ಚಾಮರಾಜನಗರ ಇವಿಎಂ ಧ್ವಂಸ ಪ್ರಕರಣ: ಪೊಲೀಸರಿಗೆ ಹೆದರಿ ಊರು ಬಿಟ್ಟ ಗ್ರಾಮಸ್ಥರು, ಆಹಾರವಿಲ್ಲದೆ ಪ್ರಾಣಬಿಟ್ಟ ಮೂಕಪ್ರಾಣಿಗಳು..!

By Girish GoudarFirst Published May 3, 2024, 7:21 PM IST
Highlights

ಘಟನೆ ನಡೆದ ದಿನದಿಂದ ಮೇವು, ನೀರಿಲ್ಲದೆ ಕಟ್ಟಿ ಹಾಕಿದ ಸ್ಥಳದಲ್ಲೇ ಮೂಕ ಪ್ರಾಣಿಗಳು ಪ್ರಾಣ ಬಿಟ್ಟಿವೆ. ಇರುವ ಬೆರಳೆಣಿಕೆಯಷ್ಟು ಜನರೂ ಕೂಡ ಊಟಕ್ಕೂ ಪರದಾಟ ನಡೆಸುತ್ತಿದ್ದಾರೆ. 

ಚಾಮರಾಜನಗರ(ಮೇ.03):  ಇವಿಎಂ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಇದೀಗ ಸ್ಮಶಾನಮೌನ ಆವರಿಸಿದೆ. ಹೌದು, ಪೊಲೀಸರ ಭಯದಿಂದ ಗ್ರಾಮಸ್ಥರು ತಲೆಮರೆಸಿಕೊಂಡಿದ್ದಾರೆ. ಗ್ರಾಮಸ್ಥರು ಮನೆಗಳಿಗೆ ಬೀಗ ಹಾಕಿ ಹೋಗಿದ್ದರಿಂದ ಕಟ್ಟಿ ಹಾಕಿದ ಎರಡು ಎಮ್ಮೆಗಳು ಸ್ಥಳದಲ್ಲೇ ಸಾವಪ್ಪಿವೆ. 

ನೀರು, ಮೇವು ಕೊಡುವವರು ಇಲ್ಲದೆ ಎಮ್ಮೆಗಳು ಧಾರುಣವಾಗಿ ಮೃತಪಟ್ಟಿವೆ ಮೃತ ಎಮ್ಮೆಗಳು  ಪುಟ್ಟತಂಬಡಿ, ಮುರುಗೇಶ್ ತಂಬಡಿ ಎಂಬುವರಿಗೆ ಸೇರಿದವು ಎಂದು ತಿಳಿದು ಬಂದಿದೆ. 

ಚಾಮರಾಜನಗರ : ಕುಗ್ರಾಮಗಳಿಗೆ ಇನ್ನಾದರೂ ಸಿಗುತ್ತಾ ಮೂಲಸೌಕರ್ಯ..!

ಘಟನೆ ನಡೆದ ದಿನದಿಂದ ಮೇವು, ನೀರಿಲ್ಲದೆ ಕಟ್ಟಿ ಹಾಕಿದ ಸ್ಥಳದಲ್ಲೇ ಮೂಕ ಪ್ರಾಣಿಗಳು ಪ್ರಾಣ ಬಿಟ್ಟಿವೆ. ಇರುವ ಬೆರಳೆಣಿಕೆಯಷ್ಟು ಜನರೂ ಕೂಡ ಊಟಕ್ಕೂ ಪರದಾಟ ನಡೆಸುತ್ತಿದ್ದಾರೆ. ಈಗಾಗಲೇ 200ಕ್ಕೂ ಹೆಚ್ಚು ಜನರ ವಿರುದ್ದ ವಿವಿಧ ಪ್ರಕರಣಗಳು ದಾಖಲಾಗಿವೆ. ಈ ವರೆಗೆ 33 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

click me!