ ನಲ್ಲಿ ಅಪ್ಪ – ಮಗನ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಅದ್ರಲ್ಲಿ ಧರ್ಮ ಕೀರ್ತಿರಾಜ್ ಹಾಗೂ ಕೀರ್ತಿರಾಜ್ ಒಟ್ಟಿಗೆ ಇರೋದನ್ನು ನೀವು ಕಾಣ್ಬಹುದು. ಅವರ ಹಿಂಭಾಗದಲ್ಲಿ ಬಲೂನ್ಗಳನ್ನು ಹಾಕಲಾಗಿದೆ. ಬಿಗ್ ಬಾಸ್ ಮನೆಯಿಂದ ನಿನ್ನ ಮನೆಗೆ ಬಂದ ಅನುಭವ ಹೇಗಿದೆ ಎಂದು ಕೀರ್ತಿರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಧರ್ಮ ಕೀರ್ತಿರಾಜ್, ಬಿಗ್ ಬಾಸ್ ಜರ್ನಿ ತುಂಬಾ ಅದ್ಭುತವಾಗಿತ್ತು. 55 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದಿದ್ದು ಖುಷಿ ವಿಷ್ಯ. ಅಲ್ಲಿನ ಸ್ಪರ್ಧಿಗಳನ್ನು ಮಿಸ್ ಮಾಡ್ತಿದ್ದೇನೆ. ಬಿಗ್ ಬಾಸ್ ನಲ್ಲಿ ಇನ್ನೂ ಆಟವಿತ್ತು. ಹೊರಗೆ ಬಂದಿದ್ದು ಸ್ವಲ್ಪ ಬೇಸರವಾಗಿದೆ. ಅದ್ರ ಜೊತೆ ಮನೆಗೆ ಬಂದ ಖುಷಿ ಇದೆ. ಅಪ್ಪ, ಅಪ್ಪ, ಅಕ್ಕ- ಭಾವನನ್ನು ನೋಡಿದ ಸಂತೋಷವಿದೆ ಎಂದು ಧರ್ಮ ಕೀರ್ತಿರಾಜ್ ಹೇಳಿದ್ದಾರೆ.

ಜೈಲಿನಲ್ಲಿ 'ಬಾಸ್‌' ಗುಣಗಾನ ಮಾಡಿದ ರಜತ್ ಕಿಶನ್; ವೀಕ್ಷಕರ ತಲೆಗೆ ಹೊಳೆದಿದ್ದೇ ಬೇರೆ ಬಾಸ್?

ಬಿಗ್ ಬಾಸ್ ಮನೆಯಲ್ಲಿ ಉತ್ತಮ ಆಟವಾಡಿದ್ದು, ಎಲ್ಲರ ಮನಸ್ಸನ್ನು, ಹೃದಯವನ್ನು ಗೆದ್ದಿದ್ದೀರಿ. ನಿಮ್ಮನ್ನು ವಿನ್ನರ್ ಅಂತ ನಾವು ತಿಳಿದಿದ್ದೇವೆ. ಹೊರಬಂದಿದ್ದಕ್ಕೆ ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ನೀವು ಲೂಸರ್ ಅಲ್ಲ. ನಾವೆಲ್ಲರೂ ನಿಮ್ಮನ್ನು ಪ್ರೀತಿ ಮಾಡ್ತೇವೆ. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಮಗನಿಗೆ ಕೀರ್ತಿರಾಜ್ ಹರಸಿದ್ದಾರೆ.

ಇದಕ್ಕೆ ಉತ್ತರಿಸಿದ ಧರ್ಮ ಕೀರ್ತಿರಾಜ್, ಬಿಗ್ ಬಾಸ್ ಮನೆಯಲ್ಲಿ ಇದೊಂದು ಭಯ ನನ್ನನ್ನು ಕಾಡ್ತಿತ್ತು. ನನ್ನ ಆಟದ ಬಗ್ಗೆ ಹೊರಗೆ ಜನರು ಏನು ಅಂದ್ಕೊಳ್ತಿದ್ದಾರೆ ಎನ್ನುವ ಪ್ರಶ್ನೆ ಕಾಡಿತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ನನ್ನ ಆಟ, ಕೆಲಸ, ಸ್ವಭಾವವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಮನೆಯವರು, ಸ್ನೇಹಿತರಿಂದ ಸಿಕ್ಕ ಉತ್ತರ ನನಗೆ ತೃಪ್ತಿ, ಖುಷಿ ಎರಡನ್ನೂ ನೀಡಿದೆ ಎಂದಿದ್ದಾರೆ.

ಧರ್ಮ ಕೀರ್ತಿರಾಜ್ ಈ ವಿಡಿಯೋಕ್ಕೆ ಜನರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಧರ್ಮ ವ್ಯಕ್ತಿತ್ವ ಅಪ್ಪಟ ಚಿನ್ನ. ಈವರೆಗೆ ಮನೆಯಲ್ಲಿ ಒಂದೇ ಒಂದು ಕೆಟ್ಟ ಕಮೆಂಟ್ ಧರ್ಮ ಕೀರ್ತಿಗೆ ಸಿಕ್ಕಿಲ್ಲ, ನೀವು ನಿಜವಾದ ಧರ್ಮರಾಜ, ನಿಮ್ಮದು ನಿಷ್ಕಲ್ಮಷ ಮನಸ್ಸು, ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನಿಮಗೆ ಒಳ್ಳೆಯದಾಗಲಿ, ಬಿಗ್ ಬಾಸ್ ಸೋತ್ರೂ ನಮ್ಮ ಮನಸ್ಸನ್ನು ನೀವು ಗೆದ್ದಿದ್ದೀರಿ, ಒಂದಿಷ್ಟು ಒಳ್ಳೆಯ ಸಿನಿಮಾ ಮಾಡಿ, ನೀವು ಹೊರಗೆ ಬಂದಾಗ ನಮ್ಮ ಕಣ್ಣಲ್ಲಿ ನೀರು ಬಂತು ಹೀಗೆ ಧರ್ಮ ಕೀರ್ತಿರಾಜ್ ವಿಡಿಯೋಕ್ಕೆ ಅಭಿಮಾನಿಗಳು ತಮ್ಮ ಕಮೆಂಟ್ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಪತಿ ಅಭಿಷೇಕ್ ಬಚ್ಚನ್ ಜೊತೆ ಸಿನಿಮಾ ಬೇಡ ಎಂದಿದ್ದ ಐಶ್ವರ್ಯಾ ರೈ: ಕಾರಣ ಏನು?

ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಮನೆಯಲ್ಲಿ ಎಲ್ಲಿಯೂ ಕೋಪಗೊಂಡಿರಲಿಲ್ಲ. ಅತ್ಯಂತ ಶಾಂತ ಸ್ವಭಾವದ ಅವರು ಮನೆಯಲ್ಲೂ ಅದೇ ರೀತಿ ಇದ್ರು. ಅದೇ ಅವರಿಗೆ ಮುಳುವಾಯ್ತು. ಬಿಗ್ ಬಾಸ್ ಮನೆಯಲ್ಲಿ ಕೂಗಾಟ, ಕಿರುಚಾಟ, ಗಾಸಿಫ್ ಇದ್ರೇನೆ ಸ್ಪರ್ಧಿಗಳು ಸುದ್ದಿಯಲ್ಲಿರ್ತಾರೆ ಎಂಬುದು ನೂರಕ್ಕೆ ನೂರು ಸತ್ಯ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ