ಈ ಬದಲಾವಣೆಯು ತುಲಾ ರಾಶಿಯವರಿಗೆ ಸಹ ಮಂಗಳಕರವಾಗಿರುತ್ತದೆ . ಶನಿಯು ನಿಮ್ಮ ರಾಶಿಯಿಂದ 6 ನೇ ಮನೆಗೆ ಚಲಿಸುತ್ತಾನೆ ಮತ್ತು ಗುರು ನಿಮ್ಮ ಕೆಲಸದ ಸ್ಥಳಕ್ಕೆ ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ನೀವು ನಿಮ್ಮ ರಹಸ್ಯ ಶತ್ರುಗಳನ್ನು ಸೋಲಿಸಲು ಸಾಧ್ಯವಾಗುತ್ತದೆ. ಉದ್ಯೋಗ ಜೀವನದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ನೀವು ನಿರುದ್ಯೋಗಿಗಳಾಗಿದ್ದರೆ, ನಿಮಗೆ ಉದ್ಯೋಗವನ್ನು ಪಡೆಯುವ ಉತ್ತಮ ಅವಕಾಶವಿದೆ. ಅದರೊಂದಿಗೆ ಪೊಲೀಸ್, ಕೋರ್ಟ್ ಕೇಸ್ ಗಳಲ್ಲೂ ಜಯ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ವ್ಯವಹಾರದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು, ಅದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ಹೂಡಿಕೆಯ ಮೇಲೆ ಉತ್ತಮ ಲಾಭವನ್ನು ಪಡೆಯಬಹುದು. ಉದ್ಯೋಗದಲ್ಲಿ ಬಡ್ತಿಯಾಗುವ ಸೂಚನೆಗಳೂ ಇವೆ.