ಡಿವೋರ್ಸ್ ಸುದ್ದಿ ದೊಡ್ಡದಾಡುತ್ತಿದ್ದಂತೆ ಒಂದೊಂದೆ ಕರಾಳ ಸತ್ಯಗಳನ್ನು ಬಿಚ್ಚಿಟ್ಟ ಜಯಂ ರವಿ. ಅಷ್ಟಕ್ಕೂ ಇಲ್ಲಿ ಯಾರ ತಪ್ಪು ಎಂದು ತಿಳಿಯದೆ ಎಲ್ಲರೂ ಕನ್ಫ್ಯೂಸ್.
ತಮಿಳು ನಟ ಜಯಂ ರವಿ ಮತ್ತು ಪತ್ನಿ ಆರತಿ ಡಿವೋರ್ಸ್ ವಿಚಾರ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರವಿ ತಮ್ಮ ಡಿವೋರ್ಸ್ ಪೋಸ್ಟ್ ಹಾಕಿದ ಆರಂಭದಲ್ಲಿ ಪ್ರತಿಯೊಬ್ಬರು ಆರತಿ ವಿರುದ್ಧ ತಿರುಗಿ ಬಿದ್ದರು, ಈತನಿಗೆ ಮತ್ತೊಂದು ಸಂಬಂಧವಿದೆ ಹಾಗೆ ಹೀಗೆ ಎಂದು ಗಾಸಿಪ್ ಎಬ್ಬಿಸಿದ್ದರು. ಇದರಿಂದ ಬೇಸರಗೊಂಡ ಆರತಿ ತಮ್ಮ ಧ್ವನಿ ಎತ್ತಿದ್ದರು, ಡಿವೋರ್ಸ್ ನನ್ನ ಒಪ್ಪಿಗೆ ಮೇಲೆ ಪಡೆದಿಲ್ಲ ಅಲ್ಲದೆ ಈಗ ಮಕ್ಕಳು ನನ್ನ ಜವಾಬ್ದಾರಿ ಎಂದು. ಈ ಸಮಯದಲ್ಲಿ ರವಿ ಜನರಿಗೆ ಸತ್ಯ ತಿಳಿಸಲೇ ಬೇಕು ಎಂದು ಒಂದೊಂದೇ ವಿಚಾರಗಳನ್ನು ರಿವೀಲ್ ಮಾಡಲು ಶುರು ಮಾಡಿದ್ದರು. ಇತ್ತ ಆರತಿ ಮಾಡಿರುವ ಕೆಲಸಗಳನ್ನು ರವಿ ರಿವೀಲ್ ಮಾಡುತ್ತಿದ್ದರೆ ಅತ್ತ ಜಯಂ ಮತ್ತೊಬ್ಬರ ಜೊತೆ ಸುತ್ತಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ.
ತಮಿಳು ಸಿನಿಮಾಗಳಲ್ಲಿ ನಟಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿ ದೊಡ್ಡ ಬಂಗಲೆ ಕಟ್ಟಿಸಿರುವ ಜಯಂ ರವಿಯನ್ನು ಪತ್ನಿ ಮತ್ತು ಫ್ಯಾಮಿಲಿ ಮನೆಯಿಂದ ಹೊರ ದಬ್ಬಿದ್ದಾರೆ. ಅಲ್ಲದೆ ಹೆಂಡತಿ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇದ್ದ ಕಾರಣ ತಮ್ಮ ಬಹುತೇಕ ಆಸ್ತಿಯನ್ನು ಪತ್ನಿ ಹೆಸರಿನಲ್ಲಿ ಬರೆದಿಟ್ಟಿದ್ದಾರೆ. ಈಗ ಆ ಮನೆ ನನಗೆ ಬೇಕು ಅಲ್ಲದೆ ಆ ಮನೆಯಲ್ಲಿ ನಾನು ಇಟ್ಟಿರುವ ಸಂಪೂರ್ಣ ಹಣ, ದುಬಾರಿ ವಸ್ತುಗಳನ್ನು ಕೊಡಬೇಕು ಎಂದು ರವಿ ಪೊಲೀಸರ ಸಹಾಯ ಬೇಡಿದ್ದರು. ಆದರೆ ಆರತಿ ಇಷ್ಟಕ್ಕೆ ನಿಲ್ಲಿಸಿಲ್ಲ...ಕೊಟ್ಟ ಪ್ರತಿಯೊಂದು ಟಾರ್ಚರ್‌ನ ರವಿ ರಿವೀಲ್ ಮಾಡಿದ್ದಾರೆ.
ಇಷ್ಟು ವರ್ಷ ದುಡಿಯುತ್ತಿದ್ದರೂ ಜಯಂ ರವಿ ತಮ್ಮ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಓಪನ್ ಮಾಡಿಲ್ಲ, ತಮಗೆ ಬರುವ ಅಷ್ಟೋ ಸಂಭಾವನೆ ಮತ್ತು ಇನ್ನಿತ್ತರ ದುಡಿಮೆಯ ಹಣವನ್ನು ತನ್ನ ಖಾತೆಗೆ ಬರುವಂತೆ ಆರತಿ ಮಾಡಿಕೊಂಡಿದ್ದರಂತೆ. ಇದುವರೆಗೂ ರವಿ ಬ್ಯಾಂಕ್ ಅಕೌಂಟ್ ಹೊಂದಿಲ್ಲ. ರವಿ ದುಡಿದ ಹಣವನ್ನು ಪತ್ನಿ ಬೇಕಾಬಿಟ್ಟು ಖರ್ಚು ಮಾಡುತ್ತಿದ್ದಳು ಆದರೆ ನಾನು ಏನಾದರೂ ಖರೀದಿ ಮಾಡಿದರೆ ಯಾಕೆ ಮಾಡಿದೆ ಎಂದು ಜಗಳ ಮಾಡುತ್ತಿದ್ದಳು. ಆರತಿ ತಾಯಿ ಮೂರ್ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಹೀಗಾಗಿ ಅವರಿಗೆ ಸಪೋರ್ಟ್ ಆಗಲಿ ಎಂದು ರವಿ ಕೂಡ ಅವರೊಟ್ಟಿಗೆ ಸಿನಿಮಾ ಮಾಡಿದ್ದರೆ ಆದರೆ ಆ ಸಿನಿಮಾ ಗಳಿಸಿ ಹಣದಲ್ಲಿ ಒಂದು ರೂಪಾಯಿ ಕೂಡ ರವಿ ಕೈ ಸೇರಿಲ್ಲ. ಸಿನಿಮಾ ಲಾಸ್ ಆಯ್ತು ಎಂದು ಹೇಳಿ ಸುಮ್ಮನಾಗಿದ್ದಾರೆ ಆದರೆ ರವಿ ಬಾಕ್ಸ್ ಆಫೀಸ್ ಕಲೆಕ್ಷನ್ ತೆಗೆಸಿದಾಗ ತಿಳಿಯಿತ್ತು ಸಿನಿಮಾ ಒಳ್ಳೆ ಗಳಿಕೆ ಮಾಡಿದೆ ಎಂದು. ಇಷ್ಟೋ ಸ್ವತಃ ರವಿ ಖಾಸಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಬಾಡಿಗಾರ್ಡ್ ಜೊತೆ ಯಶ್ ಫ್ಯಾಮಿಲಿ ಪಾರ್ಟಿ: ಬೇಧಭಾವ ಮಾಡಲ್ಲ, ಡಾ. ರಾಜ್ ರೀತಿ ನಮ್ಮ ಬಾಸ್ ಎಂದ ನೆಟ್ಟಿಗರು!
ಕೆಲವು ವರ್ಷಗಳ ಹಿಂದೆ ರವಿ ವಾಟ್ಸಪ್ ಓಪನ್ ಮಾಡಿದ್ದರು ಯಾರೇ ಮೆಸೇಜ್ ಮಾಡಿದರೂ ಮೊದಲ ಆರತಿ ನೋಡುತ್ತಿದ್ದರು ಆನಂತರ ರವಿಯನ್ನು ಪ್ರಶ್ನೆ ಮಾಡಿನೇ ಪ್ರತಿಕ್ರಿಯೆ ಕೊಡಲು ಬಿಡುತ್ತಿದ್ದರಂತೆ. ವಾಟ್ಸಪ್‌ಗೆ ಮಾತ್ರ ಸೀಮಿತವಾಗಿರಲಿಲ್ಲ ಇನ್‌ಸ್ಟಾಗ್ರಾಂ ಅಕೌಂಟ್ ಪಾಸ್‌ವರ್ಡ್ ಮತ್ತು ಸಂಪೂರ್ಣ ಮಾಹಿತಿಯನ್ನು ಆರತಿ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದರಂತೆ. ತನಗೆ ಬೇಕಿದ್ದ ರೀತಿಯಲ್ಲಿ ಪೋಸ್ಟ್ ಮಾಡುವುದು ಹಾಗೇ ಪತ್ನಿ ಜೊತೆಗಿರುವ ಫೋಟೋಗಳನ್ನು ಹೆಚ್ಚಾಗಿ ಹಾಕುತ್ತಿದ್ದರಂತೆ. ಅಲ್ಲದೆ ಮನೆಯಲ್ಲಿ ಇರುವ ಕೆಲಸದ ಮಹಿಳೆಗೆ ಸಿಗುವ ಒಂದು ಕನಿಷ್ಠ ಗೌರವವೂ ಮನೆಯಲ್ಲಿ ನನಗೆ ಸಿಗುತ್ತಿರಲಿಲ್ಲ ಎಂದು ರವಿ ಬೇಸರ ಮಾಡಿಕೊಂಡಿದ್ದಾರೆ.
ಜಯಂ ರವಿಗೆ ಸರಿಯಾಗಿ ಗೌರವ ಸಿಗುತ್ತಿರಲಿಲ್ಲ, ಮರ್ಯಾದೆಯಿಂದ ನಡೆಸಿಕೊಳ್ಳುತ್ತಿರಲಿಲ್ಲ, ತುಂಬಾ ಕಂಟ್ರೋಲ್ ಮಾಡುತ್ತಿದ್ದರು ಅಲ್ಲದೆ ಸ್ವಂತ ನಿರ್ಧಾರ ತೆಗೆದುಕೊಳ್ಳುವಂತೆ ಇರಲಿಲ್ಲ ಎನ್ನುವ ಹಿಂಸೆಯಲ್ಲಿ ರವಿ ಡಿವೋರ್ಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಇನ್‌ಸ್ಟಾಗ್ರಾಂ ತಮ್ಮ ಕಂಟ್ರೋಲ್‌ಗೆ ತೆಗೆದುಕೊಳ್ಳಲು ಮೆಟಾ ಅವರನ್ನು ಸಂಪರ್ಕ ಮಾಡಿ ಲಾಗ್‌ಇನ್ ಮತ್ತು ಪಾಸ್‌ವರ್ಡ್ ಪಡೆದುಕೊಂಡಿದ್ದಾರೆ.
ಕೆನಿಷಾ ಫ್ರಾನ್ಸಿಸ್ ಹೇಳಿಕೆ ವೈರಲ್:
'ಇವೆಲ್ಲವೂ ಸುಳ್ಳು ಎಂದು ಹೇಳೀದ್ದಾರೆ ಮತ್ತು ಜಯಂ ರವಿ ನನ್ನ ಕ್ಲೈಂಟ್‌ಗಳಲ್ಲಿ ಒಬ್ಬರು ಎಂದು ಹೇಳಿದ್ದಾರೆ. ಆರತಿ ಅವರೊಂದಿನ ಮದುವೆಯ ನಂತರ ಅವರು 'ಮಾನಸಿಕವಾಗಿ, ಭಾವನಾತ್ಮಕವಾಗಿ ಹಾನಿಗೊಳಗಾದ ಮತ್ತು ಆಘಾತಕ್ಕೊಳಗಾದಾಗ ಜೂನ್‌ನಲ್ಲಿ ನಟ ನನ್ನನ್ನು ಸಂಪರ್ಕಿಸಿದ್ದರು.ನಾನು ರವಿ ಅವರು ತನ್ನ ಮಾಜಿ ಪತ್ನಿಯಿಂದ ಬೇರ್ಪಡಲು ಕಾರಣ ಎಂದು ಹೇಳುವ ಕೆಲವು ಸುದ್ದಿಗಳಿವೆ. ಅವು ಸುಳ್ಳು ಆರೋಪಗಳು. ಅವರ ವಕೀಲರ ಮೂಲಕ ಪರಸ್ಪರ ಒಪ್ಪಿಗೆಯ ಮೂಲಕ ಅವರು ವಿಚ್ಛೇದನಕ್ಕೆ ನೋಟಿಸ್ ಕಳುಹಿಸಿದ ನಂತರವೇ ಅವರು ನನ್ನ ಬಳಿಗೆ ಬಂದರು. ಅವರು ನನ್ನನ್ನು ಸಂಪರ್ಕಿಸಿದರು ಬಯಸಿದ್ದೇಕೆಂದರೆ ಚೆನ್ನೈನಲ್ಲಿ ಯಾರಿಗೂ ಈ ಬಗ್ಗೆ ತಿಳಿಯಬಾರದು ಎಂದು ಕೊಂಡಿದ್ದರು. ನಾನು ಅವರನ್ನು ತಕ್ಷಣ ಕ್ಲೈಂಟ್ ಆಗಿ ಸ್ವೀಕರಿಸಲಿಲ್ಲ; ನಾನು ಅವರಿಗೆ ನಿಜವಾಗಿಯೂ ಸಹಾಯ ಮಾಡಬಲ್ಲೆ ಎಂದು ನಾನು ಖಚಿತಪಡಿಸಿಕೊಳ್ಳಬೇಕಾಗಿತ್ತು'ಎಂದು ಕೆನಿಷಾ ಹೇಳಿದ್ದಾರೆ.