May 3, 2024, 4:57 PM IST
ಮಲ್ಲಿಕಾರ್ಜುನ ಖರ್ಗೆ, ಕಾಗೆಯಂಥಾ ಕಾಂಗ್ರೆಸ್(Congress) ನಾಯಕರ ಮಾತುಗಳು. ಕಮಲ ಪಡೆಗೆ ಅಸ್ತ್ರಗಳಾಗಿ ಬದಲಾಗ್ತಿದ್ದಾವೆ. ರಾಹುಲ್ ಗಾಂಧಿ(Rahul Gandhi) ಪರ ಪಾಕಿಸ್ತಾನದ ನಾಯಕರೇ ಪ್ರಚಾರ ಮಾಡ್ತಿದ್ದಾರೆ. ಅದರ ವಿರುದ್ಧ ಮೋದಿ ಕೆಂಡಕಾರ್ತಿದ್ದಾರೆ. ಇದರ ಮಧ್ಯೆ, ಈ ಲೋಕ ಸಂಗ್ರಾಮದಲ್ಲಿ ವೋಟ್ ಜಿಹಾದ್(Jihad) ಅಬ್ಬರ ಬೇರೆ ಸದ್ದು ಮಾಡ್ತಾ ಇದೆ. ರಂಗೇರಿದ ರಣಕಣದಲ್ಲಿ ಚಿತ್ರವಿಚಿತ್ರ ಯುದ್ಧತಂತ್ರ ಸಿದ್ಧವಾಗಿದೆ. ಮೂರನೇ ಬಾರಿ ಗೆಲ್ಲೋಕೆ ಮೋದಿ ಪಡೆ ಸಜ್ಜಾಗ್ತಾ ಇದೆ. ಮೋದಿ ಅಶ್ವಮೇಧ ಕುದುರೆನಾ ಕಟ್ಟಿಹಾಕೋಕೆ ಕಾಂಗ್ರೆಸ್ ಪಾಳಯ ಸನ್ನದ್ಧವಾಗ್ತಾ ಇದೆ. ಈ ಎರಡೂ ಸೇನೆಗಳ ನಡುವಿನ ಸಂಘರ್ಷ, ಅಕ್ಷರಶಃ ರಣರೋಚಕವಾಗ್ತಾ ಇದೆ. ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಸಾಹೇಬ್ರು, ಲೋಕಸಭೆ ಚುನಾವಣೆಯ(Lok Sabha elections 2024) ಪ್ರಚಾರ ಕಾರ್ಯದಲ್ಲಿ ಫುಲ್ ಬ್ಯುಸಿ ಇದಾರೆ. ಮಂಗಳವಾರ ಛತ್ತೀಸ್‌ಗಢದಲ್ಲಿ ಪ್ರಚಾರಕ್ಕೆ ಅಂತ ಹೋಗಿದ್ದ ಖರ್ಗೆ ಅವರು, ವೇದಿಕೆ ಮೇಲೆ ಒಂದು ಮಾತು ಹೇಳಿದ್ರು. ಅದೇನು ಅಂದ್ರೆ, ರಾಮ(Rama) ಮತ್ತು ಶಿವನ ಬಗ್ಗೆಯಾಗಿದೆ. ಕಾಂಗ್ರೆಸ್ ರಾಮ ಮತ್ತು ಶಿವ(Shiva), ಈ ಇಬ್ಬರ ಮಧ್ಯೆ ಬೇಧ ಕಲ್ಪಿಸಿ, ಅವರವರ ಮಧ್ಯೆನೇ ಯುದ್ಧ ಮಾಡಿಸೋಕೆ ನೋಡ್ತಾ ಇದೆ. ಅಂಥಾ ಸಂಘರ್ಷದ ಅವಶ್ಯಕತೆಯಾದ್ರೂ ಇದೆಯಾ ಅನ್ನೋದು ಬಿಜೆಪಿ ಪ್ರಶ್ನೆ. ಬಿಜೆಪಿ ರಾಮನೇ ತಮಗೆ ಗೆಲುವಿನ ಸರದಾರ ಅನ್ನೋ ಹಾಗೆ ಬಿಂಬಿಸ್ತಾ ಇದ್ರೆ, ಕಾಂಗ್ರೆಸ್ ರಾಮನ ವಿರುದ್ಧ ಹೇಳಿಕೆ ಕೊಟ್ಟು ಹೊಸ ಅಸ್ತ್ರ ಸಿಗುವಂತೆ ಮಾಡಿದೆ.
ಇದನ್ನೂ ವೀಕ್ಷಿಸಿ: ಕಾನೂನಿನ ಕುಣಿಕೆಯಲ್ಲಿ ಬಂಧಿಯಾಗ್ತಾರಾ ಅಪ್ಪ-ಮಗ!? ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆ..!