100 ರಲ್ಲಿ 90 ಗಂಡಸ್ರು ಇದನ್ನು ಹೇಳೋ ಧೈರ್ಯ ಮಾಡಲ್ವಂತೆ! ನಟ ಉಪೇಂದ್ರ ಹೇಳಿರೋದನ್ನ ಒಪ್ತೀರಾ?

Published : Sep 28, 2024, 04:18 PM IST
100 ರಲ್ಲಿ 90 ಗಂಡಸ್ರು ಇದನ್ನು ಹೇಳೋ ಧೈರ್ಯ ಮಾಡಲ್ವಂತೆ! ನಟ ಉಪೇಂದ್ರ ಹೇಳಿರೋದನ್ನ ಒಪ್ತೀರಾ?

ಸಾರಾಂಶ

100 ರಲ್ಲಿ 90 ಗಂಡಸ್ರು ಈ ವಿಷಯವನ್ನು ಹೇಳುವ ಧೈರ್ಯ ಮಾಡಲ್ವಂತೆ! ಶಿವರಾಜ್​ ಕುಮಾರ್​  ಕೂಡ ಉಪೇಂದ್ರ ಅವರ ಮಾತಿಗೆ ಹೌದು ಎಂದ್ರು. ನೀವು ಒಪ್ತೀರಾ?  

 ಉಪೇಂದ್ರ ಹಾಗೂ ಪ್ರಿಯಾಂಕಾ ತ್ರಿವೇದಿ ಅವರು ಮದುವೆಯಾಗಿ  20ವರ್ಷಗಳು ಕಳೆದಿವೆ. ಇದೀಗ ಅವರು  ಆಯುಷ್ ಹಾಗೂ ಐಶ್ವರ್ಯಾ ಎಂಬ ಮಕ್ಕಳ ಪಾಲಕರು. ಡಿಸೆಂಬರ್ 14, 2003 ರಂದು ಉಪೇಂದ್ರ ಮತ್ತು ಪ್ರಿಯಾಂಕಾ ಹಸೆಮಣೆ ಏರಿದರು.  ‘H2O’ ಸಿನಿಮಾದ ಚಿತ್ರೀಕರಣದ ವೇಳೆ ಇವರಿಬ್ಬರ ನಡುವೆ ಪ್ರೀತಿ ಮೂಡಿತ್ತು. ‘ಮಿಸ್‌ ಕೋಲ್ಕತಾ’ ಆಗಿದ್ದ ಪ್ರಿಯಾಂಕಾ ತ್ರಿವೇದಿ ಅವರು  ಉಪೇಂದ್ರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ಇಬ್ಬರ ಮದುವೆಯಾಗಿದ್ದು, ಸುಖಿ ಸಂಸಾರ ನಡೆಸುತ್ತಿದ್ದಾರೆ. ಇತ್ತೀಚೆಗೆ ಪ್ರಿಯಾಂಕಾ ಅವರು ಉಪೇಂದ್ರ ಕುರಿತು ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಿದ್ದರು. ಸಂದರ್ಶನದಲ್ಲಿ ಮಾತನಾಡಿದ್ದ ಪ್ರಿಯಾಂಕಾ, ಉಪ್ಪಿ ತುಂಬಾ ಅಂತರ್ಮುಖಿ. ತುಂಬಾ  ನಾಚಿಕೆ ಸ್ವಭಾದವರು. ತಮ್ಮ ಕೆಲ ಆಪ್ತ ಸ್ನೇಹಿತರ ಜೊತೆಯಷ್ಟೇ ಬೆರೆಯುವ ಅವರು,  ಅಷ್ಟು ಸುಲಭವಾಗಿ ಓಪನ್ ಅಪ್ ಆಗಿ ಯಾರ ಜೊತೆಯೂ ಇರಲ್ಲ ಎಂದಿದ್ದರು.   ಅವರು ಬಹಳ ಭಾವುಕಜೀವಿ. ಯಾವುದಾದರೂ ದುಃಖದ ಸನ್ನಿವೇಶ ನೋಡಿದರೆ ಉಪ್ಪಿ ಅತ್ತುಬಿಡುತ್ತಾರೆ. ಸಿನಿಮಾದಲ್ಲಿ ತಾಯಿ-ಮಗು ಭಾವನಾತ್ಮಕ ದೃಶ್ಯ ನೋಡುತ್ತಿದ್ದರೆ, ಅಥವಾ ಯಾವುದೇ ಮನಕಲಕುವ ಸನ್ನಿವೇಶ ತೆರೆಮೇಲೆ ಬಂದರೆ ಅತ್ತೇ ಬಿಡುತ್ತಾರೆ ಎಂದೂ ಹೇಳಿದ್ದರು.
 
ಇದೀಗ ನಟ ಉಪೇಂದ್ರ ಅವರ ಬಹುನಿರೀಕ್ಷಿತ ಯುಐ (UI) ಚಿತ್ರದ ಬಿಡುಗಡೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾತರದಿಂದ ಕಾಯುತ್ತಿದ್ದಾರೆ.  ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆ್ಯಂಕರ್​ ಅನುಶ್ರೀ ಅವರು, ಒಬ್ಬ ಡೈರೆಕ್ಟರ್​ ಆಗಿ ಪ್ರಿಯಾಂಕಾ ಕುರಿತು ಏನು ಹೇಳುತ್ತೀರಿ ಏನು ಕೇಳಿದಾಗ, ತಮ್ಮ ಎಂದಿನ ಹಾಸ್ಯದ ಧಾಟಿಯಲ್ಲಿ ಉಪೇಂದ್ರ ಅವರು, ಡೈರೆಕ್ಟರ್​ಗಿಂತಲೂ ಹೆಚ್ಚಾಗಿ ಲೈಫ್​ ಡೈರೆಕ್ಟರ್​ ಆಗಿ ಬಿಟ್ಟಿದ್ದೇನೆ.  ಹಾಗೆ ನೋಡಿದ್ರೆ ಅವ್ರು ಇನ್​ಡೈರೆಕ್ಟ್​ ಆಗಿ ನನಗೇ ಡೈರೆಕ್ಟರ್​ ಆಗಿದ್ದಾರೆ ಎಂದು ಎಲ್ಲರನ್ನೂ ನಗಿಸಿದರು.  ಈಗ ನೋಡಿ ಅವರೇ ನನಗೆ ಡೈರೆಕ್ಟ್​ ಮಾಡ್ತಿದ್ದಾರೆ. ಮನೆಯಲ್ಲಿ ನಾನು ಬರೀ ಆ್ಯಕ್ಟರ್​ ಆಗಿಬಿಟ್ಟಿದ್ದೇನೆ ಎಂದು ತಮಾಷೆ ಮಾಡಿದರು.

ಐದಾರು ಮದ್ವೆ ಬೇಕಾದ್ರೂ ಆಗ್ಬೋದೆಂದು ತಮಾಷೆ ಮಾಡಿದ್ದ ಉಪೇಂದ್ರ UI ಚಿತ್ರದ ಬಗ್ಗೆ ಅನುಶ್ರೀ ಕಿವಿಯಲ್ಲಿ ಹೇಳಿದ್ದೇನು?
 
ಅಷ್ಟರಲ್ಲಿ ಅಲ್ಲಿಯೇ ಇದ್ದ ಪ್ರಿಯಾಂಕಾ ವೇದಿಕೆ ಮೇಲೆ ಬಂದರು. ಅದಕ್ಕೂ ಮೊದಲು ಪ್ರಿಯಾಂಕಾ ಇಲ್ಲೇ ಇದ್ದ ಹಾಗಿದೆ. ನನ್ನ ಹಾರ್ಟ್​ ಹೇಳ್ತಿದೆ ಎನ್ನುವ ಡೈಲಾಗ್​ ಹೊಡೆದರು ಉಪೇಂದ್ರ. ಪ್ರಿಯಾಂಕಾ ವೇದಿಕೆ ಮೇಲೆ ಬರುತ್ತಿದ್ದಂತೆಯೇ ಅನುಶ್ರೀ ಅವರು, ನೀವು ಇಲ್ಲಿರೋದು ಅವರ ಹಾರ್ಟ್​ ಹೇಳಿತಂತೆ ಎಂದರು. ಆಗ ಪ್ರಿಯಾಂಕಾ ಅದೆಲ್ಲಾ ನನಗೆ ಗೊತ್ತಿಲ್ಲ, ಆದ್ರೆ ಅದೇನೋ ಆ್ಯಕ್ಟರ್​ ಅಂತಾ ಇದ್ರು, ಅಷ್ಟೇ ಕೇಳಿಸಿತು ಎಂದರು. ಆಗ ಕೂಡಲೇ ಉಪೇಂದ್ರ ಅವರು, ಎಲ್ಲಾ ಗಂಡಸರೂ ಅಷ್ಟೇ. ಮನೆಯಲ್ಲಿ ಆ್ಯಕ್ಟರ್​ ಅಷ್ಟೇ. ಆದ್ರೆ 100 ರಲ್ಲಿ ಪಾಪ 90 ಮಂದಿ ಇದನ್ನು ಓಪನ್​ ಆಗಿ ಹೇಳಲ್ಲ, ನಾನು ಹೇಳ್ತಾ ಇದ್ದೀನಿ ಎಂದು ಶಿವರಾಜ್​  ಕುಮಾರ್​ ಕಡೆ ತಿರುಗಿ ಅಲ್ವಾ ಸರ್​ ಕೇಳಿದರು. ಪಾಪದ ಶಿವರಾಜ್​  ಕುಮಾರ್​ ಅವರಿಗೆ ಏನು ಹೇಳುವುದು ತಿಳಿಯದೇ ಥಂಬ್ಸ್​ ಅಪ್​ ಮಾಡಿದರು. 

 ಇನ್ನು, ನಟ ಉಪೇಂದ್ರ ಅವರ ಬಹುನಿರೀಕ್ಷಿತ ಯುಐ (UI) ಚಿತ್ರದ ಬಿಡುಗಡೆ ಕುರಿತೂ ಇದೇ ವೇದಿಕೆಯಲ್ಲಿ ಮಾತು ಕತೆ ನಡೆಯಿತು.  ಉಪೇಂದ್ರ ಮಾತ್ರ ಸಿನಿಮಾ ರಿಲೀಸ್​ ಕುರಿತು ಸಸ್ಪೆನ್ಸ್​ ಕ್ರಿಯೇಟ್​ ಮಾಡುತ್ತಲೇ ಬಂದಿದ್ದಾರೆ. ಅಕ್ಟೋಬರ್‌ನಲ್ಲಿ ಚಿತ್ರದ ಬಿಡುಗಡೆ ಎಂದು ಹೇಳಿದ್ದ ಅವರು, ಕಳೆದ ವಾರ ಹುಟ್ಟುಹಬ್ಬದ ಸಂದರ್ಭದಲ್ಲಿ  ಬೇರೆಯದ್ದೇ ಹೇಳಿದ್ದರು.  "ಉಪೇಂದ್ರ ಸದಾ ತಲೆಗೆ ಹುಳ ಬಿಡ್ತಾರೆ ಅಂತ ಪ್ರೇಕ್ಷಕರು ಹೇಳ್ತಾರೆ. ಅದರೆ ಯುಐ ಚಿತ್ರದಲ್ಲಿ ನಾನು ಜನರ ತಲೆಯಲ್ಲಿ ಇರುವ ಹುಳ ತೆಗೆಯುವಂತಹ ಕೆಲಸವನ್ನು ಮಾಡಲಿದ್ದೇನೆ. ಪ್ರೇಕ್ಷಕರು ನಮಗಿಂತ ತುಂಬಾ ಬುದ್ಧಿವಂತರಾಗಿದ್ದಾರೆ. ಟೀಸರ್​ ನೋಡಿಯೇ ಚಿತ್ರ ಹೀಗಿರುತ್ತದೆ ಎಂದು ಅಂದುಕೊಂಡುಬಿಡುತ್ತಾರೆ. ಸಿನಿಮಾ ನೋಡಬೇಕೋ, ಬೇಡವೋ ಎಂದು ಡಿಸೈಡ್​ ಮಾಡುತ್ತಾರೆ. ಅವರ ನಿರೀಕ್ಷೆ ಹೆಚ್ಚು ಇರುತ್ತದೆ. ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ" ಎಂದು ಉಪೇಂದ್ರ ಹೇಳಿದ್ದರು. ಆದರೆ ಬಿಡುಗಡೆಯ ಗುಟ್ಟನ್ನು ಮಾತ್ರ ಬಿಟ್ಟು ಕೊಡಲಿಲ್ಲ. 

ಯಾರಿಗೆ ಸ್ವರ್ಗ, ಯಾರಿಗೆ ನರಕ? ಬಿಗ್‌​ಬಾಸ್​ ಸ್ಪರ್ಧಿಗಳ ಹಣೆಬರಹ ವೀಕ್ಷಕರ ಕೈಯಲ್ಲಿ! ಹೊಸ ಪ್ರೊಮೋ ರಿಲೀಸ್...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!