ರಿಷಬ್ ಶೆಟ್ಟಿ ನನ್ನ ತಮ್ಮ ಎಂದ ಕಿಚ್ಚ ಸುದೀಪ್: ಇವರಿಬ್ಬರದ್ದು ಸ್ನೇಹ ಮಾತ್ರವಲ್ಲ ಅಣ್ತಮ್ಮಂದಿರ ಸಂಬಂಧ!

ರಿಷಬ್ ಶೆಟ್ಟಿ ನನ್ನ ತಮ್ಮ ಎಂದ ಕಿಚ್ಚ ಸುದೀಪ್: ಇವರಿಬ್ಬರದ್ದು ಸ್ನೇಹ ಮಾತ್ರವಲ್ಲ ಅಣ್ತಮ್ಮಂದಿರ ಸಂಬಂಧ!

Published : Sep 27, 2024, 04:47 PM IST

ಕಿಚ್ಚ ಸುದೀಪ್ ಹಾಗು ರಿಷಬ್ ಶೆಟ್ಟಿ ಮಧ್ಯೆ ಈಗ ಸಣ್ಣದೊಂದು ಪೈಪೋಟಿ ಶುರುವಾಗಿತ್ತು. ಅದಕ್ಕೆ ಕಾರಣ ಈ ಭಾರಿಯ ಬಿಗ್​​​ಬಾಸ್ ಸೀಸನ್​ 11ರ ನಿರೂಪಣೆ ವಿಷಯ. ಈ ಭಾರಿ ಬಿಗ್​ಬಾಸ್ ಕಾರ್ಯಕ್ರಮವನ್ನ ಕಿಚ್ಚ ಸುದೀಪ್ ಹೋಸ್ಟ್ ಮಾಡಲ್ಲ. ಅವರ ಜಾಗಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬರುತ್ತಾರೆ ಅಂತ ಟಾಕ್ ಎದ್ದಿತ್ತು.
 

ಬಣ್ಣದ ಲೋಕ ಅಂತ ಬಂದಾಗ ಅಲ್ಲೊಂದು ಕಿತ್ತಾಟ ಇರುತ್ತೆ. ಸ್ಟಾರ್​ಗಳ ಮಧ್ಯೆ ಮುಸುಕಿನ ಗುದ್ದಾಟ ಇರುತ್ತೆ. ಆದ್ರೆ ಈ ಇಬ್ಬರು ಸೂಪರ್ ಸ್ಟಾರ್​ಗಳ ಮಧ್ಯೆ ಇರೋ ಬಾಂಧವ್ಯವೇ ಬೇರೆ. ಈ ಸ್ಟಾರ್ಸ್​ ನಡುವೆ ಒಂದು ಸುಂದರ ಬಾಂಧವ್ಯ ಇದೆ, ಸ್ನೇಹದ ನಂಟಿದೆ. ಅದಕ್ಕೂ ಮಿಗಿಲಾದ ಸಹೋದರತ್ವ ಇದೆ. ಅಷ್ಟಕ್ಕು ನಾವ್ ಹೇಳ್ತಿರೋದು ಯಾರ ಬಗ್ಗೆ ಗೊತ್ತಾ..? ಭಾರತೀಯ ಚಿತ್ರರಂಗದ ಆರಡಿ ಕಟೌಟ್ ಕಿಚ್ಚ ಸುದೀಪ್, ಹಾಗು ನ್ಯಾಷನಲ್ ಲೆವೆಲ್​​ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ರಿಷಬ್ ಶೆಟ್ಟಿ ಬಗ್ಗೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹಾಗು ರಿಷಬ್ ಶೆಟ್ಟಿ.. ಸ್ಯಾಂಡಲ್​ವುಡ್​​ನ ಧ್ರುವ ತಾರೆಗಳು. ಅತ್ಯದ್ಭುತ ಸಿನಿಮಾಗಳನ್ನ ಕೊಡುತ್ತಿರೋ ನಾಯಕರು. ಇವರಿಬ್ಬರು ಕೇವಲ ನಟರು ಮಾತ್ರವಲ್ಲ. ನಿರ್ದೇಶಕರು ಹೌದು, ನಿರ್ಮಾಪಕರೂ ಹೌದು. ಇಬ್ಬರ ಮಧ್ಯೆ ಒಂದೇ ತರದ ಸಾಮ್ಯತೆಗಳಿವೆ. 

ಆದ್ರೆ ಕಿಚ್ಚ ಸುದೀಪ್ ಹಾಗು ರಿಷಬ್ ಶೆಟ್ಟಿ ಮಧ್ಯೆ ಈಗ ಸಣ್ಣದೊಂದು ಪೈಪೋಟಿ ಶುರುವಾಗಿತ್ತು. ಅದಕ್ಕೆ ಕಾರಣ ಈ ಭಾರಿಯ ಬಿಗ್​​​ಬಾಸ್ ಸೀಸನ್​ 11ರ ನಿರೂಪಣೆ ವಿಷಯ. ಈ ಭಾರಿ ಬಿಗ್​ಬಾಸ್ ಕಾರ್ಯಕ್ರಮವನ್ನ ಕಿಚ್ಚ ಸುದೀಪ್ ಹೋಸ್ಟ್ ಮಾಡಲ್ಲ. ಅವರ ಜಾಗಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬರುತ್ತಾರೆ ಅಂತ ಟಾಕ್ ಎದ್ದಿತ್ತು. ಆದ್ರೆ ಈಗ ಬಿಗ್​ಬಾಸ್ ಸಾರಥ್ಯ ಕಿಚ್ಚನದ್ದೇ ಅನ್ನೋದು ಕನ್ಫರ್ಮ್ ಆಗಿದೆ. ಇದಿಷ್ಟೆ ಅಲ್ಲ ಕಿಚ್ಚ ರಿಷಬ್ ಮಧ್ಯೆ ಯಾವ್ ಪೈಪೋಟಿ ಇಲ್ಲ ಇವರಿಬ್ಬರದ್ದು ಅಣ್ತಮ್ಮಂದಿರ ಸಂಬಂಧ ಅನ್ನೋ ಸತ್ಯ ಕೂಡ ಗೊತ್ತಾಗಿದೆ. ಇದನ್ನ ಕಿಚ್ಚನೇ ಹೇಳಿದ್ದಾರೆ. ಅಂದಹಾಗೆ ಬಾದ್​ ಷಾ ಸುದೀಪ್ ಬಣ್ಣದ ಜಗತ್ತಿಗೆ ಬಂದು 30 ವರ್ಷಗಳಾಗಿವೆ. ಸಧ್ಯ ಕನ್ನಡ ಚಿತ್ರರಂಗದ ಹಿರಿಯಣ್ಣನ ಸ್ಥಾನದಲ್ಲಿದ್ದಾರೆ ಸುದೀಪ್.. ಇನ್ನು ರಿಷಬ್ ಇಂಡಸ್ಟ್ರಿಗೆ ಬಂದು ಒಂದು ವರೆ ದಶಕ ಆಗ್ತಾ ಇದೆ. ಇವತ್ತು ರಿಷಬ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. 

ಕಾಂತಾರ ಮೂಲಕ ಜಗತ್ತಿನಾಧ್ಯಂತ ಸಿನಿ ಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ. ಆದ್ರೆ ಅದಕ್ಕೂ ಮೊದಲು ರಿಷಬ್, ಬಾದ್​ ಷಾ ಸುದೀಪ್​ರ ಪಕ್ಕಾ ಫ್ಯಾನ್ ಅನ್ನೋದು ಸತ್ಯ. ಹೌದು, ಈ ಮಾತನ್ನ ಸಾಕಷ್ಟು ಭಾರಿ ರಿಷಬ್ ಹೇಳಿಕೊಂಡಿದ್ದಾರೆ. ರಿಷಬ್ ಚಿತ್ರರಂಗಕ್ಕೆ ಬಂದಾಗ್ಲೂ ಇದೇ ಮಾತನ್ನ ಹೇಳಿದ್ರು. ಈಗ ನ್ಯಾಷಬಲ್ ಸ್ಟಾರ್​ ಆದ್ಮೇಲೂ ನಾನು ಸುದೀಪ್ ಫ್ಯಾನ್ ಬಾಯ್​​ ಅಂತ ಮತ್ತೆ ಮತ್ತೆ ಹೇಳ್ತಾನೆ ಇರ್ತಾರೆ. ಇತ್ತ ಕಿಚ್ಚನಿಗೂ ರಿಷಬ್ ಮೇಲೆ ಇನ್ನಿಲ್ಲದ ಪ್ರೀತಿ. ಕಿಚ್ಚನಿಗೆ ರಿಷಬ್ ಮೇಲೆ ಇವಾಗಿನ ಪ್ರೀತಿ ಅಲ್ಲ. ರಿಷಬ್ ಚಿಕ್ಕ ನಟ ಆಗಿದ್ದಾಗ್ಲು ಕೂಡ ಅವರ ಕೆಲಸದ ಮೇಲೆ ನಟನೆ, ವ್ಯಕ್ತಿತ್ವದ ಮೇಲೆ ಕಿಚ್ಚನಿಗೆ ವಿಶೇಷ ಪ್ರೀತಿ ಇತ್ತು. ಯಾವಾಗ್ಲು ರಿಷಬ್​ರ ಬೆನ್ನು ತಟ್ಟಿ ಸಬ್ಬಾಷ್​ ಅಂತ ಹೇಳುತ್ತಾನೆ ಬಂದಿದ್ದಾರೆ ಸುದೀಪ್​. ಕಿಚ್ಚನಿಗೆ ರಿಷಬ್ ಶೆಟ್ಟಿ ರಕ್ಷಿತ್ ಶೆಟ್ಟಿ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ಅವರ ಕೆಲಸವನ್ನ ಯಾವಾಗ್ಲು ಕೊಂಡಾಡ್ತಾನೆ ಇರ್ತಾರೆ. 

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more