ಬೆಟ್ಟದ ಮೇಲೆ ನಟರ ಮಾತು ಹೇಗೆ ರೆಕಾರ್ಡ್​ ಆಗತ್ತೆ? ಟೀ ಕುಡಿಯೋ ಒಂದು ಸೀನ್​ಗೆ ಇಷ್ಟೆಲ್ಲಾ ಶ್ರಮನಾ?

By Suchethana D  |  First Published Sep 28, 2024, 4:58 PM IST

ಬೆಟ್ಟದ ಮೇಲೆ ನಟರ ಮಾತು ಹೇಗೆ ರೆಕಾರ್ಡ್​ ಆಗತ್ತೆ? ಟೀ ಕುಡಿಯೋ ಒಂದು ಸೀನ್​ಗೆ ಇಷ್ಟೆಲ್ಲಾ ಶ್ರಮಪಟ್ಟಿದ್ಯಾ ಸೀತಾರಾಮ ಟೀಮ್​. ಫುಲ್​ ಡಿಟೇಲ್ಸ್​ ನೀಡಿದ ಪ್ರಿಯಾ ಉರ್ಫ್​ ಮೇಘನಾ ಶಂಕರಪ್ಪ.
 


ಒಂದೇ ಒಂದು ದೃಶ್ಯದ ಶೂಟಿಂಗ್​ ಮಾಡಬೇಕಾದರೆ ಸೀರಿಯಲ್​ಗಳಲ್ಲಿಯೂ ನಟ-ನಟಿಯರ ಜೊತೆ ಇಡೀ ತಂಡ ಸಿಕ್ಕಾಪಟ್ಟೆ ಶ್ರಮ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಸೀರಿಯಲ್​ಗಳ ಪೈಪೋಟಿ ಹೆಚ್ಚಿರುವ ಈ ದಿನಗಳಲ್ಲಿ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಇಷ್ಟೆಲ್ಲಾ ಶ್ರಮ ಅಗತ್ಯವಾಗಿ ಬೇಕಾಗುತ್ತದೆ. ಇದೀಗ ಸೀತಾರಾಮ ಸೀರಿಯಲ್​ನ ಪ್ರಿಯಾ ಅರ್ಥಾತ್​ ಮೇಘನಾ ಶಂಕರಪ್ಪ ಒಂದು ಟೀ ಕುಡಿಯುವ ಚಿತ್ರೀಕರಣಕ್ಕಾಗಿ ಪಟ್ಟ ಶ್ರಮದ ಕುರಿತು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ. ಇದೇ ವೇಳೆ, ಇಂಥ ಸ್ಥಳಗಳಲ್ಲಿ ಶೂಟಿಂಗ್​ ಮಾಡುವಾಗ, ಅವರ ಧ್ವನಿ ರೆಕಾರ್ಡ್​ ಹೇಗೆ ಆಗುತ್ತದೆ ಎಂಬ ಬಗ್ಗೆಯೂ ನಟಿ ತಿಳಿಸಿಕೊಟ್ಟಿದ್ದಾರೆ. 

ಈ ಸೀರಿಯಲ್​ ನೋಡುವವರಿಗೆ ಪ್ರಿಯಾ ಮತ್ತು ಅಶೋಕ್​ ಒಂದು ಸುಂದರವಾಗಿರುವ ಬೆಟ್ಟದ ಮೇಲೆ ಹೋಗಿ ಟೀ ಕುಡಿಯುವುದನ್ನು ನೋಡಿರಬಹುದು. ಅಷ್ಟಕ್ಕೂ ಸೀರಿಯಲ್​ನಲ್ಲಿ ಪ್ರಿಯಾಗೆ ಬ್ರೆಸ್ಟ್​ ಕ್ಯಾನ್ಸರ್​ ಇದೆ. ಇದನ್ನು ಆಕೆಗೆ ಹೇಳಲು ಆಗದೇ ನೋವನ್ನು ಅನುಭವಿಸುತ್ತಿದ್ದಾನೆ ಅಶೋಕ್​. ಮಗು ಬಯಸ್ತಿರೋ ಪ್ರಿಯಾಗೆ ಬ್ರೆಸ್ಟ್​ ಕ್ಯಾನ್ಸರ್​ ಇರೋದು ತಿಳಿದರೆ ಆಕೆ ಸುಲಭದಲ್ಲಿ ಇದನ್ನು ಅರಗಿಸಿಕೊಳ್ಳುವುದಿಲ್ಲ ಎನ್ನುವುದು ಆತನಿಗೆ ಗೊತ್ತು. ಇದೇ ಕಾರಣಕ್ಕೆ ಪ್ರಿಯಾಳನ್ನು ಆದಷ್ಟು ಖುಷಿಯಾಗಿ ಇಡಲು ಬಯಸುತ್ತಿದ್ದಾನೆ ಅಶೋಕ್​. ಇದೇ ಕಾರಣಕ್ಕೆ ಅವಳಿಗೆ ಬೆಟ್ಟದ ಮೇಲೆ ಸುಂದರ ಜಾಗದಲ್ಲಿ ಟೀ ಡೇಟಿಂಗ್​ಗೆ ಕರೆದುಕೊಂಡು ಹೋಗುತ್ತಾನೆ. ಸುಂದರ ಸ್ಥಳ ನೋಡಿದರೆ, ಪ್ರಿಯಾಳ ಮನಸ್ಸು ಪ್ರಫುಲ್ಲವಾಗಿರುತ್ತದೆ ಎಂದು ಆತ ಹಾಗೆ ಮಾಡುತ್ತಾನೆ. ಅವರಿಬ್ಬರೂ ತುಂಬಾ ಎಂಜಾಯ್​ ಮಾಡುತ್ತಾರೆ ಕೂಡ.

Tap to resize

Latest Videos

4ನೇ ಕ್ಲಾಸ್​ನಲ್ಲಿದ್ದಾಗಲೇ ಯಾರ್ದೋ ಜೊತೆ ಓಡಿ ಹೋಗಿದ್ರಂತೆ ಮೇಘನಾ: ಸೀತಾರಾಮ ಪ್ರಿಯಾಳ ಕಥೆ ಕೇಳಿ!

undefined

ಆದರೆ ವಾಪಸ್​ ಹೋಗುವಾಗ ಪ್ರಿಯಾ ತಮಗೆ ಸತ್ಯ ಗೊತ್ತಿರುವ ವಿಷಯವನ್ನು ಹೇಳಿ ಅಶೋಕ್​ಗೆ ಶಾಕ್​ ಕೊಡುತ್ತಾಳೆ. ಅಶೋಕ್​ ಈ ಸತ್ಯವನ್ನು ತನ್ನಿಂದ ಮುಚ್ಚಿಸಲು ಪರದಾಡುತ್ತಿರುವ ಬಗ್ಗೆ ಹೇಳುವ ಅವಳು, ನೀವಾಗೇ ಈ ವಿಷಯ ಹೇಳುತ್ತೀರಿ ಎಂದುಕೊಂಡಿದ್ದೆ.  ಆದರೆ ಹೇಳಲೇ ಇಲ್ಲ. ಅದೆಷ್ಟು ಪೇಷನ್ಸ್​ ನಿಮಗೆ, ಈ ರೋಗವನ್ನು ವಾಸಿ ಮಾಡಬಹುದಲ್ಲವೆ? ಎಂದೆಲ್ಲಾ ಅಶೋಕ್​ನನ್ನು ಸಮಾಧಾನ ಪಡಿಸುತ್ತಾಳೆ. ಈ ಒಂದು ದೃಶ್ಯಕ್ಕಾಗಿ ಸೀತಾರಾಮ ತಂಡ ಮತ್ತು ಪ್ರಿಯಾ-ಅಶೋಕ್​ ಬೆಟ್ಟದ ಮೇಲೆ ಹೋಗುವ ಸಾಹಸ ಮಾಡಿದ್ದು, ಅದರ ಬಗ್ಗೆ ಮೇಘನಾ ಶೇರ್​ ಮಾಡಿಕೊಂಡಿದ್ದಾರೆ.

ಇದೇ ವೇಳೆ, ತಮ್ಮ ಧ್ವನಿಯನ್ನು ರೆಕಾರ್ಡ್​ ಮಾಡುವ ವ್ಯವಸ್ಥೆ ಹೇಗಿರುತ್ತದೆ ಎಂಬ ಬಗ್ಗೆ ಇದೇ ವಿಡಿಯೋದಲ್ಲಿ ನಟಿ ತೋರಿಸಿದ್ದಾರೆ. ರೆಕಾರ್ಡಿಂಗ್​ ಸಿಸ್ಟಂ ಅನ್ನು ಬಟ್ಟೆಯ ಒಳಗೆ ನಟರಿಗೆ ಇಟ್ಟಿರಲಾಗುತ್ತದೆ. ಅದ್ಯಾವುದಾದರೂ ಜಾಗದಲ್ಲಿ ಇರುತ್ತದೆ. ಅಲ್ಲಿ ಧ್ವನಿ ರೆಕಾರ್ಡ್​ ಆಗುತ್ತಿರುತ್ತದೆ. ತಂತ್ರಜ್ಞರು ಅದನ್ನು ತಮ್ಮ ಮಷಿನ್​ ಮೂಲಕ ರೆಕಾರ್ಡ್​ ಮಾಡುತ್ತಿರುತ್ತಾರೆ. ಇದರ ಮಾಹಿತಿಯನ್ನು ಮೇಘನಾ ಶಂಕರಪ್ಪ ನೀಡಿದ್ದಾರೆ. ಮೇಘನಾ ಶಂಕರಪ್ಪ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.  ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.  

ಮುಗುತಿಯಾಗಿದ್ರೆ ಮೇಘನಾ ಮೂಗಲ್ಲೇ ಇರ್ತಿದ್ದೆ ಎಂದ ಗಾಯಕ! ಹುಷಾರಪ್ಪಾ, ಬಾಯ್​ಫ್ರೆಂಡ್ ಇದ್ದಾನೆ ಅಂತಿದ್ದಾರೆ ಫ್ಯಾನ್ಸ್​

click me!