ಬೆಂಗಳೂರಿಗೆ 281 ಕಿ.ಮೀ ಸರ್ಕ್ಯೂಲರ್ ರೈಲು ಯೋಜನೆ: ಸಚಿವ ಸೋಮಣ್ಣ ಬಿಗ್ ಅಪ್ಡೇಟ್

By Sathish Kumar KH  |  First Published Nov 16, 2024, 2:52 PM IST

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಸಂಚಾರ ದಟ್ಟಣೆಯನ್ನು ನಿವಾರಿಸಲು 281 ಕಿ.ಮೀ ಉದ್ದದ ಸರ್ಕ್ಯೂಲರ್ ರೈಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹಲವು ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.


ಬೆಂಗಳೂರು (ನ.16): ಸಿಲಿಕಾನ್ ಸಿಟಿ ಬೆಂಗಳೂರು ವ್ಯಾಪ್ತಿ ದೊಡ್ಡ ಗಾತ್ರದಲ್ಲಿ ಬೆಳೆಯುತ್ತಿದ್ದು, ಜನಸಂಖ್ಯೆ ಪ್ರಮಾಣ 1.5 ಕೋಟಿಗೆ ತಲುಪುತ್ತಿದೆ. ಅತಿ ಕಡಿಮೆ ಪ್ರದೇಶದಲ್ಲಿ ಅತಿಹೆಚ್ಚಿನ ಜನಸಂಖ್ಯೆ ವಾಸ ಮಾಡುತ್ತಿದ್ದು, ಅವರ ಪ್ರಯಾಣಕ್ಕೆ ಅನುಕೂಲ ಆಗುವಂತೆ ಬಿಎಂಟಿಸಿ, ಮೆಟ್ರೋ ರೈಲು, ಉಪನಗರ ರೈಲು ನಂತರ ಸರ್ಕ್ಯೂಲರ್ ರೈಲು ಸೇವೆಯನ್ನು ಒದಗಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಈ ಹಿನ್ನೆಲಯಲ್ಲಿ ಸರ್ಕ್ಯೂಲರ್ ರೈಲು ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕೂಡ ಸಿದ್ಧಪಡಿಸಲಾಗುತ್ತಿದೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ 3 ಕೋಟಿ ವೆಚ್ಚದ ಎಸ್ಕಲೇಟರ್ ಉದ್ಘಾಟನೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವ ವಿ. ಸೋಮಣ್ಣ ಅವರು, ಬೆಂಗಳೂರಿಗೆ ಇದೀಗ ಕಾಮಗಾರಿ ಮಾಡುತ್ತಿರುವ ಸಬರ್ಬನ್ ರೈಲಿನ ಜೊತೆಗೆ ಹೊಸದಾಗಿ ಮತ್ತೊಂದು ಸರ್ಕ್ಯುಲರ್ ರೈಲು ಸೇವೆಯನ್ನು ಒದಗಿಸಲಿ ಸಮೀಕ್ಷೆಯನ್ನು ಮಾಡಲಾಗಿದೆ. ಇದೀಗ ಬೆಂಗಳೂರು ಹೊರ ವಲಯದ ಜನತೆಗೆ ಅನುಕೂಲ ಆಗುವಂತೆ ಹೊಸ ಸರ್ಕ್ಯೂಲರ್ ರೈಲು ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕೂಡ ಮಾಡುತ್ತಿದ್ದೇವೆ. ಒಟ್ಟು 281 ಕಿ.ಮೀ ವಿಸ್ತೀರ್ಣದ ಸರ್ಕ್ಯೂಲರ್ ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಡಬಲ್ ಮರ್ಡರರ್ ಸುರೇಶ್‌ಗೂ, ದುನಿಯಾ ವಿಜಿಯ್‌ಗೂ ಸಂಬಂಧವೇ ಇಲ್ಲ; ಆದ್ರೂ ಬೇಲ್ ಕೊಟ್ಟಿದ್ಯಾಕೆ?

ಮುಮದುವರೆದು, ನಾವು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ 3 ಕೋಟಿ ವೆಚ್ಚದ ಎಸ್ಕಲೇಟರ್ ಉದ್ಘಾಟನೆ ಮಾಡಿದ್ದೇವೆ. ಇದೀಗ ಕಂಟೋನ್ಮೆಂಟ್  ಮತ್ತು ಯಶವಂತಪುರ ರೈಲ್ವೇ ನಿಲ್ದಾಣವನ್ನ 900 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುತ್ತಿದ್ದು, 2026 ಜನವರಿ ಒಳಗೆ ಅದನ್ನು ಲೋಕಾರ್ಪಣೆ ಮಾಡುತ್ತೇವೆ. ರಾಜ್ಯದ 60 ಸ್ಟೇಷನ್ ಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಬೆಂಗಳೂರು ಮಾತ್ರವಲ್ಲದೇ ಎಲ್ಲ ಕಡೆ ಸವಲತ್ತುಗಳನ್ನ ಮಾಡಲಾಗುತ್ತಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರುವ ಎಲ್ಲ ಸವಲತ್ತುಗಳನ್ನು ನೀಡಲು ಮುಂದಾಗಿದ್ದೇವೆ. 29 ಕೋಟಿ ರೂ. ವೆಚ್ಚದಲ್ಲಿ ಅಮೃತ ಯೋಜನೆಯಡಿ ಕೆಂಗೇರಿ  ಸ್ಟೇಷನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ‌. ಪಾರ್ಕಿಂಗ್ ವ್ಯವಸ್ಥೆ, ಪ್ಲಾಟ್ ಫಾರಂ  ಮಾಡಲಾಗಿದೆ ಎಂದು ತಿಳಿಸಿದರು.

ಮೆಜೆಸ್ಟಿಕ್ ರೈಲ್ವೇ ನಿಲ್ದಾಣವನ್ನ ಆಧುನಿಕರಣ ಮಾಡಿ, ದೇಶದಲ್ಲೇ ಏರ್ಪೋರ್ಟ್ ಗೆ ಹೋಗುವ ರೀತಿಯಲ್ಲಿ ಮಾಸ್ಟರ್ ಪ್ಲಾನ್ ಕೇಂದ್ರದಿಂದ ಬಂದಿದೆ. ನಮ್ಮ ಹೆಡ್ ಆಫೀಸ್ ನಲ್ಲಿ  ಅನುಮೋದನೆ ಕೊಡಲಿದ್ದೇವೆ. 1,500 ಕೋಟಿ ರೂ. ಈ ಯೋಜನೆಗಾಗಿ ಖರ್ಚು ಮಾಡುತ್ತಿದ್ದೇವೆ. ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣ ಹಾಗೂ ಮೈಸೂರು ಭಾಗಕ್ಕೂ ಹೆಚ್ಚಿನ ಆದ್ಯತೆ ಕೊಟ್ಟಿದ್ದೇವೆ‌. ನೆನೆಗುದಿಗೆ ಬಿದ್ದಿದ್ದ ತಿಪಟೂರಿನಲ್ಲಿ 2 ರೈಲುಗಳನ್ನ ನಿನ್ನೆ ಆರಂಭಿಸಲಾಗಿದೆ. ರಾಜ್ಯದಲ್ಲಿ ಹೊಸ ವ್ಯವಸ್ಥೆ ತರಲು  ಪ್ರಧಾನಿ ಹಾಗೂ ರೈಲ್ವೇ ಸಚಿವರು ಸಹಕಾರ ಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ: ಅಪ್ಪಾ.. ಅಪ್ಪಾ.. ಮೊಬೈಲ್ ಕೊಡಿಸಪ್ಪಾ ಎಂದು ಕೇಳಿದ 14 ವರ್ಷದ ಮಗನ ಕಥೆಯನ್ನೇ ಮುಗಿಸಿದ ಅಪ್ಪ!

ರಾಜ್ಯದಲ್ಲಿನ ಎಲ್ಲ ರೈಲ್ವೆ ನಿಲ್ದಾಣಗಳಿಗೆ ಮೂಲಭೂತ ಸೌಕರ್ಯಗಳು ಕಲ್ಪಿಸಿ, ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪ್ರಧಾನಿಗಳು ಸೂಚಿಸಿದ್ದಾರೆ. ಅದೇ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇಂದು ಕೆಂಗೇರಿಯಲ್ಲೂ 1.5 ಕೋಟಿ ರೂ. ವೆಚ್ಚದಲ್ಲಿ ಎಕ್ಸಲೇಟರ್ ಉದ್ಘಾಟನೆ ಮಾಡಿದ್ದೇವೆ. ಶೋಭಾ ಕರಂದ್ಲಾಜೆ ಅವರು ಇನ್ನೊಂದು ಎಕ್ಸಲೇಟರ್ ಮಾಡಲು ತಿಳಿಸಿದ್ದಾರೆ. ಅದೇ ರೀತಿಯಾಗಿ ಇನ್ನೊಂದು ಎಕ್ಸಲೇಟರ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

click me!