
ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ಇಂದು (ಸೆಪ್ಟೆಂಬರ್ 28) ಜನ್ಮದಿನ. 1982ರಲ್ಲಿ ಹುಟ್ಟಿರೋ ರಣಬೀರ್ ಅವರಿಗೆ ಇದೀಗ 42 ವರ್ಷ ವಯಸ್ಸು. ಕೆಲವು ಬ್ಲಾಕ್ಬಸ್ಟರ್ ಚಿತ್ರ ಕೊಟ್ಟಿರೋ ನಟನಿಗೆ ಸಿಕ್ಕಾಪಟ್ಟೆ ಕಮಾಯಿ ಮಾಡಿಸಿದ್ದು ಕಳೆದ ವರ್ಷ ಬಿಡುಗಡೆಯಾದ ‘ಅನಿಮಲ್’. ಬೆತ್ತಲಾಗುತ್ತಲೇ ಹಲ್ಚಲ್ ಸೃಷ್ಟಿಸಿ ತೃಪ್ತಿ ಡಿಮ್ರಿ ಜೊತೆ ಹಸಿಬಿಸಿಯಾಗಿ ಕಾಣಿಸಿಕೊಂಡದ್ದೂ ಅಲ್ಲದೇ, ಒಬ್ಬ ಮನುಷ್ಯ ಅತ್ಯಂತ ಕ್ರೂರವಾಗಿ ಹೇಗೆ ಇರಬಹುದು ಎಂದು ತೋರಿಸಿಕೊಟ್ಟ ಅನಿಮಲ್ ಚಿತ್ರದ ಯಶಸ್ಸಿನ ಹಿಂದೆ ರಣಬೀರ್ ಪಾಲು ಬಲು ದೊಡ್ಡದಿದೆ. ಈ ಚಿತ್ರದಿಂದಾಗಿ ಸದ್ಯ ನಟ ಒಟ್ಟು ಆಸ್ತಿ 345 ಕೋಟಿ ರೂಪಾಯಿಗೂ ಅಧಿಕವಾಗಿ ಇದೆ ಎಂದು ವರದಿಯಾಗಿದೆ. ಅವರು ಪ್ರತಿ ಸಿನಿಮಾಗೆ 50 ಕೋಟಿ ರೂಪಾಯಿ ಸಂಭಾವನೆ ಮಾಡುತ್ತಾರೆ. ‘ಅನಿಮಲ್’ ಚಿತ್ರಕ್ಕೆ ಅವರು ಪಡೆದಿದ್ದು 60 ಕೋಟಿ ರೂಪಾಯಿ ಪಡೆದಿರುವುದಾಗಿ ಹೇಳಲಾಗುತ್ತಿದೆ.
ಇದು ಒಂದೆಡೆಯಾದರೆ, ಆಲಿಯಾ ಭಟ್ ಜೊತೆ ಮದುವೆಯಾಗಿ ಆರೇ ತಿಂಗಳಿಗೆ ಅಪ್ಪ ಆಗಿರೋ ರಣಬೀರ್ ಬಾಳಲ್ಲಿ ಎಂಟ್ರಿ ಕೊಟ್ಟವರು ಸಾಕಷ್ಟು ನಟಿಯರು. ಆದರೆ ಸಂಬಂಧ ಹೊಂದಿದ್ದು ಆಲಿಯಾ ಸೇರಿ 10 ಮಂದಿ ಎಂದು ಬಿ-ಟೌನ್ ಹೇಳುತ್ತಿದೆ. ಅವರಲ್ಲಿ ಘಟಾನುಘಟಿ ಸ್ಟಾರ್ಗಳು ಸೇರಿದಂತೆ ಅಷ್ಟೊಂದು ಹೆಸರು ಮಾಡದ ನಟಿಯರೂ ಹಾಗೂ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಸೇರಿಕೊಂಡಿದ್ದಾರೆ. ನಟನಾ ವೃತ್ತಿ ಕೈಗೊಳ್ಳುವ ಪೂರ್ವದಲ್ಲಿಯೇ ಇವರ ಸಂಬಂಧ, ಡೇಟಿಂಗ್ ಎಲ್ಲಾ ಶುರುವಾಗಿತ್ತು. ಅವರ ಮೊದಲ ಕ್ರಶ್ ಆವಂತಿಕಾ ಮಲಿಕ್. ಹದಿಹರೆಯದಲ್ಲಿಯೇ ಇವರು ಆವಂತಿಕಾ ಜೊತೆ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಇದಾದ ಬಳಿಕ ಇವರು ಸಂಬಂಧದಲ್ಲಿ ಇದ್ದುದು ಫ್ಯಾಷನ್ ಡಿಸೈನರ್ ನಂದಿತಾ ಮಹ್ತಾನಿ. ಇವರು ಕೆಲಕಾಲ ಒಟ್ಟಿಗೆ ಇದ್ದರೂ ಎನ್ನಲಾಗುತ್ತದೆ.
71ನೇ ವಯಸ್ಸಿಗೆ ಸಾಯೋ ಆಸೆ... ಏಕೆಂದ್ರೆ.... ನಟ ರಣಬೀರ್ ಕಪೂರ್ ವಿಚಿತ್ರ ಬಯಕೆ...
ನಂದಿತಾ ಜೊತೆ ಬ್ರೇಕಪ್ ಆದ ಬಳಿಕ ಮೂರನೆ ಎಂಟ್ರಿ ಕೊಟ್ಟಿದ್ದು ಬಾಲಿವುಡ್ ನಟಿ ಸೋನಂ ಕಪೂರ್ ಅಂತೆ. ಇಬ್ಬರೂ ‘ಸಾವರಿಯಾ’ ಚಿತ್ರದಲ್ಲಿ ನಟಿಸುವಾಗಿ ಲವ್ ಆಗಿ, ಡೇಟಿಂಗ್ ಆಗಿ ಕೊನೆಗೆ ಸಂಬಂಧದಲ್ಲಿ ಬಿದ್ದು, ಬ್ರೇಕಪ್ ಮಾಡಿಕೊಂಡು ದೀಪಿಕಾ ಪಡುಕೋಣೆ ಹಿಂದೆ ಹೋದರು ರಣಬೀರ್. ಇವರಿಬ್ಬರ ಸಂಬಂಧ ಅಂತೂ ಬಿ-ಟೌನ್ನಲ್ಲಿ ಸಕತ್ ಸದ್ದು ಮಾಡಿತ್ತು. ಇವರಿಬ್ಬರೂ ಮದುವೆಯಾಗುತ್ತಾರೆ ಎಂದೂ ಹೇಳಲಾಗಿತ್ತು. ಏಕೆಂದರೆ ಇವರ ಸಂಬಂಧ ಒಂದು ಹಂತ ಮೀರಿತ್ತು ಎನ್ನಲಾಗಿದೆ. ಆದರೆ ಎರಡೇ ವರ್ಷಗಳಲ್ಲಿ ಅಂದರೆ, 2007ರಿಂದ 2009ರಲ್ಲಿ ಸಂಬಂಧ ಕೊನೆಯಾಯಿತು. ಇದು ದೀಪಿಕಾ ಅವರನ್ನು ಖಿನ್ನತೆಗೆ ಕೂಡ ತಳ್ಳಿತ್ತು ಎಂದೇ ಹೇಳಲಾಗುತ್ತದೆ. ಆದರೆ ಬ್ರೇಕಪ್ ಬಳಿಕವೂ ಜೊತೆಯಲ್ಲಿ ಸಿನಿಮಾ ಮಾಡಿದ್ದರು.
ದೀಪಿಕಾ ಜೊತೆಗಿನ ಬ್ರೇಕಪ್ ಬಳಿಕ ರಣಬೀರ್ ಜೀವನದಲ್ಲಿ ಎಂಟ್ರಿ ಕೊಟ್ಟಿದ್ದು, ನರ್ಗಿಸ್ ಫಕ್ರಿ. ಈ ಬಗ್ಗೆ ಸಾಕಷ್ಟು ಗುಸುಗುಸು ಇದ್ದರೂ ಸಂಬಂಧವನ್ನು ಮಾಮೂಲಿನಂತೆ ಇವರಿಬ್ಬರೂ ಒಪ್ಪಿಕೊಂಡಿರಲಿಲ್ಲ. ಆದರೆ ಒಡನಾಟದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಬಳಿಕ ಕರ್ನಾಟಕದ ಇನ್ನೋರ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಜೊತೆ ರಣಬೀರ್ ಹೆಸರು ಕೇಳಿ ಬಂತು. 2010ರ ವೇಳೆಗೆ ಇವರ ನಡುವೆ ಸಾಕಷ್ಟು ನಡೆದಿತ್ತು ಎಂದೇ ವಿಶ್ಲೇಷಿಸಲಾಗುತ್ತಿದೆ. ಬಳಿಕ ರಣಬೀರ್ ಕಪೂರ್ ಹಾಗೂ ಬಾಲಿವುಡ್ ನಟಿ ಕತ್ರಿನಾ ಕೈಫ್ ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಅಲ್ಲಿಂದಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿ ಡೇಟಿಂಗ್ನಲ್ಲಿ ಇದ್ದರು. ಆರು ವರ್ಷಗಳ ಸಂಬಂಧದ ಬಳಿಕ 2016 ಬ್ರೇಕ್ ಆಯಿತು. ಇದಾದ ಬಳಿಕ ಮಾಡೆಲ್ ಎಂಜೆಲಾ ಜಾನ್ಸನ್, ಪಾಕಿಸ್ತಾನಿ ನಟಿ ಮಹಿರಾ ಖಾನ್ ಜೊತೆಯೂ ರಣಬೀರ್ ಹೆಸರು ಕೇಳಿಬಂತು. ಇವೆಲ್ಲವುಗಳ ಬಳಿಕ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆ ನಟಿಸಿ ಲವ್ ಮಾಡಿ, ಗರ್ಭಿಣಿಯಾದ ಬಳಿಕ ಮದುವೆಯೂ ಆಗಿದ್ದು, ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ.
250 ರೂಪಾಯಿಂದ 50 ಕೋಟಿ ಸಂಭಾವನೆವರೆಗೆ ರಣಬೀರ್ ಪಯಣ... ಮೊದಲ ಸಂಬಳದ ಭಾವುಕ ಕಥೆ ಇಲ್ಲಿದೆ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.