ಅಯ್ಯೋ ದೇವಾ.. ಮಗಳ ಮುಂದೆಯೇ ಬಾಲಿವುಡ್ ದಂಪತಿಯ ಲಿಪ್‌ಲಾಕ್

First Published Jun 12, 2024, 10:59 PM IST

ನಟಿ ಬಿಪಾಶಾ ಬಸು ಮತ್ತು ನಟ ಕರಣ್ ಸಿಂಗ್ ಗ್ರೋವರ್ ಬಾಲಿವುಡ್‌ನ ಹಾಟ್ ಜೋಡಿ ಎಂದೇ ಫೇಮಸ್. ಇದೀಗ ಪುಟಾಣಿ ಮಗಳ ಮುಂದೆಯೇ ಕಿಸ್ ಮಾಡಿದ್ದಾರೆ.

ಬಾಲಿವುಡ್‌ನ ಕೃಷ್ಣ ಸುಂದರಿ, ಬಂಗಾಳಿ ಚೆಲುವೆ ಬಿಪಾಶಾ ಬಸು ಕೆಲ ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದು, ಮಗಳ ಲಾಲನೆ ಪಾಲನೆಯಲ್ಲಿ ಬ್ಯೂಸಿ ಆಗಿದ್ದಾರೆ. ಪತಿ ಕರಣ್ ಸಿಂಗ್ ಗ್ರೋವರ್ ಬಣ್ಣದ ಲೋಕದಲ್ಲಿ ಸಿಕ್ಕ ಅವಕಾಶಗಳನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ.

ಬಿಪಾಶಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮುದ್ದಾದ ಕುಟುಂಬದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ಎರಡು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಲೈಕ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Latest Videos


2014ರಲ್ಲಿ ಇಬ್ಬರು ಸಿನಿಮಾ ಶೂಟಿಂಗ್ ವೇಳೆ ಭೇಟಿಯಾಗಿದ್ದರು. ನಂತರ ಇಬ್ಬರು ಕೈ ಕೈ ಹಿಡಿದುಕೊಂಡು ಎರಡು ವರ್ಷ ಸುತ್ತಾಡಿದ್ದರು. 2016ರಲ್ಲಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ಬಂಗಾಳಿ ಮತ್ತು ಪಂಜಾಬಿ ಸಂಪ್ರದಾಯದಂತೆ ಇಬ್ಬರು ಮದುವೆ ನಡೆದಿತ್ತು. 12ನೇ ನವೆಂಬರ್ 2022ರಂದು ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ಮುದ್ದಾದ ಮಗಳನ್ನು ಬರಮಮಾಡಿಕೊಂಡಿದ್ದರು. ಮಗಳಿಗೆ ದೇವಿ ಎಂದು ಹೆಸರಿಟ್ಟಿದ್ದಾರೆ.

ಇಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋದಲ್ಲಿ ಬಿಪಾಶಾ, ಕರಣ್ ಮತ್ತು ದೇವಿ ಇರೋದನ್ನು ನೋಡಬಹುದು. ಒಂದು ಫೋಟೋದಲ್ಲಿ ಮಗಳ ಮುಂದೆಯೇ ಬಿಪಾಶಾ ಮತ್ತು ಕರಣ್ ಚುಂಬನಕ್ಕೆ ಮುಂದಾಗಿದ್ದಾರೆ. ಇದನ್ನು ಮಗಳು ಆಶ್ಚರ್ಯದಿಂದ ನೋಡುತ್ತಿರುವಂತೆ ಪೋಟೋದಲ್ಲಿ ಕಾಣಿಸುತ್ತದೆ.

ಅಭಿಮಾನಿಗಳು ಫೋಟೋಗೆ ಸುಂದರವಾದ ಕುಟುಂಬ ಲವ್ ಯು, ನನ್ನ ನೆಚ್ಚಿನ ಕಲಾವಿದರು ನೀವು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ದೇವರ ಆಶೀರ್ವಾದ ಮಗಳು ದೇವಿ ಮೇಲಿರಲಿ ಎಂದ ಶುಭ ಹಾರೈಸಿದ್ದಾರೆ.

ಬಿಪಾಶಾ ಬಸು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ದೇವಿ ಜೀವನಕ್ಕೆ ಆಗಮಿಸಿದ ದಿನದಿಂದ ಮಗಳ ಮುದ್ದಾದ ಫೋಟೋ ಮತ್ತು ಕ್ಯೂಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಬಿಪಾಶಾ ಬಸು ಇನ್‌ಸ್ಟಾಗ್ರಾಂನಲ್ಲಿ 14 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

click me!