ಹರ್ಯಾಣದ ಈ ಕೋಣ ಅನ್ಮೋಲ್ ಕೃಷಿ ಮೇಳಗಳಲ್ಲಿ ಸದ್ದು ಮಾಡುತ್ತಿದೆ. ಐಷಾರಾಮಿ ಜೀವನಶೈಲಿ, ವಿಶೇಷ ಆಹಾರ ಮತ್ತು ಹೆಚ್ಚಿನ ವೀರ್ಯದ ಬೆಲೆಯಿಂದಾಗಿ ಇದು ಗಮನ ಸೆಳೆದಿದೆ.
ಚಂಡೀಗಢ: ಹರ್ಯಾಣದ 23 ಕೋಟಿ ರು. ಮೌಲ್ಯದ ಕೋಣವೊದು ಭಾರತದಾದ್ಯಂತ ಕೃಷಿ ಮೇಳಗಳಲ್ಲಿ ಸದ್ದು ಮಾಡುತ್ತಿದೆ. ಅನ್ಮೋಲ್ ಎಂಬ ಹೆಸರಿನ ಈ ಕೋಣ 1,500 ಕೆಜಿ ತೂಗುತ್ತದೆ. ಇದರ ಮೌಲ್ಯ 2 ಐಷಾರಾಮಿ ರೋಲ್ಸ್ ರಾಯ್ಸ್ ಕಾರಿಗೆ, 10 ಬೆಂಜ್ ಕಾರಿಗೆ ಹಾಗೂ ನೋಯ್ಡಾದ ಐಷಾರಾಮಿ 12 ಮನೆಗಳಿಗೆ ಸಮ!!
ಪುಷ್ಕರ್ ಮೇಳ ಮತ್ತು ಮೇರಠ್‌ನಲ್ಲಿ ನಡೆದ ಅಖಿಲ ಭಾರತ ರೈತರ ಮೇಳದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಈ ಕೋಣದ ಗಾತ್ರ, ವಂಶಾವಳಿ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ ದೇಶದ ಗಮನ ಸೆಳೆದಿದೆ.
ಐಷಾರಾಮಿ ಜೀವನ ವೆಚ್ಚ
ಸಿರ್ಸಾ ಜಿಲ್ಲೆಯ ಅನ್ಮೋಲ್ ಐಷಾರಾಮಿ ಜೀವನಶೈಲಿಯು ಅಚ್ಚರಿ ಮೂಡಿಸುವಂತಿದೆ. ಅದರ ಮಾಲೀಕ ಗಿಲ್ ಅವರು ಕೋಣದ ಆಹಾರಕ್ಕಾಗಿ ಪ್ರತಿದಿನ ಸುಮಾರು ₹ 1,500 ಖರ್ಚು ಮಾಡುತ್ತಾರೆ, ಇದರಲ್ಲಿ ಒಣ ಹಣ್ಣುಗಳು ಮತ್ತು ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥ ಇದ್ದು, ಅನ್ಮೋಲ್‌ನ ಆರೋಗ್ಯ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ.
ಮೆನುವಿನಲ್ಲಿ 250 ಗ್ರಾಂ ಬಾದಾಮಿ, 30 ಬಾಳೆಹಣ್ಣು, 4 ಕೆಜಿ ದಾಳಿಂಬೆ, 5 ಕೆಜಿ ಹಾಲು ಮತ್ತು 20 ಮೊಟ್ಟೆಗಳಿವೆ. ಇದು ಆಯಿಲ್ ಕೇಕ್, ಹಸಿರು ಮೇವು, ತುಪ್ಪ, ಸೋಯಾಬೀನ್ ಮತ್ತು ಮೆಕ್ಕೆಜೋಳವನ್ನು ಸಹ ತಿಂದು ತೇಗುತ್ತದೆ. ಈ ವಿಶೇಷ ಆಹಾರವು ಅನ್ಮೋಲ್ ಸಂತಾನೋತ್ಪತ್ತಿಯೆ ಯಾವತ್ತೂ ಸೈ ಎಂಬುದನ್ನು ಖಚಿತಪಡಿಸುತ್ತದೆ.
ಎಮ್ಮೆಗೆ ದಿನಕ್ಕೆ 2 ಬಾರಿ ಸ್ನಾನ ಮಾಡಿಸುತ್ತಾರೆ. ಬಾದಾಮಿ ಮತ್ತು ಸಾಸಿವೆ ಎಣ್ಣೆಯ ವಿಶೇಷ ಮಿಶ್ರಣವು ಅದರ ಮೈಯನ್ನು ಫಳಫಳ ಹೊಳೆಯುವಂತೆ ಮಾಡುತ್ತದೆ. ಅನ್ಮೋಲ್ ಮೇಲೆ ಗಿಲ್‌ಗೆ ಎಷ್ಟು ಪ್ರೀತಿ ಎಂದರೆ ಅದರ ‘ತಾಯಿ’ ಹಾಗೂ ‘ತಂಗಿ’ಯನ್ನೇ ಆತ ಅನ್ಮೋಲ್‌ನ ವೆಚ್ಚ ಸರಿದೂಗಿಸಲು ಮಾಡಿದ್ದಾನೆ. ಅನ್ಮೋನ್‌ನ ತಾಯಿ ಎಮ್ಮೆಯು ದಿನಕ್ಕೆ 25 ಲೀ. ಹಾಲು ಉತ್ಪಾದಿಸುವಲ್ಲಿ ಖ್ಯಾತಿ ಪಡೆದಿತ್ತು.
ಇದನ್ನೂ ಓದಿ: ಟ್ರ್ಯಾಕ್ಟರ್‌ಗಳನ್ನೇ ಮೀರಿಸುವಂತೆ ಉಳುಮೆ ಮಾಡಿದ ವಿಜಯಪುರದ ಜೋಡೆತ್ತುಗಳು!
ವೀರ್ಯಕ್ಕೆ ಎಲ್ಲಿಲ್ಲದ ಡಿಮಾಂಡ್
ಅನ್ಮೋಲ್‌ನ ವೀರ್ಯಕ್ಕೆ ಎಲ್ಲಿಲ್ಲದ ಡಿಮಾಂಡ್ ಇದೆ. ವಾರಕ್ಕೆ 2 ಬಾರಿ ವೀರ್ಯ ತೆಗೆಯಲಾಗುತ್ತದೆ. ಪ್ರತಿ ಹೊರತೆಗೆಯುವಿಕೆಯು 250 ರು. ಮೌಲ್ಯದ್ದಾಗಿದೆ ಮತ್ತು ನೂರಾರು ಜಾನುವಾರುಗಳ ಗರ್ಭಧಾರಣೆಗೆ ಅದನ್ನು ಬಳಸಬಹುದು. ಬರೀ ವೀರ್ಯ ಮಾರಾಟದಿಂದಲೇ ಮಾಲೀಕನಿಗೆ ಮಾಸಿಕ 4-5 ಲಕ್ಷ ರು. ಬರುತ್ತದೆ.
23 ಕೋಟಿ ರು. ಮೌಲ್ಯ
ಅನೇಕರು ಅನ್ಮೋಲ್ ಖರೀದಿಗೆ ಮುಂದಾಗಿ 23 ಕೋಟಿ ರು. ನೀಡುವ ಆಫರ್ ಕೊಟ್ಟಿದ್ದರು. ಆದರೆ ಅನ್ಮೋಲ್ ಮೇಲಿನ ಪ್ರೀತಿಯ ಕಾರಣದಿಂದ ಗಿಲ್‌ಗೆ ಅದನ್ನು ಮಾರಲು ಮನಸ್ಸಿಲ್ಲ. ಅನ್ಮೋಲ್ ಅನ್ನು ಕುಟುಂಬದ ಸದಸ್ಯರಂತೆ ನೋಡುತ್ತಾರೆ ಮತ್ತು ಅದರೊಂದಿಗೆ ಬೇರ್ಪಡುವ ಉದ್ದೇಶ ಹೊಂದಿಲ್ಲ.
ಇದನ್ನೂ ಓದಿ: ಫಾರ್ಚೂನರ್ ಕಾರ್‌ಗಿಂತ ಹೆಚ್ಚು ಬೆಲೆಯ ಎತ್ತುಗಳು; ಲಕ್ಷಾಂತರ ಹಣ ನೀಡಿ ರೈತರು ಪ್ರೀತಿಯಿಂದ ಸಾಕಾಗೋದೇಕೆ?