ಕಾರು ವಾಶ್ ಸಿಬ್ಬಂದಿಯ ಎಡವಟ್ಟು, 5 ಕೋಟಿ ರೂ ಫೆರಾರಿ ಕಾರು ಪುಡಿ ಪುಡಿ!

First Published Jan 16, 2021, 2:58 PM IST

ಫೆರಾರಿ 812 ಸೂಪರ್‌ಫಾಸ್ಟ್ ಕಾರು. ಎಕ್ಸ್ ಶೋ ರೂಂ ಬೆಲೆ 5.20 ಕೋಟಿ ರೂಪಾಯಿ. ದುಬಾರಿ ಕಾರನ್ನು ವಾಶ್ ಮಾಡಲು ಕೊಡಲಾಗಿತ್ತು. ಸರ್ವೀಸ್ ಸೆಂಟರ್ ಉದ್ಯೋಗಿ ಕಾರು ವಾಶ್ ಮಾಡಿ, ಫೆರಾರಿ ಕಾರನ್ನು ಮರಳಿ ಮಾಲೀಕನಿಗೆ ಕೊಡಲು ತೆರಳಿದ್ದಾರೆ. ಫೆರಾರಿ ಕಾರಿನ ವೇಗಕ್ಕೆ ಸಾಟಿ ಎಲ್ಲಿದೆ.  ನೌಕರ ಕೂಡ ಅತೀ ವೇಗದಿಂದ ತೆರಳಿದ್ದಾನೆ. ನಿಯಂತ್ರಣಕ್ಕೆ ಸಿಗದ ಕಾರು ಅಪಘಾತಕ್ಕೀಡಾಗಿ ಪುಡಿ ಪುಡಿಯಾಗಿದೆ. ಮುಂದೇನಾಯ್ತು? ಈ ಕಾರು ಯಾರದು? ಇಲ್ಲಿದೆ ವಿವರ.

ಈ ಫೆರಾರಿ 812 ಸೂಪರ್‌ಫಾಸ್ಟ್ ಕಾರು ಇಟಲಿಯ ಖ್ಯಾತ ಫುಟ್ಬಾಲರ್ ಫೆಡ್ರಿಕೋ ಮರ್ಚೆಟ್ಟಿ ಕಾರಾಗಿದೆ. ಫುಟ್ಬಾಲ್ ಟೂರ್ನಿ, ಅಭ್ಯಾಸಗಳಿಂದ ಫೆಡ್ರಿಕೋ ಫೆರಾರಿ ಕಾರನ್ನು ಬಳಸಲು ಸಾಧ್ಯವಾಗಿರಲಿಲ್ಲ.
undefined
ಖ್ಯಾತ ಗೋಲ್‌ಕೀಪರ್ ಆಗಿರುವ ಫೆಡ್ರಿಕೋ, ಹಲವು ದಿನಗಳಿಂದ ಫೆರಾರಿ ಬಳಸಲು ಸಾಧ್ಯವಾಗದ ಕಾರಣ, ಕಾರು ವಾಶ್ ಮಾಡಲು ಸರ್ವೀಸ್ ಸೆಂಟರ್‌ಗೆ ಕರೆ ಮಾಡಿ ಹೇಳಿದ್ದಾರೆ.
undefined
ಕಾರ್ ವಾಶ್ ಸಿಬ್ಬಂದಿ ಫೆಡ್ರಿಕೋ ಮನೆಗೆ ಆಗಮಿಸಿ ಫೆರಾರಿ 812 ಸೂಪರ್‌ಫಾಸ್ಟ್ ಕಾರನ್ನು ಸರ್ವೀಸ್ ಸೆಂಟರ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಕಾರು ವಾಶ್ ಮಾಡಿದ್ದಾರೆ.
undefined
5.20 ಕೋಟಿ ರೂಪಾಯಿ ಮೌಲ್ಯದ ಫೆರಾರಿ 812 ಸೂಪರ್‌ಫಾಸ್ಟ್ ಕಾರನ್ನು ವಾಶ್ ಮಾಡಿ, ಮರಳಿ ಫೆಡ್ರಿಕೋ ಮನೆಗೆ ನೀಡಲು ಸಿಬ್ಬಂದಿ ತೆರಳಿದ್ದಾರೆ. ಆದರೆ ಫೆರಾರಿ ನಿಯಂತ್ರಣಕ್ಕೆ ಸಿಕ್ಕಿಲ್ಲ.
undefined
ಅತ್ಯಂತ ದುಬಾರಿ ಹಾಗೂ ಅತೀ ವೇಗದ ಸೂಪರ್ ಕಾರಾಗಿರುವ ಫೆರಾರಿ 812 ಕಾರು ಕೇವಲ 2 ರಿಂದ 3 ಸೆಕೆಂಡ್‌ಗಳಲ್ಲಿ 60 ಕಿ.ಮೀ ವೇಗ ತಲುಪಲಿದೆ. ಕಾರು ಒಂದೇ ಸಮನೆ ವೇಗ ಪಡೆದುಕೊಂಡು ಮುಂದಕ್ಕೆ ಸಾಗಿದೆ.
undefined
ಹೀಗಾಗಿ ಪಾರ್ಕಿಂಗ್ ಮಾಡಿದ್ದ 5 ಕಾರುಗಳಿಗೆ ಒಂದೇ ರಭಸಕ್ಕೆ ಗುದ್ದಿದೆ. ಇದರಿಂದ 5.20 ಕೋಟಿ ರೂಪಾಯಿ ದುಬಾರಿ ಫೆರಾರಿ ಕಾರು ಹಾಗೂ ನಿಲ್ಲಿಸಿದ್ದ 5 ಕಾರುಗಳು ಜಖಂ ಗೊಂಡಿದೆ.
undefined
ಇತ್ತ ಸಿಬ್ಬಂದಿ ಒಂದೇ ಸಮನೆ ಅಳುತ್ತಿದ್ದಾನೆ. ಕಾರಣ ಈ ಕಾರನ್ನು ಸರಿ ಮಾಡಿ ಕೊಡಲು ಆತ ತನ್ನ 5 ವರ್ಷದ ವೇತವನ್ನು ತೆಗೆದಿಡಬೇಕಾಗುತ್ತದೆ. ತನ್ನಿಂದಲೇ ತಪ್ಪಾಗಿದೆ ಅನ್ನೋದನ್ನು ಒಪ್ಪಿಕೊಂಡಿದ್ದಾನೆ
undefined
ಕಾರು ಅಪಘಾತದ ಸುದ್ದಿ ತಿಳಿದಾಗ ಫೆಡ್ರಿಕೋ ಅಭ್ಯಾಸದಲ್ಲಿ ನಿರತರಾಗಿದ್ದರು. ಅದೃಷ್ಠವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ. ಇದೇ ಸಮಾಧಾನಕರ ಸುದ್ದಿ ಎಂದು ಫೆಡ್ರಿಕೋ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
undefined
click me!