ಬೆಂಗಳೂರಿನಲ್ಲಿ ಹೆಲ್ಮೆಟ್ ಇಲ್ದೆ ತ್ರಿಬಲ್ ರೈಡಿಂಗ್ ಮಹಿಳೆ ಬಿತ್ತು 1.35 ಲಕ್ಷ ರೂ ದಂಡ, ಸ್ಕೂಟರ್ ಸೀಜ್!

By Suvarna News  |  First Published Apr 15, 2024, 7:46 PM IST

ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡಿಂಗ್ ಮೂಲಕ  ರಾಜಾರೋಷವಾಗಿ ತಿರುಗಾಡುತ್ತಿದ್ದ ಮಹಿಳೆಗೆ ಪೊಲೀಸರು ಬರೋಬ್ಬರಿ 1.36 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ. ಇಷ್ಟೇ ಅಲ್ಲ ಸ್ಕೂಟರ್ ಸೀಜ್ ಮಾಡಿದ್ದಾರೆ. ಅಷ್ಟಕ್ಕೂ 1.36 ಲಕ್ಷ ರೂ ದಂಡ ಹಾಕಿದ್ದೇಕೆ?
 


ಬೆಂಗಳೂರು(ಏ.15)  ಹೆಲ್ಮೆಟ್ ಇಲ್ಲ, ತ್ರಿಬಲ್ ರೈಡಿಂಗ್‌ನಲ್ಲಿ ಮಹಿಳೆಯ ತಿರುಗಾಟ. ಹೋಂಡಾ ಆ್ಯಕ್ಟಿವಾ ಸ್ಕೂಟರ್ ಮೂಲಕ  ಇಷ್ಟು ರಾಜಾರೋಷವಾಗಿ ತಿರುಗಾಡುತ್ತಿರುವ ಮಹಿಳೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಬರೋಬ್ಬರಿ 1.36 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಅಷ್ಟಕ್ಕೂ ಈಕೆಯ ಹೆಲ್ಮೆಟ್ ಇಲ್ಲದೆ, ತ್ರಿಬಲ್ ರೈಡಿಂಗ್ ಮಾಡಿದ ಕಾರಣಕ್ಕಾಗಿ ಮಾತ್ರ 1.36 ಲಕ್ಷ ರೂಪಾಯಿ ದಂಡ ವಿಧಿಸಿಲ್ಲ. ಇದರ ಜೊತೆಗೆ ಒಟ್ಟು 270 ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಿವೆ. ಹೀಗಾಗಿ ಸ್ಕೂಟರ್ ಸೀಜ್ ಮಾಡಿರುವ ಪೊಲೀಸರು ಇದೀಗ 1.36 ಲಕ್ಷ ರೂಪಾಯಿ ದಂಡದ ಚಲನ್ ನೀಡಿದ್ದಾರೆ.

ಮೋಟಾರು ವಾಹನ ಕಾಯ್ದೆಯಲ್ಲಿ ಬರವು ಬಹುತೇಕ ಎಲ್ಲಾ ನಿಯಮಗಳನ್ನು ಈ ಮಹಿಳೆ ಉಲ್ಲಂಘಿಸಿದ್ದಾರೆ. ಮಹಿಳೆ ತನ್ನ ಆ್ಯಕ್ಟೀವಾ ಸ್ಕೂಟರ್‌ನಲ್ಲಿ ಹಿಂಬದಿ ಸವಾರರನ್ನು ಕೂರಿಸಿಕೊಂಡು ಹಲವು ಬಾರಿ ರೈಡ್ ಮಾಡಿದ್ದಾರೆ. ಆದರೆ ಹಿಂಬದಿ ಸವಾರರು ಮಾತ್ರವಲ್ಲ, ಮಹಿಳೆ ಕೂಡ ಹೆಲ್ಮೆಟ್ ಧರಿಸಿ ರೈಡ್ ಮಾಡಿಲ್ಲ. ಇನ್ನು ಸಿಗ್ನಲ್ ಜಂಪ್, ರಾಂಗ್ ಸೈಡ್, ರೈಡಿಂಗ್ ವೇಳೆ ಪೋನ್ ಮೂಲಕ ಮಾತನಾಡಿರುವುದು,  ಸಿಂಗ್ನಲ್ ಜಂಪ್, ಯೂ ಟರ್ನ ಇಲ್ಲದ ಕಡೆ ತಿರುಗಿಸಿ ಅಡ್ಡಾ ದಿಡ್ಡಿ ವಾಹನ ಚಲಾಯಿಸಿದ್ದು ಸೇರಿದಂತೆ ಒಟ್ಟು 270 ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಿವೆ. 

Tap to resize

Latest Videos

undefined

ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ವಾಹನ ಸೀಜ್ ಮಾಡಿ ಗುಜುರಿಗೆ, ಹೊಸ ರೂಲ್ಸ್ ಎಚ್ಚರ!

ಪ್ರತಿ ದಿನ ಈಕೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ. ಸಿಗ್ನಲ್ ಬಳಿ ಪೊಲೀಸರು ಇಲ್ಲ ಎಂದುಕೊಂಡ ಸಿಗ್ನಲ್ ಜಂಪ್ ಮಾಡಿದ್ದಾಳೆ. ಇನ್ನು ಪೊಲೀಸರು ಇಲ್ಲ ಎಂದು ಹೆಲ್ಮೆಟ್ ಧರಿಸಿದ ರೈಡ್ ಮಾಡಿದ್ದಾಳೆ. ಆದರೆ ಈಕೆಯ ಪ್ರತಿ ಟ್ರಾಫಿಕ್ ನಿಯಮ ಉಲ್ಲಂಘನೆ ಸಿಸಿಟಿವಿಯಲ್ಲಿ ದಾಖಲಾಗಿದೆ. 270 ಟ್ರಾಫಿಕ್ ನಿಯಮ ಉಲ್ಲಂಘನೆಯಿಂದ ಈಕೆಯ ದಂಡ 1.36 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.

ಮಹಿಳೆ ಹಾಗೂ ಸ್ಕೂಟರ್ ಪತ್ತೆ ಹಚ್ಚಿದ ಪೊಲೀಸರು 1.36 ಲಕ್ಷ ರೂಪಾಯಿ ದಂಡದ ಚಲನ್ ನೀಡಿದ್ದಾರೆ. ಈ ಚಲನ್ ನೋಡಿ ಮಹಿಳೆ ಬೆಚ್ಚಿ ಬಿದ್ದಿದ್ದಾರೆ. ಕಾರಣ ಈಕೆಯ ಬಳಿಕ ಇರುವ ಸ್ಕೂಟರ್ ಬೆಲೆ ಇದರ ಅರ್ದಕ್ಕೂ ಇಲ್ಲ. ದುಬಾರಿ ದಂಡ ಕಟ್ಟುವುದು ಹೇಗೆ ಎಂದು ಆತಂಕಗೊಂಡಿದ್ದಾರೆ. ಇದೀಗ ಪೊಲೀಸರು ಮಹಿಳೆಯ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಕಾದಿದೆ ಆಪತ್ತು, ಎರಡೇ ನಿಮಿಷಕ್ಕೆ ದಂಡ ಪಾವತಿ ಮಸೇಜ್!

ಈ ರೀತಿ ದುಬಾರಿ ದಂಡದ ಪ್ರಕರಣಗಳು ಮೊದಲೇನಲ್ಲ. ಹಲವು ಬಾರಿ ಈ ರೀತಿ ಪ್ರಕರಣಗಳು ದಾಖಲಾಗಿದೆ. ದಂಡ ಮೊತ್ತ ಹೆಚ್ಚಿರುವಾಗ ದ್ವಿಚಕ್ರ ವಾಹನ ಮಾಲೀಕರು ವಾಹವನ್ನು ಪೊಲೀಸರಿಗೆ ನೀಡಿದ ಉದಾಹರಣೆಗಳಿವೆ. ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ.
 

click me!