ಬೋಲ್ಡ್‌ & ಹಾಟ್‌ ಪಾತ್ರದ ಮೂಲಕ ತಮ್ಮ ಫ್ಯಾನ್ಸ್‌ಗೆ ಅಚ್ಚರಿ ನೀಡಿದ ದಕ್ಷಿಣದ 10 ನಟಿಯರು!

First Published Apr 19, 2024, 8:01 PM IST

ತಮ್ಮ ಸೌಮ್ಯ ಪಾತ್ರಗಳಿಂದ ವೃತ್ತಿಜೀವನದ  ಆರಂಭದಲ್ಲಿ ಹೆಸರು ಮಾಡಿದ್ದ ದಕ್ಷಿಣದಲ್ಲಿ ನಟಿಯರು, ಒಂದೇ ಹಾರಿ ಬೋಲ್ಡ್‌ & ಹಾಟ್‌ ಪಾತ್ರಗಳನ್ನ ಮಾಡೋಕೆ ಶುರು ಮಾಡ್ತಾರೆ. ಆ ಮೂಲಕ ತಮ್ಮ ಫ್ಯಾನ್ಸ್‌ಗೆ ಅಚ್ಚರಿ ನೀಡ್ತಾರೆ. ಕನ್ನಡದ ರಚಿತಾ ರಾಮ್‌ನಿಂದ ಸಮಂತಾ ರುಥ್‌ ಪ್ರಭುವರೆಗಿನ ಟಾಪ್‌ 10 ನಟಿಯರ ಲಿಸ್ಟ್‌ ಇಲ್ಲಿದೆ.

ಇದರಲ್ಲಿ ಮೊದಲಿಗೆ ಬರುವುದು ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌. ಚಿತ್ರರಂಗದ ಆರಂಭದಿಂದಲೂ ಹೋಮ್ಲಿ ಪಾತ್ರಗಳಲ್ಲಿ ನಟಿಸುತ್ತಿದ್ದ ರಚಿತಾ ರಾಮ್‌, ಉಪೇಂದ್ರ ನಟನೆಯ ಐ ಲವ್‌ ಯು ಚಿತ್ರದಲ್ಲಿ ಫುಲ್‌ ಹಾಟ್‌ ಆಗಿ ನಟಿಸಿದ್ದರು.

ಇಂದು ಲೇಡಿ ಸೂಪರ್‌ಸ್ಟಾರ್‌ ಎಂದೇ ಕರೆಸಿಕೊಳ್ಳುತ್ತಿರುವ ನಟಿ ನಯನತಾರಾ ಮೂಲತಃ ನಿರೂಪಕಿಯಾಗಿದ್ದವರು. ಮಲಯಾಳಂ ಸಿನಿಮಾಗಳಲ್ಲಿ ಹೋಮ್ಲಿ ಪಾತ್ರಗಳಲ್ಲೇ ನಟಿಸುತ್ತಿದ್ದ ಈಕೆ ತಮಿಳು ಸಿನಿಮಾಗೆ ಬಂದವರೇ ಫುಲ್‌ ಹಾಟ್‌ ಆದರು. ಸಿಂಬು ಜೊತೆಗಿನ ಸಿನಿಮಾದಲ್ಲಿ ಅವರ ಹಾಟ್‌ ಪಾತ್ರ ಕಂಡು ಫ್ಯಾನ್ಸ್‌ ಅಚ್ಚರಿಪಟ್ಟಿದ್ದರು.

ಕನ್ನಡದಲ್ಲಿ ನಾನು ಮತ್ತು ವರಲಕ್ಷಿ ಸಿನಿಮಾದಲ್ಲಿ ಬಬ್ಲಿ ಪಾತ್ರದಲ್ಲಿ ನಟಿಸಿದ್ದ ಮಾಳವಿಕಾ ಮೋಹನನ್‌, ತಮಿಳು ಚಿತ್ರರಂಗದಲ್ಲಿ ತಮ್ಮ ಬೋಲ್ಡ್‌ ಪಾತ್ರಗಲ್ಲಿಯೇ ಗುರುತಿಸಿಕೊಂಡಿದ್ದಾರೆ. ಮಾರನ್‌ ಸಿನಿಮಾದಲ್ಲಿನ ಅವರ ಪಾತ್ರ ಕಂಡು ಫ್ಯಾನ್ಸ್‌ ಶಾಕ್‌ ಆಗಿದ್ದರು.

ಅನುಶ್ಕಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದರೂ, ಸಿನಿಮಾ ಜೀವನದ ಆರಂಭದಲ್ಲಿ ನಟಿಸಿದ್ದ ವಿಕ್ರಮಾರ್ಕುಡು, ಸೂಪರ್‌ ಸಿನಿಮಾದಲ್ಲಿ ಬೋಲ್ಡ್‌ ಆಗಿ ಕಾಣಿಸಿದ್ದರು.

ಈ ಲಿಸ್ಟ್‌ನಲ್ಲಿ ತಮನ್ನಾ ಭಾಟಿಯಾ ಇಲ್ಲದೇ ಇದ್ದರೆ ಹೇಗೆ. ತೀರಾ ಇತ್ತೀಚಿನವರೆಗೂ ತೆರೆಯ ಮೇಲೆ ನೋ ಕಿಸ್‌ ಪಾಲಿಸಿಯನ್ನು ಅವರು ಹೊಂದಿದ್ದರು. ಆದರೆ, ಲಸ್ಟ್‌ ಸ್ಟೋರಿಸ್‌ನಲ್ಲಿ ತಮ್ಮ ಪ್ರಿಯಕರ ವಿಜಯ್‌ ವರ್ಮಗಾಗಿ ಎಲ್ಲಾ ನಿಯಮ ಮುರಿದಿದ್ದು ಮಾತ್ರವಲ್ಲದೆ, ಹಿಂದೆಂದೂ ಕಾಣಿಸದ ಬೋಲ್ಡ್‌ ಅವತಾರದಲ್ಲಿ ಬಂದಿದ್ದರು.

ನಟಿ ಶ್ರುತಿ ಹಾಸನ್‌ ಈಗೀಗ ಬೋಲ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಅವರ ಡಿ-ಡೇ ಹಾಗೂ ಧನುಷ್‌ ನಾಯಕರಾಗಿರುವ 3 ಚಿತ್ರದ ಹಾಟ್‌ ದೃಶ್ಯಗಳನ್ನು ಯಾರೂ ಮರೆಯೋದಿಲ್ಲ.

ನಟಿ ಪ್ರಿಯಾಮಣಿ ಈಗೀಗ ಹೋಮ್ಲಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಹಿಂದೊಮ್ಮೆ ತೆರೆಯ ಮೇಲೆ ಬಿಕಿನಿಯಲ್ಲಿ ಕಾಣಿಸಿಕೊಂದು ಫ್ಯಾನ್ಸ್‌ಗೆ ಅಚ್ಚರಿ ನೀಡಿದ್ದರು.

ನಟಿ ಸಮಂತಾ ಹೋಮ್ಲಿ, ಬಬ್ಲಿ ಪಾತ್ರಗಳಲ್ಲಿಯೇ ಕಾಣಿಸಿದ್ದರು. ಆದರೆ, ಫ್ಯಾಮಿಲಿ ಮ್ಯಾನ್‌-2 ವೆಬ್‌ ಸಿರೀಸ್‌ನಲ್ಲಿ ಅವರ ನಟನೆಯು ಜೊತೆಗೆ ಹಾಟ್‌ ಸೀನ್‌ಗಳು ಅಭಿಮಾನಿಗಳಿಗೆ ಶಾಕ್‌ ನೀಡಿತ್ತು.

ಕಾಜಲ್‌ ಅಗರ್ವಾಲ್‌ರನ್ನು ಮಗಧೀರ ಸಿನಿಮಾದಿಂದ ನೆನಪಿಸಿಕೊಳ್ಳುತ್ತಾರಾದರೂ, ಅದಕ್ಕೂ ಮುನ್ನ ಬಂದ ಚಂದಮಾಮ ಚಿತ್ರದಲ್ಲಿ ಫುಲ್‌ ಹಾಟ್‌ ಆಗಿದ್ದರು.

ನಟಿ ಶ್ರೀಯಾ ಸರನ್‌ ಕನ್ನಡದಲ್ಲಿ ನಟಿಸಿದ ಚಂದ್ರ ಚಿತ್ರದಲ್ಲಿ ಹಾಗೂ ತೆಲುಗಿನ ಪವಿತ್ರ ಚಿತ್ರದಲ್ಲಿ ಹಾಟ್‌ ಆಗಿ ಕಾಣಿಸಿದ್ದರು. ಪವಿತ್ರ ಚಿತ್ರದಲ್ಲಿ ಅವರು ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು.

click me!