ಸತ್ತಿದ್ದು ನಾನಲ್ಲ ಕಣ್ರೀ... RIP ಹಾಕಿ ಪ್ಲೀಸ್​ ನನ್ನ ಸಾಯಿಸ್ಬೇಡಿ: ಜಾಲತಾಣದಲ್ಲಿ ನಟ ನಿತಿನ್ ಮನವಿ

By Suchethana D  |  First Published Nov 15, 2024, 11:04 PM IST

ಸತ್ತಿದ್ದು ನಾನಲ್ಲ ಕಣ್ರೀ... RIP ಹಾಕಿ ಪ್ಲೀಸ್​ ನನ್ನ ಸಾಯಿಸ್ಬೇಡಿ ಎಂದು ನಟ, ರೂಪದರ್ಶಿ ನಿತಿನ್​ ಚೌಹಾಣ್​ ಜಾಲತಾಣದಲ್ಲಿ  ಮನವಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
 


ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಷೋಗಳ ಮೂಲಕ ಪ್ರಸಿದ್ಧಿ ಪಡೆದ ನಿತಿನ್ ಚೌಹಾಣ್‌ ಇಂದು ಶವವಾಗಿ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. 35 ವರ್ಷದ ನಿತಿನ್​ ಅವರ ಸಾವಿನ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಡೇಟಿಂಗ್ ರಿಯಾಲಿಟಿ ಷೋ ಅಗಿರುವ ‘ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ’ ಮತ್ತು ‘ಕ್ರೈ ಪ್ಯಾಟ್ರೋಲ್‌’ನಂಥ ಷೋಗಳಿಂದ ಚಿರಪರಿಚಿತರಾಗಿದ್ದಾರೆ ನಿತಿನ್​.  ಮುಂಬೈನಲ್ಲಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಇವರ ಶವ ಪತ್ತೆಯಾಗಿತ್ತು.   2009 ರಲ್ಲಿ ಪ್ರಸಾರವಾದ ‘ದಾದಾಗಿರಿ 2’ ಮೂಲಕ ಎಂಟ್ರಿ ಕೊಟ್ಟಿದ್ದ ಇವರು,  ‘ಸ್ಪ್ಲಿಟ್ಸ್‌ ವಿಲ್ಲಾ ಸೀಸನ್‌ 5’ ಕಾರ್ಯಕ್ರಮದಲ್ಲಿ  ಸ್ಪರ್ಧಿಸಿದ್ದರು. ಇಲ್ಲಿ ಅಭಿಮಾನಿಗಳ ಸಂಖ್ಯೆ ಏರಿಸಿಕೊಂಡಿದ್ದ ಅವರಿಗೆ ಜಿಂದಗಿ ಡಾಟ್‌ ಕಾಮ್‌, ಕ್ರೈಮ್ ಪ್ಯಾಟ್ರೋಲ್, ತೇರಾ ಯಾರ್ ಹೂ ಮೇ ಮುಂತಾದ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತ್ತು. ಆದರೂ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಹಿಂದಿನ ಕಾರಣ ಮಾತ್ರ ತಿಳಿದಿಲ್ಲ.

ಆದರೆ ಇವರ ಸಾವಿನ ಸುದ್ದಿ ವೈರಲ್​ ಆಗುತ್ತಲೇ, ಬಹುತೇಕ ಮಾಧ್ಯಮಗಳು ವರದಿಯನ್ನು ಬಿತ್ತರಿಸಿದವು. ಆದರೆ ಅಲ್ಲೇ ಆದದ್ದು ಎಡವಟ್ಟು. ಅದೇನೆಂದರೆ, ನಿಜವಾಗಿ ಸಾವನ್ನಪ್ಪಿದ ನಟ ನಿತಿನ್ ಚೌಹಾಣ್‌ ಬದಲಿಗೆ ಇನ್ನೋರ್ವ ಅದೇ ಹೆಸರಿನ ನಟ ನಿತಿನ್ ಚೌಹಾಣ್‌ ಫೋಟೋ ಬಳಸಿಕೊಳ್ಳಲಾಗಿದೆ. ಸೋಷಿಯಲ್​ ಮೀಡಿಯಾಗಳಲ್ಲಿಯೂ ಬದುಕಿರುವ ನಿತಿನ್​ ಅವರ ಫೋಟೋ ಶೇರ್​ ಆಗುತ್ತಿದ್ದು, ಸಂತಾಪಗಳ ಸುರಿಮಳೆಯಾಗುತ್ತಿದೆ. ಇದನ್ನು ನೋಡಿ ನಟ ನಿತಿನ್​ ಶಾಕ್​ಗೆ ಒಳಗಾಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿರುವ ಅವರು, ತಾವಿನ್ನೂ ಸತ್ತಿಲ್ಲ ಕಣ್ರಿ, ಬದುಕಿದ್ದೇನೆ. ರಿಪ್​ ಹಾಕಿ ನನ್ನನ್ನು ಸಾಯಿಸ್ಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Tap to resize

Latest Videos

undefined

ಹಿಂದೂಗಳ ಜನಸಂಖ್ಯೆ ಈ ಪರಿ ಇಳಿಮುಖ? ಬೆಚ್ಚಿ ಬೀಳಿಸಿದ ಟಾಟಾ ಇನ್​ಸ್ಟಿಟ್ಯೂಟ್​ ವರದಿಯಲ್ಲಿ ಇರುವುದೇನು?

 
 ನನ್ನ ಸಾವಿನ ವದಂತಿ ಸುದ್ದಿ ಕೇಳಿ ತಾಯಿ ಅಳುತ್ತಿದ್ದಾರೆ. ಸತ್ತಿದ್ದು ನಾನಲ್ಲ ಎಂದು ಹೇಳಿಕೊಂಡಿದ್ದಾರೆ.  ವರದಿ ಬಿತ್ತರಿಸುವಾಗ ಹೀಗೆ ಯಾರದ್ದೋ ಫೋಟೋ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸುಳ್ಳು ಮಾಹಿತಿಯ ಪೋಸ್ಟ್ ಮತ್ತು ಪ್ರಸರಣಕ್ಕೆ ಸಾಮಾಜಿಕ ಮಾಧ್ಯಮ, ಸುದ್ದಿ ಮೂಲಗಳನ್ನು ಹೊಣೆಗಾರರನ್ನಾಗಿ ಮಾಡಬೇಕು.  ಇಬ್ಬರು ವಿಭಿನ್ನ ವ್ಯಕ್ತಿಗಳನ್ನು ಒಂದೇ ವ್ಯಕ್ತಿ ಎಂದು ಗುರುತಿಸುವುದು ಅತ್ಯಂತ ಬೇಜವಾಬ್ದಾರಿ. ಇದು ಎರಡು ಕುಟುಂಬಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಇದೇ ವೇಳೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ತಮ್ಮ ಫೋಟೋ ಬಳಸಿದ್ದವರು ಕೂಡಲೇ ಸೋಷಿಯಲ್​ ಮೀಡಿಯಾದಿಂದ ಅದನ್ನು ತೆಗೆಯುವಂತೆ ಕೇಳಿಕೊಂಡಿದ್ದಾರೆ. 
 
ಈ ಸತ್ಯ ಸುದ್ದಿ ತಿಳಿಯದವರು ಇದುವರೆಗೆ ಬದುಕಿರುವ ನಿತಿನ್​ ಅವರಿಗೇ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಮತ್ತೆ ಕೆಲವರು ಕರೆ ಮಾಡಿ ಸುದ್ದಿಯನ್ನು ಕನ್​ಫರ್ಮ್​  ಮಾಡಿಕೊಳ್ಳುತ್ತಿದ್ದಾರೆ. ಎಲ್ಲರ ಕರೆ ಸ್ವೀಕರಿಸಿ ಅವರಿಗೆ ಸ್ಪಷ್ಟನೆ ನೀಡುವಲ್ಲಿ ನಿತಿನ್​ ಅವರು ಸುಸ್ತಾಗಿ ಹೋಗಿದ್ದಾರೆ ಎಂದು ವರದಿಯಾಗಿದೆ. 

ಅರ್ಜುನ್​ ಕಪೂರ್​ ಜೊತೆ ಬ್ರೇಕಪ್- ಇನ್ನೊಬ್ಬರಿಗೆ ಆಫರ್ ಕೊಡ್ತಿದ್ದಾರಾ ಮಲೈಕಾ? ಟಿ-ಷರ್ಟ್​ ಮೇಲೆ ಇದೇನಿದು?

click me!