ಬಾಲಿವುಡ್ ಎವರ್ಗ್ರೀನ್ ತಾರೆ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್. ತಮ್ಮ ಬ್ಯೂಟಿ ಹಾಗೂ ಬೋಲ್ಡ್ ಲುಕ್ನಿಂದ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಸಿನಿಮಾಗಳಲ್ಲಿ ಅಲ್ಲದಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ಇವರದ್ದೇ ಹವಾ. ಸ್ಟೈಲಿಶ್ ಲುಕ್ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಾರೆ.
ಇತ್ತೀಚಿಗೆ ತಮ್ಮ ಮೂವಿ ಪ್ರಮೋಷನ್ನಲ್ಲಿ ನೇರಳೆ ಹಾಗೂ ಕೆಂಪು ಬಣ್ಣದ ಸೀರೆಯುಟ್ಟು ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರೀದೇವಿ ಮಗಳ ಅಂದ ನೋಡಿ ನೆಟ್ಟಿಗರು ವಾವ್ ಅಂದಿದ್ದಾರೆ. ಬ್ಯೂಟಿ, ಹಾಟ್, ಪ್ರೆಟ್ಟೀ ಎಂದೆಲ್ಲಾ ಹೊಗಳಿದ್ದಾರೆ.
ಜಾಹ್ನವಿ ಕಪೂರ್ ಬೆಳ್ಳಿತೆರೆಯಲ್ಲಿ ಅಂಥಾ ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲವಾದರೂ, ಗ್ಲಾಮರ್ನಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಹೆಚ್ಚಾಗಿ ಬಿಕಿನಿ ತೊಟ್ಟು ಇಲ್ಲವೇ ಚಿಕ್ಕ ಉಡುಗೆ ಹಾಕಿಕೊಂಡು ಇವರು ಟ್ರೋಲ್ ಆಗುತ್ತಿರುವುದೇ ಹೆಚ್ಚು. ಶ್ರೀದೇವಿಯಂಥ ನಟಿಯ ಮಗಳು ಈ ರೀತಿಯ ಡ್ರೆಸ್ ಧರಿಸುವುದು ಸರಿಯಲ್ಲ ಎಂದು ನೆಟ್ಟಿಗರು ಪಾಠ ಮಾಡುತ್ತಲೇ ಇರುತ್ತಾರೆ. ಆದರೆ ಇದ್ಯಾವುದಕ್ಕೂ ಕೇರೇ ಅನ್ನದ ನಟಿ, ಸದಾ ಡೇಟಿಂಗ್, ಪಾರ್ಟಿ, ಟೂರ್ ಎನ್ನುತ್ತಲೇ ಇರುತ್ತಾರೆ.
ನಟಿ ಮಿ. & ಮಿಸೆಸ್ ಮಾಹಿ' ಸಿನಿಮಾದ ಪ್ರಚಾರದ ವೇಳೆ ಈ ಸುಂದರವಾದ ಸೀರೆಯನ್ನು ತೊಟ್ಟುಕೊಂಡಿದ್ದರು. ಈ ಉಡುಗೆಯ ಪ್ರಚಾರದಲ್ಲಿ ನಟ ರಾಜ್ಕುಮಾರ್ ರಾವ್ ಜೊತೆಗಿದ್ದರು.
ಕ್ರಿಕೆಟ್ಗಾಗಿ ಹಂಚಿಕೊಂಡ ಪ್ರೀತಿಯೊಂದಿಗೆ ದಂಪತಿಯ ನಡುವಿನ ಅಪೂರ್ಣ ಪರಿಪೂರ್ಣ ಪಾಲುದಾರಿಕೆಯ ಕಥೆಯನ್ನು ವಿವರಿಸುತ್ತದೆ ಎನ್ನಲಾಗಿದೆ. ಶರಣ್ ಶರ್ಮಾ ಇದನ್ನು ನಿರ್ದೇಶಿಸಿದ್ದಾರೆ. ಮೇ 31ರಂದು ಚಿತ್ರ ಬಿಡುಗಡೆಯಾಗಲಿದೆ.
ಇತ್ತೀಚಿಗೆ ನಟಿ, ಕ್ರಿಕೆಟ್ ಲೆದರ್ ಬಾಲ್ನಿಂದ ಪ್ರೇರಿತವಾದ ಕೆಂಪು ಉಡುಪನ್ನು ಧರಿಸಿದ್ದರು. ಈ ಮೂಲಕ ಫ್ಯಾಷನ್ಗೆ ಹೊಸ ಲುಕ್ ನೀಡಿದ್ದರು. ಈಕೆ ಧರಿಸಿರುವ ಉಡುಗೆಯು ಕ್ರಿಕೆಟ್ ಬಾಲ್ನಲ್ಲಿನ ಹೊಲಿಗೆ ಗುರುತುಗಳನ್ನು ಹೋಲುವ ಬಿಳಿ ಹೊಲಿಗೆಗಳನ್ನು ಒಳಗೊಂಡಿತ್ತು. ಇದಕ್ಕೆ ಕ್ರಿಕೆಟ್ ಬಾಲ್ನ ಥೀಮ್ ಸೇರಿಸುವ ಸಲುವಾಗಿ, ಉಡುಪಿನ ಹಿಂಭಾಗದಲ್ಲಿ ಸಣ್ಣ ಚರ್ಮದ ಚೆಂಡುಗಳನ್ನು ಜೋಡಿಸಲಾಗಿತ್ತು.
ಅಂದಹಾಗೆ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹೆಸರು ಹಲವಾರು ಮಂದಿಯ ಜೊತೆ ಥಳಕು ಹಾಕಿಕೊಂಡಿದೆ. ಆದರೆ ಕೆಲ ವರ್ಷಗಳಿಂದ ಈಕೆ ಉದ್ಯಮಿ ಶಿಖರ್ ಪಹರಿಯಾ ಜೊತೆ ಸುತ್ತಾಡುತ್ತಿದ್ದಾರೆ.
ದೇಶ-ವಿದೇಶ ತಿರುಗುತ್ತಿದ್ದಾರೆ. ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ.