PM Kisan 18th Installment Day ಪಿಎಂ ಕಿಸಾನ್ ಸಮ್ಮಾನ್ ನಿಧಿಯ 18ನೇ ಕಂತು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಮುಂದಿನ ತಿಂಗಳ ಆರಂಭದಲ್ಲಿಯೇ 18ನೇ ಕಂತಿನ ಹಣ ರೈತರ ಖಾತೆಗೆ ವರ್ಗಾವಣೆ ಆಗಲಿದೆ. ಅದಕ್ಕೂ ಮುನ್ನ ನಿಮ್ಮ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇರಿಸಿಕೊಳ್ಳಿ.
ಬೆಂಗಳೂರು (ಸೆ.28): ಪಿಎಂ ಕಿಸಾನ್ ಸಮ್ಮಾನ್ ನಿಧಿಯ 18ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಅಕ್ಟೋಬರ್ 5 ರಂದು ಈ ಹಣ ಬಿಡುಗಡೆಯಾಗಲಿದೆ ಎಂದು ಕೇಂದ್ರ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಾಶಿಮ್‌ನಿಂದ ಪಿಎಂ ಕಿಸಾನ್‌ನ ಮುಂದಿನ ಕಂತಿಗೆ (PM Kisan 18th Installment 2024) ಚಾಲನೆ ನೀಡಲಿದ್ದಾರೆ. 9.5 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ರೂ.20,000 ಕೋಟಿ ವರ್ಗಾವಣೆ ಮಾಡಲಾಗುವುದು. ಅದಕ್ಕೂ ಮುನ್ನ ಪಿಎಂ ಕಿಸಾನ್ ಹಣ ಪಡೆಯುವ ನಿಟ್ಟಿನಲ್ಲಿ ನಿಮ್ಮ ಯಾವುದೇ ತಪ್ಪುಗಳು ಇಲ್ಲದೆ ಇರಲಿ. ನಿಮ್ಮ ಒಂದು ಸಣ್ಣ ತಪ್ಪು ಕಂತು ಖಾತೆಗೆ ಬರುವುದನ್ನು ತಡ ಮಾಡಬಹುದು. ಆದ್ದರಿಂದ ನೀವು ಪಿಎಂ ಕಿಸಾನ್ ಹಣವನ್ನು ಪಡೆಯಲು, ಕೇವಲ ಒಂದು ನಿಮಿಷ ವ್ಯಯ ಮಾಡಿ ಈ ಕೆಲಸ ಮಾಡಬೇಕು.
PM ಕಿಸಾನ್ ಸಮ್ಮಾನ್ ನಿಧಿ ಎಂದರೇನು: ಕೇಂದ್ರ ಸರ್ಕಾರವು ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ (Pradhan Mantri Kisan Samman Yojana) ಅಡಿಯಲ್ಲಿ ಪ್ರತಿ ವರ್ಷ ರೂ.6,000 ನೀಡುತ್ತದೆ. ರೈತರ ಬ್ಯಾಂಕ್ ಖಾತೆಗೆ ಮೂರು ಕಂತುಗಳಲ್ಲಿ ರೂ.2,000 ಜಮಾ ಮಾಡಲಾಗುತ್ತದೆ. ಪಿಎಂ ಕಿಸಾನ್‌ನ 17 ಕಂತುಗಳನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿದೆ. ಈಗ 18ನೇ ಕಂತು ಬರಲಿದೆ.
undefined
ಈ ತಪ್ಪಿನಿಂದ ಪಿಎಂ ಕಿಸಾನ್‌ನ 18ನೇ ಕಂತು ಸಿಗೋದಿಲ್ಲ: ಪಿಎಂ ಕಿಸಾನ್ ಯೋಜನೆ (PM Kisan Yojana) ಗೆ ನೋಂದಣಿ ಮಾಡುವಾಗ ಯಾವುದೇ ಮಾಹಿತಿಯನ್ನು ತಪ್ಪಾಗಿ ನೀಡಿದರೆ ಪಿಎಂ ಕಿಸಾನ್ ಕಂತು ಸಿಗೋದುಲ್ಲ. ಆದ್ದರಿಂದ ವಿಳಾಸ, ಬ್ಯಾಂಕ್ ಖಾತೆ ಮುಂತಾದ ನಿಖರ ಮಾಹಿತಿಯನ್ನು ನೀಡಬೇಕು. ಎನ್‌ಪಿಸಿಐನಲ್ಲಿ ಆಧಾರ್ ಸೀಡಿಂಗ್ ಇಲ್ಲದೇ ಇದ್ದಲ್ಲಿ, ಪಬ್ಲಿಕ್ ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಪಿಎಫ್‌ಎಂಎಸ್) ದಾಖಲೆಗಳನ್ನು ಸ್ವೀಕರಿಸದೇ ಇದ್ದಲ್ಲಿ ಅಥವಾ ರೈತರು ಇ-ಕೆವೈಸಿ ಮಾಡದೇ ಇದ್ದಲ್ಲಿ ಕಂತನ್ನು ತಡೆಹಿಡಿಯಲಾಗುತ್ತದೆ.
PM ಕಿಸಾನ್‌ನಲ್ಲಿ eKYC ಕಡ್ಡಾಯ: ಪಿಎಂ ಕಿಸಾನ್ ಯೋಜನೆಯಡಿ ಷರತ್ತುಗಳನ್ನು ಪೂರೈಸುವ ರೈತರಿಗೆ ಮಾತ್ರ ಇದರ ಪ್ರಯೋಜನ ಸಿಗುತ್ತದೆ. ರೈತರು ತಮ್ಮ ಕೆಲವು ದಾಖಲೆಗಳನ್ನು ನೀಡುವುದರ ಜೊತೆಗೆ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ನೀವು ಕೂಡ ಈ ಯೋಜನೆಯ ಮುಂದಿನ ಕಂತಿಗಾಗಿ ಕಾಯುತ್ತಿದ್ದರೆ, ನಿಮ್ಮ ನೋಂದಣಿ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಇ-ಕೆವೈಸಿ ವಿವರಗಳನ್ನು ತಕ್ಷಣವೇ ನವೀಕರಿಸಿ. ಪಿಎಂ ಕಿಸಾನ್ ಯೋಜನೆಯಲ್ಲಿ ಇ-ಕೆವೈಸಿ ಕಡ್ಡಾಯ ಪ್ರಕ್ರಿಯೆಯಾಗಿದೆ. ಇದರಲ್ಲಿ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಅಥವಾ ಸಿಎಸ್‌ಸಿ ಕೇಂದ್ರದಿಂದ ಬಯೋಮೆಟ್ರಿಕ್ ಮೂಲಕ ಪೂರ್ಣಗೊಳಿಸಲಾಗುತ್ತದೆ. ನೀವು ಈ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸದಿದ್ದರೆ ಅಥವಾ ಏನಾದರೂ ತಪ್ಪಾಗಿದ್ದರೆ, ತಕ್ಷಣ ಅದನ್ನು ಸರಿಪಡಿಸಿ, ಇಲ್ಲದಿದ್ದರೆ ಹಣ ಬರೋದಿಲ್ಲ. ಈ ಮಾಹಿತಿಯನ್ನು ನೀವು ಪಿಎಂ ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಕೇವಲ ಒಂದು ನಿಮಿಷದಲ್ಲಿ ಮಾಡಬಹುದು. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಸಂಪೂರ್ಣ ಪಟ್ಟಿ (PM Kisan Beneficiary List) ಆನ್‌ಲೈನ್‌ನಲ್ಲಿ ಲಭ್ಯವಿದೆ, ನೀವು ಒಂದು ನಿಮಿಷ ಸಮಯ ತೆಗೆದುಕೊಂಡು ನಿಮಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 18 ನೇ ಕಂತು ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು.
PM ಕಿಸಾನ್ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವ ವಿಧಾನ
ಪಿಎಂ ಕಿಸಾನ್ ಯೋಜನೆಗೆ ರಿಜಿಸ್ಟರ್ ಮಾಡೋದು ಹೇಗೆ?
ಪಿಎಂ ಕಿಸಾನ್ ಕಂತಿನ ಹಣದ ಸಹಾಯವಾಣಿ ಸಂಖ್ಯೆ: ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಸಮಸ್ಯೆ ಇದ್ದರೆ, pmkisan-ict@gov.in ಇಮೇಲ್ ಐಡಿಗೆ ಬರೆದು ಸಹಾಯ ಪಡೆಯಬಹುದು. ಇದಲ್ಲದೆ, 155261, 1800115526 ಅಥವಾ 011-23381092 ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಗಳಲ್ಲಿ ಸಹ ನೀವು ಸಹಾಯ ಪಡೆಯಬಹುದು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಪಡೆಯಲು ಇ-ಕೆವೈಸಿ ಕಡ್ಡಾಯ; ಈ ಪ್ರಕ್ರಿಯೆ ಪೂರ್ಣಗೊಳಿಸದ ರೈತರಿಗಿಲ್ಲ ಹಣ