ಕುಚ್​ ಕುಚ್​ ಹೋಗಯಾ ಎಂದ ಅಮೃತಧಾರೆ ಅಪ್ಪಿ: ಮೊದ್ಲು ಕ್ಯಾರೆಕ್ಟರ್​ ಸರಿ ಮಾಡ್ಕೋ ಅಂತ ಬೈಯೋದಾ ಫ್ಯಾನ್ಸ್​?

By Suchethana D  |  First Published Nov 15, 2024, 10:02 PM IST

ಕುಚ್​ ಕುಚ್​ ಹೋಗಯಾ ಎಂದು ಅಮೃತಧಾರೆ ಅಪೇಕ್ಷಾ ಕ್ಯೂಟ್‌ ವಿಡಿಯೋ ಮಾಡಿದ್ರೂ ಬಾಯಿಗೆ ಬಂದಂಗೆ ಬೈತಿರೋ ನೆಟ್ಟಿಗರು! ಏನಿದು ವಿಷ್ಯ? 
 


ಅಮೃತಧಾರೆ ಸೀರಿಯಲ್​ ಅಪೇಕ್ಷಾ ಉರ್ಫ್​ ಅಪ್ಪಿ ಹೆಸ್ರು ಕೇಳಿದ್ರೆ ಸೀರಿಯಲ್​ ವೀಕ್ಷಕರಿಗೆ ಮೈಯೆಲ್ಲಾ ಉರಿಯತ್ತೆ ಅಲ್ವಾ? ಭೂಮಿಕಾಳಂಥವಳಿಗೆ ಸ್ವಂತ ತಂಗಿಯಾಗಿದ್ರೂ ವಿಭಿನ್ನ ಕ್ಯಾರೆಕ್ಟರ್​ ಈಕೆಯದ್ದು. ಒಂದೇ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿದ್ದರೂ ಎಲ್ಲವೂ ತದ್ವಿರುದ್ಧ. ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿಸಿಕೊಂಡ ಎನ್ನುವ ಗಾದೆ ಮಾತಿದೆ ಈಕೆ ಸಾಕ್ಷಾತ್​ ಉದಾಹರಣೆಯಾಗಿದ್ದಾಳೆ. ಶ್ರೀಮಂತಿಕೆಯಲ್ಲಿ ಮೆರೆಯುತ್ತ ಮಿಡ್ಲ್​ಕ್ಲಾಸ್​ ಫ್ಯಾಮಿಲಿಯನ್ನೇ ದೂಷಿಸುತ್ತಿದ್ದಾಳೆ. ಕೊನೆಗೆ ತನ್ನ ಅಪ್ಪನನ್ನೇ ಬೈದು ಅಕ್ಕನ ಕೈಯಲ್ಲಿ ಕಪಾಳಮೋಕ್ಷನೂ ಮಾಡಿಸಿಕೊಂಡಿದ್ದಾಳೆ. ಅಂದಹಾಗೆ, ಅಪ್ಪಿ ಪಾತ್ರಕ್ಕೆ ಜೀವ ತುಂಬ್ತಿರೋ  ನಟಿ ಹೆಸರು ಅಮೃತಾ ನಾಯಕ್​. ಇದೀಗ ನಟಿ, ಕುಚ್​ ಕುಚ್​ ಹೋಗಯಾ ಹಾಡಿಗೆ ರೀಲ್ಸ್​ ಮಾಡಿದ್ದಾರೆ.  ತುಂಬಾ ಮುದ್ದಾಗಿ ಕಾಣುವ ಅಪೇಕ್ಷಾ ಅಂದ್ರೆ ಅಮೃತಾ ನಾಯಕ್​ ಅವರಿಗೆ ಹಾರ್ಟ್​ ಇಮೋಜಿ ಮೂಲಕ ಕೆಲವರು ಶ್ಲಾಘನೆ ವ್ಯಕ್ತಪಡಿಸಿದ್ದರೂ, ಹಲವರು ನಟಿಗೆ ಉಗಿಯುತ್ತಿದ್ದಾರೆ. ನಿನ್ನ ಕೆಟ್ಟವರನ್ನು ನಾನು ನೋಡಿಲ್ಲ, ನಿನ್ನ ಕ್ಯಾರೆಕ್ಟರ್​  ಮೊದಲು ಸರಿ ಮಾಡ್ಕೊ ಎಂದೆಲ್ಲಾ ಬೈಯುತ್ತಿದ್ದಾರೆ!

ಹೌದು. ಅಷ್ಟಕ್ಕೂ ಸೀರಿಯಲ್​ ಅಂದ್ರೆ ಸುಮ್ನೆ ಅಲ್ವಲ್ಲಾ. ಸೀರಿಯಲ್​ ಪಾತ್ರಧಾರಿಗಳನ್ನು ಅವರ ಸೀರಿಯಲ್​ ಕ್ಯಾರೆಕ್ಟರ್​ಗೆ ತಕ್ಕಂತೆ ಹೊರಗಡೆ ಬೈಯುವುದು, ಹೊಗಳುವುದು, ತೆಗಳುವುದು ಎಲ್ಲವೂ ನಡೆದೇ ಇದೆ.  ನಿಮ್ಮಂಥ ಅಕ್ಕ-ತಂಗಿ ಇರಬೇಕು ಎಂದು ಹಿಂದೊಮ್ಮೆ ಅಮೃತಧಾರೆಯ ಅಪ್ಪಿ  ಮತ್ತು ಭೂಮಿಕಾ ಸಹೋದರಿಯನ್ನು ತೋರಿಸಿ ಹೇಳುತ್ತಿದ್ದರು. ಆದರೆ ಈಗ ಈ ಅಕ್ಕ-ತಂಗಿ ವಾರೆಗಿತ್ತಿಯರಾಗಿದ್ದಾರೆ. ಭೂಮಿಕಾ ಈಗಲೂ ಅದೇ ಒಳ್ಳೆಯತನ ಉಳಿಸಿಕೊಂಡಿದ್ದರೆ, ಅಪೇಕ್ಷಾ ಸಂಪೂರ್ಣ ಬದಲಾಗಿದ್ದಾಳೆ. ವಿಲನ್‌ ಅತ್ತೆ ಜೊತೆ ಸೇರಿಕೊಂಡು ಖುದ್ದು ಅಕ್ಕಳಿಗೇ ವಿಲನ್‌ ಆಗಿಬಿಟ್ಟಿದ್ದಾಳೆ. ಅಷ್ಟಕ್ಕೂ ಅಪೇಕ್ಷಾ ಹೀಗೆ ಮಾಡಲು ಕಾರಣವೂ ಇದೆ. ಪಾರ್ಥನ ಜೊತೆ ತನ್ನ ಮದುವೆಯಾಗದಂತೆ ಮಾಡಲು ಅಕ್ಕ ಪ್ರಯತ್ನ ಪಟ್ಟಿದ್ದಾಳೆ ಎನ್ನುವ ತಪ್ಪು ತಿಳಿವಳಿಕೆಯಿಂದ ಆಕೆ ಅಕ್ಕನನ್ನು ಕಂಡರೆ ಗುರ್‌ ಎನ್ನುತ್ತಿದ್ದಾಳೆ.

Tap to resize

Latest Videos

undefined

ಬಿಗ್‌ಬಾಸ್‌ ಮನೆಯ ಹೇಳಬಾರದ ದೊಡ್ಡ ಗುಟ್ಟನ್ನು ಬಾಯ್ತಪ್ಪಿ ಹೇಳಿ ತಗ್ಲಾಕ್ಕೊಂಡ ವರ್ತೂರು ಸಂತೋಷ್‌! ವಿಡಿಯೋ ವೈರಲ್

ಅಷ್ಟಕ್ಕೂ, ಅಪೇಕ್ಷಾ ಮತ್ತು ಪಾರ್ಥ ಅವರ ಮದುವೆ  ಹೇಗಾದರೂ  ನಿಲ್ಲಿಸಬೇಕು ಎಂದು ವಿಲನ್‌ ಅತ್ತೆ ಶಕುಂತಲಾ ದೇವಿಯ ಮಾತಿಗೆ ಕಟ್ಟುಬಿದ್ದ ಭೂಮಿಕಾ, ಈ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಳು. ಬುದ್ಧಿವಂತೆ ಆಗಿದ್ದ ಭೂಮಿಕಾ, ಈ ಒಂದು ವಿಷಯದಲ್ಲಿ ಅತ್ತೆಯ ಬಲೆಯೊಳಕ್ಕೆ ಸಿಲುಕಿಬಿಟ್ಟಳು. ಈಗ ಇದನ್ನೇ ಮುಂದು ಮಾಡಿಕೊಂಡು ಅತ್ತೆ ಅಪೇಕ್ಷಾಳ ತಲೆಯಲ್ಲಿ ವಿಷ ಬೀಜ ಬಿತ್ತಿದ್ದಾಳೆ. ತನ್ನ ಅಕ್ಕ ಹೇಗೆ ಎಂದು ಹುಟ್ಟಿನಿಂದಲೂ ನೋಡಿಕೊಂಡು ಬಂದಿದ್ದ ಅಪೇಕ್ಷಾಗೆ ಈಗ ಅತ್ತೆಯ ಮಾತೇ ಪ್ರಿಯ ಆಗಿಬಿಟ್ಟಿದೆ. ಅಕ್ಕನ ಮೇಲೆ ತಿರುಗಿ ಬೀಳುತ್ತಿದ್ದಾಳೆ. ಮಾತು ಮಾತಿಗೂ ಅಕ್ಕನನ್ನು ಚುಚ್ಚುತ್ತಿದ್ದಾಳೆ. ವಿಲನ್​ ರೀತಿ ಸಂಪೂರ್ಣ ಬದಲಾಗಿದ್ದಾಳೆ. ಶ್ರೀಮಂತ ಮನೆಯ ದೌಲತ್ತು ತೋರಿಸುತ್ತಿದ್ದಾಳೆ. ಆದ್ದರಿಂದ ಈಗಿನ ಅಪೇಕ್ಷಾ ಕಂಡರೆ ಸೀರಿಯಲ್​ ಪ್ರೇಮಿಗಳಿಗೆ ಇಷ್ಟ ಆಗ್ತಿಲ್ಲ.

ಅಷ್ಟಕ್ಕೂ ಸೀರಿಯಲ್​ಗಳು ಎಂದರೆ ಈಗ ಹಲವರಿಗೆ ಕೇವಲ ಧಾರಾವಾಹಿ ಅಲ್ವಲ್ಲಾ? ಅಲ್ಲಿನ ಪಾತ್ರಗಳು ನಿಜವೇ ಎಂಬ ಅರ್ಥದಲ್ಲಿ ನೋಡುತ್ತಾರೆ. ಅದರಲ್ಲಿಯೂ ವಿಲನ್​ಗಳ ಪಾಡು ಹೊರಗೆ ಹೋದರೂ ಬೇಡವೇ ಬೇಡ. ಎಷ್ಟೋ ಮಂದಿ ಇವರು ರಿಯಲ್​ ಲೈಫ್​ನಲ್ಲಿಯೂ ವಿಲನ್​ಗಳೇ ಅನ್ನುವ ರೀತಿಯಲ್ಲಿ ಹೊರಗಡೆ ಕಂಡಾಗಲೂ ವರ್ತಿಸುವುದು ಇದೆ. ಅದೇ ಕಾರಣಕ್ಕೆ ಅಮೃತಾ ನಾಯಕ್​  ಮೇಲೂ ಅಭಿಮಾನಿಗಳು ಹರಿಹಾಯುತ್ತಿದ್ದಾರೆ. ನಿಮ್ಮ ನೆಗೆಟಿವ್​ ರೋಲ್​ ಚೆನ್ನಾಗಿಲ್ಲ, ಬೇಗ ಬದಲಾಗಿ. ಅಕ್ಕನ ರೀತಿ ಒಳ್ಳೆಯವಾಗಿ ಎನ್ನುತ್ತಿದ್ದಾರೆ. ಅಂದಹಾಗೆ,  ಅಮೃತಾ ನಾಯಕ್ ಒಂದು ಮೊಟ್ಟೆ ಕಥೆ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಟೀಚರ್ ಪಾತ್ರ ಮಾಡಿದ್ದಾರೆ. ಅಲ್ಲದೇ ಇವು ಶಿವರಾಜ್‌ಕುಮಾರ್‌ ಅವರ  ಕವಚ ಸಿನಿಮಾದಲ್ಲಿ  ತಂಗಿ ಪಾತ್ರ ಮಾಡಿದ್ದಾರೆ.  ಅಮೃತಧಾರೆಗೂ ಮೊದಲು ಇವರು ರಾಜಿ ಸೇರಿ ಕೆಲವು ಧಾರಾವಾಹಿಯಲ್ಲಿ ನಟಿಸಿದ್ದಾರೆ.

ನೈಜೇರಿಯಾದಲ್ಲಿ ಡಾ.ಬ್ರೋಗೆ ಚಾಕು ಇರಿದ್ರು, ಬ್ಲೇಡ್​ನಿಂದ ಬೆರಳು ಕತ್ತರಿಸಿದ್ರು! ವಿಡಿಯೋ ನೋಡಿ ಫ್ಯಾನ್ಸ್ ಶಾಕ್​
 

 
 
 
 
 
 
 
 
 
 
 
 
 
 
 

A post shared by Amrutha Naik (@amrutha_sudu)

click me!