ನಾವು ಬದುಕಬೇಕು, ಇನ್ನೊಬ್ಬರನ್ನು ಬದುಕಲು ಬಿಡಬೇಕು-ಗವಿಶ್ರೀ

Published : Nov 16, 2024, 07:44 AM IST
ನಾವು ಬದುಕಬೇಕು, ಇನ್ನೊಬ್ಬರನ್ನು ಬದುಕಲು ಬಿಡಬೇಕು-ಗವಿಶ್ರೀ

ಸಾರಾಂಶ

ನಾವು ಬದುಕಬೇಕು, ಇನ್ನೊಬ್ಬರನ್ನು ಬದುಕಲು ಬಿಡಬೇಕು. ರೂಪಗೊಂಡಿರುವ ಜಗತ್ತನ್ನು ಕೆಡಿಸದಿರುವುದೇ ಅಹಿಂಸೆ. ಧರ್ಮವನ್ನು ಅರ್ಥೈಸಿಕೊಳ್ಳುವವನಿಗೆ ಸ್ವಲ್ಪ ಮಟ್ಟಿಗಾದರೂ ಅಹಿಂಸೆ ಕುರಿತು ತಿಳಿದಿರಬೇಕು ಎಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಬ್ಯಾಡಗಿ (ನ.16): ನಾವು ಬದುಕಬೇಕು, ಇನ್ನೊಬ್ಬರನ್ನು ಬದುಕಲು ಬಿಡಬೇಕು. ರೂಪಗೊಂಡಿರುವ ಜಗತ್ತನ್ನು ಕೆಡಿಸದಿರುವುದೇ ಅಹಿಂಸೆ. ಧರ್ಮವನ್ನು ಅರ್ಥೈಸಿಕೊಳ್ಳುವವನಿಗೆ ಸ್ವಲ್ಪ ಮಟ್ಟಿಗಾದರೂ ಅಹಿಂಸೆ ಕುರಿತು ತಿಳಿದಿರಬೇಕು ಎಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದಿರುವ 12 ದಿನಗಳ ಆಧ್ಯಾತ್ಮ ಪ್ರವಚನದ 2ನೇ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಕಳಿಂಗ ಯುದ್ಧ ಗೆದ್ದ ಬಳಿಕ ಅಶೋಕ ಚಕ್ರವರ್ತಿಯ ಬದಲಾವಣೆಯಾಗಿದ್ದನ್ನು ನಾವೆಲ್ಲರೂ ನೋಡಿ ಕಲಿಯಬೇಕಾಗಿದೆ. ಅಲ್ಲಿ ನಡೆದಿದ್ದ ಸಾವು-ನೋವುಗಳಿಂದ ಕಷ್ಟ ಪಡುತ್ತಿದ್ದ ಜನರನ್ನು ನೋಡಿದ ಅಶೋಕ ಚಕ್ರವರ್ತಿ ಯುದ್ಧಭೂಮಿಯಿಂದ ಬುದ್ಧಭೂಮಿಯ ಕಡೆಗೆ ಸಾಗುತ್ತಾನೆ. ಅಂದು ಮಹಾರಾಜನಿಗೆ ತಿಳಿದಿದ್ದು ಇಷ್ಟೇ, ಸಾಯುವ ವ್ಯಕ್ತಿಯನ್ನು ಉಳಿಸುವವನೇ ಜಗತ್ತು ಮೆಚ್ಚಿದ ನಾಯಕನಾಗಲಿದ್ದಾನೆ ಎಂದರು.

ಕೊಪ್ಪಳ: ಬಾಣಸಿಗರಂತೆ ವಿದ್ಯಾರ್ಥಿಗಳಿಗೆ ಬೆಣ್ಣೆ ದೋಸೆ ಹಾಕಿದ ಗವಿಮಠ ಶ್ರೀ!

ಅಹಿಂಸೆ, ದ್ವೇಷ ತಿಳಿದಿದ್ದರೇ ಮಹಾಭಾರತ ನಡೆಯುತ್ತಿರಲಿಲ್ಲ: ದಾಯಾದಿಗಳ ದ್ವೇಷದಿಂದಲೇ ಮಹಾಭಾರತವಾಯಿತು. ಕುಂತಿ ಮಕ್ಕಳಿಗೆ ರಾಜ್ಯ ಕೊಡಲೊಪ್ಪದ ಕಾರಣಕ್ಕೆ ಮತ್ತು ಮಕ್ಕಳ ಮೇಲಿನ ವ್ಯಾಮೋಹದಿಂದ ಹುಟ್ಟಿದ ದ್ವೇಷವು ಮಹಾಭಾರತವನ್ನೇ ಸೃಷ್ಟಿಸಿತು. ಮನುಷ್ಯ ಸಂಬಂಧಗಳು ಕೆಡುತ್ತಿವೆ, ನಿಸರ್ಗದ‌ ಸಂಬಂಧಗಳು ಉತ್ತಮವಾಗಿದ್ದು ಗಟ್ಟಿಯಾಗಿವೆ ಎಂದರು.

ಮನುಷ್ಯ ಭೂಮಿಯೊಂದಿಗೆ ಸಂವೇದನಾಶೀಲರಾಗಿರಬೇಕು. ಭೂಮಿ ತಾಯಿಗೆ ನಾವು ಕಸವನ್ನು ಹಾಕಿದರೆ ಅವಳು ರಸವನ್ನು ನೀಡುತ್ತಾಳೆ, ಇಂತಹ ಅದ್ಭುತವಾದ ಭೂಮಿ‌ ಹಾಗೂ ಜಗತ್ತನ್ನು ನೋಡಿ ಕೆಡಿಸುವ ಮನಸ್ಸು ನಮ್ಮಲ್ಲಿ ಮೂಡುತ್ತಿದೆ. ಗುಬ್ಬಚ್ಚಿಗಳು ಹುಲ್ಲಿನಿಂದ ‌ಮಾಡಿದ ಮನೆ ಬೀಳುವುದಿಲ್ಲ. ಎಂಜಿನಿಯರ್ ಕಟ್ಟಿದ ಮನೆ‌ಗಳು ಬೀಳುತ್ತಿದ್ದು, ಹುಡುಕುತ್ತಾ ಹೋದರೆ ಜಗತ್ತಿನಲ್ಲಿ ಇಂತಹ ಆಶ್ಚರ್ಯಗಳು ಸಾಕಷ್ಟಿವೆ ಎಂದರು.

ನಮ್ಮ ನಿರೀಕ್ಷೆಗಳು ಬದಲಾಗಿವೆ ಹೀಗಾಗಿ ಸಂಬಂದಗಳು ಬದಲಾಗುತ್ತಿವೆ, ನಾವು ಕಟ್ಟುತ್ತಿರುವ ಮನೆಯ ಗೋಡೆಗಳು ಅಣ್ಣ, ತಮ್ಮಂದಿರನ್ನು ತಂದೆ ಮಕ್ಕಳನ್ನು ಬೇರ್ಪಡಿಸುತ್ತಿವೆ ಎಂಬುದು ಎಲ್ಲರಿಗೂ ಎಚ್ಚರವಿರಲಿ. ತುಂಬಿದ ಕುಟುಂಬದಲ್ಲಿ ಕರುಣೆ ಎಂಬ ಗೋಡೆಗಳಿಂದ ಮನೆಯನ್ನು ನಿರ್ಮಿಸಿದ್ದೇ ಆದಲ್ಲಿ ಅದೊಂದು ಸುಂದರವಾದ ಮನೆಯಾಗಿ ಪರಿವರ್ತನೆಯಾಗಲಿದೆ.

ಇನ್ನೊಬ್ಬರನ್ನು ಕೆಡಿಸುವುದಕ್ಕಾಗಿ ಲಿಂಬೆಹಣ್ಣು: ಹೋಗುವಾಗ ಅಡ್ಡಬರುವ ಬೆಕ್ಕು ನಮ್ಮ ಭವಿಷ್ಯವನ್ನು ಬದಲಾಯಿಸುವ ಶಕ್ತಿಯನ್ನು ತುಂಬಿದವರು ಯಾರು? ನಮ್ಮ ಆರೋಗ್ಯಕ್ಕೆ ಅವಶ್ಯವಿರುವ ಲಿಂಬೆ ಹಣ್ಣು (ಮಾಟ ಮಂತ್ರ) ಇನ್ನೊಬ್ಬರನ್ನು ಬದುಕನ್ನು ಹಾಳು ಮಾಡಲು ಸಾಧ್ಯವಿಲ್ಲ. ಇಂತಹ ಮೌಢ್ಯಗಳು ನಮ್ಮಿಂದ ದೂರವಾಗಬೇಕು. ಅದಕ್ಕಾಗಿಯೇ ಜಗತ್ತಿನ‌ ಅಮೂರ್ತ ರೂಪವಾಗಿರುವ ದೇವರ ಮೇಲೆ ನಂಬಿಕೆ ಇಡಬೇಕೆ ವಿನಃ ಬೆಕ್ಕು, ಲಿಂಬೆ ಹಣ್ಣುಗಳಲ್ಲ.

ಲಕ್ಷ್ಮೀ ಭುವನೇಶ್ವರಿ ದೇವಿ ವಿಗ್ರಹ ವಿರೂಪಗೊಳಿಸಿ ದುಷ್ಕರ್ಮಿ ವಿಕೃತಿ!

ಇನ್ನೊಬ್ಬರ ದುಖಃವನ್ನು ಎಂದಿಗೂ ವಿಜೃಂಭಿಸಬಾರದು, ನಮಗೆ ಬೇಡವಾದ ವಸ್ತುಗಳ ಜಗತ್ತಿನಲ್ಲಿರಬಾರದು ಎಂಬುದು ಮೂರ್ಖತನದ ಪರಮಾವಧಿ, ಎಲ್ಲ ರೋಗಗಳ ಮೂಲವೇ ದ್ವೇಷ, ಹೀಗಾಗಿ ಪ್ರೀತಿಯಿಂದ ಬದುಕಬೇಕು, ನಮ್ಮಲ್ಲಿರುವ ಅಭಿರುಚಿಗಳ ಬದಲಾವಣೆ ಆದಂತೆ ಇಡೀ ವಿಶ್ವವೇ ಇನಬ್ಯಾಲನ್ಸ್ ಆಗುತ್ತಿದೆ, ಕಾರಣವಿಲ್ಲದೇ ನಡೆಯುತ್ತಿರುವ ಯುದ್ಧಗಳು ಇನ್ನೊಬ್ಬರು ಬದುಕುವುದನ್ನು ಪ್ರಶ್ನಿಸುತ್ತಿವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್