ಐಪಿಎಲ್‌ ಪ್ಲೇಯರ್ಸ್‌ಗೆ ಮತ್ತಷ್ಟು ಬಂಪರ್‌, ಪ್ರತಿ ಪಂದ್ಯಕ್ಕೆ ಸಿಗಲಿದೆ 7.5 ಲಕ್ಷ ಮ್ಯಾಚ್‌ ಫೀ!

Published : Sep 28, 2024, 08:46 PM IST
ಐಪಿಎಲ್‌ ಪ್ಲೇಯರ್ಸ್‌ಗೆ ಮತ್ತಷ್ಟು ಬಂಪರ್‌, ಪ್ರತಿ ಪಂದ್ಯಕ್ಕೆ ಸಿಗಲಿದೆ 7.5 ಲಕ್ಷ ಮ್ಯಾಚ್‌ ಫೀ!

ಸಾರಾಂಶ

ಐಪಿಎಲ್‌ನಲ್ಲಿ ಈವರೆಗೂ ಆಟಗಾರರಿಗೆ ಫ್ರಾಂಚೈಸಿಗಳು ಹರಾಜಿನಲ್ಲಿ ಖರೀದಿ ಮಾಡಿದ ಮೊತ್ತವನ್ನು ಮಾತ್ರವೇ ಸಂದಾಯ ಮಾಡುತ್ತಿದ್ದವು. ಇನ್ನು ಮುಂದೆ ಐಪಿಎಲ್‌ ಪ್ಲೇಯರ್‌ಗಳು ತಾವು ಆಡಿದ ಪಂದ್ಯಕ್ಕೆ ಮ್ಯಾಚ್‌ ಫೀಯನ್ನೂ ಕೂಡ ಪಡೆಯಲಿದ್ದಾರೆ. ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿ ಮ್ಯಾಚ್‌ ಫೀಯನ್ನು ಇವರು ಪಡೆಯಲಿದ್ದಾರೆ.

ಮುಂಬೈ (ಸೆ.28): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟಿಗರಿಗೆ ಇನ್ನಷ್ಟು ಲಾಭದಾಯಕ ಎನಿಸಿಕೊಳ್ಳಲಿದೆ.  ಐಪಿಎಲ್‌ನಲ್ಲಿ ಈವರೆಗೂ ಆಟಗಾರರಿಗೆ ಫ್ರಾಂಚೈಸಿಗಳು ಹರಾಜಿನಲ್ಲಿ ಖರೀದಿ ಮಾಡಿದ ಮೊತ್ತವನ್ನು ಮಾತ್ರವೇ ಸಂದಾಯ ಮಾಡುತ್ತಿದ್ದವು. ಹರಾಜಿನ ವೇಳೆ ಫ್ರಾಂಚೈಸಿಗಳು ಎಷ್ಟು ಮೊತ್ತ ನೀಡಿ ಆಟಗಾರನನ್ನು ಖರೀದಿ ಮಾಡಿದ್ದವೋ ಆ ಮೊತ್ತವನ್ನು ಮಾತ್ರವೇ ಪ್ಲೇಯರ್‌ಗೆ ಪಾವತಿ ಮಾಡುತ್ತಿದ್ದವು. ಇನ್ನು ಮುಂದೆ ಐಪಿಎಲ್‌ ಪ್ಲೇಯರ್‌ಗಳು ತಾವು ಆಡಿದ ಪಂದ್ಯಕ್ಕೆ ಮ್ಯಾಚ್‌ ಫೀಯನ್ನೂ ಕೂಡ ಪಡೆಯಲಿದ್ದಾರೆ. ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿ ಮ್ಯಾಚ್‌ ಫೀಯನ್ನು ಇವರು ಪಡೆಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇನ್ನು ಐಪಿಎಲ್‌ ಪಂದ್ಯ ಆಡುವ ಪ್ರತಿಯೊಂದು ಪಂದ್ಯಕ್ಕೂ ಪಂದ್ಯ ಶುಲ್ಕವನ್ನು ಪರಿಚಯಿಸಲು ಲೀಗ್ ಸಿದ್ಧವಾಗಿದೆ.

ಮುಂದಿನ ಐಪಿಎಲ್‌ನಲ್ಲೂ 74 ಪಂದ್ಯ: 10 ಪಂದ್ಯ ಹೆಚ್ಚಿಸುವ ನಿರ್ಧಾರ ಕೈಬಿಟ್ಟ ಬಿಸಿಸಿಐ!

ಬಿಸಿಸಿಐನ ಗೌರವ ಕಾರ್ಯದರ್ಶಿ ಜಯ್ ಶಾ ಅವರು ಶನಿವಾರದಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ಐಪಿಎಲ್ ಪಂದ್ಯದ ಶುಲ್ಕವನ್ನು ಪರಿಚಯಿಸುವುದಾಗಿ ಘೋಷಿಸಿದ್ದಾರೆ. "ಐಪಿಎಲ್‌ನಲ್ಲಿ ಸ್ಥಿರತೆ ಮತ್ತು ಚಾಂಪಿಯನ್‌ಗಳ ಅತ್ಯುತ್ತಮ ಪ್ರದರ್ಶನಗಳನ್ನು ಆಚರಿಸುವ ಐತಿಹಾಸಿಕ ಕ್ರಮದಲ್ಲಿ, ನಮ್ಮ ಕ್ರಿಕೆಟಿಗರಿಗೆ ಪ್ರತಿ ಪಂದ್ಯಕ್ಕೆ INR 7.5 ಲಕ್ಷ ರೂಪಾಯಿಗಳ ಪಂದ್ಯದ ಶುಲ್ಕವನ್ನು ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ! "ಒಂದು ಋತುವಿನಲ್ಲಿ ಎಲ್ಲಾ ಲೀಗ್ ಪಂದ್ಯಗಳನ್ನು ಆಡುವ ಕ್ರಿಕೆಟಿಗನಿಗೆ ಅವರ ಒಪ್ಪಂದದ ಮೊತ್ತಕ್ಕೆ ಹೆಚ್ಚುವರಿಯಾಗಿ 1.05 ಕೋಟಿ ರೂಪಾಯಿ ಪಡೆಯಲಿದ್ದಾರೆ. ಪ್ರತಿ ಫ್ರಾಂಚೈಸಿಯು ಋತುವಿಗೆ ಪಂದ್ಯ ಶುಲ್ಕವಾಗಿ INR 12.60 ಕೋಟಿಗಳನ್ನು ನಿಗದಿಪಡಿಸುತ್ತದೆ! #ಐಪಿಎಲ್ ಮತ್ತು ನಮ್ಮ ಆಟಗಾರರಿಗೆ ಇದು ಹೊಸ ಯುಗ!" ಶಾ ಬರೆದಿದ್ದಾರೆ. ಐಪಿಎಲ್ ಪಂದ್ಯ ಶುಲ್ಕವು 2025 ರ ಋತುವಿನಿಂದ ಜಾರಿಗೆ ಬರುವ ಸಾಧ್ಯತೆಯಿದೆ.

ಐಪಿಎಲ್‌ನಲ್ಲಿ ಕೊಹ್ಲಿ-ರೋಹಿತ್‌ಗಿಂತ ಧೋನಿ ನಾಯಕತ್ವ ಬೆಸ್ಟ್ ಎಂದ ಇಂಗ್ಲೆಂಡ್ ಮಾಜಿ ಕ್ಯಾಪ್ಟನ್!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Ind vs SA: ಶುಭ್‌ಮನ್ ಗಿಲ್ ಫುಲ್ ಫಿಟ್; ಈ ಡೇಟ್‌ಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ಫಿಕ್ಸ್!
ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!